ಕಣ್ಣಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕಣ್ಣಿಗೆ 2 ಹನಿ ಈ ಎಣ್ಣೆ ಹಾಕಿ ಸಾಕು ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.!

 

ಕಣ್ಣು ಮನುಷ್ಯನ ಅತಿ ಪ್ರಮುಖವಾದ ಅಂಗ, ಜೊತೆಗೆ ಅತಿ ಸೂಕ್ಷ್ಮವಾದ ಅಂಗವೂ ಕೂಡ. ಕೂದಲಿಗಿಂತಲೂ ಬಹಳ ತೆಳುವಾದ ಸೂಕ್ಷ್ಮ ನರಗಳು ಕಣ್ಣಿನಲ್ಲಿ ಇರುತ್ತವೆ. ಕಣ್ಣಿನಿಂದ ನಾವು ಬೆಳಕನ್ನು ಗ್ರಹಿಸುತ್ತೇವೆ, ಸುತ್ತಮುತ್ತಲಿನ ಎಲ್ಲವನ್ನು ಕೂಡ ನೋಡುತ್ತೇವೆ ಎನ್ನುವುದು ಮಾತ್ರವಲ್ಲದೆ ಮೆದುಳಿನ ಮೇಲು ಕೂಡ ಇದು ಪರಿಣಾಮವನ್ನು ಬೀರುತ್ತದೆ.

ಹಾಗಾಗಿ ಒಬ್ಬ ಮನುಷ್ಯನು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರಬೇಕು ಎಂದರೆ ಕಣ್ಣಿನ ಆರೋಗ್ಯವನ್ನು ಮೊದಲು ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಕಣ್ಣಿನ ಸಮಸ್ಯೆಗಳು ಸರ್ವೇಸಾಮಾನ್ಯ ಎನಿಸಿ ಬಿಟ್ಟಿವೆ. ಆದರೆ ಇದೆಲ್ಲದಕ್ಕೂ ಕೂಡ ಶಸ್ತ್ರ ಚಿಕಿತ್ಸೆ ಪರಿಹಾರವಲ್ಲ ಆಯುರ್ವೇದದಲ್ಲಿ ಸರಳ ಉಪಾಯಗಳನ್ನು ಬಳಸುವ ಮೂಲಕ ಕಣ್ಣಿನ ಎಲ್ಲಾ ವಿಕಾರಗಳನ್ನು ದೂರ ಮಾಡಿ ದೃಷ್ಟಿಯು ಹೆಚ್ಚಾಗುವಂತೆ ಮಾಡಬಹುದು.

ಕಣ್ಣಿನಲ್ಲಿ ವಾತ, ಪಿತ್ತ, ಕಫ ಮುಂತಾದ ಯಾವುದೇ ವಿಕಾರಗಳು ಉಂಟಾದರೂ ಕೂಡ ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ನರಗಳ ಮೇಲೆ ಒತ್ತಡದಿಂದಾಗಿ ದೃಷ್ಟಿ ಕಡಿಮೆ ಮತ್ತು ಕಣ್ಣಿನ ನರಗಳ ಊದಿಕೊಳ್ಳುವಿಕೆ, ಕಣ್ಣಿನ ನರಗಳಲ್ಲಿ ರಕ್ತ ಸೋರುವಿಕೆ ಇನ್ನು ಮುಂತಾದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಕೆಲವು ಸಂದರ್ಭಗಳಲ್ಲಿ ರೆಟ್ರಿನಲ್ ಡಿಡಾಚ್ಮೆಂಟ್ ಆಗಿರುತ್ತದೆ ಆಗ ಗ್ಲುಕೋಮಾ, ಕಂಜೆಕ್ಟಿವಿಟೀಸ್, ಪಿಗ್ಮೆಂಟೊಸ್ ಇನ್ನೂ ಮುಂತಾದ ಹತ್ತು ಹಲವಾರು ಕಾಯಿಲೆಗಳು ಕಣ್ಣನ್ನು ಬಾಧಿಸುತ್ತವೆ. ಈ ಎಲ್ಲಾ ಕಣ್ಣಿನ ಸಮಸ್ಯೆಗಳು ಬರಲು ಮುಖ್ಯ ತರ್ಪಕ ಕಫ, ಆಲೋಚಕ ಪಿತ್ತ ಮತ್ತು ಉದಾನ ವಾಯುವಿನ ಇಂಬ್ಯಾಲೆನ್ಸ್ ಪ್ರಧಾನ ಕಾರಣ ಎನ್ನುವುದನ್ನು ಆಯುರ್ವೇದ ಹೇಳುತ್ತದೆ.

ಇವುಗಳನ್ನು ಕ್ರಿಯಾಶೀಲಗೊಳಿಸಿ ಈ ಅಸಮತೋಲನವನ್ನು ಸರಿದೂಗಿಸುವ ಗುಣವು ಎಣ್ಣೆ ಚಿಕಿತ್ಸೆಗೆ ಇದೆ. ಆಯುರ್ವೇದದಲ್ಲಿ ಕಣ್ಣಿಗೆ ಸೂಚಿಸುವ ಈ ಚಿಕಿತ್ಸೆಯನ್ನು ಎಣ್ಣೆ ಚಿಕಿತ್ಸೆ ಎಂದು ಕರೆಯುತ್ತಾರೆ. ಪ್ರತಿನಿತ್ಯವೂ ಕೂಡ ಈ ಚಿಕಿತ್ಸೆಯನ್ನು ಮಾಡುವುದರಿಂದ ಕಣ್ಣಿನ ಎಲ್ಲಾ ವಿಕಾರಗಳು ದೂರವಾಗಿ ಕಣ್ಣಿನ ಆರೋಗ್ಯವು ಉತ್ತಮಗೊಳ್ಳುತ್ತದೆ.

ಇದನ್ನು ಮಾಡುವುದು ಹೇಗೆಂದರೆ ರಾತ್ರಿ ಮಲಗುವ ಮುನ್ನ ನಾಲ್ಕು ಹನಿ ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಶುದ್ಧವಾದ ಹರಳೆಣ್ಣೆ ಅಥವಾ ಶುದ್ಧವಾದ ತುಪ್ಪವನ್ನು ಕಣ್ಣಿಗೆ ಹಾಕಿ ಕನಿಷ್ಠ 20 ಬಾರಿ ಆದರೂ ಕಣ್ಣುಗಳನ್ನು ಬ್ಲಿಂಕ್ ಮಾಡಬೇಕು. ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಸಿಗುವ ತುಪ್ಪವನ್ನು ಇದಕ್ಕೆ ಬಳಸಬೇಡಿ. ಶುದ್ಧ ನಾಡು ಹಸುವಿನ ತುಪ್ಪವನ್ನು ಬಳಸಿದರೆ ಅದು ಅತ್ಯುತ್ತಮ, ಒಂದು ವೇಳೆ ಹಸುವಿನ ತುಪ್ಪ ಇಲ್ಲದಿದ್ದರೆ ಎಮ್ಮೆಯ ತುಪ್ಪವನ್ನು ಬಳಸಬಹುದು.

ಆದರೆ ಜರ್ಸಿ ಹಸುವಿನ ತುಪ್ಪವನ್ನು ಮಾತ್ರ ಬಳಸಬೇಡಿ ಕಣ್ಣಿನ ಸಮಸ್ಯೆ ಇಲ್ಲದೇ ಇದ್ದರೂ ಸಹಾ ಅದು ಬರದಂತೆ ಕಾಪಾಡಲು ಈ ಚಿಕಿತ್ಸೆಯನ್ನು ಬಳಸಬಹುದು. ಇದರ ಜೊತೆಗೆ ಇಷ್ಟಲಿಂಗದ ಯೋಗವನ್ನು ಮಾಡುವುದರಿಂದ ಕೂಡ ದೃಷ್ಟಿ ದೋಷಗಳು ನಿವಾರಣೆ ಆಗುತ್ತವೆ ಎನ್ನುವುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ. ಕಣ್ಣಿನ ದೃಷ್ಟಿ ದೋಷದ ಸಮಸ್ಯೆಯು ಮೊದಲನೇ ಹಂತದಲ್ಲಿ ಇದ್ದಾಗ ಎಣ್ಣೆ ಚಿಕಿತ್ಸೆಯೇ ಬಹಳ ಸೂಕ್ತ.

ಒಂದು ವೇಳೆ ಸಮಸ್ಯೆ ವಿಪರೀತವಾದಾಗ ಆಯುರ್ವೇದದಲ್ಲಿ ತರ್ಪಣ ಚಿಕಿತ್ಸೆ, ಪುಟಪಾಕ ಚಿಕಿತ್ಸೆ, ನೇ ತ್ರಪಿಂಡಿ ಚಿಕಿತ್ಸೆ, ನೇತ ಶೇಖ ಚಿಕಿತ್ಸೆ ಮುಂತಾದ ಚಿಕಿತ್ಸೆಗಳಿವೆ ಇವುಗಳನ್ನು ಪಡೆದುಕೊಂಡು ಸುಧಾರಿಸಿ ಕೊಳ್ಳಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

Leave a Comment