Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.

Posted on May 21, 2022 By Kannada Trend News No Comments on ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.

ಪುನೀತ್ ರಾಜಕುಮಾರ್ ಅವರು ರಾಜಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಿನಿಮಾ ಕುಟುಂಬಕ್ಕೆ ಆತ್ಮೀಯರಾಗಿದ್ದರು. ಅವರ ಅಗಲಿಕೆಯ ಕೆಟ್ಟ ಸುದ್ದಿ ಇಡೀ ಕರುನಾಡಿನ ತುಂಬಾ ಸೂತಕದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಅಪ್ಪು ಅಗಲಿಕೆಗೆ ದೇಶದ ಎಲ್ಲಾ ಸುದ್ದಿಮಾಧ್ಯಮಗಳು ಹಾಗೂ ವಿದೇಶದ ಸುದ್ದಿ ಮಾಧ್ಯಮಗಳು ಕೂಡ ಸಂತಾಪ ಸೂಚಿಸಿದ್ದವು. ಕರುನಾಡಿನ ರಾಜಕುಮಾರನ ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳ ಪ್ರವಾಹವೇ ಹರಿದು ಬಂದಿತ್ತು. ಅಪ್ಪು ಅಗಲಿಕೆಗೆ ಕಂಬನಿ ಮಿಡಿಯದ ಕಂಗಳು ಕರುನಾಡಲ್ಲಿಯೇ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಕರುನಾಡಿನ ಜನತೆ ಅವರ ಮನೆ ಮಗನನ್ನು ಕಳೆದುಕೊಂಡ ನೋವಿನಲ್ಲಿ ಇದ್ದರು. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಏಳು ತಿಂಗಳುಗಳೇ ಕಳೆದರೂ ಅವರ ಅಗಲಿಕೆಯ ನೋವು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಕೊಂಚವು ಕಡಿಮೆಯಾಗಿಲ್ಲ. ಆ ನೋವು ಎಂದಿಗೂ ಆರದ ಗಾಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ.

WhatsApp Group Join Now
Telegram Group Join Now

ತೆರೆಮೇಲೆ ಸಿನಿಮಾ ನೋಡಿ ನೆಚ್ಚಿನ ನಟ ಎಂದು ಒಪ್ಪಿಕೊಂಡು ಪ್ರೀತಿ ತೋರಿದ ಅಭಿಮಾನಿಗಳೇ ಇಷ್ಟು ನೋವಿನಲ್ಲಿ ಇರಬೇಕಾದರೆ ಪುನೀತ್ ರಾಜಕುಮಾರ್ ಅವರ ಕುಟುಂಬದ ಸದಸ್ಯರಿಗೆ ಅವರ ಅಕಾಲಿಕ ಮ’ರ’ಣ’ದ ನೋ’ವು ಎಷ್ಟಿತ್ತು ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅವರ ದುಃ’ಖದ ನೋ’ವು ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಮುಖದಲ್ಲಿ ಈಗಲೂ ಎದ್ದು ತೋರುತ್ತದೆ. ಕ್ರಮೇಣವಾಗಿ ಇವರ ಕುಟುಂಬ ಈಗಷ್ಟೇ ಅವನ್ನೆಲ್ಲ ಮುಚ್ಚಿಟ್ಟುಕೊಂಡು ಮತ್ತೆ ತಮ್ಮ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು. ಪ್ರತಿಯೊಬ್ಬರ ನೃತ್ಯದಲ್ಲೂ ಕನ್ನಡ ಇಂಡಸ್ಟ್ರಿಗೆ ಡ್ಯಾನ್ಸಿಂಗ್ ಸ್ಟಾರ್ ಆಗಿದ್ದ ತಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಆಗಾಗ ಭಾವುಕರಾಗುತ್ತಾರೆ. ಇದನ್ನು ನೋಡಿದರೆ ಯಾರಿಗೆ ಆದರೂ ಕರುಳು ಹಿಂಡುವಷ್ಟು ನೋವಾಗುತ್ತದೆ.

ಇನ್ನು ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಪುನೀತ್ ರಾಜ್ ಕುಮಾರ್ ಅವರು ಇದ್ದ ದಿನದಿಂದಲೂ ಸಹ ಕ್ಯಾಮರ ಎಂದರೆ ಹಿಂದೆ ಹಿಂದೆ ಹೋಗುತ್ತಿದ್ದ ಅಶ್ವಿನಿ ಅವರು ಈಗಲೂ ಸಹ ಎಲ್ಲಿಯೂ ಒಂದು ಮಾತನ್ನು ಆಡಿಲ್ಲ. ಆಕಾಶದಷ್ಟು ಅಗಲದ ನೋವನ್ನು ಎದೆಯಾಳದಲ್ಲಿ ಮುಚ್ಚಿಟ್ಟುಕೊಂಡಿರುವ ಅಶ್ವಿನಿ ಅವರು ತಮ್ಮ ಮಕ್ಕಳಿಗೋಸ್ಕರ ಮುಂದಿನ ದಿನಗಳನ್ನು ಎದುರು ನೋಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಕುಟುಂಬವನ್ನು ತುಂಬಾ ಇಷ್ಟಪಡುತ್ತಿದ್ದರು ಹಾಗೂ ಪತ್ನಿ ಮತ್ತು ಮಕ್ಕಳೊಂದಿಗೆ ತುಂಬಾ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಅವರ ದಿಢೀರ್ ಅಗಲಿಕೆ ಮಕ್ಕಳ ಪಾಲಿಗೆ ನಿಜವಾಗಲೂ ನುಂಗಲಾರದ ತುತ್ತು. ಸದ್ಯಕ್ಕೆ ಒಬ್ಬ ಮಗಳು ವಿದೇಶಕ್ಕೆ ಹಿಂದಿರುಗಿ ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿದ್ದಾರೆ ಇನ್ನೊಬ್ಬ ಮಗಳು ಅಮ್ಮನ ನೋವಿಗೆ ಹೆಗಲಾಗಿ ಬೆಂಗಳೂರಿನಲ್ಲೇ ಇದ್ದಾರೆ.

ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರದ್ದು ಪ್ರೇಮ ವಿವಾಹ. ಡಿಸೆಂಬರ್ 1, 2000 ನೇ ಇಸವಿಯಲ್ಲಿ ಹಸೆಮಣೆ ಏರಿದ್ದ ಜೋಡಿ ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದರು. ಇಬ್ಬರದು ಕೂಡ ನಗುಮುಖ ಹಾಗೂ ಇಬ್ಬರದು ಕೂಡ ತುಂಬಾ ಸರಳ ವ್ಯಕ್ತಿತ್ವ. ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ತಪ್ಪದೆ ಅಪ್ಪು ಅವರು ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಈ ರೀತಿಯ ಅಭ್ಯಾಸವನ್ನು ಈ ಕಾಲದ ಸ್ಟಾರ್ ಗಳಲ್ಲಿ ನೋಡುವುದು ತುಂಬಾ ಕಡಿಮೆ ಆದರೆ ಅಪ್ಪು ಅವರು ಸಿನಿಮಾ ಕಾರ್ಯಕ್ರಮವೇ ಆಗಲಿ ಅಥವಾ ಇನ್ಯಾವುದೇ ಕುಟುಂಬಸ್ಥರ, ಸ್ನೇಹಿತರ ಮನೆಯ ಕಾರ್ಯಕ್ರಮವಿದ್ದರೂ ಕೂಡ ಅಶ್ವಿನಿ ಅವರ ಜೊತೆಯಲ್ಲಿ ಹೋಗುತ್ತಿದ್ದರಂತೆ. ಹಾಗೂ ಇವರಿಬ್ಬರ ಬಗ್ಗೆ ಈಗಲೂ ಕೂಡ ಎಲ್ಲೂ ಒಂದು ಗಾಸಿಪ್ ಸಹ ಇಲ್ಲ ಅಷ್ಟೊಂದು ಹೊಂದಾಣಿಕೆ ಇವರಿಬ್ಬರ ನಡುವೆ ಇತ್ತು. ಸದಾ ಅಪ್ಪು ಅವರಂತೆ ನಗುಮುಖದಿಂದ ಇರುತ್ತಿದ್ದ ಅಶ್ವಿನಿ ಅವರ ನಗುವೇ ಈಗ ಕಳೆದು ಹೋಗಿದೆ.

ಪುನೀತ್ ಅವರು ಆಗಲಿ ಹೋದ ದಿನದಿಂದ ಅಶ್ವಿನಿ ಅವರ ಮುಖವನ್ನು ನೋಡಲು ಆಗುತ್ತಿಲ್ಲ ಆ ಕಣ್ಣುಗಳಲ್ಲಿ ಈಗ ಮುಂಚೆ ಇದ್ದ ಕಾಂತಿಯಾಗಲಿ, ಧೈರ್ಯವಾಗಲಿ, ಚೈತನ್ಯವಾಗಲಿ ಇಲ್ಲ. ಪ್ರೀತಿಸಿ ಕೈ ಹಿಡಿದಿದ್ದ ಪತಿಯ ಅಕಾಲಿಕ ಮರಣದ ನೋವು ಅವರಿಗೆ ಮಾನಸಿಕವಾಗಿ ತುಂಬಾ ಆಘಾತ ನೀಡಿದೆ. ಅದಲ್ಲದೆ ಇತ್ತೀಚೆಗೆ ಅವರ ತಂದೆ ಕೂಡ ನಿಧನ ಹೊಂದಿದ್ದಾರೆ. ಈ ಎಲ್ಲಾ ನೋವುಗಳಿಂದ ಅಶ್ವಿನಿ ಅವರು ಅಕ್ಷರಶಃ ಕುಂದು ಹೋಗಿದ್ದಾರೆ. ಆದರೆ ಪುನೀತ್ ಅವರು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದ ಕೆಲಸಗಳನ್ನು ಪೂರ್ತಿಗೊಳಿಸುವ ಜವಾಬ್ದಾರಿ ಈಗ ಅಶ್ವಿನಿ ಅವರ ಹೆಗಲಿಗಿದೆ. ಇದರ ಜೊತೆ ಅಪ್ಪು ಅವರ ಮುದ್ದು ಮಕ್ಕಳ ಹೊಣೆ ಕೂಡ ಇವರೇ ಹೊರಬೇಕಾಗಿದೆ. ಆದರೆ ಸದಾ ಹಸನ್ಮುಖಿಯಾಗಿದ್ದ ಅಶ್ವಿನಿ ಅವರನ್ನು ಮೊದಲಿನ ರೀತಿ ನೋಡಲು ಕುಟುಂಬಸ್ಥರು ಸ್ನೇಹಿತರು ಹಾಗೂ ಅಪ್ಪು ಅಭಿಮಾನಿ ಬಳಗ ಕಾಯುತ್ತಿದೆ.

ಇತ್ತೀಚೆಗೆ ಅಶ್ವಿನಿ ಅವರು ಮದುವೆ ಕಾರ್ಯಕ್ರಮದಲ್ಲಿ ಖುಷಿಖುಷಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಹಳೆಯ ದಿನದ ಫೋಟೋ ಗಳಾಗಿದ್ದವು. ಈ ಫೋಟೋಗಳಲ್ಲಿ ವಿಜಯ ರಾಘವೇಂದ್ರ ಅವರ ಪತ್ನಿಯ ಜೊತೆ ಅಶ್ವಿನಿ ಅವರು ನಗುನಗುತ ಫೋಟೋ ತೆಗೆಸಿಕೊಂಡಿದ್ದರು. ಆದರೆ ಈಗ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಈ ಫೋಟೋದಲ್ಲಿ ಯುವರಾಜ್ ಕುಮಾರ್, ವಂದಿತ ಪುನೀತ್ ರಾಜಕುಮಾರ್, ರಾಘಣ್ಣ ಮತ್ತು ಅವರ ಪತ್ನಿ ಮಂಗಳಮ್ಮ ಜೊತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಇದ್ದಾರೆ. ಈ ಫೋಟೋ ತೀರಾ ಇತ್ತೀಚಿಗೆ ತೆಗೆದ ರೀತಿ ಇದೆ. ಈ ಫೋಟೋದಲ್ಲಿ ಅಶ್ವಿನಿಯವರ ಮುಖದಲ್ಲಿ ಸಣ್ಣ ಕಿರುನಗೆ ಇದೆ. ಈ ರೀತಿ ಅಶ್ವಿನಿ ಅವರು ಆಗಿರುವ ಆ’ಘಾ’ತ’ದಿಂದ ಹೊರಬಂದು ಯಾವಾಗಲೂ ಇದೇ ರೀತಿ ಖುಷಿಯಾಗಿರಲಿ ಎನ್ನುವುದು ಎಲ್ಲರ ಆಶಯ ಅಪ್ಪು ಎಂದಿಗೂ ಅಮರ ನಿಜ ಅನಿಸಿದರೆ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ‌ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
Cinema Updates Tags:Appu, Ashwini appa, Forver appu

Post navigation

Previous Post: ಬಾಲನಟನಾಗಿ ಮಿಂಚಿದ್ದ ಮಾಸ್ಟರ್ ಮಂಜುನಾಥ್ ಹೀರೋ ಆಗಲೇ ಇಲ್ಲ ಯಾಕೆ ಗೊತ್ತಾ.? ಚಿತ್ರರಂಗ ಮಾಡ್ತ ಮೋ’ಸ.?
Next Post: ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme