ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಇವು, ಯಾವುದೇ ಯಂತ್ರ ಮಂತ್ರ ತಂತ್ರದ ಪ್ರಭಾವವಿಲ್ಲದೆ ಪತಿಯನ್ನು ನಿಮ್ಮ ಅಂಗೈನಲ್ಲಿ ಇಟ್ಟುಕೊಳ್ಳುವ ಸುಲಭ ಉಪಾಯಗಳು.!

 

● ನಿಮ್ಮ ಮೊಬೈಲ್ Wallpaper, ಸೋಶಿಯಲ್ ಮೀಡಿಯಾ ಅಕೌಂಟ್ Profile ಗಳಲ್ಲಿ ನಿಮ್ಮಿಬ್ಬರ ಫೋಟೋ ಹಾಕಿಕೊಳ್ಳಿ, ಆದರೆ ಇದು ತೋರಿಕೆಗಾಗಿ ಹಾಕಿಬಾರದು, ಪ್ರೀತಿಯಿಂದ ಇವುಗಳನ್ನು ಮಾಡಿ.
● ನಿಮ್ಮ ಪತಿಯ ಕೋಪವನ್ನು ಹೆಚ್ಚು ಮಾಡುವಂತಹ ಕೆಲಸಗಳನ್ನು ಪದೇ ಪದೇ ಮಾಡುತ್ತಿರಬೇಡಿ
● ಯಾವುದೇ ಕಾರಣಕ್ಕೂ ತಮಾಷೆಗೂ ಸಹ ಇನ್ನೊಬ್ಬರ ಜೊತೆ ನಿಮ್ಮ ಪತಿಯನ್ನು ಹೋಲಿಕೆ ಮಾಡಿಕೊಂಡು ಅವರ ಎದುರು ಮಾತನಾಡಬೇಡಿ.

● ನಿಮಗೆ ಯಾವುದೇ ವಿಷಯ ಇಷ್ಟವಾದರೂ, ಇಷ್ಟವಾಗದೇ ಇದ್ದರೂ ಅದನ್ನು ಹೇಳುವ ವಿಧಾನವು ಕೋಪದಿಂದ ಇರಬಾರದು. ಬಹಳ ನಾಜೂಕಾಗಿ ಮಾತನಾಡಿ ನಿಮ್ಮ ವಿಷಯವನ್ನು ಮುಟ್ಟಿಸಿ.
● ವಾರಕ್ಕೆ ಒಮ್ಮೆಯಾದರೂ ನಿಮ್ಮ ಪತಿ ಇಷ್ಟಪಟ್ಟು ತಿನ್ನುವ ಅಡುಗೆಗಳನ್ನು ಮಾಡಿ ಬಡಿಸಿ.
● ನಿಮ್ಮ ಪತಿಗೆ ಇಷ್ಟ ಆಗುವ ರೀತಿ ನೀಟಾಗಿ ರೆಡಿಯಾಗಿ, ಆಗ ನಿಮ್ಮನ್ನು ಬಿಟ್ಟು ಅವರ ದೃಷ್ಟಿ ಬೇರೆ ಕಡೆ ಹರಿಯುವುದಿಲ್ಲ.

ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಹರ್ಷ ವ್ಯಕ್ತ ಪಡಿಸಿದ ಬಾಡಿಗೆದಾರರು.!

● ಪತಿ ಎದುರುಗಡೆ ಇದ್ದರೂ ಕೂಡ ಅವರಿಗೆ ಸಮಯ ಕೊಡದೆ ಮೊಬೈಲ್ ನಲ್ಲಿ ಅಥವಾ TV ಯಲ್ಲಿ ಮಗ್ನರಾಗಿ ಇರಬೇಡಿ.
● ಪತಿ ಹೊರಗಿನಿಂದ ಮನೆಗೆ ಬಂದ ತಕ್ಷಣವೇ ಮನೆಯಲ್ಲಿನ ಸಮಸ್ಯೆಗಳ ಪಟ್ಟಿ ಹೇಳಬೇಡಿ. ಆದಷ್ಟು ತಾಳ್ಮೆಯಿಂದ ಇರಿ.
● ನೀವು ಅವರ ದುಡಿಮೆಗೆ ಮಾತ್ರ ಬೆಲೆ ಕೊಡುತ್ತೀರಿ ಅವರಿಗಲ್ಲ ಎನ್ನುವ ಭಾವನೆ ಬರದಂತೆ ನೋಡಿಕೊಳ್ಳಿ.

● ಅಡುಗೆ ವಿಚಾರವಾಗಿ ಕಂಪ್ಲೇಂಟ್ ಮಾಡುತ್ತಲೇ ಇದ್ದರೂ ಕೂಡ ಸುಮ್ಮನಿರಿ. ಒಂದು ವೇಳೆ ನೀವು ಮಾಡಿದ ಅಡುಗೆ ರುಚಿಯಾಗಿ ಇರಲಿಲ್ಲ ಎಂದರೆ ಚೆನ್ನಾಗಿ ಮಾಡುವುದನ್ನು ಕಲಿತುಕೊಳ್ಳಿ ಅಥವಾ ಚೆನ್ನಾಗಿದ್ದೂ ಕೂಡ ದೂರುತ್ತಿದ್ದರೆ ಪ್ರತಿಕ್ರಿಯಿಸದೆ ಸುಮ್ಮನೆ ಇದ್ದುಬಿಡಿ, ಇದು ಬಹಳ ಒಳ್ಳೆಯದು.

ಉದೋಗಾಂಕ್ಷಿಗಳ ಗಮನಕ್ಕೆ ʻBECILʼನಲ್ಲಿ 42,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

● ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಕೂಡ ಆಯಾ ಸ್ಥಳದಲ್ಲಿಯೇ ಇರಲಿ, ಆ ರೀತಿ ಮನೆಯಲ್ಲಿರುವ ನೀವು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಇದೇ ಜಗಳಕ್ಕೆ ದೊಡ್ಡ ಕಾರಣ ಆಗುತ್ತದೆ.
● ಮನೆಕೆಲಸಗಳ ಹೊರೆ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಕೆಲಸದವರ ತರಹ ದುಡಿಯುತ್ತಿದ್ದೇನೆ ಎನ್ನುವ ನೋ’ವು ಬೇಡ. ಬದಲಿಗೆ ಮನೆಕೆಲಸ ನಿಮ್ಮದೇ ಜವಾಬ್ದಾರಿ ಎಂದು ಭಾವಿಸಿ ಆಸಕ್ತಿಯಿಂದ ತೊಡಗಿಕೊಳ್ಳಿ.
● ಮಕ್ಕಳಾದ ಮೇಲೆ ಪತಿಯ ಅವಶ್ಯಕತೆ ಇನ್ನೇನಿದೆ ಎಂದು ಅಸಡ್ಡೆ ಮಾಡಬೇಡಿ, ಯಾವಾಗಲೂ ಪತಿಯ ಇಚ್ಛೆಯನುಸಾರ ನಡೆಯಿರಿ ಆಗ ಸಂಸಾರ ಚೆನ್ನಾಗಿರುತ್ತದೆ.

● ಪತಿ ನಾನು ಹೇಳಿದ ಮಾತು ಕೇಳುವುದಿಲ್ಲ, ನನ್ನ ಮೇಲೆ ಪ್ರೀತಿ ತೋರುವುದಿಲ್ಲ, ನನ್ನ ಮಾತಿಗೆ ಗೌರವ ಕೊಡುವುದಿಲ್ಲ ಎಂದು ನೀವು ಕೂಡ ಅವರ ಮಾತಿಗೆ ಗೌರವ ಕೊಡದೆ ಇರುವುದು ಅವರ ಬಗ್ಗೆ ಪ್ರೀತಿ ತೋರದೆ ಇರುವುದು ಈ ರೀತಿ ಮಾಡಬೇಡಿ. ಅವರ ತಪ್ಪನ್ನು ಅವರಿಗೆ ನಾಜೂಕಾಗಿ ಮನವರಿಕೆ ಮಾಡಿ ಕೊಡಿ. ನಿಮ್ಮ ಸಂಸಾರವನ್ನು ಸರಿ ಮಾಡಿಕೊಳ್ಳುವ ದಾರಿ ನಿಮ್ಮ ಕೈಯಲ್ಲಿ ಇರುತ್ತದೆ. ಒಂದು ಬಾರಿ ವಿವಾಹ ಜೀವನ ಹಾಳಾದರೆ ಸರಿ ಮಾಡಿಕೊಳ್ಳಲು ಅಸಾಧ್ಯ ಎನ್ನುವುದರ ಬಗ್ಗೆ ಎಚ್ಚರ ಇರಲಿ ಹಾಗಾಗಿ ನೀವೇ ಹೊಂದಿಕೊಂಡು ಹೋಗಿ.

BPL ಕಾರ್ಡ್‌‌ ಇದ್ದವರಿಗೆ ಬಿಗ್‌ ಶಾ-ಕ್‌ ಮನೆ ಮನೆ ಸರ್ವೇ ಕೆಲಸ ಶುರು ಮಾಡಿದ ಸರ್ಕಾರ.! ರದ್ದಾಗಲಿದೆ ಇಂತಹ ಕುಟುಂಬದ ರೇಷನ್ ಕಾರ್ಡ್

● ಪತಿಯ ಮನೆಯವರನ್ನು ಯಾವಾಗಲೂ ನಿಂದಿಸುತ್ತ ಇರಬೇಡಿ, ಒಂದು ವೇಳೆ ಸಮಸ್ಯೆ ಇದ್ದರೂ ಅದನ್ನು ನಿಧಾನವಾಗಿ ಅರ್ಥ ಆಗುವಂತೆ ವಿವರಿಸಿ ಪರಿಹಾರ ಹುಡುಕಿಕೊಳ್ಳಿ.
● ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಡಿಪೆಂಡ್ ಆಗುವುದನ್ನು ಕಡಿಮೆ ಮಾಡಿ.
● ಕುಟುಂಬದಲ್ಲಿ ಬರುವ ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಹೆಚ್ಚು ಕೊರಗುತ್ತಾ, ತಲೆಕೆಡಿಸಿಕೊಳ್ಳುತ್ತಾ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಮನಸ್ಸು ಹಾಳಾದರೆ ಕುಟುಂಬದ ವಾತಾವರಣ ಬದಲಾಗುತ್ತದೆ. ಹಾಗಾಗಿ ಏನೇ ಆದರೂ ಕೂಡ ಸಹಿಸಿಕೊಂಡು ನಿಸ್ವಾರ್ಥಿಯಾಗಿ ಸಂಸಾರಕ್ಕಾಗಿ ಬದುಕಿ. ಆಗ ನಿಮ್ಮ ಪತಿ ಹಾಗೂ ಕುಟುಂಬದವರೆಲ್ಲರೂ ನಿಮ್ಮನ್ನು ಮೆಚ್ಚುತ್ತಾರೆ.

Leave a Comment