ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

 

ಕಾಶಿಯಾತ್ರೆ(KashiYatra)ಗೆ ಹೋಗೋರಿಗೆ ರಾಜ್ಯ ಸರ್ಕಾರ(State Govt) ಗುಡ್‌ ನ್ಯೂಸ್‌ ನೀಡಿದೆ. ಹೌದು, ಕಾಶಿಯಾತ್ರೆಗೆ ತೆರಳೋರಿಗೆ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, 7,500 ರೂ. ಸಹಾಯಧನ ನೀಡುವುದಾಗಿ ಘೋಷಿಸಿದೆ. ಇಂದಿನ ಈ ಲೇಖನದಲ್ಲಿ, ಈ ಸಹಾಯಧನದ ಲಾಭ ಪಡೆಯುವುದು ಹೇಗೆ? ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ.

ಜೀವಮಾನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕೆನ್ನುವುದು ಅನೇಕ ಆಸ್ತಿಕ ಅಭಿಲಾಷೆಯಾಗಿದೆ. ಇಂತಹ ಆಭಿಲಾಷೆಯುಳ್ಳರಿಗೆ ರಾಜ್ಯ ಸರಕಾರ ವಿಶೇಷ ವ್ಯವಸ್ಥೆಯ ಜೊತೆಗೆ, ಕಾಶಿಯಾತ್ರೆಗೆ ಆರ್ಥಿಕ ನೆರವು ಕೂಡ ನೀಡುತ್ತದೆ. ಇದಕ್ಕಾಗಿ 2022-23ನೇ ಸಾಲಿನಿಂದ ರಾಜ್ಯ ಸರಕಾರ ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Bharat Gaurav kashi Darshan) ಯೋಜನೆಯನ್ನು ಅನುಷ್ಠಾನಗೊಳಿಸಿದೆ.

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

ಕಳೆದ ಜುಲೈ 29ರಂದು ಈ ಯೋಜನೆಯಡಿ 4ನೇ ಸುತ್ತಿನ ಯಾತ್ರೆಗೆ ಬೆಂಗಳೂರಿನ ಯಶವತಂಪುರ ರೈಲು ನಿಲ್ದಾಣದಿಂದ 450 ಪ್ರಯಾಣಿಕರು ತೆರಳಿದ್ದರು. ಇದೀಗ ಮತ್ತೇ 5 ಮತ್ತು 6ನೇ ಸುತ್ತಿನ ಯಾತ್ರಾ ದಿನಾಂಕವನ್ನು ಸರ್ಕಾರ ನಿಗದಿಪಡಿಸಿದೆ. ಆಸಕ್ತರು ಮುಂಚಿತ ಬುಕ್ಕಿಂಗ್ ಮಾಡಬಹುದು.

7,500 ರೂಪಾಯಿ ಸಹಾಯಧನ

ಕಾಶಿ, ಗಯಾ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ಯಾತ್ರೆ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಈ ವಿಶೇಷ ಯಾತ್ರೆಯನ್ನು ಗಯಾ ಕ್ಷೇತ್ರದವರೆಗೆ ವಿಸ್ತರಿಸಿ ಪ್ರತಿ ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು 5,000 ರೂ.ನಿಂದ 7,500 ರೂಪಾಯಿಗೆ ಹೆಚ್ಚಿಸಲಾಗಿದೆ.

ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

ಈ ಪ್ಯಾಕೇಜ್‌ಗೆ ಒಟ್ಟು 22,500 ರೂ. ಖರ್ಚಾಗಲಿದ್ದು, 7500 ರೂಪಾಯಿ ಸಹಾಯಧನವನ್ನು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಯಾತ್ರಾರ್ಥಿಗಳು 15,000 ರೂಪಾಯಿಗಳನ್ನು ಮಾತ್ರ ಪಾವತಿಸಬೇಕು.

ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿ ದರವನ್ನು 5,000 ರೂಪಾಯಿಗಳಿಂದ 7,500 ರೂಪಾಯಿಗಳಿಗೆ ಹೆಚ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಸಾಮಾನ್ಯ ಭಕ್ತರಿಗೂ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತೀಚೆಗೆ ಘೋಷಿಸಿದ್ದರು.

ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದವರಿಗೆ ಭರ್ಜರಿ ನ್ಯೂಸ್, ವಿಚಾರ ಕೇಳುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುಗಿಬಿದ್ದ ಗ್ರಾಹಕರು.!

ವಿಶೇಷತೆಗಳೇನು?

* ಈ ಪ್ಯಾಕೇಜ್‌ನಲ್ಲಿ 3 ಟೈಲ್ ಎ.ಸಿ ರೈಲಿನಲ್ಲಿ ಪ್ರಯಾಣಿಸಲಿದ್ದು, ಊಟ, ವಸತಿ ಹಾಗೂ ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ.
* ಯಾತ್ರಾರ್ಥಿಗಳ ಆರೋಗ್ಯ ದೃಷ್ಟಿ ವೈದ್ಯಕೀಯ, ವೈದ್ಯಕೀಯ ಸಹಾಯ ವ್ಯವಸ್ಥೆ ಕೂಡ ಇರುತ್ತದೆ.
* ಪ್ರಯಾಣಿಸುವಾಗ ಅಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಮೂಲಕ ಯಾತ್ರಿಕರು ಆರಾಮದಾಯಕ ಪ್ರವಾಸ ಮಾಡಬಹುದಾಗಿದೆ. ಇದರಿಮದ ವೃದ್ಧರು ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದು.

ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು: ಯಶವಂತಪುರ, ತುಮಕೂರು, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗ

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಇವು, ಯಾವುದೇ ಯಂತ್ರ ಮಂತ್ರ ತಂತ್ರದ ಪ್ರಭಾವವಿಲ್ಲದೆ ಪತಿಯನ್ನು ನಿಮ್ಮ ಅಂಗೈನಲ್ಲಿ ಇಟ್ಟುಕೊಳ್ಳುವ ಸುಲಭ ಉಪಾಯಗಳು.!

ವಿಶೇಷ ರೈಲು ಹೊರಡಲಿರುವ ದಿನಾಂಕಗಳು

5ನೇ ಸುತ್ತಿನ ಯಾತ್ರೆ

* ನಿರ್ಗಮನ (ರೈಲು ಹೊರಡುವ ದಿನ): 29-08-2023
* ಆಗಮನ (ರೈಲು ಮರಳುವ ದಿನ): 06-09-2023

6ನೇ ಸುತ್ತಿನ ಯಾತ್ರೆ

* ನಿರ್ಗಮನ (ರೈಲು ಹೊರಡುವ ದಿನ): 23-09-2023
* ಆಗಮನ (ರೈಲು ಮರಳುವ ದಿನ): 01-10-2023

ಹೆಚ್ಚಿನ ಮಾಹಿತಿಗೆ ಸಹಾಯವಾಣಿ

8595931291, 8595931292, 8595931294

Leave a Comment