ಗೃಹಿಣಿಯರು ಅಡುಗೆ ಮನೆಯಲ್ಲಿ ಈ ವಸ್ತುಗಳು ಎಂದೂ ಖಾಲಿ ಆಗದಂತೆ ನೋಡಿಕೊಳ್ಳಿ ನಿಮ್ಮ ಮನೆ ಏಳಿಗೆಯ ರಹಸ್ಯ ವಿಷಯ ಇವು.!

 

ಅಡುಗೆ ಮನೆ ಎನ್ನುವುದು ಅಡುಗೆ ಮಾಡುವ ಜಾಗ ಅಷ್ಟೇ ಅಲ್ಲ, ಇಡೀ ದಿನ ಆ ಕುಟುಂಬದ ಸದಸ್ಯರು ಲವಲವಿಕೆಯಿಂದ ನಗುನಗುತ ಓಡಾಡಿಕೊಂಡಿರಲು ಬೇಕಾದ ಎಲ್ಲಾ ಶಕ್ತಿಯ ಮೂಲ ಅಡುಗೆಮನೆ. ಅಡುಗೆ ಮನೆಯಲ್ಲಿ ರುಚಿಕರವಾದ ಆರೋಗ್ಯಕರವಾದ ಆಹಾರ ತಯಾರಾಗುವುದರ ಮೂಲಕ ಕುಟುಂಬ ಸದಸ್ಯರೆಲ್ಲರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ನಿರ್ಧಾರವಾಗುತ್ತದೆ.

ಇಂತಹ ಅಡುಗೆ ಮನೆಯ ಬಗ್ಗೆ ನಮ್ಮ ಹಿರಿಯರು ಅನೇಕ ನಂಬಿಕೆಗಳನ್ನು ಇಟ್ಟುಕೊಂಡು ಪಾಲಿಸಿಕೊಂಡು ಬಂದಿದ್ದಾರೆ. ಅಡಿಗೆಮನೆಯು ಅನ್ನಪೂರ್ಣೇಶ್ವರಿಯ ವಾಸಸ್ಥಳ ಆದ್ದರಿಂದ ಈ ಜಾಗ ಶುದ್ಧವಾಗಿರಬೇಕು. ಅಡುಗೆಮನೆ ಇಡೀ ಕುಟುಂಬದ ಏಳಿಗೆ ನಿರ್ಧಾರವಾಗುವ ಸ್ಥಳವು ಹೌದು, ಹಾಗಾಗಿ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದೂ ಖಾಲಿಯಾಗಬಾರದು ಎಂದು ಶಾಸ್ತ್ರವು ತಿಳಿಸುತ್ತದೆ.

● ಅವುಗಳಲ್ಲಿ ಮೊದಲನೆಯದಾಗಿ ಮನೆಯಲ್ಲಿ ನಾವು ಅಡುಗೆಗೆ ಬಳಸುವ ಹಿಟ್ಟುಗಳಾದ ಅಕ್ಕಿಹಿಟ್ಟು, ಗೋಧಿಹಿಟ್ಟು, ರಾಗಿಹಿಟ್ಟು ಇಂಥವುಗಳು ಯಾವುದೇ ಕಾರಣಕ್ಕೂ ಪೂರ್ತಿ ಖಾಲಿಯಾಗಲು ಬಿಡಬಾರದು. ಮನೆಯ ಗೃಹಣಿಯಾದವರು ಆ ಕಡೆ ಗಮನ ಕೊಟ್ಟು ಖಾಲಿ ಆಗುವ ಮುನ್ನವೇ ತರಿಸಿಕೊಳ್ಳಬೇಕು. ಹಿರಿಯರು ಹೇಳಿರುವ ಈ ನಿಯಮದ ಹಿಂದಿನ ಕಾರಣ ಸಾಕಷ್ಟು ಸಿಗುತ್ತದೆ, ಆದರೆ ಇದನ್ನು ತಪ್ಪದೆ ಪಾಲಿಸಿಕೊಂಡು ಬಂದರೆ ಆ ಕುಟುಂಬಕ್ಕೆ ಒಳಿತು.

● ಪ್ರತಿಯೊಬ್ಬರೂ ಕೂಡ ಅಡುಗೆಗೆ ಅರಿಶಿನ ಬಳಸುತ್ತಾರೆ, ಅರಿಶಿಣವು ಆಂಟಿ ಬಯೋಟೆಕ್ ಎಲ್ಲರಿಗೂ ಗೊತ್ತಿದೆ. ಇದು ಮಾತ್ರ ಅಲ್ಲದೆ ಅರಿಶಿಣದ ಜೊತೆ ಗುರು ಗ್ರಹವು ನೇರವಾಗಿ ಸಂಪರ್ಕ ಹೊಂದಿರುವುದರಿಂದ ಅಡುಗೆ ಮನೆಯಲ್ಲಿ ಅರಿಶಿನ ಪೂರ್ತಿ ಖಾಲಿ ಆಗುವಂತೆ ಬಿಡಬಾರದು ಇನ್ನು ಮುಂದೆ ಅದು ಖಾಲಿ ಆದ ಮೇಲೆ ತಂದರಾಯಿತು ಎಂದು ಅಸಡ್ಡೆ ಮಾಡಬೇಡಿ ಅದು ನಿಮ್ಮ ಕುಟುಂಬದ ಏಳಿಗೆಗೆ ಧಕ್ಕೆ ತರುತ್ತದೆ.

● ಅದೇ ರೀತಿ ಇಂದು ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಕೂಡ ಅಕ್ಕಿ ಹೆಚ್ಚು ಆಹಾರ ತಯಾರಿಸಲು ಬೇಕಾದ ಪದಾರ್ಥ. ಈ ಅಕ್ಕಿ ಡಬ್ಬ ಕೂಡ ಖಾಲಿ ಆಗಬಾರದು. ಅಕ್ಕಿ ಶುಕ್ರ ಗ್ರಹಕ್ಕೆ ಸಂಪರ್ಕ ಹೊಂದಿದೆ. ಒಂದು ವೇಳೆ ಅಡುಗೆ ಮನೆಯಲ್ಲಿ ಅಕ್ಕಿಯ ಡಬ್ಬ ಪೂರ್ತಿ ಖಾಲಿಯಾದರೆ ದೋಷ ಉಂಟಾಗುತ್ತದೆ. ಆ ದೋಷದಿಂದಾಗಿ ವಿನಾಕಾರಣ ಪ್ರತಿಪತ್ನಿ ನಡುವೆ ವಿರಸ, ಮನಸ್ತಾಪ ಉಂಟಾಗುವುದು ಮಾತ್ರವಲ್ಲದೆ ಬಡತನ ಕೂಡ ಬರುತ್ತದೆ. ಹಾಗಾಗಿ ಈ ರೀತಿ ಅಕ್ಕಿ ಡಬ್ಬ ಖಾಲಿ ಆಗುವಂತೆ ಮಾಡುವುದು ದರಿದ್ರ ಎಂದು ಹಿರಿಯರು ಹೇಳಿದ್ದಾರೆ.

● ಉಪ್ಪು ಇದಿಲ್ಲದೆ ಯಾವ ಆಹಾರ ಪದಾರ್ಥಕ್ಕೂ ರುಚಿ ಇರುವುದಿಲ್ಲ. ಉಪ್ಪಿಲ್ಲದ ಅಡುಗೆ ನೆನಸಿಕೊಳ್ಳುವುದು ಕೂಡ ಅಸಾಧ್ಯ. ಅದೇ ರೀತಿ ಮನೆಯಲ್ಲಿ ಉಪ್ಪು ಇರದೇ ಇರುವುದನ್ನು ಊಹಿಸಿಕೊಳ್ಳುವುದು ತಪ್ಪು ಯಾಕೆಂದರೆ ಉಪ್ಪು ಲಕ್ಷ್ಮಿಯ ಸ್ವರೂಪ ಆದಕಾರಣ ಉಪ್ಪಿನ ಡಬ್ಬಿ ಯಾವುದೇ ಕಾರಣಕ್ಕೂ ಖಾಲಿ ಆಗಲೇಬಾರದು. ಒಂದು ವೇಳೆ ಉಪ್ಪಿನ ಡಬ್ಬಿ ಖಾಲಿ ಆಗಿದ್ದರೆ ರಾಹುವಿನ ಕೆಟ್ಟ ದೃಷ್ಟಿ ಆ ಮನೆ ಮೇಲೆ ಬೀಳುತ್ತದೆ.

● ಮನೆಯಲ್ಲಿ ಅಡುಗೆ ಎಣ್ಣೆ ಕೂಡ ಯಾವುದೇ ಕಾರಣಕ್ಕೂ ಖಾಲಿ ಆಗಬಾರದು. ಯಾಕೆಂದರೆ ಇದು ಶನಿ ಗ್ರಹದ ಜೊತೆ ಸಂಪರ್ಕ ಹೊಂದಿದೆ. ಮನೆಯಲ್ಲಿ ಅಡುಗೆ ಎಣ್ಣೆ ಖಾಲಿಯಾದರೆ ಸದಸ್ಯರ ನಡುವೆ ಮನಸ್ತಾಪ, ಕಿರಿಕಿರಿ, ಜಗಳ ಉಂಟಾಗುತ್ತದೆ. ಇನ್ನು ಮುಂದೆ ಈ ವಿಷಯದಲ್ಲಿ ಎಚ್ಚರಿಕೆ ಇರಲಿ ಹಾಗೂ ಈ ಮೇಲೆ ತಿಳಿಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ ಮತ್ತು ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ.

Leave a Comment