ಶನಿಮಹಾತ್ಮ ಈ ಹೆಸರು ಕೇಳಿದ ತಕ್ಷಣವೇ ಎಲ್ಲರ ಕಿವಿಯು ನೆಟ್ಟಗಾಗುತ್ತದೆ. ಸದಾ ಸನ್ಮಾರ್ಗದಲ್ಲಿ ನಡೆ ಎಂದು ಎಚ್ಚರಿಕೆ ಕೊಡುವ ಶನಿಪರಮೇಶ್ವರನ ಪ್ರಭಾವದ ಬಗ್ಗೆ ಜನರಿಗೆ ಮಾಹಿತಿಗಿಂತ ತಪ್ಪು ತಿಳುವಳಿಕೆ ಹೆಚ್ಚು. ಶನಿಮಹಾತ್ಮ ಎಂದ ತಕ್ಷಣ ಇದು ಕಾಟ ಎಂದು ಭಾವಿಸಿರುವವರಿಗೆ ಶನಿದೇವನ ಅನುಗ್ರಹ ಸಿಕ್ಕರೆ ಎಷ್ಟು ಶಾಂತಿ ನೆಮ್ಮದಿ ಮತ್ತು ಸಂತೋಷ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುವುದರ ಅರಿವಿರುವುದಿಲ್ಲ.
ಶನೇಶ್ವರನು ಬಹಳ ಪ್ರಭಾವಶಾಲಿ ದೇವರು ಸದಾ ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆಗೆ ಪ್ರತಿಬಿಂಬದಂತಿರುವ ಈ ದೇವರ ದರ್ಶನ ಪಡೆಯುವುದು ಹಾಗೂ ಅನುಗ್ರಹ ಪಡೆಯುವುದೇ ಪುಣ್ಯ. ನಮ್ಮ ಭಾರತ ದೇಶದಲ್ಲಿ ಕೂಡ ಶನಿ ದೇವರ ಹಲವು ದೇವಾಲಯಗಳು ಇವೆ. ಅಂತಹದ್ದೇ ಒಂದು ಪ್ರಸಿದ್ಧ ದೇವಾಲಯ ಶನಿ ಸಿಂಗನಾಪುರದಲ್ಲಿರುವ ಶನಿ ದೇವರ ವಿಗ್ರಹ.
ಶನಿ ಸಿಂಗನಾಪುರವು ಮಹಾರಾಷ್ಟ್ರದಲ್ಲಿರುವ ನಾಸಿಕ್ ಸಮೀಪ ಇದೆ. ನಾಸಿಕ್ ನಗರದಿಂದ 140 ಕಿ.ಮೀ ಪ್ರಯಾಣ ಮಾಡಿದರೆ ಶನಿ ಸಿಂಗನಾಪುರ ಸಿಗುತ್ತದೆ. ಪ್ರತಿ ಅರ್ಧಗಂಟೆಗೂ ನಾಸಿಕ್ ನಗರದಿಂದ ಸರ್ಕಾರಿ ಬಸ್ ಗಳು ಮತ್ತು ನೂರಾರು ಕ್ಯಾಬ್ ಗಳು ಶನಿ ಸಿಂಗನಪುರವನ್ನು ತಲುಪಲು ಸಿಗುತ್ತವೆ. ಶನಿ ಸಿಂಗನಪುರದಲ್ಲಿ ಶನಿ ಮಹಾತ್ಮನ ದೇವಸ್ಥಾನದ ಬದಲು ಶನಿ ದೇವರು ನಿಂತಲ್ಲೇ ಶಿಲೆಯಾಗಿರುವ ಒಂದು ವಿಗ್ರಹವಿದೆ.
ಈ ವಿಗ್ರಹ ಪ್ರತಿಷ್ಠಾಪನೆ ಆಗಿರುವ ಬಗ್ಗೆ ಒಂದು ಕಥೆಯು ಶನಿ ಪುರಾಣದಲ್ಲಿ ಇದೆ. ಸಾವಿರಾರು ವರ್ಷಗಳ ಹಿಂದೆ ಬಿಂಕಾರ ಎನ್ನುವ ರಾಕ್ಷಸನು ಇದ್ದ. ಈತ ಬಹಳ ದುಷ್ಟನಾಗಿದ್ದು ಒಮ್ಮೆ ಶನಿ ಸಿಂಗನಪುರದಲ್ಲಿದ್ದ ಎಲ್ಲಾ ಜನರನ್ನು ಮತ್ತು ಆ ಗ್ರಾಮವನ್ನು ನಾಶ ಮಾಡಲು ಸಿದ್ದರಾದ ಆಗ ಶನಿಮಹಾತ್ಮನು ಬಿಂಕಾರ ರಾಕ್ಷಸನನ್ನು ನಮ್ಮ ಆರನೇ ಕಣ್ಣಿನಿಂದ ಶನಿ ಸಿಂಗನಪುರದಲ್ಲಿ ಸಂಹಾರ ಮಾಡಿದರು.
ಆತ ಸಾಯುವಾಗ ತಾನು ಮತ್ತೊಮ್ಮೆ ಇಲ್ಲಿ ಹುಟ್ಟಿ ಈ ಗ್ರಾಮವನ್ನು ಇಲ್ಲಿರುವ ಎಲ್ಲಾ ಜೀವಜಂತುಗಳನ್ನು ನಾಶ ಮಾಡುವುದಾಗಿ ಶನಿ ದೇವರಿಗೆ ಸವಾಲು ಹಾಕಿದ. ಅಂದಿನಿಂದ ಆ ಊರಿಗೆ ಕಾವಲಾಗಿ ಬಿಂಕಾರ ರಾಕ್ಷಸನ ಕಾಟದಿಂದ ಜನತೆಯನ್ನು ರಕ್ಷಿಸಲು ಶನಿ ಪರಮಾತ್ಮನೇ ಇಲ್ಲಿ ಶಿಲೆಯಾಗಿ ನೆಲೆಸಿದ್ದಾನೆ ಎನ್ನುವ ಉಲ್ಲೇಖ ಇದೆ.
ಶನಿ ದೇವರು ಶಿಲೆಯಾಗಿ ನಿಂತಿರುವ ಕಲ್ಲನ್ನು ಕಾಣಬಹುದು. ಒಮ್ಮೆ ಪ್ರವಾಹದಲ್ಲಿ ಈ ಕಲ್ಲು ತೇಲಿ ಹೋಗಿತ್ತು 150 ವರ್ಷಗಳ ಬಳಿಕ ನದಿಯಲ್ಲಿ ಈ ಕಲ್ಲು ತೇಲಿ ಬಂತು. ಅಲ್ಲೇ ಸಮೀಪದಲ್ಲಿದ್ದ ದನ ಕಾಯುವವರು ಕಲ್ಲನ್ನು ಹೊಡೆದು ಪರೀಕ್ಷಿಸಿದಾಗ ರಕ್ತ ಸೋರಿ ಬರುತ್ತಿದನ್ನು ನೋಡಿ ಊರಿನ ಗ್ರಾಮಸ್ಥರಿಗೆ ತಿಳಿಸಿದಾಗ ಅಂದಿನ ದಿನ ರಾತ್ರಿ ಊರಿನ ಗ್ರಾಮಸ್ಥರ ಕನಸಿನಲ್ಲಿ ಶನಿ ಮಹಾತ್ಮನು ಬಂದು ತಮಗೆ ಈ ಊರಿನಲ್ಲಿ ದೇವಸ್ಥಾನ ಕಟ್ಟಬೇಕೆಂದು ಆಜ್ಞೆ ಕೊಟ್ಟರಂತೆ.
ಅಂದಿನಿಂದ ಶನಿ ಸಿಂಗನಪುರದ ಶನಿಮಹಾತ್ಮನ ಖ್ಯಾತಿ ಲೋಕ ವಿಕ್ಯಾತಿಯಾಗಿದೆ. ಶನಿದೋಷ ಇರುವವರು ಇಲ್ಲಿಗೆ ಬಂದು ಈ ದೇವರ ದರ್ಶನ ಮಾಡಿದರೆ ದೋಷ ಪರಿಹಾರ ಆಗುತ್ತದೆ ಎಂದು ನಂಬುತ್ತಾರೆ. ಪ್ರತಿದಿನವೂ ಕೂಡ 40,000 ಕ್ಕಿಂತ ಹೆಚ್ಚು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಈ ದೇವರಿಗೆ ಮೇಲ್ಚಾವಣಿಯನ್ನು ಕೂಡ ನಿರ್ಮಿಸಿಲ್ಲ, ಹಲವು ಬಾರಿ ದೇವಸ್ಥಾನ ಕಟ್ಟಲು ಪ್ರಯತ್ನಿಸಿದರೂ ಕೂಡ ಶನಿದೇವರಿಗೆ ಅದು ಇಷ್ಟವಿಲ್ಲದ ಕಾರಣ ಸಾಧ್ಯವಾಗಿಲ್ಲ.
ಜೊತೆಗೆ ಈ ದೇವಸ್ಥಾನದಲ್ಲಿ ಯಾರು ಅರ್ಚಕರಿಲ್ಲ ಇಲ್ಲಿಗೆ ಬರುವ ಪುರುಷ ಭಕ್ತಾದಿಗಳೇ ಹತ್ತಿರದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡಿ ಕಾವಿಯುಟ್ಟು ಶನಿ ದೇವರ ಪೂಜೆ ಸಲ್ಲಿಸಬಹುದು. ಮತ್ತು ಇಂದಿಗೂ ಸಹ ಶನಿ ದೇವರೇ ಊರನ್ನು ಕಾಯುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಊರಿನಲ್ಲಿ ಯಾವುದೇ ಕಳ್ಳತನ ದರೋಡೆ ಅಥವಾ ಅನ್ಯಾಯ ಜರುಗುವುದಿಲ್ಲ. ಈ ಊರಿನ ಬ್ಯಾಂಕ್, ಪೊಲೀಸ್ ಸ್ಟೇಷನ್ ಅಥವಾ ಯಾವ ಮನೆಗಳಿಗೂ ಕೂಡ ಬಾಗಿಲು ಇರುವುದಿಲ್ಲ. ಇಷ್ಟು ಪ್ರಭಾವಶಾಲಿಯಾದ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ತಪ್ಪದೇ ಭೇಟಿ ಕೊಡಿ ಶನಿ ದೇವರ ಕೃಪೆಗೆ ಪಾತ್ರರಾಗಿ.