ಕರ್ನಾಟಕ (Karnataka) ರಾಜ್ಯದ ಮಹಿಳೆಯರಿಗೆ (Women) ರಾಜ್ಯ ಸರ್ಕಾರದ ವತಿಯಿಂದ ಮತ್ತೊಂದು ಸಿಹಿಸುದ್ದಿ ಇದೆ. ಸರ್ಕಾರವು ದುಡಿಯುವ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಆಸಕ್ತಿ ಇರುವವರಿಗೆ ಕಾಯಕ ಯೋಜನೆ (Kayaka Yojane) ಮೂಲಕ ನೆರವಾಗುತ್ತಿದೆ.
2021 ರಲ್ಲಿಯೇ ಈ ಯೋಜನೆ ಆರಂಭವಾಗಿತ್ತು. ಈ ಯೋಜನೆ ಮೂಲಕ ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಸಹಕಾರಿ ಸಂಘಗಳ ಮೂಲಕ ಗರಿಷ್ಠ 10 ಲಕ್ಷ ವರೆಗೆ ಸಬ್ಸಿಡಿಯನ್ನೊಗೊಂಡ ಸಾಲವನ್ನು (Subsidy loan) ನೀಡಲು ಸರ್ಕಾರವು ನಿರ್ಧರಿಸಿತ್ತು. ಈ ಯೋಜನೆಯು ಸೆಪ್ಟೆಂಬರ್ 1 ನೇ ತಾರೀಖಿನಿಂದ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ.
ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!
ಆಸಕ್ತ ಮಹಿಳೆಯರು ಮತ್ತು ಈ ಯೋಜನೆಗೆ ಫಲಾನುಭವಿಗಳಾಗಲು ಇರುವ ಮನದಂಡಗಳನ್ನು ಪೂರೈಸುವ ಮಹಿಳೆಯರು ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು. ರಾಜ್ಯದ ಎಲ್ಲಾ ಮಹಿಳೆಯರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಕಾಯಕ ಯೋಜನೆ ಕುರಿತು ಕೆಲ ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ.
ಕಾಯಕ ಯೋಜನೆ ಪ್ರಯೋಜನಗಳು:-
● ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳು ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವದರಿಂದ ಉದ್ಯೋಗ ಸೃಷ್ಟಿ ಜೊತೆ ಮಹಿಳೆಯರ ಆದಾಯವು ಹೆಚ್ಚಾಗುತ್ತದೆ.
● ಈ ಯೋಜನೆಯಡಿ ಮಹಿಳೆಯರು ಸುಲಭವಾಗಿ ಬಡ್ಡಿರಹಿತ ಸಾಲ ಸಿಗುತ್ತದೆ.
● ಅರ್ಜಿದಾರರ 5 ಲಕ್ಷದವರೆಗೆ ಸಾಲದ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ, ಮೊತ್ತವು 5 ಲಕ್ಷ ಮೀರಿದರೆ ಮಾತ್ರ 4% ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
● ಅರ್ಜಿದಾರರು ಹತ್ತಿರದಲ್ಲಿರುವ ಸಹಕಾರಿ ಬ್ಯಾಂಕ್‌ಗಳಲ್ಲೇ ಸಾಲ ಪಡೆಯಬಹುದು.
● ಈ ಯೋಜನೆ ಪ್ರಮುಖವಾದ ಅನುಕೂಲತೆ ಏನೆಂದರೆ, ಸ್ವಸಹಾಯ ಸಂಘಗಳ ಸದಸ್ಯರು ಸಿದ್ಧಪಡಿಸಿದ ಉತ್ಪನ್ನವನ್ನು ಕರ್ನಾಟಕ ರಾಜ್ಯ ಸರ್ಕಾರವೇ ಖರೀದಿಸಲಿದೆ ಆ ಮೂಲಕ ಉದ್ದಿಮೆ ಜವಬ್ದಾರಿ ಪರೋಕ್ಷವಾಗಿ ಸರ್ಕಾರಕ್ಕೂ ಇರುತ್ತದೆ.
ಕರ್ನಾಟಕ ಕಾಯಕ ಯೋಜನೆಯಡಿ ಸಾಲ ಪಡೆಯಲು ಅರ್ಹತೆಗಳು:-
● ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಮಹಿಳೆಯಾಗಿರಬೇಕು
● ಸ್ವಸಹಾಯ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಮಹಿಳೆಯರಿಗೆ ಮಾತ್ರ ಅವಕಾಶ
● ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಬಗೆಯ ಸ್ವ-ಸಹಾಯ ಸಂಘಗಳ ಮಹಿಳೆಯರು ಕೂಡ ಫಲಾನುಭವಿಗಳಾಗಬಹುದು
● ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಹಿಳೆಯರು ಮಾತ್ರ ಈ ಯೋಜನೆಯ ಭಾಗವಾಗಲು ಅರ್ಹರಿರುತ್ತಾರೆ.
ಬೇಕಾಗುವ ದಾಖಲೆಗಳು:-
● ನಿವಾಸದ ಪ್ರಮಾಣಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ಮಾಹಿತಿ
● ಸ್ವ-ಸಹಾಯ ಗುಂಪುಗಳಿಗೆ ನೀಡಿರುವ ಸದಸ್ಯತ್ವ ಪ್ರಮಾಣಪತ್ರ
● ಆದಾಯ ಪ್ರಮಾಣಪತ್ರ
● ಅಭ್ಯರ್ಥಿಯ ಭಾವಚಿತ್ರ.
ಅರ್ಜಿ ಸಲ್ಲಿಸುವ ವಿಧಾನ:-
● ಇದಕ್ಕಾಗಿ ರಾಜ್ಯ ಸರ್ಕಾರವು ಒಂದು ನಿರ್ದಿಷ್ಟ ವೆಬ್ ಸೈಟ್ ಸಿದ್ದಪಡಿಸಲಿದೆ. (ಸದ್ಯಕ್ಕಿನ್ನು ಬಿಡುಗಡೆಯಾಗಿಲ್ಲ, ಶೀಘ್ರದಲ್ಲಿ ತಿಳಿಸಲಿದೆ)
● ನಂತರ ಆ ವೇದಿಕೆಯ ಮೂಲಕ ಫಲಾನುಭವಿಗಳು ಅರ್ಜಿ ಪಾರಂ ತುಂಬಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬೇಕು.
● ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ಪರಿಶೀಲನೆ ನಡೆದು, ಅನುಮೋದನೆಯಾದರೆ ನಿಮ್ಮ ಸ್ವ-ಸಹಾಯ ಗುಂಪಿಗೆ ನೀವು ಕೋರಿಕೊಂಡ ಮೊತ್ತವು ಸಾಲದ ರೂಪದಲ್ಲಿ ಸಿಗಲಿದೆ. ಬಳಿಕ ಗುಂಪಿನ ಎಲ್ಲಾ ಸದಸ್ಯರ ಅವಶ್ಯಕತೆ ಅಥವಾ ವಿವರಕ್ಕೆ ಅನುಗುಣವಾಗಿ ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೂ ವರ್ಗಾವಣೆ ಆಗಲಿದೆ.