ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!

 

ಕಳೆದ ವಾರವಷ್ಟೇ ಚುನಾವಣೆ ನೀತಿ ಸಂಹಿತೆಯಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿಲೇವಾರಿ, ರೇಷನ್ ಕಾರ್ಡ್ ತಿದ್ದುಪಡಿಗೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನಕ್ಕೆ ಅನುಮತಿ ಮತ್ತು ರೇಷನ್ ಕಾರ್ಡ್ ಮಾನದಂಡಗಳ ಬಗ್ಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವರಾದ ಕೆ. ಎಚ್ ಮುನಿಯಪ್ಪ (Food and Civil Supply Minister K.H Muniyappa) ಅವರು ಆಗಸ್ಟ್ 18ರ ಶುಕ್ರವಾರದಂದು ವಿಧಾನಸೌಧದಲ್ಲಿ ಆಹಾರ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ (press meet) ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪಡಿತರ ಚೀಟಿ ವಿತರಣೆ ಮತ್ತು ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ತಹಸೀಲ್ದಾರ್‌ ಮತ್ತು ಉಪ ತಹಸೀಲ್ದಾರ್‌ಗಳ ಇಲಾಖೆ (Thashildar department power withdrawal) ಅಧಿಕಾರ ಹಿಂಪಡೆದು ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಆಹಾರ ಇಲಾಖೆ ಕಚೇರಿಗಳನ್ನು (separate food department offices for Ration card distribution) ಆರಂಭಿಸಲು ನಿರ್ಧರಿಸಲಾಗಿದೆ, ಪ್ರತಿ ತಾಲೂಕಿಗೆ ಒಬ್ಬ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿ, ಆಹಾರ ನಿರೀಕ್ಷಕರು, ಡಾಟಾ ಎಂಟ್ರಿ ಆಪರೇಟರ್‌ ಮತ್ತಿತರ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ವ್ಯವಸ್ಥೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

ಪಡಿತರ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಕೆಲವು ತಾಲೂಕುಗಳಲ್ಲಿ ಮಾತ್ರ ಗೋದಾಮುಗಳಿವೆ, ಉಳಿದ ಕಡೆಗಳಲ್ಲಿ ಖಾಸಗಿ ಹಾಗೂ APMC ಗೋಡೌನ್‌ ಗಳನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಇದರ ಬಗ್ಗೆಯೂ ಗಮನ ಹರಿಸಿ ತಾಲೂಕಿಗೊಂದು ಸುಸಜ್ಜಿತ ಗೋದಾಮು ನಿರ್ಮಿಸಲು (Godan constuction) ಚಿಂತಿಸಿದ್ದೇವೆ. ಅದಕ್ಕಾಗಿ ಸೂಕ್ತ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎನ್ನುವ ಅಂಶವನ್ನು ತಿಳಿಸಿದ್ದಾರೆ.

ಇದರ ಜೊತೆಗೆ ರಾಜ್ಯದಲ್ಲಿ ಬೇಡಿಕೆ ಇರುವ ರೇಷನ್ ಕಾರ್ಡ್ ಗಳ ಬಗ್ಗೆ ಮಾತನಾಡಿದ (new Ration card apply permission) ಅವರು ಗೃಹ ಲಕ್ಷ್ಮೀ ಮತ್ತಿತರ ಸೌಲಭ್ಯಗಳಿಗಾಗಿ ಪಡಿತರ ಚೀಟಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ APL ಮತ್ತು BPL ಹೊಸ ಕಾರ್ಡ್‌ಗಳ ವಿತರಣೆ ಸದ್ಯಕ್ಕಿಲ್ಲ, ರಾಜ್ಯದಲ್ಲಿ1.28 ಕೋಟಿ BPL ಕಾರ್ಡ್‌ಗಳಿದ್ದು, ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 1.50 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

ರಾಜ್ಯದಲ್ಲಿಒಟ್ಟಾರೆ 14 ಲಕ್ಷ APL ಕಾರ್ಡ್‌ಗಳಿದ್ದು, ಬಹುತೇಕ ಬಳಕೆಯಾಗುತ್ತಿಲ್ಲ. ಹೀಗಾಗಿ, ಹೊಸ ಕಾರ್ಡ್‌ಗಳನ್ನು ನೀಡುವ ಉದ್ದೇಶ ಸದ್ಯಕ್ಕಿಲ್ಲ ಆದರೆ ಈಗಾಗಲೇ ಅರ್ಜಿ ಸಲ್ಲಿಸಿ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕಾರ್ಡುಗಳ ವಿಲೇವಾರಿಯಾಗಲಿದೆ ಮತ್ತು ಕಾರ್ಡ್ ಗಳ ತಿದ್ದುಪಡಿಗೆ ಅವಕಾಶ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಸಮರ್ಪಕವಾಗಿ ವರ್ಗಾವಣೆಯಾಗಿಲ್ಲ ಎನ್ನುವುದರ ಬಗ್ಗೆ ಕೂಡ ಗೊಂದಲ ಪರಿಹರಿಸಿದ (Annabhagya amount transaction) ಅವರು ಅಕ್ಕಿ ಅಲಭ್ಯತೆ ಕಾರಣದಿಂದ ಹಣ ನೀಡುವ ತೀರ್ಮಾನದಂತೆ ಎಲ್ಲಾ ಅರ್ಹ BPL ಕಾರ್ಡ್‌ದಾರರಿಗೆ ಈ ತಿಂಗಳ 25 ರೊಳಗೆ ಆಗಸ್ಟ್ ತಿಂಗಳಿನ ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುವುದು. 1.28 ಕೋಟಿ ಕಾರ್ಡ್‌ದಾರರ ಪೈಕಿ 28 ಲಕ್ಷ ಕಾರ್ಡ್‌ಗಳ ಬ್ಯಾಂಕ್‌ ಖಾತೆ ವಿವರಗಳು ಕಳೆದ ತಿಂಗಳು ಇಲಾಖೆಯಲ್ಲಿ ಇರಲಿಲ್ಲ.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

ಈ ಬಾರಿ ಕಳೆದ ತಿಂಗಳು ಹಣ ಪಡೆದವರ ಜೊತೆ ಇನ್ನೂ 7 ಲಕ್ಷ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಿದ್ದಾರೆ. 1.07 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಆದರೆ ಶೀಘ್ರದಲ್ಲಿಯೇ ಈ ಕ್ರಮ ಕೈಬಿಟ್ಟು ಅಕ್ಕಿಯನ್ನೇ ವಿತರಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ.

ಇದಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಖರೀದಿ ದರ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ ಸಚಿವರು ಪಡಿತರದಲ್ಲಿ ಅಕ್ಕಿ ಜತೆಗೆ, ದಕ್ಷಿಣ ಭಾಗದಲ್ಲಿ ಅಕ್ಕಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಜೋಳ ವಿತರಣೆಗೆ ನಿರ್ಧರಿಸಲಾಗಿದೆ. ಈ ಧಾನ್ಯಗಳ ಸದ್ಭಳಕೆ ಆಗುತ್ತಿದೆಯೇ? ಹೆಚ್ಚಿನ ಬೇಡಿಕೆ ಇದೆಯೇ ಎಂಬ ಕುರಿತು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಮಾಹಿತಿ ಸಿಕ್ಕಬಳಿಕ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಜೋಳ ಖರೀದಿಗೆ ಕ್ರಮ ಕೈಗೊಳ್ಳಲ್ಲಿದ್ದೇವೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.

Leave a Comment