ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಕಷ್ಟದಲ್ಲಿದ್ದಾಗ ಅವರಿಗೆ ಸಾಲವಾಗಿ ಹಣ ಕೊಡುವುದು ಮತ್ತು ನಾವೇ ಅವಶ್ಯಕತೆ ಇದ್ದಾಗ ಬೇರೆಯವರಿಂದ ಸಾಲ ಪಡೆಯುವುದು ಎರಡು ಕೂಡ ತಪ್ಪಲ್ಲ. ಆದರೆ ಕೊಟ್ಟ ಸಾಲವನ್ನು ಮಾತಿಗೆ ತಕ್ಕಹಾಗೆ ಹಿಂತಿರುಗಿಸದೆ ಹೋದಲ್ಲಿ ಅಥವಾ ಬಹಳ ಸಮಯ ಆದರೂ ಕೂಡ ಬಹಳ ವಾಪಾಸ್ ಕೊಡದೆ ಇದ್ದಲ್ಲಿ ಅದು ತಪ್ಪಾಗುತ್ತದೆ.
ಈ ರೀತಿ ನಿಮಗೆ ಯಾರಾದರೂ ನಿಮ್ಮ ಬಳಿ ಸಾಲ ತೆಗೆದುಕೊಂಡು ನಂತರ ಹಿಂತಿರುಗಿಸಿದೆ ತಪ್ಪಿಸಿಕೊಂಡು ಓಡಾಡುತ್ತಿದ್ದರೆ ಅಥವಾ ಹಣವನ್ನು ಕೊಡಬೇಕಾದ ಸಮಯಕ್ಕೆ ಕೊಡದೆ ಬಹಳ ವಿಳಂಬ ಮಾಡುತ್ತಿದ್ದರೆ ಅಥವಾ ಆ ಹಣ ನಿಮಗೆ ಬರಬೇಕೆಂದರೆ ನಾವು ಈಗ ಹೇಳುವ ಈ ಒಂದು ಸಣ್ಣ ಟಿಪ್ಸ್ ಫಾಲೋ ಮಾಡಿ ಸಾಕು. ಯಾವ ರೀತಿ ನಿಮಗೆ ಹಣ ವಾಪಸ್ ಬರುತ್ತದೆ ಎಂದು ನೀವೆ ಆಶ್ಚರ್ಯಗೊಳ್ಳುತ್ತೀರಿ.
ಪ್ರತಿಯೊಬ್ಬ ಮನುಷ್ಯನೂ ಕೂಡ ಯೂನಿವರ್ಸ್ ಜೊತೆ ಒಂದು ಕನೆಕ್ಷನ್ ಹೊಂದಿರುತ್ತಾನೆ. ನಾವು ಏನನ್ನೇ ಪಾಸಿಟಿವ್ ಅಥವಾ ನೆಗೆಟಿವ್ ಆಗಿ ಅಂದುಕೊಂಡರೂ ಕೂಡ ಆ ಮೆಸೇಜ್ ಯೂನಿವರ್ಸಿಗೆ ಹೋಗುತ್ತದೆ. ಆದ್ದರಿಂದ ಯೂನಿವರ್ಸ್ ಜೊತೆ ವೇವ್ ಲೆಂಥ್ ಮ್ಯಾಚ್ ಮಾಡಿಕೊಂಡಾಗ ನಾವು ಅಂದುಕೊಂಡ ಕೆಲಸಗಳನ್ನು ಸಣ್ಣ ಉಪಾಯಗಳ ಮೂಲಕ ಸಕ್ಸಸ್ ಮಾಡಿಕೊಳ್ಳಬಹುದು.
ಅದಕ್ಕೆ ತಂತ್ರಗಳು ಎನ್ನುತ್ತಾರೆ ಇಂತಹ ತಂತ್ರಗಳಿಂದಲೇ ಈಗ ಸಾಕಷ್ಟು ಜನ ತನ್ನ ಸಮಸ್ಯೆಗಳಿಂದ ಹೊರಬಂದಿರುವುದು ಹಾಗೂ ಜೀವನದಲ್ಲಿ ಏಳಿಗೆಯಾಗಿರುವುದನ್ನು ಕೂಡ ಉದಾಹರಣೆಗಳಾಗಿ ನಾವು ನೋಡಬಹುದು. ಯಾವುದೇ ರೀತಿಯ ಹಣಕಾಸಿನ ಖರ್ಚು ಇಲ್ಲದೆ ಯಾವುದೇ ಒಂದು ರೀತಿ ಅಡ್ಡ ಪರಿಣಾಮಗಳೂ ಇಲ್ಲದೆ ಈ ತಂತ್ರಗಳ ಮೂಲಕ ಹಣದ ಸಮಸ್ಯೆಯಿಂದ ಹೊರ ಬರಬಹುದು. ನಿಮ್ಮ ಹಣ ಎಲ್ಲಾದರೂ ಸಿಕ್ಕಿಕೊಂಡಿದ್ದರೆ ಅದನ್ನು ಜಾಣತನದಿಂದ ವಾಪಸ್ಸು ಪಡೆದುಕೊಳ್ಳಬಹುದು.
ಈ ರೀತಿ ಹಣ ವಾಪಸ್ ಪಡೆಯಲು ಇರುವ ಟ್ರಿಕ್ಸ್ ಏನು ಎಂದರೆ ಒಂದು ಬಿಳಿ ಹಾಳೆಯ ಮೇಲೆ ನಿಮಗೆ ಸಾಲ ಕೊಡಬೇಕಾದವರ ಹೆಸರು ಬರೆದುಕೊಳ್ಳಿ ಮತ್ತು ಅವರು ನಿಮಗೆ ಎಷ್ಟು ಹಣ ಕೊಡಬೇಕು ಆ ಹಣದ ಮೊತ್ತವನ್ನು ಕೂಡ ಬರೆಯಿರಿ. ನಂತರ ಜಾಯಿಕಾಯಿ ಪುಡಿಯನ್ನು ತೆಗೆದುಕೊಂಡು ಅವರ ಹೆಸರು ಹಾಗೂ ಕೊಡಬೇಕಾದ ಹಣ ಅವೆರಡರ ಮೇಲೆ ಸ್ಪ್ರೆಡ್ ಆಗುವಂತೆ ಆ ಪುಡಿಯನ್ನು ಉದುರಿಸಿರಿ.
ಆಮೇಲೆ ಆ ಹಾಳೆಯನ್ನು ನಾಲ್ಕು ಬಾರಿ ಮಡಚಿ ಆದರೆ ಇಲ್ಲೊಂದು ಕಂಡೀಷನ್ ಇದೆ. ನೀವು ಪ್ರತಿ ಬಾರಿ ಮಡಚುವಾಗಲು ಕೂಡ ಅದು ನಿಮ್ಮ ಕಡೆಗೆ ಬರುವಂತೆ ಫೋಲ್ಡ್ ಮಾಡಿ ಮಡಚಬೇಕು. ಇದಾದಮೇಲೆ ನೀವು ಅದನ್ನು ನಿಮ್ಮ ಪರ್ಸಲ್ಲಿ ಇಟ್ಟುಕೊಳ್ಳಬೇಕು. ಇಟ್ಟುಕೊಳ್ಳುವಾಗ ನೀವು ಸಕಾರಾತ್ಮಕತೆಯಿಂದ ಇಟ್ಟುಕೊಳ್ಳಬೇಕು. ನಿಮಗೆ ಆ ಹಣ ಬಂದುಬಿಟ್ಟಿದೆ, ಅವರು ನಿಮಗೆ ಹಣವನ್ನು ಕೊಟ್ಟು ಬಿಟ್ಟಿದ್ದಾರೆ.
ಈ ರೀತಿಯ ಮನಸ್ಥಿತಿಯನ್ನು ಇಟ್ಟುಕೊಂಡು ಆ ಚೀಟಿಯನ್ನು ನಿಮ್ಮ ಪರ್ಸ್ ಗೆ ಹಾಕಿಕೊಳ್ಳಿ. ನಂತರ ನಡೆಯುವ ಚಮತ್ಕಾರವನ್ನು ನೋಡಿ ನೀವೇ ಶಾಕ್ ಆಗಿಬಿಡುತ್ತೀರಿ. ನೀವು ಈ ರೀತಿ ಮಾಡಿದ ಕೆಲವೇ ದಿನಗಳಲ್ಲಿ ಆ ಹಣವನ್ನು ನಿಮಗೆ ಅವರೇ ಬಂದು ವಾಪಸ್ ಕೊಡುತ್ತಾರೆ. ನಿಮಗೆ ಬರಬೇಕಾದ ಎಲ್ಲಾ ಸಾಲಗಳು ಹಿಂದುರುಗಿ ಬಂದು ನಿಮ್ಮ ಅಕೌಂಟಿಗೆ ಬೀಳುತ್ತದೆ.
ಆದರೆ ಈ ತಂತ್ರ ಮಾಡುವ ಯಾವುದೇ ಕಾರಣಕ್ಕೂ ಅನುಮಾನ ಇಟ್ಟುಕೊಂಡು ಅಥವಾ ನೆಗೆಟಿವ್ ಮೈಂಡಲ್ಲಿ ಮಾಡಲೇಬಾರದು. ಯಾಕೆಂದರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸಿಕೊಂಡಿದ್ದರೆ ಯಾವುದೇ ತಂತ್ರಗಳು ಕೂಡ ಕೆಲಸ ಮಾಡುವುದಿಲ್ಲ. ನೀವು ಈ ಯೂನಿವರ್ಸಿಗೆ ಹಣ ನಿಮಗೆ ಬಂದಿದೆ ಎಂದು ಸಂದೇಶ ಕೊಡುವ ರೀತಿಯೇ ಭಾವಿಸಿಕೊಂಡು ಈ ತಂತ್ರವನ್ನು ಮಾಡಿ ಸಮಸ್ಯೆಯಿಂದ ಹೊರಬನ್ನಿ.