ಕಣ್ಣಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಕೂಡ ಈ ಮೂರು ಎಣ್ಣೆಯ ದೀಪ ಪರಿಹಾರ.!

 

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯ ದೃಷ್ಟಿ ದೋಷ ಇದ್ದೇ ಇರುತ್ತದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಈಗ ಕನ್ನಡಕ ಧರಿಸುವ ಪರಿಸ್ಥಿತಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲ್ಯದಿಂದಲೇ ಟಿವಿ, ಮೊಬೈಲ್, ಲ್ಯಾಪ್ಟಾಪ್ ಸ್ಕ್ರೀನ್ ಗಳನ್ನು ನೋಡಿಕೊಂಡು ಬೆಳೆಯುವ ಕಾರಣ ಎಲ್ಲರಿಗೂ ದೃಷ್ಟಿ ದೋಷಗಳು ಸರ್ವೇಸಾಮಾನ್ಯವಾಗಿ ಹೋಗಿದೆ.

ಇದರ ಜೊತೆಗೆ ಅನೇಕರಿಗೆ ವಯಸ್ಸಿನ ಕಾರಣಗಳಿಂದ ಅಥವಾ ಇನ್ನಿತರ ಕಾರಣದಿಂದ ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ ಕಣ್ಣಿನ ಪೊರೆ ಇನ್ನು ಮುಂತಾದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆಗಳು ಇಲ್ಲದಿದ್ದರೂ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವವರು ಈಗ ನಾವು ಹೇಳುವ ಈ ಪ್ರಯೋಗವನ್ನು ಮಾಡಿ.

ಒಂದು ತಿಂಗಳು ಈ ಚಟುವಟಿಕೆ ಮಾಡಿದರೆ ಕಣ್ಣಿಗೆ ಸಂಬಂಧಪಟ್ಟ ಎಲ್ಲಾ ದೋಷಗಳು ಕೂಡ ಪರಿಹಾರ ಆಗುತ್ತದೆ. ಆದೆನೆಂದರೆ 100 ಗ್ರಾಂ ಹಿಪ್ಪೆಎಣ್ಣೆ, 100 ಗ್ರಾಂ ಬೇವಿನ ಎಣ್ಣೆ ಹಾಗೂ 100 ಗ್ರಾಂ ಹೊಂಗೆ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಒಂದು ಮಣ್ಣಿನ ದೀಪಕ್ಕೆ ಹಾಕಬೇಕು. ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಹಿತ್ತಾಳೆ ಅಥವಾ ಗಾಜಿನ ದೀಪಗಳನ್ನು ಬಳಸಬಾರದು.

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ದೀಪಕ್ಕೆ ಈ ಎಣ್ಣೆಯನ್ನು ಹಾಕಿ ಅದರ ಕೆಳಗೆ ಸೆಗಣಿಯ ಉಂಡೆಯನ್ನು ಇಡಬೇಕು. ಮನೆಯ ಉಳಿದ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಈ ಮೂರು ಎಣ್ಣೆ ಮಿಶ್ರಿತವಾದ ಮಣ್ಣಿನ ದೀಪವನ್ನು ಮಾತ್ರ ಹಚ್ಚಿ ಈ ಪ್ರಯೋಗವನ್ನು ಮಾಡಬೇಕು. ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಈ ಪ್ರಯೋಗವನ್ನು ಮಾಡಬೇಕು.

ಸಮಯದ ಅಭಾವ ಇರುವವರು ರಾತ್ರಿ ಸಮಯದಲ್ಲಿ ಆದರೂ ತಪ್ಪದೆ ಒಂದು ತಿಂಗಳವರೆಗೆ ಈ ಪ್ರಯೋಗವನ್ನು ಮಾಡಲೇಬೇಕು. ಕತ್ತಲೆಯಲ್ಲಿ ಈ ಪ್ರಯೋಗವನ್ನು ಮಾಡುವುದರಿಂದ ಅದು ಇನ್ನೂ ಪರಿಣಾಮಕಾರಿಯಾಗಿ ಫಲ ಕೊಡುತ್ತದೆ. ನಿಮ್ಮಿಂದ ಒಂದರಿಂದ ಒಂದೂವರೆ ಅಡಿಯ ದೂರದಲ್ಲಿ ಈ ಮಣ್ಣಿನ ದೀಪವನ್ನು ಹಚ್ಚಿ ಇಡಿ. ನೀವು ದೀಪಕ್ಕೆ ನೇರವಾಗಿ ಕುಳಿತುಕೊಳ್ಳಿ.
g
ಉರಿಯುತ್ತಿರುವ ದೀಪವನ್ನು ನೀವು ನೋಡುತ್ತಾ ನಿಮ್ಮ ಕಣ್ಣನ್ನು ಎಡಕ್ಕೂ ಬಲಕ್ಕೂ ಚಲಿಸಿ ಅಥವಾ ಪೂರ್ತಿ ನಿಮ್ಮ ಕುತ್ತಿಗೆಯನ್ನು ಎಡಕ್ಕೆ ಬಲಕ್ಕೆ ಚಲಿಸಿ ಓರೆ ಕಣ್ಣುಗಳಿಂದ ಆ ದೀಪ ಉರಿಯುತ್ತಿರುವುದನ್ನೇ ನೋಡಿ. ನೀವು ನಿಮ್ಮ ಮನಸ್ಸಿನಲ್ಲಿ 50 ಸಂಖ್ಯೆಯವರೆಗೆ ಕೌಂಟ್ ಮಾಡುತ್ತಾ ಐವತ್ತು ಬಾರಿ ಎಡಕ್ಕೂ ಬಲಕ್ಕೂ ಈ ರೀತಿ ನಿಮ್ಮ ಕುತ್ತಿಗೆಯನ್ನು ತಿರುಗಿಸುತ್ತಾ ದೀಪವನ್ನು ನೋಡುತ್ತೀರಿ.

ಇಷ್ಟು ಪರಿಹಾರ ಸಾಕು ನಿಮ್ಮ ಎಲ್ಲಾ ದೃಷ್ಟಿ ದೋಷವು ಪರಿಹಾರ ಆಗಿ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಜೊತೆಗೆ ನೀವು ಕಣ್ಣಿನ ಆರೋಗ್ಯವನ್ನು ವೃದ್ದಿ ಮಾಡುವ ವಿಟಮಿನ್ ಎ ಮತ್ತು ಸಿ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ನೀವು ಹೆಚ್ಚಾಗಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಸ್ಕ್ರೀನ್ ನೋಡಲೇಬೇಕಾದ ಪರಿಸ್ಥಿತಿಯಲ್ಲಿದ್ದರೆ 10 ನಿಮಿಷಗಳಿಗೊಮ್ಮೆ ನಿಮ್ಮ ದೃಷ್ಟಿಯನ್ನು ಬೇರೆ ಕಡೆ ಬದಲಾಯಿಸಿ ನಂತರ ಸ್ಕ್ರೀನ್ ನೋಡಬೇಕು.

ಹಸಿರು ಬಣ್ಣವನ್ನು ಹೆಚ್ಚಾಗಿ ನೋಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ದೃಷ್ಟಿಯ ಸಾಮರ್ಥ್ಯತೆ ಹೆಚ್ಚಾಗುತ್ತದೆ. ಇವುಗಳನ್ನು ಇನ್ನು ಮುಂದೆ ಪಾಲಿಸಿ ಮತ್ತು ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

Leave a Comment