Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on May 25, 2022 By Kannada Trend News No Comments on ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟ ಪುನೀತ್ ರಾಜಕುಮಾರ್ ಕರುನಾಡು ಕಂಡ ದೇವತಾ ಮನುಷ್ಯ, ತನ್ನ ನಿಷ್ಕಲ್ಮಶ ಮನಸ್ಸಿನಿಂದ, ಮಗುವಿನಂತಹ ನಗುವಿನಿಂದ, ಸಮಾಜ ಸೇವೆಯಿಂದ, ಮೇರು ವ್ಯಕ್ತಿತ್ವದಿಂದ ಎಲ್ಲಾ ಸೆಲೆಬ್ರಿಟಿಗಳಿಗೂ ಸಹ ಮಾಡಲ್ ಆದವರು ಅಪ್ಪು. ಅಪ್ಪು ಅವರು ಶಾಲೆಯ ಮುಖ ನೋಡುವ ಮೊದಲೇ ಅಭಿನಯದಲ್ಲಿ ಸೈ ಎನಿಸಿಕೊಂಡವರು. ತಂದೆಯ ಜೊತೆ ಸಿನಿಮಾ ಸೆಟ್ಗಳಲ್ಲಿ ಕಾಲಕಳೆಯುತ್ತಿದ್ದರ ಇವರು ತಂದೆಗೆ ಸರಿಸಮನಾಗಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟರು. ಹಾಗೂ ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ರಾಜಕುಮಾರ ಇವರು. ಬೆಳೆಯುತ್ತಾ ಕನ್ನಡ ಚಲನಚಿತ್ರರಂಗಕ್ಕೆ ಪವರ್ಸ್ಟಾರ್ ಆದರೂ ಹಾಗೂ ತೆರೆ ಹಿಂದೆ ಹಲವು ಜನರ ಬಾಳಿಗೆ ಬೆಳಕು ತುಂಬುವ ಪವರ್ ಕೂಡ ಆದರೂ. ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಇಂತಹ ದೇಶವೇ ಮೆಚ್ಚಿಕೊಂಡ ದೊರೆಯನ್ನು ದೇವರು ಅಕಾಲಿಕ ಮರಣಕ್ಕೆ ತುತ್ತು ಮಾಡಿದ್ದು ಮಾತ್ರ ಘೋರ ಅನ್ಯಾಯ.

ಪುನೀತ್ ಅವರು ಬಾಲನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಆಗಿನ ಕಾಲದಲ್ಲೇ ಹಲವಾರು ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದರು. ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದ ಪುನೀತ್ ರಾಜಕುಮಾರ್ ಅವರು ಭಕ್ತ ಪ್ರಹ್ಲಾದ, ಭಾಗ್ಯವಂತ, ಚಲಿಸುವ ಮೋಡಗಳು ಮುಂತಾದ ಸಿನೆಮಾಗಳಲ್ಲಿ ಹಾಡನ್ನು ಸಹ ಹಾಡಿದ್ದರು. ಅಭಿನಯದ ಜೊತೆಗೆ ಉತ್ತಮವಾದ ಕಂಠ ಅವರಿಗಿತ್ತು. ಬೆಳೆಯುತ್ತ ಪುನೀತ್ ರಾಜಕುಮಾರ್ ಅವರು ಒಬ್ಬ ಹಾಡುಗಾರರಾಗಿ,ನಟರಾಗಿ ಮತ್ತು ಡ್ಯಾನ್ಸಿಂಗ್ ನಲ್ಲೂ ಸಹ ಕನ್ನಡದಲ್ಲಿ ನಂಬರ್ ಒನ್ ಎಂದು ಹೆಸರು ಪಡೆದುಕೊಂಡರು. ಅಪ್ಪು ಅವರು ಉತ್ತಮ ಡಾನ್ಸರ್ ಆಗಿದ್ದರು ಹಾಗೂ ಅವರವರದೇ ಆದ ವಿಭಿನ್ನ ಶೈಲಿಯ ಸ್ಟೆಪ್ಸ್ ಗಳನ್ನು ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದರ ಜೊತೆಗೆ ಹಲವಾರು ಅಡ್ವೆಂಚರ್ ಗಳನ್ನು ಸಹ ಮಾಡಿ ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಾಕಿಕೊಂಡು ಅನುಭವವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.

ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಅಣ್ಣಾವ್ರ ಮಗ ಬೆಳೆಯುತ್ತಾ ತುಂಬಾ ಪ್ರಬುದ್ಧನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ದೊಡ್ಮನೆ ಕುಟುಂಬದ ಮತ್ತಷ್ಟು ಕೀರ್ತಿಯನ್ನು ಹೆಚ್ಚಿಸುವ ಮಗನಾದರು. ಕನ್ನಡ ನಾಡಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಹಲವಾರು ಗೋಶಾಲೆಗಳಿಗೆ, ವೃದ್ಧಾಶ್ರಮಗಳಿಗೆ, ಕರ್ನಾಟಕದ ರೈತರಿಗೆ ಇವರು ನೆರವಾಗಿದ್ದರು. ಹಲವಾರು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದ ಪುನೀತ್ ಅವರು ಅದರ ಮೂಲಕ ಬಂದ ಹಣವನ್ನೆಲ್ಲಾ ಸಮಾಜಸೇವೆಗಾಗಿ ಮೀಸಲಿಡುತ್ತಿದ್ದರು. ಇಷ್ಟೆಲ್ಲಾ ಒಳ್ಳೆಯದನ್ನು ಮಾಡುತ್ತಿದ್ದ ವ್ಯಕ್ತಿಗೆ ದೇವರು ಕೊನೆಯ ಅವಕಾಶವನ್ನು ಸಹ ಕೊಡದೆ ತನ್ನೆಡೆಗೆ ಕರೆದುಕೊಂಡಿದ್ದು ಎಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ. ಅಪ್ಪು ಎಂದರೆ ಇಡೀ ಕರ್ನಾಟಕವೇ ಇಷ್ಟ ಪಡುವ ವ್ಯಕ್ತಿ ಅವರನ್ನು ಕಳೆದುಕೊಂಡಿರುವ ನೋ’ವು ಇನ್ನು ಅಭಿಮಾನಿಗಳ ಹೃದಯದಲ್ಲಿ ಮಾಸಿಲ್ಲ, ಹಾಗಾದರೆ ಅವರ ಕುಟುಂಬಕ್ಕೆ ಆಗಿರುವ ನೋವನ್ನು ಅಳೆಯಲು ಕೂಡ ಸಾಧ್ಯವಿಲ್ಲ.

ಆದರೂ ಕೂಡ ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಕುಟುಂಬವು ಅವರ ಅಗಲಿಕೆಯ ನೋವನ್ನು ಸಹಿಸಿಕೊಂಡು ಸ್ವಲ್ಪ ಸ್ವಲ್ಪ ಸಹಜ ಜೀವನದತ್ತ ಮರಳುತ್ತಿದ್ದಾರೆ. ಅಪ್ಪು ಅವರನ್ನು ಬಹಳ ಇಷ್ಟಪಡುತ್ತಿದ್ದ ಶಿವಣ್ಣ ಹಾಗೂ ರಾಘಣ್ಣ ಅವರು ಅವರ ನಿಧನದ ನಂತರ ಕುಸಿದೇ ಹೋಗಿದ್ದರು. ಇದೀಗ ಶಿವರಾಜಕುಮಾರ್ ಅವರು ತಮ್ಮ ಕೆಲಸಗಳತ್ತ ಗಮನ ಹರಿಸುತ್ತಿದ್ದರೂ ಯಾವಾಗಲೂ ಮಂಕಾಗಿಯೇ ಇರುತ್ತಾರೆ. ತಾವು ಒಪ್ಪಿಕೊಂಡಿದ್ದ ಸಿನಿಮಾಗಳ ಪ್ರಾಜೆಕ್ಟ್ ನ ಶೂಟಿಂಗ್ನಲ್ಲಿ ಹಾಗೂ ಹೊಸ ಸಿನಿಮಾಗಳ ವಿಷಯದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಅಲ್ಲಿ ಜಡ್ಜ್ ಆಗಿ ಕೂಡ ಭಾಗವಹಿಸುತ್ತಿದ್ದಾರೆ. ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ಸಹ ಅಪ್ಪು ಅವರ ಇಡೀ ಕುಟುಂಬ ಭಾಗವಹಿಸುತ್ತದೆ.

ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರು ಎಂದೂ ಕೂಡ ಕ್ಯಾಮರಾ ಮುಂದೆ ಬಂದು ಮಾತನಾಡಿದವರೇ ಅಲ್ಲ. ಅಪ್ಪು ಅವರು ಎಲ್ಲಿಗೆ ಹೋದರು ತಮ್ಮ ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಆಗೆಲ್ಲಾ ಸಾಕಷ್ಟು ಬಾರಿ ಮಾಧ್ಯಮದವರು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರೂ ಎಂದೂ ಕೂಡ ಕ್ಯಾಮರಾ ಮುಂದೆ ಮಾತನಾಡಿದವರಲ್ಲ. ಅಪ್ಪು ಅವರಂತೆ ಅಶ್ವಿನಿ ಅವರದು ಸಹ ಬಹಳ ಸರಳ ವ್ಯಕ್ತಿತ್ವ. ಈಗ ಅಪ್ಪು ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಜವಾಬ್ದಾರಿಗಳನ್ನು ಪೂರೈಸುವ ಜವಾಬ್ದಾರಿ ಅಶ್ವಿನಿ ಅವರ ಹೆಗಲಿಗೇರಿದೆ. ಅಶ್ವಿನಿ ಅವರು ಸಹ ವಾತ್ಸವ ಬದುಕಿನತ್ತ ಮುಖ ಮಾಡುತ್ತಾ ಅಪ್ಪು ಅವರ ಕನಸಿನ ಸಂಸ್ಥೆಯಾದ ಪಿಆರ್ಕೆ ಪ್ರೊಡಕ್ಷನ್ಸ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗಿ ಅಪ್ಪು ಅವರ ಜಾಗದಲ್ಲಿ ಅಶ್ವಿನಿ ಅವರು ಎಲ್ಲಾ ಸನ್ಮಾನ ಹಾಗೂ ಗೌರವಗಳನ್ನು ಸ್ವೀಕರಿಸುತ್ತಿದ್ದಾರೆ.

ಆದರೆ ಅವರ ಮನದಾಳದ ದುಃ’ಖವನ್ನು ಮಾತ್ರ ಎಂದಿಗೂ ಜನರ ಮುಂದೆ ಹಂಚಿಕೊಳ್ಳದ ದೊಡ್ಡ ಗುಣದ ಧೈರ್ಯವಂತೆ ಅಶ್ವಿನಿ ಅವರು. ಸದ್ಯಕ್ಕೆ ಅವರು ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಎನ್ನುವ ಕಾರ್ಯಕ್ರಮವು ಫಿನಾಲೆ ಹಂತಕ್ಕೆ ತಲುಪಿದ್ದು ಏಳು ತಂಡಗಳು ಇದರಲ್ಲಿ ಸೆಣಸಾಡಲಿವೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಮೇಘನಾರಾಜ್, ವಿಜಯರಾಘವೇಂದ್ರ ಹಾಗೂ ಮಯೂರಿ ಅವರು ತೀರ್ಪುಗಾರರಾಗಿ ಮತ್ತು ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮದ ನಿರೂಪಕರಾಗಿ ಭಾಗಿ ಆಗಿದ್ದರು. ಈಗ ಫಿನಾಲೆ ತಲುಪಿರುವುದರಿಂದ ಕಾರ್ಯಕ್ರಮ ಮತ್ತಷ್ಟು ಗ್ರಾಂಡ್ ಆಗುತ್ತಿದೆ. ಹಾಗಾಗಿ ಫಿನಾಲೆ ದಿನದ ಕಾರ್ಯಕ್ರಮದಲ್ಲಿ ಧ್ರುವಸರ್ಜಾ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾಗಿಯಾಗಿರುವ ಪ್ರೋಮೋಗಳು ಹರಿದಾಡುತ್ತಿದ್ದು.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮನಸ್ಸು ಬಿಚ್ಚಿ ಭಾವನಾತ್ಮಕ ನುಡಿಗಳನ್ನು ಆಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿಂದೊಮ್ಮೆ ಈ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದರು ಮತ್ತು ಆ ವಾರದ ಕಾರ್ಯಕ್ರಮವನ್ನು ಪನೀತ್ ರಾಜಕುಮಾರ್ ಅವರಿಗಾಗಿಯೇ ಮೀಸಲಾಗಿಡಲಾಗಿತ್ತು. ಈ ಬಾರಿಯೂ ಫಿನಾಲೆಯಲ್ಲಿ ಪುನೀತ್ ರಾಜಕುಮಾರ್ ಅವರು ಡ್ಯಾನ್ಸ್ ಮಾಡುತ್ತಿರುವ ಸ್ಟ್ಯಾಚು ಇರುವ ಟ್ರೋಫಿಯು ಗೆದ್ದವರ ಮನೆ ಸೇರಲಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

Cinema Updates Tags:Appu, Appu ashwini
WhatsApp Group Join Now
Telegram Group Join Now

Post navigation

Previous Post: ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?
Next Post: ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore