ಗಂಡ ಹೆಂಡತಿ ಸಂಬಂಧ ಎನ್ನುವುದು ಅತಿ ಶ್ರೇಷ್ಠವಾದ ಸಂಬಂಧ. ಅದರಲ್ಲೂ ಭಾರತದಂತಹ ದೇಶದಲ್ಲಿ ಪತಿ-ಪತ್ನಿಯನ್ನು ಬೇರೆಯಾಗಿ ಕಾಣುವುದಿಲ್ಲ ದಂಪತಿಯನ್ನು ಒಂದೇ ಹೆಸರಿನಿಂದ ಅವರನ್ನು ಕರೆಯುತ್ತೇವೆ. ಅರ್ಧನಾರೀಶ್ವರ ತತ್ವವನ್ನು ನಂಬಿದ ದೇಶ ನಮ್ಮದು. ಹಾಗಾಗಿ ಜೀವನ ಸಂಗಾತಿಗೆ ಅರ್ಧಾಂಗಿ ಎನ್ನುವ ಅಧಿಕಾರವನ್ನು ಕೊಟ್ಟಿರುತ್ತೇವೆ.
ಇದರ ಅರ್ಥ ಗಂಡ ಹಾಗೂ ಹೆಂಡತಿ ಇಬ್ಬರೂ ಬೇರೆ ಬೇರೆ ಅಲ್ಲ ಇವರಿಬ್ಬರು ಎರಡು ದೇಹ ಒಂದೇ ಉಸಿರು ಎಂದು. ಹಾಗಾಗಿ ವಿವಾಹ ಬಂಧನಕ್ಕೆ ಇಬ್ಬರು ಒಳಪಟ್ಟ ಮೇಲೆ ಅವರ ಜೀವನದಲ್ಲಿ ಯಾವುದೇ ಕೆಡಕು ನಡೆದರೂ ಕೂಡ ಅದು ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಒಬ್ಬರ ಒಳಿತು ಮತ್ತೊಬ್ಬರಿಗೂ ಮತ್ತೊಬ್ಬರಿಗೂ ಸಮವಾಗಿರುತ್ತದೆ. ಹಾಗಾಗಿ ಪತಿಯ ಸಂಪೂರ್ಣ ಏಳಿಗೆ ಪತ್ನಿ ಹೊಣೆಗಾರಿಕೆ ಎಂದರು ತಪ್ಪಾಗಲಾರದು.
ಹೀಗಾಗಿ ಗಂಡನಿಗೆ ಉದ್ಯೋಗದಲ್ಲಿ ತೊಂದರೆ ಆಗುತ್ತಿದ್ದರೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಇಲ್ಲ ಎಂದರೆ ಅಥವಾ ಗಂಡ ಯಾವುದ್ದರೂ ದುಷ್ಚಟಕ್ಕೆ ಬಲಿಯಾಗಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ, ಗಂಡ ಹೆಂಡತಿ ನಡುವೆ ವೈ ಮನಸ್ಸು ಉಂಟಾದರೆ ಈ ರೀತಿ ಗಂಡನಿಗೆ ಸಂಬಂಧ ಪಟ್ಟ ಯಾವುದೇ ವಿಷಯಗಳಾದರೂ ಅದರ ಪರಿಹಾರಕ್ಕಾಗಿ ಪ್ರಾರ್ಥನೆಯನ್ನು ಹೆಂಡತಿಯೇ ಮಾಡಬಹುದು.
ಈ ರೀತಿ ಮನುಷ್ಯನ ಸಾಮರ್ಥ್ಯದಿಂದ ಪರಿಹರಿಸಲಾಗದ ಕಷ್ಟಗಳು ಬಂದಾಗ ಎಲ್ಲರೂ ಸಹ ಭಗವಂತನ ಮೊರೆ ಹೋಗುತ್ತಾರೆ. ಮೊದಲಿಗೆ ನಾವು ನಮ್ಮ ಕುಲದೇವರ ಪ್ರಾರ್ಥನೆ ಮಾಡಿ ಕುಲದೇವರನ್ನು ಪೂಜಿಸಿ ಆ ದೇವರಲ್ಲಿ ಮೊರೆಯನ್ನು ಇಡಬೇಕು. ಯಾವ ವಿಧಾನದಿಂದ ಪ್ರಾರ್ಥಿಸಿದರೆ ಅತಿ ಶೀಘ್ರವಾಗಿ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಪ್ರತಿದಿನ ಬೆಳಗ್ಗೆ ಎದ್ದು ದೇವರ ಕೋಣೆ ಕ್ಲೀನ್ ಮಾಡಿ ಮಡೀ ಮಾಡಿಟ್ಟುಕೊಂಡು ಕುಲದೇವರಿಗೆ ಹೂವು ಕುಂಕುಮ ಇಟ್ಟು ಪೂಜೆ ಮಾಡಿ ತುಪ್ಪ ಮತ್ತು ಎಣ್ಣೆಯಿಂದ ದೀಪ ಹಚ್ಚಿ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಳ್ಳಬೇಕು, ಬಳಿಕ 108 ಬಾರಿ ನಿಮ್ಮ ಕುಲದೇವರ ನಾಮಗಳನ್ನು ಜಪ ಮಾಡಬೇಕು.
ನಿಮ್ಮ ಪೂಜೆ ವಿಧಾನ ಮುಗಿದ ಮೇಲೆ ಅವರು ಉದ್ಯೋಗಕ್ಕೆ ಹೊರ ಹೋಗುವಾಗ ಅಥವಾ ಹೊರಗೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವಾಗ ಅಥವಾ ವ್ಯಾಪಾರ ಸಂಬಂಧಿತ ಕೆಲಸಗಳಿಗೆ ಹೋಗುವಾಗ. ನೀವು ದೇವರಿಗೆ ಇಟ್ಟಿದ್ದ ಕುಂಕುಮವನ್ನು ಅವರ ಹಣೆಗೂ ಪ್ರಸಾದ ಎಂದುಕೊಂಡು ಇಡಬೇಕು. ಮತ್ತು ದೇವರ ಹೂವನ್ನು ಕೂಡ ಪ್ರಸಾದ ಎಂದುಕೊಂಡು ಅವರಿಗೆ ಕೊಡಬೇಕು. ಈ ರೀತಿ ಮನೆಯಿಂದ ಹೊರಡುವಾಗ ದೇವರ ಆಶೀರ್ವಾದ ತೆಗೆದುಕೊಂಡು ಹೊರಟರೆ ಆ ಕಾರ್ಯ ಸಿದ್ದಿ ಆಗುತ್ತದೆ.
ಇದರಂತೆ ಇನ್ನೂ ಮುಖ್ಯವಾದ ವಿಷಯ ಏನೆಂದರೆ ಪತ್ನಿಯಾದವಳು ಗಂಡನ ಪ್ರತಿಯೊಂದು ವಿಚಾರದಲ್ಲೂ ಗಮನ ಇಟ್ಟಿರಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಬಾರದು. ಕೆಟ್ಟ ಮಾರ್ಗದಿಂದ ಹಣ ಸಂಪಾದನೆ ಮಾಡುತ್ತಿದ್ದರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಮೋಸ ಮಾಡಿ ವ್ಯಾಪಾರ ಮಾಡುತ್ತಿದ್ದರೆ ಅದಕ್ಕೆಲ್ಲಾ ಸಹಕಾರ ಕೊಡಬಾರದು. ಯಾವುದೇ ಕೆಟ್ಟ ಗುಣಗಳು ಕಣ್ಣಿಗೆ ಬಿದ್ದರೂ ತಕ್ಷಣ ಅದನ್ನು ತಿದ್ದುವ ಸಂಸ್ಕಾರ ಹೆಂಡತಿಯಲ್ಲಿದ್ದರೆ ಮನೆ ಏಳಿಗೆ ಆಗುವುದರಲ್ಲಿ ಸಂಶಯವಿಲ್ಲ. ಇದೇ ರೀತಿ ಇನ್ನೂ ಅನೇಕ ಸುಲಭ ಮಾರ್ಗಗಳೂ ಇವೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.