ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.

ಕೆಲವರ ಮನೆಯಲ್ಲಿ ಫ್ರಿಜ್ ಬೇಗ ರಿಪೇರಿಗೆ ಬರುತ್ತಿರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ಮೆನ್ಟೇನ್ ಆಗದಿರುವುದರಿಂದ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಈ ರೀತಿ ಇರುವವರು ನಾವು ಈಗ ಹೇಳುವ ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಗೆ ವಿದ್ಯುತ್ ಬಿಲ್ ಅಲ್ಲಿ ಸ್ವಲ್ಪ ಉಳಿತಾಯ ಮಾಡಬಹುದು ಹಾಗೂ ನಿಮ್ಮ ಮನೆಯ ರೆಫ್ರಿಜರೇಟರ್ ಹೆಚ್ಚು ದಿನ ಬಾಳಿಗೆ ಬರುವ ರೀತಿ ನೋಡಿಕೊಳ್ಳಬಹುದು.

● ಮೊದಲನೆ ಟಿಪ್ ಏನೆಂದರೆ ಫ್ರಿಡ್ಜ್ ನ ಫ್ರೀಜರ್ ಬಾಕ್ಸ್ ನಲ್ಲಿ ಐಸ್ ಫಾರ್ಮ್ ಆಗುತ್ತಿರುತ್ತದೆ. ಕೆಲವೊಮ್ಮೆ ಇದು ಗಟ್ಟಿ ಗಟ್ಟಿಯಾಗಿ ಮಂಜುಗಡ್ಡೆಯಾಗಿ ಫ್ರೀಜರ್ ಬಾಕ್ಸ್ ಒಳಗೆ ಹೊರಗೆ ಮತ್ತು ಹಾಗೂ ಕೆಲವೊಮ್ಮೆ ಫ್ರೀಜರ್ ಕೆಳಗೆ ಕೂಡ ಕಟ್ಟಿಕೊಳ್ಳುತ್ತಿರುತ್ತದೆ. ಇದರಿಂದ ಕರೆಂಟ್ ಬಿಲ್ ಹೆಚ್ಚಿಗೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿ ಮೂರು ದಿನಗಳಿಗೆ ಒಮ್ಮೆ ತಪ್ಪದೇ ನಿಮ್ಮ ಫ್ರಿಜ್ ಅಲ್ಲಿ ಇರುವ ಫ್ರೀಜರ್ ಬಟನ್ ಅನ್ನು ಪ್ರೆಸ್ ಮಾಡಿ ಆಗ ಇದೆಲ್ಲಾ ಕರಗಿ ನೀರಾಗಿ ಹೋಗುತ್ತದೆ.

● ಇದು ಮರೆತು ಹೋಗುತ್ತದೆ ಎನ್ನುವವರು ಮತ್ತೊಂದು ಸುಲಭ ಉಪಾಯ ಇದೆ ಇದನ್ನು ಮಾಡಿ. ಅದೇನೆಂದರೆ ಅಡುಗೆಗೆ ಬಳಸುವ ಪುಡಿ ಉಪ್ಪನ್ನು ತೆಗೆದುಕೊಂಡು ಫ್ರೀಜರ್ ಬಾಕ್ಸ್ ಒಳಗೆಲ್ಲಾ ಸ್ಪ್ರೆಡ್ ಮಾಡಿ ಒಂದು ಪೇಪರ್ ಸಹಾಯದಿಂದ ಬಾಕ್ಸ್ ಒಳಗೆಲ್ಲ ಉಪ್ಪಿನಿಂದ ಒರೆಸಿ. ಈ ರೀತಿ ಮಾಡುವುದರಿಂದ ಈ ಸ್ಥಳದಲ್ಲಿ ಮಂಜುಗಡ್ಡೆ ಮತ್ತೆ ಕಟ್ಟಿಕೊಳ್ಳುವುದಿಲ್ಲ. ನೀವು ಐಸ್ ಟ್ರೇ ಅಲ್ಲಿ ನೀರು ಇಟ್ಟಾಗ ಮಾತ್ರ ಟ್ರೇ ಅಲ್ಲಿ ಐಸ್ ಫಾರ್ಮ್ ಆಗುತ್ತದೆ ಅಷ್ಟೇ.

● ಫ್ರಿಡ್ಜ್ ಗ್ಯಾಸ್ಕೆಟ್ ಅನ್ನು ಆಗಾಗ ಚೆಕ್ ಮಾಡುತ್ತಿರಬೇಕು ಒಂದು ಪೇಪರ್ ತೆಗೆದುಕೊಂಡು ಅರ್ಧ ಪೇಪರ್ ಫ್ರಿಡ್ಜ್ ಒಳಗೆ ಅರ್ಧ ಪೇಪರ್ ಹೋರಗೆ ಇರುವಂತೆ ಇಟ್ಟು ಎಳೆಯಬೇಕು ಅದು ಸುಲಭವಾಗಿ ಹೊರ ಬಂದರೆ ಗ್ಯಾಸ್ಕೆಟ್ ಹಾಳಾಗಿದೆ ಅಥವಾ ಕ್ಲೀನ್ ಆಗಿಲ್ಲ ಎಂದರ್ಥ ತಕ್ಷಣವೇ ಗ್ಯಾಸ್ಕೆಟ್ ಅನ್ನು ಕ್ಲೀನ್ ಮಾಡಿ ಮತ್ತೊಮ್ಮೆ ಪ್ರಯತ್ನಿಸಬೇಕು ಈಗಲೂ ಸಹ ಅದು ಈಸಿಯಾಗಿ ಬಂದರೆ ಫ್ರಿಡ್ಜ್ ರಿಪೇರಿ ಮಾಡುವವರಿಗೆ ತೋರಿಸಬೇಕು.

● ಕೆಲವೊಂದು ಸಮಯದಲ್ಲಿ ಫ್ರಿಜ್ ಒಳಗೆ ನಾನ್ ವೆಜ್ ಇಡುವುದರಿಂದ ಅದು ಸ್ಮೆಲ್ ಬರುತ್ತಿರುತ್ತದೆ. ಅಂತಹ ಸಮಯದಲ್ಲಿ ಇದು ಹೋಗಬೇಕು ಎಂದರೆ ಈ ಟಿಪ್ ಬಳಸಿ. ಎರಡು ಸ್ಕೂಲ್ ವಿನೆಗಾರ್ ತೆಗೆದುಕೊಂಡು ನಾಲ್ಕು ಐದು ಪೇಪರ್ ಕಟ್ ಮಾಡಿ ಅದಕ್ಕೆ ಹಾಕಿ ಅದು ವಿನೆಗಾರ್ ಇಂದ ಒದ್ದೆ ಆದ ಮೇಲೆ ಅದನ್ನು ಸಣ್ಣ ಸಣ್ಣ ಉಂಡೆಯಾಗಿ ಮಾಡಿಕೊಂಡು ಮತ್ತೊಂದು ಪ್ಲೇಟಲ್ಲಿ ಇಟ್ಟುಕೊಳ್ಳಿ. ಈಗ ಈ ಉಂಡೆಗಳು ಇರುವ ಪ್ಲೇಟ್ ಅನ್ನು ಫ್ರಿಡ್ಜ್ ಒಳಗೆ ಇಟ್ಟುಕೊಂಡರೆ ಆ ಎಲ್ಲ ಬ್ಯಾಡ್ ಸ್ಮೆಲ್ ಅನ್ನು ಇದು ಅಬ್ಸರ್ವ್ ಮಾಡುತ್ತದೆ.

● ಫ್ರಿಡ್ಜ್ ನಲ್ಲಿ ಇಡುವ ನಿಂಬೆಹಣ್ಣು ಬೇಗ ಕೆಟ್ಟು ಹೋಗುತ್ತಿದ್ದರೆ ಈ ಉಪಾಯ ಬಳಸಿ. ನಿಂಬೆ ಹಣ್ಣನ್ನು ಹಾಗೆ ಇಡುವ ಬದಲು ನಿಮ್ಮ ಮನೆಗೆ ಅಡುಗೆ ಎಣ್ಣೆ ತಂದಾಗ ಎಣ್ಣೆ ಎಲ್ಲವನ್ನು ಒಂದು ಬೇರೆ ಬಾಟಲಿಗೆ ಹಾಕಿಕೊಂಡು ಖಾಲಿ ಎಣ್ಣೆ ಪ್ಯಾಕೆಟ್ ಅನ್ನು ಬಿಸಾಡುವ ಬದಲು ಅದರಲ್ಲಿ ನಿಂಬೆ ಹಣ್ಣನ್ನು ಹಾಕಿ ಫ್ರಿಡ್ಜ್ ಅಲ್ಲಿ ಸ್ಟೋರ್ ಮಾಡಿ ಇಡಿ. ಈ ರೀತಿ ಮಾಡುವುದರಿಂದ ಒಂದು ತಿಂಗಳಾದರೂ ಕೂಡ ಆ ನಿಂಬೆಹಣ್ಣು ಫ್ರೆಶ್ ಆಗಿಯೇ ಇರುತ್ತದೆ.

Leave a Comment