ಮನುಷ್ಯನಿಗೆ ಸದಾ ಕಾಲ ಒಂದಲ್ಲ ಒಂದು ತೊಂದರೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಇರುವುದಿಲ್ಲ. ಇದ್ದರು ಕೆಲವು ಸಮಸ್ಯೆಗಳಿಗೆ ಕೆಲವು ತೊಂದರೆಗಳಿಗೆ ತಂತ್ರಶಾಸ್ತ್ರದ ಮೂಲಕ ಅಥವಾ ಸಿದ್ದಿ ಶಾಸ್ತ್ರ ಮೂಲಕ ಪರಿಹಾರ ಕಂಡು ಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕಣ್ಣು ದೃಷ್ಟಿ, ಹಿತ ಶತ್ರುಗಳ ಕಾಟ, ಕುಟುಂಬದಲ್ಲಿ ಗಂಡ ಹೆಂಡತಿ ನಡುವೆ ಮನಸ್ತಾಪ, ಆರ್ಥಿಕ ಸಮಸ್ಯೆ, ಪ್ರೇಮದ ವೈಫಲ್ಯ ಮದುವೆ ಸಂಬಂಧಿತ ಸಮಸ್ಯೆಗಳು, ಉದ್ಯೋಗದಲ್ಲಿನ ಸಮಸ್ಯೆಗಳು ಮತ್ತು ವ್ಯಾಪಾರದಲ್ಲಿನ ಯಾವುದೇ ಸಮಸ್ಯೆ ಬಂದರೂ ಕೂಡ ಅದಕ್ಕೂ ಇದೆ ಪರಿಹಾರವಾಗಿರುತ್ತದೆ.
ಈ ಮೂಲಕ ತಂತ್ರಶಾಸ್ತ್ರ ತಿಳಿಸಿರುವ ಉಪಾಯಗಳನ್ನು ಮಾಡಿಕೊಂಡು ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದ. ಅದಕ್ಕಾಗಿ ಈ ಅಂಕಣದಲ್ಲಿ ಇಂದು ಒಂದು ವಿಶೇಷ ಪ್ರಯೋಗದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಅಡುಗೆಗೆ ಬಳಸುವ ಉಪ್ಪಿನ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ತಂತ್ರ ಶಾಸ್ತ್ರದಲಂತೂ ಅದಕ್ಕೆ ವಿಪರೀತವಾದ ಪ್ರಾಶಸ್ತವೇ ಇದೆ. ಲಕ್ಷ್ಮಿ ಸ್ವರೂಪವಾದ ಲಕ್ಷ್ಮಿಗೆ ಪ್ರಿಯವಾದ ವಸ್ತುವಾಗಿರುವ ಈ ಉಪ್ಪನ್ನು ಬಳಸಿಕೊಂಡು ಮನೆಗಾಗಿರುವ ದೃಷ್ಟಿಯನ್ನು ತೆಗೆಯಬಹುದು.
ಜೊತೆಗೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಕೂಡ ಹೋಗಲಾಡಿಸಬಹುದು. ಯಾಕೆಂದರೆ ಉಪ್ಪಿಗೆ ಈ ರೀತಿ ನೆಗೆಟಿವ್ ಎನರ್ಜಿಗಳನ್ನು ಎಳೆದುಕೊಳ್ಳುವ ಶಕ್ತಿ ಇರುತ್ತದೆ ಅದು ಮನೆಯಲ್ಲಿ ಇದ್ದಷ್ಟು ಅದನ್ನೆಲ್ಲವನ್ನು ಹಿಡಿದುಕೊಂಡು ಸಕರಾತ್ಮಕ ವಾತಾವರಣವನ್ನು ತುಂಬುತ್ತದೆ. ಆದ್ದರಿಂದ ಉಪ್ಪಿನಿಂದಲೇ ಈ ಒಂದು ಉಪಾಯವನ್ನು ಮಾಡಬೇಕು. ಆದರೆ ಈ ಪ್ರಯೋಗ ಮಾಡುವಾಗ ನಂಬಿಕೆ ಇರಬೇಕು ಅಷ್ಟೇ. ಹಾಗಿದ್ದಲ್ಲಿ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ದೂರ ಆಗುತ್ತವೆ.
ಇನ್ನು ವಿಶೇಷವಾದ ಪರಿಹಾರ ಸಿಗಬೇಕು ಅದರಲ್ಲೂ 64 ಗಂಟೆಗಳಲ್ಲಿ ಪರಿಹಾರ ಸಿಗಬೇಕು ಎಂದಾಗ ಈ ಉಪಾಯ ಮಾಡಿ. ಮೊದಲಿಗೆ ಮನೆಯನ್ನು ಶುದ್ಧವಾಗಿ ಸ್ವಚ್ಛ ಮಾಡಿ ಆಗ ಕೂಡ ನೀವು ಮನೆ ಸ್ವಚ್ಛ ಮಾಡುವ ನೀರಿಗೆ ಉಪ್ಪು ಹಾಕಿಕೊಂಡು ಕಲಕಿ ಒರೆಸಬಹುದು. ಇದರಿಂದಲೂ ಸಹ ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ಹೊರ ಹಾಕಿದಂತಾಗುತ್ತದೆ.
ಇನ್ನು ಸಹ ನೆಗೆಟಿವ್ ಶಕ್ತಿಯ ಪ್ರಭಾವ ಹೆಚ್ಚಾಗಿದ್ದರೆ ಒಂದು ಬಟ್ಟಲಿನಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚದಷ್ಟು ಕುಂಕುಮವನ್ನು ಹಾಕಿ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದು ಕೆಂಪು ಬಣ್ಣ ಬಂದ ಬಳಿಕ ಅದನ್ನು ಮನೆ ಯಾವುದೇ ಮೂಲೆಯಲ್ಲಿ ಇಡಿ. ಮನೆಯ ರೂಮ್ ಅಥವಾ ಹಾಲಿನಲ್ಲಿ ಇಟ್ಟರೂ ನಡೆಯುತ್ತದೆ ಆದರೆ ವಿನಾಕಾರಣ ಟಚ್ ಮಾಡಿ ಚೆಲ್ಲುವ ರೀತಿ ಮಾಡಬಾರದು. ಈ ರೀತಿ ಕುಂಕುಮ ನಿಶ್ಚಿತ ಉಪ್ಪನ್ನು ಇಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಇದರ ಪರಿಣಾಮ ನಿಮಗೆ ತಿಳಿಯುತ್ತದೆ.
ಆದರೆ ಮೊದಲ ಬಾರಿಗೆ ಇದನ್ನು ಶುರು ಮಾಡುವಾಗ ಭಾನುವಾರದಂದು ಮಾಡಬೇಕು ಉದ್ಯೋಗ ಸ್ಥಳಗಳಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಮಾಡಬಹುದು. ಭಾನುವಾರ ರಾತ್ರಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಗುರುವಾರ ಕೂಡ ಇದನ್ನು ಮಾಡಬಹುದು. ಈ ರೀತಿ ಮಾಡಿದ ಬಳಿಕ ಒಂದೊಳ್ಳೆ ಫಲಿತಾಂಶವನ್ನು ಕಾಣುತ್ತೀರಿ. ಇದನ್ನು ವಿಸರ್ಜನೆ ಮಾಡುವ ವಿಷಯದಲ್ಲಿ ಗೊಂದಲ ಬಂದರೆ ಅದಕ್ಕೂ ಕೂಡ ಉತ್ತರ ಇದೆ ನೋಡಿ.
ನೀವು ಭಾನುವಾರ ಇದನ್ನು ಇಟ್ಟ ಕಾರಣ ಮುಂದಿನ ಭಾನುವಾರದವರೆಗೂ ಕೂಡ ಅದು ಅಲ್ಲೇ ಇರಲಿ. ಮುಂದಿನ ಭಾನುವಾರ ಇದನ್ನು ತೆಗೆದು ಮತ್ತೊಮ್ಮ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಒಂದು ಚಮಚ ಕುಂಕುಮವನ್ನು ಹಾಕಿಕೊಂಡು ಇದೇ ರೀತಿ ಮಿಶ್ರಣ ಮಾಡಿ ಮನೆಯ ಮೂಲೆಗಳಲ್ಲಿ ಇಡಿ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಹೇಗೆ ಪರಿಹಾರ ಆಗುತ್ತದೆ ಎಂದು ಪರೀಕ್ಷಿಸಿ ನೋಡಿ.