ನಿಮ್ಮ ಮನೆಗಳಲ್ಲಿ ಹಲವಾರು ಬ್ಯಾಗ್ ಗಳನ್ನು ಇಟ್ಟಿರುತ್ತೀರಿ ಹೌದು ನಾವು ಸದಾ ಕಾಲ ಉಪಯೋಗಿಸುವಂತಹ ಕೆಲವೊಂದಷ್ಟು ಬ್ಯಾಗ್ ಹೆಚ್ಚಿನ ದಿನದಿಂದಲೂ ಉಪಯೋಗಿಸುತ್ತಿರುವ ಕಾರಣ ಅವುಗಳ ಜಿಪ್ ಕಿತ್ತು ಹೋಗಿರುತ್ತದೆ ಅಥವಾ ಜಿಪ್ ಸರಿಯಾಗಿ ಆಗುತ್ತಿರುವುದಿಲ್ಲ. ಅದನ್ನು ರಿಪೇರಿ ಮಾಡಿಸುವುದರ ಬದಲು ಅದನ್ನು ಮೇಲೆ ಇಟ್ಟಿರುತ್ತೇವೆ ಹಾಗೂ ಇನ್ನು ಕೆಲವೊಂದಷ್ಟು ಜನ ಅದನ್ನು ಆಚೆ ಎಸೆದಿರುತ್ತಾರೆ.
ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಬರುವುದಿಲ್ಲ ಬದಲಿಗೆ ಸುಲಭ ವಾಗಿ ನೀವೇ ನಿಮ್ಮ ಮನೆಯಲ್ಲಿ ಜಿಪ್ ರಿಪೇರಿ ಮಾಡಿಕೊಳ್ಳಬಹುದು. ಹೌದು ಯಾವುದೇ ರೀತಿಯ ಹಣಕಾಸಿನ ಖರ್ಚು ಮಾಡದೆ ಈಗ ನಾವು ಹೇಳುವಂತಹ ಕೆಲವೊಂದು ಟಿಪ್ ಗಳನ್ನು ಅನುಸರಿಸುವುದರಿಂದ ನಿಮ್ಮ ಬ್ಯಾಗ್ ನಲ್ಲಿ ಇರುವಂತಹ ಜಿಪ್ ಸರಿಪಡಿಸಿ ಕೊಳ್ಳಬಹುದಾಗಿದೆ. ಹಾಗಾದರೆ ಈ ದಿನ ಯಾವ ವಿಧಾನ ಅನುಸರಿಸಿ ಜಿಪ್ ಸರಿ ಮಾಡ ಬಹುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!
ಅದಕ್ಕೂ ಮೊದಲು ಯಾವ ಒಂದು ಕಾರಣಗಳಿಂದ ಜಿಪ್ ಹಾಳಾಗುತ್ತದೆ ಎಂದು ನೋಡುವುದಾದರೆ.
* ಅದರಲ್ಲೂ ಶಾಲೆಗೆ ಹೋಗುವಂತಹ ಮಕ್ಕಳು ಬ್ಯಾಗ್ ನಲ್ಲಿ ಇರುವಂತಹ ಜಿಪ್ ಅನ್ನು ಪದೇ ಪದೇ ಹಾಕುವುದು ತೆಗೆಯುವುದು ಮಾಡುತ್ತಿದ್ದರೆ ಬ್ಯಾಗ್ ಜಿಪ್ ಹಾಳಾಗುತ್ತದೆ.
* ಹಾಗೂ ಜಿಪ್ ಅನ್ನು ನೀರಿನಲ್ಲಿ ತೊಳೆದು ಹಾಗೆ ಇಟ್ಟಿದ್ದರೆ ಅದು ತುಕ್ಕು ಹಿಡಿಯುತ್ತದೆ ಈ ಒಂದು ಕಾರಣದಿಂದಲೂ ಜಿಪ್ ಹಾಳಾಗುವುದನ್ನು ನಾವು ಕಾಣಬಹುದು.
* ಅದೇ ರೀತಿಯಾಗಿ ಬ್ಯಾಗ್ ಒಳಗೆ ಅಧಿಕವಾದಂತಹ ವಸ್ತುಗಳನ್ನು ಇಟ್ಟು ಕಷ್ಟಪಟ್ಟು ಜಿಪ್ ಅನ್ನು ಹಾಕುವುದರಿಂದಲೂ ಕೂಡ ಜಿಪ್ ಹಾಳಾಗುತ್ತದೆ ಹೀಗೆ ಇನ್ನೂ ಹಲವಾರು ಕಾರಣಗಳನ್ನು ನಾವು ಕಾಣಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಪ್ ರಿಪೇರಿಯನ್ನು ಹೇಗೆ ನಾವು ಒಂದೇ ಕ್ಷಣದಲ್ಲಿ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!
• ಮೊದಲು ಯಾವುದೇ ಜಿಪ್ ಹಾಳಾಗಿದ್ದರೂ ಜಿಪ್ ಹಾಕುವಂತಹ ಬ್ಯಾಗ್ ಕೊನೆ ಭಾಗದಲ್ಲಿ ಇಟ್ಟು ಜಿಪ್ ಅಕ್ಕಪಕ್ಕದಲ್ಲಿ ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಅದನ್ನು ಬಿಗಿ ಮಾಡಬೇಕು. ಏಕೆoದರೆ ಲೂಸ್ ಆಗಿರುತ್ತದೆ ಆದ್ದರಿಂದ ಈ ರೀತಿ ಮಾಡುವುದರಿಂದ ಜಿಪ್ ಸರಿಹೋಗುತ್ತದೆ.
• ಹಾಗೂ ಕೆಲವೊಮ್ಮೆ ಪದೇ ಪದೇ ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರು ತ್ತದೆ ಇಂತಹ ಸಮಯದಲ್ಲಿ ಕೆಲವೊಂದಷ್ಟು ಜನ ಅದಕ್ಕೆ ಯಾವುದಾದರೂ ಎಣ್ಣೆಯನ್ನು ಹಾಕಿ ಸರಿಪಡಿಸುತ್ತಾರೆ. ಅದರ ಬದಲು ವ್ಯಾಸ್ಲಿನ್ ಅಥವಾ ಲಿಪ್ ಬಾಮ್ ಇದ್ದರೆ ಅದನ್ನು ಹಚ್ಚಿ ತಕ್ಷಣವೇ ಒಂದೆರಡು ಬಾರಿ ಜಿಪ್ ಹಾಕಿ ತೆಗೆಯುವುದರಿಂದ ಅದು ಮಧ್ಯಮಧ್ಯ ಸಿಕ್ಕಿಹಾಕಿಕೊಳ್ಳುತ್ತಿದ್ದರೆ ಅದು ಸರಿಹೋಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಅನುಸರಿಸುವುದು ಕೂಡ ತುಂಬಾ ಒಳ್ಳೆಯದು.
ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
• ಸಾಮಾನ್ಯವಾಗಿ ನಾವು ಜಿಪ್ ಹಾಕುವಂತಹ ಸಮಯದಲ್ಲಿ ಆ ಬಟ್ಟೆಯನ್ನು ಸಮವಾಗಿ ಎಳೆದು ಆನಂತರ ಜಿಪ್ ಆಗಬೇಕು. ಆದರೆ ಕೆಲವೊಮ್ಮೆ ಅದು ಸಮವಾಗಿ ಬರುವುದಿಲ್ಲ ಅಂತಹ ಸಮಯದಲ್ಲಿ ಒಂದು ಫೋರ್ಕ್ ಸ್ಪೂನ್ ತೆಗೆದುಕೊಂಡು ಅದಕ್ಕೆ ಜಿಪ್ ಹಾಕಿ ಆ ನಂತರ ಸುಲಭವಾಗಿ ತೂರಿಸಬಹುದು. ಈ ವಿಧಾನ ತುಂಬಾ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ಒಳ್ಳೆಯದು.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ತುಂಬಾ ಅನುಕೂಲ ವಾಗಿದ್ದು ಇನ್ನು ಮುಂದೆ ಯಾರೂ ಕೂಡ ಜಿಪ್ ಹಾಳಾಗಿದೆ ಎಂದು ಬ್ಯಾಗ್ ಅನ್ನೇ ಎಸೆಯುವಂತಹ ಅವಶ್ಯಕತೆ ಇಲ್ಲ ಬದಲಿಗೆ ಮೇಲೆ ಹೇಳಿದಂತಹ ವಿಧಾನಗಳನ್ನು ಅನುಸರಿಸಿ ಮತ್ತೆ ಅದನ್ನು ಮರು ಬಳಕೆ ಮಾಡಬಹುದಾಗಿದೆ.