ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸರ್ಕಾರದ ಕಡೆಯಿಂದ ಹೊಸ ಅಪ್ಡೇಟ್ ಇದೆ. ನಿರುದ್ಯೋಗಿಗಳು, ಉದ್ಯೋಗ ಬದಲಾಯಿಸಬೇಕು ಎಂದು ಬಯಸುತ್ತಾ ಇರುವವರು ಅಥವಾ ದೂರದ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದು ತಮ್ಮ ಜಿಲ್ಲೆಗಳ ಅಥವಾ ಗ್ರಾಮಗಳ ಕಡೆ ಇರುವ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಯಾಕೆಂದರೆ ಈಗ ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ (Davanagere jilla panchayath recruitments) ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೊರಗುತ್ತಿಗೆ ತರದ ಮೇಲೆ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಇದಕ್ಕಾಗಿ ಇರುವ ನಿಯಮಗಳ ಬಗ್ಗೆ ನೋಟಿಫಿಕೇಶನ್ ಅಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಈ ಹುದ್ದೆಗಳ ಅಗತ್ಯ ಇರುವ ಅಭ್ಯರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಇನ್ನಿತರ ಅರ್ಹತೆಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಹುದ್ದೆಗಳಿಗೆ ಕೇಳಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇನ್ನಿತರ ಅರ್ಹತೆ. ನಿಗದಿಪಡಿಸಿರುವ ವಯೋಮಿತಿ ಎಷ್ಟು, ವಯೋಮಿತಿ ಸಡಿಲಿಕೆ ಏನು? ವೇತನ ಶ್ರೇಣಿ ಎಷ್ಟಿರುತ್ತದೆ, ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು, ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತದೆ ಎನ್ನುವ ವಿವರಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.
ಇದನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
ಉದ್ಯೋಗ ಸಂಸ್ಥೆ:- ದಾವಣಗೆರೆ ಜಿಲ್ಲಾ ಪಂಚಾಯಿತಿ
ಉದ್ಯೋಗದ ಬಗೆ:- ಗುತ್ತಿಗೆ ಆಧಾರದ ಮೇಲೆ
ಒಟ್ಟು ಹುದ್ದೆಗಳ ಸಂಖ್ಯೆ:- 20
ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಕೆ ಮಾಡ್ತೀರಾ.? ಹಾಗಿದ್ರೆ, ಮಿಸ್ ಮಾಡದೇ ಈ ಸುದ್ದಿ ಓದಿ.!
ಹುದ್ದೆಗಳ ವಿವರ:-
● ತಾಂತ್ರಿಕ ಸಹಾಯಕರು (ಸಿವಿಲ್, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ) – 14
● ಆಡಳಿತ ಸಹಾಯಕ – 06
ಉದ್ಯೋಗ ಸ್ಥಳ:- ದಾವಣಗೆರೆ
ವೇತನಶ್ರೇಣಿ:-
● ತಾಂತ್ರಿಕ ಸಹಾಯಕರು (ಸಿವಿಲ್, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ) – 20,000 + 2,000 ಪ್ರಯಾಣ ವೆಚ್ಚ.
● ಆಡಳಿತ ಸಹಾಯಕ – 22,000.
ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!
ಶೈಕ್ಷಣಿಕ ವಿದ್ಯಾರ್ಹತೆ:-
● ತಾಂತ್ರಿಕ ಸಹಾಯಕರು ಸಿವಿಲ್ ಹುದ್ದೆಗೆ BCCI, ತಾಂತ್ರಿಕ ಸಹಾಯಕರು ಕೃಷಿ ಹುದ್ದೆಗೆ B.Sc ಅಗ್ರಿ ಕಲ್ಚರ್, ತಾಂತ್ರಿಕ ಸಹಾಯಕರು ತೋಟಗಾರಿಕೆ ಹುದ್ದೆ ಗೆ B.Sc ಹಾರ್ಟಿ ಕಲ್ಚರ್, ತಾಂತ್ರಿಕ ಸಹಾಯಕರು ಅರಣ್ಯ ಹುದ್ದೆಗೆ B.Sc ಫಾರೆಸ್ಟ್ರಿ ಹಾಗು ತಾಂತ್ರಿಕ ಸಹಾಯಕರು ರೇಷ್ಮೆ ಹುದ್ದೆ ಗೆ B.Sc ಅಗ್ರಿ ಕಲ್ಚರ್ ಪದವಿ ಹೊಂದಿರಬೇಕು.
● ಆಡಳಿತ ಸಹಾಯಕ ಹುದ್ದೆ ಗೆ B.Com ಪದವಿ ಜೊತೆ ಗೆ ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣತಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು.
ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
ಆಸಕ್ತಿ ಇರುವ ಅಭ್ಯರ್ಥಿಗಳು ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧಿಕೃತ ವೆಬ್ಸೈಟ್ಗೆ ತೆರಳಿ ಅರ್ಜಿ ಸಲ್ಲಿಸಬೇಕು.
ಆಯ್ಕೆ ವಿಧಾನ:-
● ಕಂಪ್ಯೂಟರ್ ಜ್ಞಾನ ಪರೀಕ್ಷೆ
● ಟೈಪಿಂಗ್ ಪರೀಕ್ಷೆ
● ಸಂದರ್ಶನ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10.08.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24.08.2023.