ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!

 

ಈಗಿನ ಕಾಲದಲ್ಲೂ ಮಂಚಗಳು ತಂತ್ರಗಳು ಕೆಲಸ ಮಾಡುತ್ತವೆ ಎಂದರೆ ಹೆಚ್ಚಿನ ಜನರು ನಂಬುವುದಿಲ್ಲ. ಆದರೆ ನಂಬಿಕೆ ಗಟ್ಟಿಯಾಗಿದ್ದರೆ ಖಂಡಿತವಾಗಿಯೂ ಇವೆಲ್ಲಾ ಕೆಲಸ ಮಾಡುತ್ತವೆ. ಕೆಲವು ಸರಳ ಉಪಾಯದ ಮೂಲಕ ನಿಮ್ಮ ಎಂತಹದೇ ಕಷ್ಟಗಳಿದ್ದರೂ ಪರಿಹಾರ ಮಾಡಿಕೊಳ್ಳಬಹುದು ಹಾಗೂ ಎಂತಹದೇ ಇಚ್ಛೆ ಇದ್ದರೂ ಅದನ್ನು ಸಿದ್ದಿ ಮಾಡಿಕೊಳ್ಳಬಹುದು ಒಂದೇ ಒಂದು ಹ್ಯಾಂಡ್ ಕರ್ಚೀಫ್ ಕೂಡ ನಿಮ್ಮ ಕೋರಿಕಗಳನ್ನು ಈಡೇರಿಸುವ ಶಕ್ತಿ ಹೊಂದಿದೆ.

ಆದರೆ ಅದನ್ನು ಯಾವ ರೀತಿ ಪ್ರಯೋಗ ಮಾಡಬೇಕು ಎನ್ನುವುದನ್ನು ಅರಿತಿರಬೇಕು. ಈಗ ನಾವು ಈ ಲೇಖನದಲ್ಲಿ ಅದನ್ನೇ ತಿಳಿಸಿಕೊಡುತ್ತಿದ್ದೇವೆ. ಒಂದು ಬಿಳಿ ಬಣ್ಣದ ಹ್ಯಾಂಡ್ ಕರ್ಚೀಫ್ ಇಂದ ಹೇಗೆ ನಿಮ್ಮ ಕೋರಿಕೆಯನ್ನು ಸಾಕಾರ ಮಾಡಿಕೊಳ್ಳಬಹುದು ಎಂದು. ಅದಕ್ಕಾಗಿ ಒಂದು ರೂಪಾಯಿ ಕೂಡ ಖರ್ಚಾಗುವುದಿಲ್ಲ ನಿಮ್ಮ ಮನೆಯಲ್ಲಿರುವ ಬಿಡಿ ಕರ್ಚಿಫ್ ನಲ್ಲಿ ಉಪಾಯ ಮಾಡಿ ಸಾಕು.

ಶುದ್ಧ ಬಿಳಿ ಬಣ್ಣದ ಕರ್ಚಿಫ್ ತೆಗೆದುಕೊಳ್ಳಿ ಅದನ್ನು ನೀರಿನಲ್ಲಿ ಹಾಕಿ ಒಣಗಿಸಿ ಇಟ್ಟುಕೊಳ್ಳಿ. ಇದನ್ನು ಯಾವ ವಾರ ಬೇಕಾದರೂ ಮಾಡಬಹುದು, ಹಾಗೂ ದಿನದ ಯಾವ ಸಮಯದಲ್ಲಿ ಬೇಕಾದರೂ ನಿಮಗೆ ಅನುಕೂಲವಾದಾಗ ನೆಮ್ಮದಿಯಿಂದ ಒಂದೆಡೆ ಕುಳಿತುಕೊಂಡು ಏಕಾಗ್ರತೆಯಿಂದ ಮಾಡಿ ಸಾಕು. ಮತ್ತೊಂದು ಮುಖ್ಯವಾದ ವಿಷಯ ಏನು ಎಂದರೆ ಈ ರೀತಿ ಯಾವುದೇ ಉಪಾಯಗಳು ಅಥವಾ ನಾವಿಟ್ಟ ಯಾವುದೇ ನಂಬಿಕೆಗಳು ನೆರವೇರಬೇಕು ಎಂದರೆ ನಮ್ಮಲ್ಲಿ ಸಕರಾತ್ಮಕ ಶಕ್ತಿ ಇರಬೇಕು.

ಸದಾ ಕಾಲ ನಾವು ಪಾಸಿಟಿವ್ ಆಗಿ ಥಿಂಕ್ ಮಾಡುತ್ತಿರಬೇಕು ಮತ್ತು ಇತರರಿಗೂ ನಾವು ಅದನ್ನೇ ಬಯಸಬೇಕು. ಯಾರ ಮೇಲೆ ಹೊಟ್ಟೆಕಿಚ್ಚು ಪಡಬಾರದು ಯಾರಿಗೂ ಕೆಟ್ಟದ್ದನ್ನು ಬಯಸಬಾರದು, ಯಾರಿಗೂ ಮೋಸ ಮಾಡಬಾರದು, ಸದಾ ಒಳ್ಳೆಯ ನುಡಿಗಳನ್ನು ಆಡುತ್ತ ದಯೆಯಿಂದ ಬದುಕಬೇಕು. ಈ ರೀತಿ ಒಳ್ಳೆತನಗಳು ನಮ್ಮಲ್ಲಿದ್ದಾಗ ಇಂತಹ ಪ್ರಯೋಗಗಳು ಬೇಗ ಫಲ ಕೊಡುತ್ತದೆ.

ಬಿಳಿ ಖರ್ಚೀಫನ್ನು ತೆಗೆದುಕೊಂಡು ಒಂದೆಡೆ ಕುಳಿತುಕೊಳ್ಳಿ ಮತ್ತು ಒಂದು ಸೆಂಟ್ ಬಾಟಲನ್ನು ಕೂಡ ನಿಮ್ಮ ಬಳಿ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ಸೆಂಟ್ ಇಲ್ಲ ಎಂದರೆ ರೋಜ್ ವಾಟರ್ ಇದ್ದರೆ ಅದನ್ನು ನೀರಿಗೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಒಂದು ಕರ್ಚೀಫಿಗೆ ನಿಮ್ಮ ಮೂರು ಕೋರಿಕೆಗಳನ್ನು ಮಾತ್ರ ನೆರವೇರಿಸುವ ಶಕ್ತಿ ಇರುತ್ತದೆ. ಹಾಗೂ ಒಂದು ಬಾರಿಗೆ ನೀವು 3 ಕೋರಿಕೆಗಳನ್ನು ಅಷ್ಟೇ ಕೇಳಿಕೊಳ್ಳಬೇಕು.

ನಿಮ್ಮ ಮೊದಲ ಕೋರಿಕೆ ಕೇಳಿಕೊಳ್ಳಿ ಅದು ವಿದ್ಯಾಭ್ಯಾಸ, ಆರೋಗ್ಯ ಸಂತಾನದ ಬಗ್ಗೆ, ಹಣಕಾಸಿನ ಸಮಸ್ಯೆ ಅಥವಾ ಆಸ್ತಿ ವಿಚಾರ ಇರಬಹುದು. ಆ ರೀತಿ ನಿಮ್ಮ ಕೋರಿಕೆ ನೆರವೇರಬೇಕು ಎಂದು ಕೇಳಿಕೊಂಡ ತಕ್ಷಣ ಆ ಕರ್ಚಿಫ್ ನ ತುದಿಗೆ ಸೆಂಟ್ ಅನ್ನು ಸ್ಪ್ರೆಡ್ ಮಾಡಿ ಅಥವಾ ರೋಜ್ ವಾಟರ್ ಮಿಕ್ಸ್ ಮಾಡಿದ ನೀರನ್ನು ಆ ತುದಿಗೆ ಹಚ್ಚಿ ಒದ್ದೆ ಮಾಡಿ ಅದನ್ನು ಗಂಟು ಹಾಕಿ, ಮತ್ತೊಂದು ತುದಿಯನ್ನು ತೆಗೆದುಕೊಂಡು ಮತ್ತೊಂದು ಕೋರಿಕೆಯನ್ನು ಹೇಳಿ ಗಂಟು ಹಾಕಿ ಮತ್ತು ಮೂರನೇ ಕೋರಿಕೆಯನ್ನು ಹೇಳಿಕೊಂಡು ಮತ್ತೊಂದು ತುದಿಯನ್ನು ಗಂಟು ಹಾಕಿ ಕೊನೆಗೆ ಮಡಚಿ ಒಂದೆಡೆ ಇಡಿ.

ನೀವು ಬಿರುವಿನ್ನಲ್ಲಾದರು ಇಡಬಹುದು ಅಥವಾ ಮನೆಯ ಎಲ್ಲಾದರೂ ಇಡಬಹುದು ಆದರೆ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರ ಕಣ್ಣಿಗೂ ಕೂಡ ಅದು ಬೀಳಬಾರದು ಮತ್ತು ಅವರ್ಯಾರು ಅದನ್ನು ಮುಟ್ಟಬಾರದು. ಆ ರೀತಿ ಒಂದು ಜಾಗದಲ್ಲಿ ಇಡಿ, 21 ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿ ಆಗುತ್ತದೆ. ನಿಮ್ಮ ಕೋರಿಕೆ ಒಂದೊಂದಾಗಿ ನೆರವೇರುತ್ತಾ ಬರುತ್ತದೆ.

ಆದರೆ ನಿಮ್ಮ ಕೋರಿಕೆಗಳು ನೆರವೇರುವ ಸೂಚನೆ ನಿಮಗೆ ತಿಳಿದ ತಕ್ಷಣವೇ ಮತ್ತೊಂದು ಕೆಲಸವನ್ನು ನೀವು ಮಾಡಬೇಕು ಅದೇನೆಂದರೆ ಒಂದು ಕೋರಿಕೆ ನೆರವೇರಿದ ನಂತರ ಆ ಕರ್ಚಿಫ್ ಅನ್ನು ತೆಗೆದುಕೊಂಡು ಅದರಲ್ಲಿ ಯಾವುದಾದರು ಒಂದು ಗಂಟನ್ನು ಬಿಚ್ಚಿ ಮತ್ತೆ ಅಲ್ಲೇ ಇಡಬೇಕು, ಮತ್ತೊಂದು ಕೋರಿಕೆ ನೆರವೇರಿದ ನಂತರ ಮತ್ತೊಂದು ಗಂಟು ಬಿಚ್ಚಿ ಅದೇ ಜಾಗದಲ್ಲಿ ಇಡಬೇಕು. ಎಲ್ಲಾ ಕೋರಿಕೆಗಳು ನೆರವೇದ ನಂತರ ಮತ್ತೊಮ್ಮೆ ನೀರಿನಲ್ಲಿ ಅದನ್ನು ಅದ್ದಿ ಒಣಗಿಸಿ ದಿನನಿತ್ಯದ ಬಳಕೆಗೆ ಬಳಸಬಹುದು.

Leave a Comment