ರೈತರುಗಳು ಬ್ಯಾಂಕುಗಳಲ್ಲಿ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಕೃಷಿ ಮಾಡಲು ಬಂಡವಾಳ ಹಾಗೂ ಕೃಷಿಗೆ ಬೇಕಾದ ಸಂಪನ್ಮೂಲಗಳ ಖರೀದಿಯ ಅವಶ್ಯಕತೆಯಿಂದ ಈ ರೀತಿ ರೈತನ ಸಾಲ ಮಾಡಬೇಕಾಗುತ್ತದೆ. ವ್ಯಕ್ತಿಗಳು ಅಥವಾ ಖಾಸಗಿ ಸಂಸ್ಥೆಗಳ ಮೊರೆ ಹೋಗುವುದರಿಂದ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರವು ರೈತರಿಗಾಗಿಯೇ.
ಬ್ಯಾಂಕ್ಗಳಲ್ಲಿ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ ಕೆಲವು ಯೋಜನೆಗಳ ಮೂಲಕ ಕಡಿಮೆ ಬಡ್ಡಿದರಲ್ಲೇ ಅಥವಾ ಬಡ್ಡಿ ರಹಿತವಾಗಿ ಸಾಲ ಕೊಡುವುದರಿಂದ ತಮ್ಮ ದಾಖಲೆಗಳನ್ನು ಸಲ್ಲಿಸಿ ಕೃಷಿಸಾಲ ಪಡೆದಿರುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ಎಲ್ಲ ರೈತರು ಕೂಡ ತಾವು ಮಾಡಿದ್ದ ಸಾಲವನ್ನು ತೀರಿಸಲು ಆಗುವುದಿಲ್ಲ ಹಲವು ವರ್ಷಗಳವರೆಗೆ ಅದು ಬಾಕಿಯೇ ಇರುತ್ತದೆ.
ರೈತರು ತಮ್ಮ ಕೃಷಿ ಭೂಮಿಯನ್ನು ತೋಟಗಾರಿಕೆ ಕೃಷಿಗಾಗಿ ಬದಲಾಯಿಸಲು, ಪಂಪ್ಸೆಟ್ ನಿರ್ಮಿಸಲು, ಅಥವಾ ಪೈಪ್ ಲೈನ್ ಗಾಗಿ ಅಥವಾ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರೋಪಕರಣಗಳ ಖರೀದಿಗೆ, ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕಗಳು ಇವುಗಳ ಖರೀದಿಗೆ, ಟ್ಯಾಕ್ಟರ್ ಖರೀದಿಗೆ ಇನ್ನು ಮುಂತಾದ ಅನೇಕ ವಿಷಯಕ್ಕೆ ಸಾಲ ಪಡೆಯುವ ಪರಿಸ್ಥಿತಿ ಬಂದಿರುತ್ತದೆ.
ಆದರೆ ಭಾರತದಲ್ಲಿ ಕೃಷಿ ಮಳೆ ಜೊತೆ ಆಡುವ ಜೂಜಾಟ ಇನಿಸಿರುವುದರಿಂದ ಇಷ್ಟೆಲ್ಲಾ ಬಂಡವಾಳ ಹಾಕಿರುವ ರೈತನಿಗೆ ಹಲವು ಬಾರಿ ನಿರೀಕ್ಷೆಯ ಫಲ ಸಿಗುವುದಿಲ್ಲ. ಹವಾಮಾನ ಬೈಪರೀತಗಳಿಂದ ಬೆಳೆ ಹಾಳಾಗುತ್ತದೆ. ಅಥವಾ ಬೆಳೆ ಬಂದ ಮೇಲೆ ಅದಕ್ಕೆ ಸರಿಯಾದ ಬೆಲೆ ಸಿಗದೆ ನಷ್ಟ ಹೊಂದುತ್ತಾನೆ. ಈ ಕಾರಣಗಳಿಂದ ತಾನು ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ.
ಕೆಲ ಸಮಯಗಳಲ್ಲಿ ಸರ್ಕಾರವು ರೈತರ ಪರವಾಗಿ ನಿಂತು ಹಲವು ವರ್ಷಗಳಿಂದ ರೈತರು ತೀರಿಸಲು ಸಾಧ್ಯವಾಗದ ಸಾಲ ಅಥವಾ ಸಾಲದ ಮೇಲಿರುವ ಬಡ್ಡಿಯನ್ನು ಮನ್ನಾ ಮಾಡುತ್ತದೆ. ಇದುವರೆಗೆ ಕರ್ನಾಟಕದಲ್ಲಿರುವ ರೈತರು ಅನೇಕ ಬಾರಿ ಈ ಸಾಲ ಮನ್ನಾ ಸಹಾಯದ ಅನುಕೂಲತೆಯನ್ನು ಪಡೆದಿದ್ದಾರೆ.
ಹಾಗಾಗಿ ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲೂ ಅಥವಾ ಹೊಸ ಸರ್ಕಾರ ಸ್ಥಾಪನೆ ಆದಾಗಲೂ ಅಥವಾ ಚುನಾವಣೆಗಳು ಬಂದಾಗ ಪ್ರಣಾಳಿಕೆಯಲ್ಲಿ ಆದರೂ ರೈತರ ಪರವಾಗಿ ಸಾಲ ಮನ್ನಾ ವಿಚಾರವಾಗಿ ರಾಜಕೀಯ ಪಕ್ಷಗಳು ಭರವಸೆ ಕೊಡುತ್ತವೆಯಾ ಎಂದು ನೋಡುತ್ತಿರುತ್ತಾರೆ. ಗೆದ್ದು ಅಧಿಕಾರ ಸ್ಥಾಪಿಸಿದ ಅನೇಕ ಸರ್ಕಾರಗಳು ರೈತರ ಪರವಾಗಿ ರೈತರ ಮೇಲೆ ಕಾಳಜಿ ಹೊಂದಿರುವುದನ್ನು ತೋರ್ಪಡಿಸುವುದಕ್ಕಾಗಿ ರೈತರ ನೆರವಿಗೆ ನಿಂತಿದ್ದಾರೆ.
ಬೆಳೆ ಸಾಲ, ಕೃಷಿ ಸಾಲ ಈ ರೀತಿ ರೈತರ ಸಾಲ ಮನ್ನಾ ಮಾಡಿ ಅವರನ್ನು ಋಣಮುಕ್ತಗೊಳಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿರುವ ನಿರುದ್ಯೋಗಿಗಳು, ಗೃಹಿಣಿಯರು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ರೈತರ ಪರವಾಗಿಯೂ ಕೂಡ ಸಾಲ ಮನ್ನಾ ಮಾಡುವ ಚಿಂತನೆ ನಡೆಸುತ್ತದೆ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.
ಪ್ರತಿ ಬಾರಿ ಕೂಡ ರೈತರಿಂದ ತಮ್ಮ ಸಾಲ ಮನ್ನಾ ಮಾಡುವಂತೆ ಮನವಿ ಹೋಗುತ್ತಿರುವುದರಿಂದ ಸರ್ಕಾರವೂ ಕೂಡ 50,000ದ ವರೆಗಿನ ರೈತರ ಸಾಲ ಮನ್ನಾ ಮಾಡಲು ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿಗಳು ಕೂಡ ಇದೆ. ಆದರೆ ಅಂತಿಮವಾಗಿ ಸರ್ಕಾರದ ಕಡೆಯಿಂದ ಇದು ಘೋಷಣೆ ಆಗುವವರೆಗೂ ಕಾದು ನೋಡಬೇಕಾಗಿದೆ. ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡಿರುವುದರಿಂದ ನಮ್ಮ ರಾಜ್ಯದಲ್ಲೂ ಕೂಡ ಸರ್ಕಾರ ಇದೇ ನಿರ್ಧಾರಕ್ಕೆ ಬರಲಿ ಎನ್ನುವ ಆಸೆ ರೈತ ವರ್ಗಕ್ಕೆ.