ಆಸ್ತಿ ಖರೀದಿ ಕುರಿತು ಸರ್ಕಾರದ ಹೊಸ ನಿಯಮ, ಈ ವಾರಸುದಾರರ ಒಪ್ಪಿಗೆ ಇಲ್ಲದೆ ಪಡೆದುಕೊಂಡ ಆಸ್ತಿ ಸಂಪೂರ್ಣ ಸರ್ಕಾರದ ವಶಕ್ಕೆ.!

 

ನಮ್ಮಲ್ಲಿ ಇನ್ನು ಸಹ ಆಸ್ತಿ ಮಾರಾಟ ಹಾಗೂ ಖರೀದಿಯ ಕುರಿತು ಇರುವ ನಿಯಮಗಳ ಬಗ್ಗೆ ಹಲವಾರು ಗೊಂದಲಗಳು ಜನಸಾಮಾನ್ಯರಿಗೆ ಇವೆ. ಪದೇ ಪದೇ ಈ ಆಸ್ತಿ ಹಕ್ಕಿನ ಕುರಿತು ತಿದ್ದುಪಡಿಗಳು ಕೂಡ ನಡೆದಿದ್ದು ಜೊತೆಗೆ ಸರ್ಕಾರವು ಕೂಡ ಈ ಬಗ್ಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇಂತಹ ಪ್ರಕರಣಗಳ ಬಗ್ಗೆ ನ್ಯಾಯಾಲಯ ಕೊಡುವ ತೀರ್ಪುಗಳು ಕೂಡ ಅಷ್ಟೇ ಮುಖ್ಯವಾಗಿ ಇರುತ್ತವೆ.

ಈಗ ಸರ್ಕಾರ ವಾರಸುದಾರರುಗಳ ಒಪ್ಪಿಗೆ ಇಲ್ಲದೆ ಖರೀದಿಸುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಇದರ ಬಗ್ಗೆ ಮಾಹಿತಿ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಈ ಹಿಂದೆಯೇ 2008 ರಲ್ಲಿ, ಹೈಕೋರ್ಟ್‌ನ ಏಕ ಪೀಠವು ಹಿಂದೂ ವಿಭಾಗದ ಅಡಿಯಲ್ಲಿನ ನಿಬಂಧನೆಗಳು ಕೃಷಿ ಭೂಮಿ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎನ್ನುವ ತೀರ್ಪನ್ನು ನೀಡಿತ್ತು.

ಬಳಿಕ ಏಳು ವರ್ಷಗಳ ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ 2015 ರಲ್ಲಿ ಎರಡನೇ ಏಕ ಪೀಠವು ಹಿಂದೂ ವಿಭಾಗದ ನಿಬಂಧನೆಗಳು ಕೃಷಿ ಭೂಮಿ ಮಾರಾಟಕ್ಕೆ ಅನ್ವಯಿಸಬಹುದು ಎಂದು ಸೂಚಿಸಿತು. ಇದಾದ ನಂತರ, ಎರಡು ವ್ಯತಿರಿಕ್ತ ತೀರ್ಪುಗಳನ್ನು ಗಮನಿಸಿದ ಏಕ ಪೀಠವು ಸೂಕ್ತ ನಿರ್ಧಾರಕ್ಕಾಗಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವಿಷಯವನ್ನು ಉಲ್ಲೇಖಿಸಿತು.

ಈಗ ಈ ಪ್ರಕರಣದ ಬಗ್ಗೆ ಹೈ ಕೋರ್ಟ್ ನ ವಿಭಾಗೀಯ ಪೀಠವು ಅಂತಿಮ ತೀರ್ಪನ್ನು ಪ್ರಕಟಿಸಿದೆ. 2015ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ನ ವಿಭಾಗೀಯ ಪೀಠ ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಗಳು ಹಿಂದೂ ಕಾನೂನಿನ ಸೆಕ್ಷನ್ 22 ರ ಪ್ರಕಾರ ಕೃಷಿ ಭೂಮಿ ಸೇರಿದಂತೆ ಎಲ್ಲಾ ಭೂ ವಿವಾದಗಳಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಅದರ ಪ್ರಕಾರ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವಾಗ ಅದು ತಂದೆ ಅಥವಾ ತಾತನ ಆಸ್ತಿ ಅಂದರೆ ಪಿತ್ರಾಜಿತ ಆಸ್ತಿ ಆಗಿದ್ದರೆ ಅದನ್ನು ಮಾರಾಟ ಮಾಡಲು ಆ ಆಸ್ತಿಗೆ ಸಂಬಂಧಿಸಿದ ಎಲ್ಲ ವಾರಸುದಾರರ ಅನುಮತಿ ಬೇಕು ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ಆಸ್ತಿಯನ್ನು ಮಾರಾಟ ಮಾಡಬಹುದು ಎನ್ನುವರ್ಥದ ತೀರ್ಪನ್ನು ನೀಡಿದೆ.

ಸೆಕ್ಷನ್ 22 ರಲ್ಲಿ ಇರುವುದು ಏನೆಂದರೆ ಅವಿಭಕ್ತ ಹಿಂದೂ ಕುಟುಂಬದ ಆಸ್ತಿಯ ವಿಭಜನೆ ಆಗುವುದಕ್ಕೂ ಮುನ್ನ ಆ ಆಸ್ತಿಯ ವಾರಸುವುದಾರರಲ್ಲಿ ಒಬ್ಬರು ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ಇತರ ಸದಸ್ಯರ ಒಪ್ಪಿಗೆ ಇಲ್ಲದೆ ಅವರು ಮಾರಾಟ ಮಾಡಲು ಸಾಧ್ಯವಿಲ್ಲ, ಇತರ ವಾರಸುದಾರರು ಸಹ ಆದ್ಯತೆಯ ಆಧಾರದ ಮೇಲೆ ಆ ಆಸ್ತಿಯನ್ನು ಖರೀದಿಸಲು ಹಕ್ಕು ಸಾಧಿಸಬಹುದು ಎಂದು ತಿಳಿಸಿದೆ.

ಯಾವುದೇ ಮೂರನೇ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡುವ ಮೊದಲು, ಎಲ್ಲಾ ಸದಸ್ಯರ ಒಪ್ಪಿಗೆ ಇರಲೇಬೇಕು ಎನ್ನುವುದನ್ನು ಅದು ಸ್ಪಷ್ಟಪಡಿಸಿದೆ. ಒಂದು ವೇಳೆ ಈ ನಿಯಮವನ್ನು ಮೀರಿ ಎಲ್ಲಾ ವಾರಸುದಾರರ ಒಪ್ಪಿಗೆ ಇಲ್ಲದೆ ಇದ್ದರೂ ಇಂತಹ ಆಸ್ತಿಯನ್ನು ವ್ಯಕ್ತಿಯೊಬ್ಬ ಖರೀದಿಸಿದರೆ ಆ ವಾರಸುದಾರರಿಂದ ಆಕ್ಷೇಪ ವ್ಯಕ್ತವಾಗಿ ಕೇಸ್ ಹಾಕಿದರೆ ಸರ್ಕಾರವು ಆ ಆಸ್ತಿಯನ್ನು ವಪಡಿಸಿಕೊಳ್ಳಲಿದೆ ಎನ್ನುವ ಎಚ್ಚರಿಕೆ ನೀಡಿ ಇಂತಹ ಹೊಸ ನಿಯಮವನ್ನು ಸರ್ಕಾರ ಮಾಡಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

Leave a Comment