ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿ ಲೇಬರ್ ಕಾರ್ಡ್ ಪಡೆದಿದ್ದರೆ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದು. ಕಳೆದ ಬಾರಿ BJP ಸರ್ಕಾರವು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದೆ.
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿ ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಅವರ ಕುಟುಂಬದವರಿಗೆ ಸ್ಕಾಲರ್ಶಿಪ್, ವಿದ್ಯಾರ್ಥಿ ಕಿಟ್, ಮದುವೆಗೆ ಪ್ರೋತ್ಸಾಹದಿನ, ಉಚಿತಪಡಿತರ, ಕೆಲವು ಕಾರ್ಮಿಕರಿಗೆ ವಸತಿ ಯೋಜನೆ ಸೇರಿದಂತೆ ಸಾಕಷ್ಟು ಅನುಕೂಲತೆಯನ್ನು ಸರ್ಕಾರ ಮಾಡಿಕೊಟ್ಟಿದೆ. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಕೂಡ ತನ್ನ ಜನಪ್ರಿಯ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಹೊರತುಪಡಿಸಿ ಕಟ್ಟಡ ಕಾರ್ಮಿಕರ ಬಗ್ಗೆಯೂ ಕೂಡ ಗುಡ್ ನ್ಯೂಸ್ ನೀಡಿದೆ.
ಈಗ ಕರ್ನಾಟಕ ರಾಜ್ಯದ ಕಾರ್ಮಿಕ ಸಚಿವರು ಮತ್ತು ಮಂಡಳಿಯ ಅಧ್ಯಕ್ಷರು ಆಗಿರುವ ಶ್ರೀ ಸಂತೋಷ್ ಲಾಡ್ ಅವರು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂತಹ ಒಂದು ಸಿಹಿ ಸುದ್ದಿಯನ್ನು ಕಾರ್ಮಿಕ ವಲಯಕ್ಕೆ ನೀಡಿದ್ದಾರೆ. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರ ಆರೋಗ್ಯ ರಕ್ಷಣೆಯ ಬಗ್ಗೆ ಗಮನಹರಿಸಿರುವ ಸಚಿವರು ಮತ್ತು ಮಂತ್ರಿಗಳು ಈಗಾಗಲೇ ಅವರಿಗೆ ಸಿಗುತ್ತಿದ್ದ ಉಚಿತ ವೈದ್ಯಕೀಯ ಸೌಲಭ್ಯಗಳ ಜೊತೆ ವೈದ್ಯಕೀಯ ವಿಮೆ ಕೂಡ ನೀಡಲು ನಿರ್ಧಾರ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರು ಅಥವಾ ಲೇಬರ್ ಕಾರ್ಡ್ ಅಲ್ಲಿ ನೋಂದಣಿ ಆಗಿರುವ ಅವರ ಕುಟುಂಬ ಸದಸ್ಯರಲ್ಲಿ ಯಾರೇ ಅನಾರೋಗ್ಯಕ್ಕೆ ಪೀಡಿತರಾಗಿದ್ದರು ಕೂಡ ಪ್ರತಿದಿನಕ್ಕೆ 300 ರೂಪಾಯಿಯ ಲೆಕ್ಕದಲ್ಲಿ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕನ ಖಾತೆಗೆ ಹಣ ಸರ್ಕಾರದಿಂದ ಜಮೆ ಆಗಲಿದೆ. ಅನಾರೋಗ್ಯ ಸಮಸ್ಯೆಗೆ ಪೀಡಿತರಾದಾಗ ಕಾರ್ಮಿಕನಿಗೆ ದುಡಿಯುವ ಶಕ್ತಿ ಇರುವುದಿಲ್ಲ, ಒಂದು ವೇಳೆ ಅವರ ಕುಟುಂಬಸ್ಥರು ಅನಾರೋಗ್ಯಕ್ಕೆ ಈಡಾದಾಗ ಆತನು ಅವರ ಹಾರೈಕೆ ಮಾಡುವುದನ್ನು ಬಿಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಈ ಕಾರಣಕ್ಕಾಗಿ ಅವನ ದಿನಗೂಲಿ ತಪ್ಪಬಾರದು ಎನ್ನುವ ಸದುದ್ದೇಶದಿಂದ ಇಂತಹದ ಮಹತ್ವದ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಇದನ್ನು ಪ್ರಕಟಣೆ ಮೂಲಕ ಕರ್ನಾಟಕದಲ್ಲಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ತಿಳಿಸಲಾಗಿದೆ. ಇನ್ನು ಮುಂದೆ ಲೇಬರ್ ಕಾರ್ಡ್ ಹೊಂದಿರುವವರು ಅಥವಾ ಕುಟುಂಬದವರು ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಅವರಿಗೆ ಪ್ರತಿದಿನದ ಲೆಕ್ಕದಲ್ಲಿ 300ರೂ. ವೈದ್ಯಕೀಯ ವಿಮೆ ಎಂದು ಸಿಗಲಿದೆ.
ಇದಕ್ಕಾಗಿ ಅವರು ಅರ್ಜಿ ಕೂಡ ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಅರ್ಜಿ ಸಲ್ಲಿಸಲು ಚಿಕಿತ್ಸೆ ಪಡೆದ ಆರು ತಿಂಗಳವರೆಗೂ ಕೂಡ ಅವಕಾಶ ನೀಡಲಾಗುತ್ತದೆ. ಸಂಬಂಧ ಪಟ್ಟ ವೈದ್ಯಕೀಯ ದಾಖಲೆಗಳು ಮತ್ತು ಇನ್ನಿತರವಾದ ಅಗತ್ಯ ವಿವರಗಳ ಜೊತೆ ಆನ್ಲೈನಲ್ಲಿ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಿದರು ಕೂಡ ಅವರು ಅನಾರೋಗ್ಯದಲ್ಲಿ ಇದ್ದಷ್ಟು ದಿನ ಅಥವಾ ಅವರು ಕುಟುಂಬಸ್ಥರ ಆರೈಕೆ ಮಾಡುತ್ತಿದ್ದ ಅಷ್ಟು ದಿನ ಪ್ರತಿ ದಿನಕ್ಕೆ 300 ರೂಪಾಯಿ ಲೆಕ್ಕದಲ್ಲಿ ಸರ್ಕಾರ ಅವರಿಗೆ ವಿಮೆ ಹಣವನ್ನು ನೀಡುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಕಾರ್ಮಿಕ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ಭೇಟಿ ಕೊಡಬಹುದು ಅಥವಾ ಅಧಿಕೃತ ವೆಬ್ಸೈಟ್ ಗಳನ್ನು ಸರ್ಚ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.