Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

Posted on August 21, 2023 By Kannada Trend News No Comments on ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

 

ಏರ್ಟೆಲ್(Airtel) ಗ್ರಾಹಕರಿಗಾಗಿ ಆಗಾಗ್ಗೆ ಹೊಸ ಹೊಸ ರೀಚಾರ್ಜ್‌(Recharge) ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಆಫರ್ ನೀಡಲಾಗಿದೆ.

ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Bhatri Airtel) ಇತ್ತೀಚಿನ ತಿಂಗಳುಗಳಲ್ಲಿ ತನ್ನ ರೀಚಾರ್ಜ್ ಯೋಜನೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತಿದೆ. ಕೆಲವು ಪ್ಲಾನ್​ಗಳನ್ನು ಸ್ಥಗಿತಗೊಳಿಸುವುದರಿಂದ ಹಿಡಿದು ಹೊಸದನ್ನು ಪರಿಚಯಿಸುವವರೆಗೆ, ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಸದ್ಯ ಹೊಸ ಬೆಳವಣಿಗೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ನೂತನವಾದ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

ಇದು ಅನಿಯಮಿತ ಇಂಟರ್ನೆಟ್ ಪ್ರಯೋಜನವನ್ನು ನೀಡುತ್ತದೆ. ಏರ್ಟೆಲ್​ನ ಈ ಆಫರ್ ಕಂಡು ಇತರೆ ಟೆಲಿಕಾಂ ಕಂಪನಿಗಳು ದಂಗಾಗಿವೆ. ʻಏರ್ಟೆಲ್ ಹೊಸದಾಗಿ 99 ರೂಪಾಯಿಯ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರಿಗೆ ಕೈಗೆಟುಕುವ ದರಕ್ಕೆ ಡೇಟಾ ಪ್ರಯೋಜನ ನೀಡುವುದು ನಮ್ಮ ಗುರಿಯಾಗಿದೆʼ ಎಂದು ಏರ್ಟೆಲ್ ಹೇಳಿದೆ.

ಏರ್ಟೆಲ್ 99 ರೂ. ಡೇಟಾ ಪ್ಯಾಕ್ ವಿವರಗಳು

ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಆಡ್-ಆನ್ ಪ್ಲಾನ್‌ನಂತೆ ನೀಡಲಾಗಿದ್ದು, ಬಳಕೆದಾರರು ತಮ್ಮ ದೈನಂದಿನ ಹೈ-ಸ್ಪೀಡ್ ಡೇಟಾ ಮಿತಿಯನ್ನು ಮುಗಿದ ನಂತರ ಬಳಸಬಹುದಾಗಿದೆ. ಈ ಯೋಜನೆಯು ಬಳಕೆದಾರರಿಗೆ 1 ದಿನದ ಮಾನ್ಯತೆಯ ಅವಧಿಗೆ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡುತ್ತದೆ.

KSRTC ಬೃಹತ್ ನೇಮಕಾತಿ, ಸಾರಿಗೆ ಇಲಾಖೆಯಲ್ಲಿ 13000ಕ್ಕೂ ಹೆಚ್ಚು ಚಾಲಕ, ನಿರ್ವಾಹಕ ಮತ್ತು ಮೆಕಾನಿಕ್ ಹುದ್ದೆಗಳ ನೇಮಕಾತಿ.!

ಆದರೆ, ಈ ಯೋಜನೆಯನ್ನು ನ್ಯಾಯಯುತ ಬಳಕೆಯ ನೀತಿ (FPU) 30GB ಗೆ ನಿರ್ಬಂಧಿಸುವ ಪ್ಲ್ಯಾನ್‌ಗೆ ಅನ್ವಯಿಸಲಾಗಿದೆ. ಅಂದರೆ 30GB ಹೆಚ್ಚಿನ ವೇಗದ ಡೇಟಾದ ನಂತರ, ಏರ್ಟೆಲ್ ಬಳಕೆದಾರರು 64Kbps ನಲ್ಲಿ ಅನಿಯಮಿತ ಡೇಟಾವನ್ನು ಬಳಸುವುದನ್ನು ಮುಂದುವರಿಸಬಹುದು. ಹೆಚ್ಚುವರಿಯಾಗಿ, ಇದು ಡೇಟಾ ಪ್ಯಾಕ್ ಆಗಿರುವುದರಿಂದ, ಅದರ ಪ್ರಯೋಜನಗಳನ್ನು ಬಳಸಲು ನಿಮಗೆ ಸಕ್ರಿಯ ಮೂಲ ಯೋಜನೆ ಅಗತ್ಯವಿರುತ್ತದೆ.

ಏರ್ಟೆಲ್ 5G ಪ್ಲಸ್ ಹೊಂದಿರುವ ಪ್ರದೇಶಗಳಲ್ಲಿ, ಅನ್‌ಲಿಮಿಟೆಡ್ 5G ಬೆನಿಫಿಟ್ ಮತ್ತು ಏರ್ಟೆಲ್ ಟ್ರೂಲಿ ಅನ್ಲಿಮಿಟೆಡ್ ಪ್ಲಾನ್ ಹೊಂದಿರುವ ಬಳಕೆದಾರರು ಯಾವುದೇ ದೈನಂದಿನ ಮಿತಿಗಳಿಲ್ಲದೆ ಈ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು. ಆದಾಗ್ಯೂ, 5G ಅಲ್ಲದ ಪ್ರದೇಶಗಳಲ್ಲಿ, ಹೊಸ ರೂ. 99 ಡೇಟಾ ಪ್ಯಾಕ್ 4G ಹ್ಯಾಂಡ್‌ಸೆಟ್ ಬಳಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

ಇನ್ನು ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ವಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವಿಶೇಷ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. ರೂ. 199 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಅನಿಯಮಿತ ಡೇಟಾ ರೀಚಾರ್ಜ್‌ಗಳಿಗೆ 50 GB ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಆಗಸ್ಟ್ 18 ರವರೆಗೆ ಇದು ಚಾಲ್ತಿಯಲ್ಲಿರಲಿದೆ. ಹೆಚ್ಚುವರಿಯಾಗಿ, ವೊಡಾಫೋನ್ ಐಡಿಯಾ ಗ್ರಾಹಕರು ರೂ. 1,449 ಮೌಲ್ಯದ ರೀಚಾರ್ಜ್ ಪ್ಯಾಕ್‌ಗಳಲ್ಲಿ 50 ರೂ. ಗಳ ರಿಯಾಯಿತಿಗಳನ್ನು ಪಡೆಯಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ
Next Post: ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore