Home Useful Information ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

0
ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಚನೆಯು ದೇಶದಾದ್ಯಂತ ಎಲ್ಲಾ ರೈತರಿಗೂ ಬಹಳ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ದೇಶದ ಅರ್ಹ ರೈತ ಫಲಾನುಭವಿಗಳಿಗೆ ವಾರ್ಷಿಕವಾಗಿ 6,000ರೂ. ಸಹಾಯಧನವನ್ನು 4 ತಿಂಗಳ ಅಂತರದಲ್ಲಿ 3 ಬಾರಿ ನೀಡುತ್ತದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಸಹಾಯಧನವನ್ನು ಪಡೆಯುತ್ತಿರುವ ರೈತರುಗಳು ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದಲೂ ಕೂಡ 2 ಕಂತುಗಳಲ್ಲಿ 4,000 ಸಹಾಯಧನವನ್ನು ಪಡೆಯುತ್ತಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದಾಗ ಈ ಸಹಾಯಧನದ ಮೂಲಕ ನೆರವಾಗಿ ಕೃಷಿ ಚಟುವಟಿಕೆಯನ್ನು ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ.

ಇದುವರೆಗೆ ಕೇಂದ್ರ ಸರ್ಕಾರದ ವತಿಯಿಂದ 13 ಕಂತಿನ ಹಣವನ್ನು ಎಲ್ಲ ರೈತರು ಪಡೆದಿದ್ದಾರೆ. ಆದರೆ ನಕಲಿ ರೈತರು ಕೂಡ ಈ ಯೋಜನೆಯಲ್ಲಿ ಸಹಾಯ ಪಡೆಯುತ್ತಿರುವುದು ಹಾಗೂ ಈ ಯೋಜನೆಗಾಗಿ ನೀಡಿರುವ ನಿರ್ದೇಶನಗಳನ್ನು ಪೂರೈಸದೇ ಇರುವುದರಿಂದ ಕಳೆದ ಬಾರಿಯಿಂದ ಅನೇಕ ರೈತರ ಹೆಸರುಗಳು ಈ ಪಟ್ಟಿಯಲ್ಲಿ ಬಿಟ್ಟು ಹೋಗಿದೆ. ಇದರಲ್ಲಿ ಮುಖ್ಯವಾಗಿ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವುದು ಸರ್ಕಾರದ ಆದೇಶವಾಗಿತ್ತು.

ಇ-ಕೆವೈಸಿ ಅಪ್ಡೇಟ್ ಮಾಡಿಸದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಹಣ ಜಮೆ ಆಗದೆ ಸ್ಥಗಿತಗೊಂಡಿದೆ. ಇನ್ನೇನು ಈ ತಿಂಗಳ ಅಂತ್ಯದಲ್ಲಿ 14ನೇ ಕಂತಿನ ಹಣವು ಕೊಡ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಆದ್ದರಿಂದ ಕೂಡಲೇ ರೈತರು ತಮ್ಮ ಇ-ಕೆವೈಸಿ ಅಪ್ಡೇಟ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು, ಒಂದು ವೇಳೆ ಅಪ್ಡೇಟ್ ಆಗದೇ ಇದ್ದಲ್ಲಿ ಆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ತಿಗೊಳಿಸಬೇಕು.

ಇ-ಕೆವೈಸಿ ಅಪ್ಡೇಟ್ ಮಾಡಿಸಲು ರೈತರು https://pmkisan.gov.in ಪೋರ್ಟಲ್ ಗೆ ಭೇಟಿ ಕೊಟ್ಟು ಫಾರ್ಮ್ ಫಿಲ್ ಮಾಡಬೇಕು. ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ದಾಖಲಿಸಿದರೆ ತಂತ್ರಾಂಶ ಆಧಾರಿತ ಪರಿಶೀಲನೆಗಾಗಿ ಯಶಸ್ವಿಯಾಗಿ ಇ-ಕೆವೈಸಿ ಅಪ್ಡೇಟ್ ಪೂರ್ತಿಯಾಗಿರುವ ಬಗ್ಗೆ ಘೋಷಣೆ ಬರುತ್ತದೆ.

ಒಂದು ವೇಳೆ ಈಗಾಗಲೇ ನಿಮ್ಮ ಇ-ಕೆವೈಸಿ ಅಪ್ಡೇಟ್ ಆಗಿದ್ದರೂ ಕೂಡ ಅದನ್ನು ಸಹ ಘೋಷಿಸುತ್ತದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಗೆ ಲಿಂಕ್ ಆಗದೆ ಇದ್ದಲ್ಲಿ ಅಥವಾ OTP ಮೊಬೈಲ್ ಗೆ ಬರದೇ ಇದ್ದಲ್ಲಿ ಅಂತವರು ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ಮಾಹಿತಿಗಳನ್ನು ಕೊಟ್ಟು ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು.

ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ PM KISAN GOI
ಆಪ್ ಅಥವಾ Adhar face rd ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಎಲ್ಲಾ ಹಂತಗಳನ್ನು ಕೂಡ ಎಚ್ಚರಿಕೆಯಿಂದ ಪೂರೈಸುವ ಮೂಲಕ ಅಂತಿಮವಾಗಿ ಇ-ಕೆವೈಸಿ ಅಪ್ಡೇಟ್ ಮಾಡಬಹುದು. ಇದಕ್ಕೆ ಕೊನೆ ದಿನಾಂಕ ಜುಲೈ 30 ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here