ಗೃಹಜ್ಯೋತಿ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಈಗ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಗೃಹಬಳಕೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಈ ಗೃಹಜ್ಯೋತಿ ಯೋಜನೆಗೆ ಯಾರೆಲ್ಲಾ ಅರ್ಹರು ಯಾವ ರೀತಿ ಈ ಯೋಜನೆಯ ಫಲಾನುಭವಿಗಳಾಗಬಹುದು ಮತ್ತು ಅವರಿಗೆ ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳು ಏನು ಎನ್ನುವುದರ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಪತ್ರವು ಹೊರ ಬಿದ್ದಿದ್ದು.
ಜೂನ್ 18ರಿಂದ ಈ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ಆದೇಶದ ಪ್ರಕಾರ ಇರುವ ಕಂಡಿಶನ್ ಏನೆಂದರೆ ಕಳೆದ 12 ತಿಂಗಳಿನಿಂದ ಬಳಸಿದ ವಿದ್ಯುತ್ ಬಳಕೆಯ 10% ಮಾತ್ರ ಹೆಚ್ಚುವರಿಯಾಗಿ ಉಚಿತವಾಗಿ ಬಳಸಬಹುದು ಇದಕ್ಕಿಂತಲೂ ಹೆಚ್ಚಿನ ವಿದ್ಯುತ್ ಬಳಸಿದವರು ಹೆಚ್ಚುವರಿ ವಿದ್ಯುತ್ ಬಳಕೆಗೆ ಬಿಲ್ ಪಾವತಿ ಮಾಡಬೇಕು.
ಒಂದು ವೇಳೆ ಆ ಮಿತಿ 200 ಯೂನಿಟ್ ದಾಟಿದರೆ ಪೂರ್ತಿ ವಿದ್ಯುತ್ ಬಿಲ್ ಅನ್ನು ಗ್ರಾಹಕರೇ ಪಾವತಿಸಬೇಕು ಎನ್ನುವುದು ಸರ್ಕಾರದ ನಿಯಮ. ಹಾಗಾಗಿ ಈಗ ಎಲ್ಲರೂ ಕೂಡ ತಮ್ಮ ವಿದ್ಯುತ್ ಬಿಲ್ ಅನ್ನು ಗಮನಿಸುತ್ತಿದ್ದಾರೆ ಆದರೆ ಒಂದೆರಡು ತಿಂಗಳ ವಿದ್ಯುತ್ ಬಿಲ್ ಸಿಗಬಹುದು, ಕಳೆದ 12 ತಿಂಗಳುಗಳ ವಿವರ ಬೇಕು ಅದರ ಸರಾಸರಿಯನ್ನು ಲೆಕ್ಕ ತೆಗೆದುಕೊಳ್ಳಬೇಕು.
ಕಳೆದ 12 ತಿಂಗಳಿಂದ ಬಳಸಿರುವ ಯೂನಿಟ್ ಗಳ ಲೆಕ್ಕ ಹಾಕಿ ಅದನ್ನು 12 ರಿಂದ ಭಾಗಿಸಿದರೆ ಬರುವ ಸರಾಸರಿಗಿಂತ 10% ಅನ್ನು ಇನ್ನು ಮುಂದೆ ಉಚಿತವಾಗಿ ಬಳಸಬಹುದು. ಇದನ್ನು ತಿಳಿದುಕೊಳ್ಳಲು ಕಳೆದ 12 ತಿಂಗಳ ವಿದ್ಯುತ್ ಬಿಲ್ ಇರಬೇಕು ಒಂದು ವೇಳೆ ನಿಮ್ಮ ಬಳಿ ವಿದ್ಯುತ್ ಬಿಲ್ ಇಲ್ಲ ಎಂದರೆ ಆನ್ಲೈನ್
ಅಲ್ಲಿ ಇದರ ವಿವರ ಪಡೆದುಕೊಳ್ಳಬಹುದು.
● ನಿಮ್ಮ ಮನೆಗೆ ಯಾವ ವಿದ್ಯುತ್ ಕಂಪನಿಯಿಂದ ವಿದ್ಯುತ್ ಸರಬರಾಜು ಆಗುತ್ತಿದೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿ.
HESCOM : https://hescom.karnataka.gov.in
BESCOM : https://bescom.karnataka.gov.in
GESCOM : https://gescom.karnataka.gov.in
MESCOM : https://mescom.karnataka.gov.in
● ಉದಾಹರಣೆಗೆ HESCOM ಆಗಿದ್ದರೆ ಆ ಲಿಂಕ್ ಕ್ಲಿಕ್ ಮಾಡಿದ ನಂತರ HESCOM ವಿದ್ಯುತ್ ಸರಬರಾಜು ಕಂಪನಿಯ ವೆಬ್ಸೈಟ್ ಓಪನ್ ಆಗುತ್ತದೆ.
ಆ ಪೇಜ್ ಅಲ್ಲಿ ಆನ್ಲೈನ್ ಸೇವೆಗಳು ಎನ್ನುವ ಆಪ್ಷನ್ ಸಿಗುತ್ತದೆ ಅದರಲ್ಲಿ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ನಂತರ ಮತ್ತೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಪಟ್ಟಣ ಪ್ರದೇಶದವರಿಗಾಗಿ ಒಂದು ಆಪ್ಷನ್ ಮತ್ತು ಗ್ರಾಮೀಣ ಪ್ರದೇಶದವರಿಗೆ ಮತ್ತೊಂದು ಆಪ್ಷನ್ ಇರುತ್ತದೆ ಅದರ ಅನುಸಾರವಾಗಿ ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ.
● ಈಗ ಓಪನ್ ಆಗುವ ಹೆಸ್ಕಾಂ ಹೋಂ ಪೇಜ್ ಅಲ್ಲಿ ಎಡ ಭಾಗದ ಮೇಲೆ ಯೂಸರ್ ಐಡಿ ಪಾಸ್ವರ್ಡ್ ಎನ್ನುವ ಆಪ್ಷನ್ ಕಾಣುತ್ತದೆ. ನೀವು ಮೊದಲ ಬಾರಿಗೆ ಈ ಪೇಜ್ ಓಪನ್ ಮಾಡಿದರೆ ಅಥವಾ ಬಳಸುತ್ತಿದ್ದರೆ ನಿಮ್ಮ ಯೂಸರ್ ಐಡಿ ಅನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ಹೊಸ ಬಳಕೆದಾರರು ರಿಜಿಸ್ಟರ್ ಮಾಡಲು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಲಾಗುವ ವಿವರಗಳಾದ ವಿದ್ಯುತ್ ಬಿಲ್ ಅಲ್ಲಿ ಇರುವ ಅಕೌಂಟ್ ಐಡಿ ಇ-ಮೇಲ್ ಐಡಿ ಇತ್ಯಾದಿಗಳ ವಿವರಗಳನ್ನು ಕೊಟ್ಟು ನಂತರದ ಪ್ರಕ್ರಿಯೆಗಳನ್ನು ಪೂರೈಸಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಿ.
● ರಿಜಿಸ್ಟ್ರೇಷನ್ ಆದಮೇಲೆ HESCOM ಹೋಂ ಪೇಜ್ ಅಲ್ಲಿರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಆಪ್ಷನ್ ಫಿಲ್ ಮಾಡಿ ಲಾಗಿನ್ ಆಗಿ ಆಗ ಕಾಣಿಸಿಕೊಳ್ಳುವ ಪ್ರೊಫೈಲ್ ಅಲ್ಲಿ ನಿಮ್ಮ ವಿದ್ಯುತ್ ಬಿಲ್ ಸಮ್ಮರಿ ಇರುತ್ತದೆ.
● ಎಡಭಾಗದಲ್ಲಿ ಹಲವಾರು ಆಪ್ಷನ್ಗಳಿರುತ್ತವೆ, ಅದರಲ್ಲಿ ಕಂಜೂಮರ್ ಕ್ಯಾಲಿಕೇಟರ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಬೇಕು ಎನ್ನುವ ಆಪ್ಷನ್ ಕಾಣುತ್ತದೆ ಅಲ್ಲಿ ವರ್ಷ ಮತ್ತು ತಿಂಗಳನ್ನು ಸೆಲೆಕ್ಟ್ ಮಾಡಿ. ಮೇ 2022 ರಿಂದ ಮೇ 2023 ಆಪ್ಷನ್ ಆಯ್ಕೆ ಮಾಡಿ. ನಂತರ ಕ್ಯಾಲ್ಕುಲೇಟ್ ಯುಸೇಜ್ ಎನ್ನುವ ಆಪ್ಶನ್ ಕ್ಲಿಕ್ ಮಾಡಿದರೆ ನೀವು ಸೆಲೆಕ್ಟ್ ಮಾಡಿದ ತಿಂಗಳುಗಳವರೆಗೆ ಬಳಸಿರುವ ವಿದ್ಯುತ್ ಬಳಕೆಯ ಬಾರ್ ಗ್ರಾಫ್ ಕಾಣುತ್ತದೆ. ಪ್ರಿಂಟ್ ಆರ್ ವಿವ್ಯು ಡೇಟಾ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಕಳೆದ 12 ತಿಂಗಳಿಂದ ವಿದ್ಯುತ್ ಬಳಕೆಯ ಮಾಹಿತಿಯು ಚಾರ್ಟ್ ಸಮೇತ ಸಿಗುತ್ತದೆ.