ಒಳ್ಳೆ ಗಂಡಸರಿಗೆ ಇರುವ ಗುಣ ಸ್ವಭಾವಗಳು ಇವು, ಪ್ರತಿಯೊಬ್ಬ ಮಹಿಳೆಯೂ ಕೂಡ ಇದನ್ನು ನೋಡಬೇಕು…

 

ಮನುಷ್ಯನಾದ ಪ್ರತಿಯೊಬ್ಬರಿಗೂ ಕೂಡ ಸಂಗಾತಿಯ ಅವಶ್ಯಕತೆ ಇರುತ್ತದೆ. ಒಬ್ಬ ವ್ಯಕ್ತಿಯು ಅವನ ಜೀವನದಲ್ಲಿ ಏರುವ ಉನ್ನತ ಸ್ಥಾನಕ್ಕೂ ಅಥವಾ ಆತನ ಅಧೋಗತಿಗೂ ಅವನ ಬದುಕಿನಲ್ಲಿ ಬರುವ ಸಂಗಾತಿಯೇ ಕಾರಣವಾಗಿರುತ್ತಾರೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಪ್ರೀತಿ ಹೆಸರಿನಲ್ಲಿ ಅಥವಾ ಮದುವೆ ವಿಷಯದಲ್ಲಿ ಜೊತೆಯಾಗುವವರು ನಿಜವಾಗಿಯೂ ಎಂತಹ ಗುಣದವರು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ.

ಆದ್ದರಿಂದ ಅವರ ಕೆಲ ಗುಣಲಕ್ಷಣಗಳ ಮತ್ತು ವರ್ತನೆಗಳ ಆಧಾರದ ಮೇಲೆ ಅವರು ಒಳ್ಳೆಯವರಾ? ಕೆಟ್ಟವರಾ? ಅಥವಾ ನಿಮಗೆ ಯೋಗ್ಯರಾ ಎಂದು ನಿರ್ಧರಿಸಬಹುದು. ಈ ಅಂಕಣದಲ್ಲಿ ಈ ರೀತಿ ಒಳ್ಳೆ ಗುಣ ಹೊಂದಿರುವ ಗಂಡಸರ ಕೆಲ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದೇವೆ. ನಿಮ್ಮ ಸಂಗಾತಿಯಲ್ಲೂ ಈ ಗುಣಗಳು ಇದೆಯೇ ಎಂದು ತಾಳೆ ಮಾಡಿ ನೋಡಿಕೊಳ್ಳಿ.

● ಯಾವ ಕಂಡೀಷನ್ ಗಳನ್ನು ಹಾಕದೆ ಅವರು ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನು ಸ್ವೀಕರಿಸುತ್ತಾರೆ ಮತ್ತು ಪ್ರೀತಿಸುತ್ತಾರೆ.
● ಅವರು ನಿಮ್ಮ ಅಗತ್ಯಕ್ಕೆ ಸದಾ ಸಿದ್ಧರಿರುತ್ತಾರೆ, ಮತ್ತು ನಿಮ್ಮ ಕಷ್ಟ ಸುಖ ಅವಶ್ಯಕತೆಗಳು ಬೇಗ ಅವರಿಗೆ ಅರಿವಾಗುತ್ತವೆ.
● ಆತ ನಿಮ್ಮ ಸಮಯ ಬಿಟ್ಟು ಬೇರೇನೂ ಬಯಸುವುದಿಲ್ಲ, ಸದಾ ನಿಮ್ಮ ಜೊತೆ ಕಾಲ ಕಳೆಯಲು ಹಾತೊರೆಯುತ್ತಿರುತ್ತಾರೆ.

● ಆತನು ವಿಶ್ವಾಸಕ್ಕೆ ಅರ್ಹನಾಗಿರುತ್ತಾನೆ. ಎಂದಿಗೂ ಕೂಡ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರುವ ರೀತಿ ವರ್ತಿಸುವುದಿಲ್ಲ, ನೀವು ನಿಮ್ಮನ್ನು ನಂಬುವಷ್ಟೇ ಅವರನ್ನು ಸಂಪೂರ್ಣವಾಗಿ ನಂಬಬಹುದು ಅಷ್ಟು ಪಾರದರ್ಶಕವಾಗಿರುತ್ತಾರೆ.
● ಸದಾ ನಿಮಗೆ ಒಳಿತನ್ನೆ ಬಯಸುತ್ತಾರೆ, ಪ್ರತಿಕ್ಷಣವೂ ನೀವು ಸಂತೋಷವಾಗಿರಲಿ ಎಂದು ನೆನೆಯುತ್ತಾರೆ. ನೀವು ಸದಾ ಸುರಕ್ಷಿತರಾಗಿರಬೇಕು ಎಂದುಕೊಳ್ಳುತ್ತಾರೆ.

● ಜೀವನದಲ್ಲಿ ಯಾವುದೇ ರೀತಿಯ ಸಂದರ್ಭ ಬಂದರೂ ಕೂಡ ಅವರು ನಿಮಗೆ ಮೋಸ ಮಾಡುವುದಿಲ್ಲ, ನಿಮ್ಮ ಜೊತೆ ಸುಳ್ಳು ಹೇಳುವುದಿಲ್ಲ, ಯಾವುದಕ್ಕೂ ಕೂಡ ಹೆದರುವುದಿಲ್ಲ, ಕಷ್ಟದ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.
● ನಿಮ್ಮ ಬುದ್ಧಿವಂತಿಕೆ ಮತ್ತು ಸಾಧನೆಗಳನ್ನು ಅವರು ಮೆಚ್ಚಿ ಮಾತನಾಡುತ್ತಾರೆ ಹಾಗೂ ನಿಮ್ಮ ಬಗ್ಗೆ ಅವರು ಹೆಮ್ಮೆ ಪಡುತ್ತಾರೆ. ನಿಮ್ಮ ಸಾಧನೆಯನ್ನು ನಿಮ್ಮ ಯಶಸ್ಸನ್ನು ಅವರದ್ದು ಎನ್ನುವಂತೆ ಅದನ್ನು ಅನುಭವಿಸುತ್ತಾರೆ, ಸಂಭ್ರಮಿಸುತ್ತಾರೆ.

● ಆತ ಎಂದಿಗೂ ನಿಮ್ಮನ್ನು ಕೀಳಾಗಿ ನೋಡುವುದಿಲ್ಲ ಎಷ್ಟೇ ಕೋಪದಲ್ಲಿ ಇದ್ದರೂ ಕೂಡ ವೈಯುಕ್ತಿಕವಾಗಿ ಮತ್ತು ಇತರರ ಎದುರು ಕೂಡ ನಿಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿ ಮಾತನಾಡುವುದಿಲ್ಲ, ವರ್ತಿಸುವುದಿಲ್ಲ.
● ನೀವು ಅವರ ಮೇಲೆ ಮಾಡುವ ಕಾಳಜಿ ಬಗ್ಗೆ ಅವರು ಗೌರವ ತೋರುತ್ತಾರೆ ಮತ್ತು ನೀವು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ನಡೆದುಕೊಳ್ಳುತ್ತಾರೆ.

● ಆತನೇ ನಿಮ್ಮ ಆತ್ಮೀಯ ಸ್ನೇಹಿತನಾಗಿರುತ್ತಾನೆ, ಸ್ನೇಹಿತರು ಎಂದ ಕೂಡಲೇ ಆತನ ಹೆಸರೇ ಮೊದಲು ನೆನಪಾಗುವಷ್ಟು ಹತ್ತಿರವಾಗಿರುತ್ತಾನೆ.
● ಸಂದರ್ಭ ಯಾವುದೇ ಇರಲಿ ಪರಿಸ್ಥಿತಿ ಎಂತಹದ್ದೇರಲ್ಲಿ ಆತ ಎಂದಿಗೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

● ನಿಮ್ಮ ಕೆಟ್ಟ ಪರಿಸ್ಥಿತಿಯನ್ನು ನೋಡಿ ಇನ್ನಷ್ಟು ಕುಗ್ಗಿಸುವುದಿಲ್ಲ ಬದಲಾಗಿ ನಿಮ್ಮನ್ನು ಆ ಪರಿಸ್ಥಿತಿಯಿಂದ ಹಾಗೂ ಮನಸ್ಥಿತಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಬದುಕಿನಲ್ಲಿ ಭರವಸೆ ಮೂಡುವಂತಹ ಧೈರ್ಯದ ಮಾತುಗಳನ್ನು ಆಡುತ್ತ ಪ್ರೇರೇಪಿಸುತ್ತಾರೆ.
● ಆತನೇ ನಿಮ್ಮ ಸ್ಪೂರ್ತಿಯ ಚಿಲುಮೆ ಆಗಿರುತ್ತಾನೆ. ನಿಮಗೆ ಬೆಂಬಲ ಕೊಡುವವರಲ್ಲಿ ಮೊದಲಿಗನಾಗಿರುತ್ತಾನೆ.

● ಆತನು ನಿಮಗೆ ಭಾವನಾತ್ಮಕವಾಗಿ ಆರ್ಥಿಕವಾಗಿ ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಬೆಂಬಲ ನೀಡುತ್ತಾನೆ. ಆತನು ಸಮಗ್ರತೆ ನಿಷ್ಠೆಯನ್ನು ಗೌರವಿಸುತ್ತಾನೆ.
● ಆತನು ನಿಮ್ಮ ಜೊತೆ ಪ್ರಾಮಾಣಿಕತೆ ಮತ್ತು ಗೌರವದಿಂದ ಇರುತ್ತಾನೆ. ಇಂತಹ ಗುಣಗಳನ್ನು ಹೊಂದಿರುವ ಸಂಗಾತಿ ಬದುಕಿನಲ್ಲಿ ಬದುಕು ಸಾರ್ಥಕ ಎನಿಸುತ್ತದೆ. ಎಂದಿಗೂ ಕೂಡ ಅವರನ್ನು ಕಳೆದುಕೊಳ್ಳಬೇಡಿ.

Leave a Comment