ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿ ಆಗಿ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ನೀಡಿದ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಸದ್ಯಕ್ಕೀಗ ಕರ್ನಾಟಕದ ಮಹಿಳೆಯರು ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆಗಳ ಫಲಾನುಭವಿಗಳ ಆಗಲು ಅವಕಾಶ ಇದ್ದು ಕರ್ನಾಟಕದ ಗಡಿ ಒಳಗೆ ಅವರು ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳಲ್ಲೂ ಕೂಡ ಬಸ್ ಚಾರ್ಜ್ ನೀಡದೆ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ.
ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿರುವುದರಿಂದ ಈ ಯೋಜನೆ ಜಾರಿಗೆ ಬಂದ ದಿನದಿಂದಲೂ ಕೂಡ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಯೋಜನೆ ಕುರಿದಂತೆ ಸಾಕಷ್ಟು ಟ್ರೋಲ್ ಗಳು, ಮೀಮ್ಸ್ ಗಳು ಹರಿದಾಡುತ್ತಿದೆ.
ಇದರಿಂದ ಆಗುತ್ತಿರುವ ಅವಾಂತರಗಳ ಬಗ್ಗೆ ವಿಡಿಯೋಗಳನ್ನು ನೋಡಿ ನಕ್ಕಿದ್ದೇವೆ. ಯೋಜನೆ ಜಾರಿ ಆದ ಮೇಲೆ ಮಹಿಳಾ ಪ್ರಯಾಣಿಕರಿಗೂ ಮತ್ತು ನಿರ್ವಾಹಕರಿಗೂ ಆಗುತ್ತಿರುವ ಜಗಳಗಳ ಬಗ್ಗೆಯೂ ಕೂಡ ಗಂಭೀರವಾದ ವರದಿಯಾಗಿದೆ, ಕೆಲವೆಡೆ ಬಸ್ ಗಳು ಸಾಮಾನ್ಯಕ್ಕಿಂತ ವಿಪರೀತ ರಷ್ ಆಗುತ್ತಿದ್ದು ಇದಕ್ಕೆಲ್ಲ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವುದೇ ಕಾರಣ ಎನ್ನುವ ದೂರು ಕೂಡ ಕೇಳಿ ಬರುತ್ತಿದೆ.
ಇಷ್ಟೆಲ್ಲಾ ಪರ ಹಾಗೂ ವಿರೋಧಗಳ ನಡುವೆ ಕೂಡ ಯಶಸ್ವಿಯಾಗಿ ಈ ಯೋಜನೆ ಒಂದು ವಾರ ಪೂರೈಸಿದೆ. ಒಂದು ವಾರದಿಂದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ವಿರೋಧ ಪಕ್ಷಗಳು ಮತ್ತು ಇತರ ಪಕ್ಷಗಳ ಅನುಯಾಯಿಗಳು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಲೇ ಇದ್ದಾರೆ, ಸರ್ಕಾರವನ್ನು ದೂರುತ್ತಿದ್ದಾರೆ.
ಈ ಎಲ್ಲಾ ಅವಾಂತರಗಳ ನಡುವೆ ಇನ್ನೊಂದು ವಿಭಿನ್ನವಾದ ಘಟನೆ ಇಂದು ನಡೆದಿದೆ. ಅದೇನೆಂದರೆ, ಮಹಿಳೆಯರಿಗೆ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಇಡೀ ಬಸ್ ಅನ್ನೇ ಉಚಿತವಾಗಿ ಬುಕ್ ಮಾಡಿಕೊಳ್ಳಲು ಅಜ್ಜಿಯೊಬ್ಬರು ಬಂದು ಮಾಹಿತಿ ಕೇಂದ್ರದಲ್ಲಿ ವಿಚಾರಿಸಿದ್ದಾರೆ.
ಮೆಜೆಸ್ಟಿಕ್ ಮಾಹಿತಿ ಕೇಂದ್ರಕ್ಕೆ ಬಂದ ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಯಾದ ಸುನಂದ ಎನ್ನುವವರು ಎನ್ಕ್ವೈರಿ ಕೌಂಟರ್ ಅಲ್ಲಿ ಯಾವ ಯಾವ ಮಾರ್ಗಗಳಿಗೆ ಎಷ್ಟು ಬಸ್ ಗಳು ಇವೆ ಯಾವ ಸಮಯಕ್ಕೆ ಬರುತ್ತದೆ ಎನ್ನುವ ಎಲ್ಲಾ ಮಾಹಿತಿಯನ್ನು ಕಲೆಹಾಕಿ ಒಂದು ಪೇಪರಲ್ಲಿ ಬರೆದುಕೊಂಡಿದ್ದಾರೆ. ನಂತರ ಕಾರಣ ವಿಚಾರಿಸಿದಾಗ ತಮ್ಮ ಉದ್ದೇಶದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸುನಂದ ಎನ್ನುವ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ಕುಟುಂಬದ ಮಹಿಳೆಯರು ಮತ್ತು ಸ್ನೇಹಿತೆಯರನ್ನು ಸೇರಿಸಿ 20 ಜನರ ತಂಡವನ್ನು ಮಾಡಿಕೊಂಡಿದ್ದಾರಂತೆ. ಇವರ ಜೊತೆಗೆ ಇನ್ನು 20 ಮಂದಿಯನ್ನು ಸೇರಿಸಿಕೊಳ್ಳುವ ಪ್ಲಾನ್ ಮಾಡಿರುವ ಇವರು ನಾಲ್ಕೈದು ದಿನಗಳ ಕಾಲ ಕರ್ನಾಟಕದ ಇರುವ ಧಾರ್ಮಿಕ ಕ್ಷೇತ್ರಗಳಿಗೆ ಈ ಉಚಿತ ಬಸ್ ವ್ಯವಸ್ಥೆಯಲ್ಲಿ ಫ್ರೀ ಯಾಗಿ ಪ್ರಯಾಣ ಮಾಡಲು ನಿರ್ಧರಿಸಿದ್ದಾರಂತೆ.
ಅದಕ್ಕಾಗಿ ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಎಲ್ಲರೂ ಒಂದೇ ಬಸ್ ಅಲ್ಲಿ ಪ್ರಯಾಣಿಸಲು ಬುಕ್ ಮಾಡಿಕೊಳ್ಳಲು, ಸೀಟ್ ರಿಸರ್ವ್ ಮಾಡಿಕೊಳ್ಳಲು ಅವಕಾಶ ಇದೆಯಾ ಎನ್ನುವುದನ್ನು ವಿಚಾರಿಸಲು ಬಂದಿದ್ದಾರೆ. ಇವರ ಈ ಪ್ಲಾನಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.