ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಸಂಬಂಧಿ ಸಿದ ಕೆಲವೊಂದು ಮಾಹಿತಿಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದರಿಂದ ಹೆಚ್ಚಿನ ಪ್ರಯೋಜನವನ್ನು ಸಹ ಪಡೆದುಕೊಳ್ಳ ಬಹುದು ಎಂದು ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಮನೆಯಲ್ಲಿ ಯಾವ ಕೆಲವು ಕೆಲಸವನ್ನು ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಅದರಿಂದ ಆಗುವ ಲಾಭವೇನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಹಾಗೂ ನಾವು ಯಾವ ರೀತಿಯ ಕೆಲವು ತಪ್ಪುಗಳನ್ನು ಮಾಡುತ್ತೇವೆ ಹಾಗೂ ಅದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದನ್ನು ಸಹ ನೋಡೋಣ. ಮನೆಯಲ್ಲಿ ಪ್ರತಿಯೊಂದು ಕೆಲಸವನ್ನು ಸಹ ನಾವು ಇದೇ ರೀತಿಯಾಗಿ ಮಾಡಬೇಕು ಎನ್ನುವ ನಿಯಮಗಳು ಇರುತ್ತದೆ ಹಾಗೇನಾದರೂ ನಾವು ಅದನ್ನು ಅನುಸರಿಸದೇ ಇದ್ದರೆ.
ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಇದ ರಿಂದ ನಮ್ಮ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರು ತ್ತದೆ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಆರೋಗ್ಯದ ವಿಚಾರವಾಗಿ ಒಳ್ಳೆಯ ವಿಧಾನಗಳನ್ನು ಅನುಸರಿಸುವುದು ಮುಖ್ಯ ಹಾಗಾದರೆ ಯಾವ ಕೆಲವು ಕೆಲಸವನ್ನು ಮಾಡುವಾಗ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವುದನ್ನು ಸಹ ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ
* ಪ್ರತಿಯೊಬ್ಬರೂ ಕೂಡ ಸೊಪ್ಪಿನ ಸಾಂಬಾರ್ ಮಾಡುವಾಗ ಅದನ್ನು ಸೌಟಿನಿಂದ ಮಿಶ್ರಣ ಮಾಡುತ್ತೇವೆ ಆದರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು ಈ ರೀತಿ ಮಾಡುವುದರಿಂದ ಗಾಳಿಯಲ್ಲಿರುವ ಆಮ್ಲಜನಕವು ಸೊಪ್ಪು ತರಕಾರಿಗಳ ಜೀವಸತ್ವ ಗಳನ್ನು ನಾಶ ಮಾಡುತ್ತದೆ.
* ಹಣ್ಣು ಮತ್ತು ತರಕಾರಿಗಳನ್ನು ಯಾವುದೇ ಕಾರಣಕ್ಕೂ ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಬಾರದು.
* ಮೂಲಂಗಿ ಮತ್ತು ಕೋಸನ್ನು ಬೇಯಿಸುವಂತಹ ಸಮಯದಲ್ಲಿ ಸ್ವಲ್ಪ ಶುಂಠಿಯನ್ನು ಅದರ ಒಳಗಡೆ ಹಾಕಿ ಬೇಯಿಸುವುದರಿಂದ ಅದರಿಂದ ಬರುವ ವಾಸನೆ ದೂರವಾಗುತ್ತದೆ.
ಹೌದು ಎಲ್ಲರಿಗೂ ತಿಳಿದಿರುವಂತೆ ಮೂಲಂಗಿ ಮತ್ತು ಕೋಸನ್ನು ಬೆಳೆಸುವಂತಹ ಒಂದು ರೀತಿಯ ದುರ್ವಾಸನೆ ಬರುತ್ತದೆ ಆದರೆ ಅದರ ರುಚಿ ಮಾತ್ರ ಅದ್ಭುತ ಎಂದೇ ಹೇಳಬಹುದು ಆದರೆ ಕೆಲವೊಂದಷ್ಟು ಜನ ಅದರಿಂದ ಬರುವ ವಾಸನೆಯಿಂದ ಅದನ್ನು ತಿನ್ನುವುದನ್ನೇ ಬಿಟ್ಟಿರುತ್ತಾರೆ. ಆದರೆ ಮನೆಯಲ್ಲಿರುವ ಮಹಿಳೆಯರು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಅದರ ವಾಸನೆ ಸಂಪೂರ್ಣವಾಗಿ ದೂರವಾಗುತ್ತದೆ.
* ಕ್ಯಾರೆಟ್ ಅನ್ನು ಬೇಯಿಸಿ ಆಲೂಗಡ್ಡೆ ಬೇಯಿಸಿದಾಗ ನಾವು ಸಿಪ್ಪೆಯನ್ನು ಹೇಗೆ ತೆಗೆಯುತ್ತೇವೋ ಅದೇ ರೀತಿ ಕ್ಯಾರೆಟ್ ಸಿಪ್ಪೆಯನ್ನು ಸಹ ಸುಲಭವಾಗಿ ತೆಗೆಯಬಹುದು. ಇದು ಒಂದು ಸೂಪರ್ ಟಿಪ್ಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಸೌತೆಕಾಯಿ, ಸೀಮೆಬದನೆಕಾಯಿ, ಟೊಮೆಟೊ, ಬದನೆಕಾಯಿ, ಗಜ್ಜರಿ, ಕೋಸು, ಪಡವಲಕಾಯಿ ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ ಮುಂತಾದ ಶೀಘ್ರವಾಗಿ ಬೇಯುವ ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಬೇಡಿರಿ.
* ಗೆಡ್ಡೆ, ಗೆಣಸುಗಳನ್ನು ಸಿಪ್ಪೆಯ ಸಹಿತ ಬೇಯಿಸಬೇಕು ಏಕೆಂದರೆ ಸಿಪ್ಪೆ ಜೀವಸತ್ವಗಳನ್ನು ರಕ್ಷಿಸುತ್ತದೆ.
* ಸಾಧ್ಯವಾದಷ್ಟು ತರಕಾರಿಗಳ ಸಿಪ್ಪೆಯನ್ನು ತೆಗೆಯದೆ ಉಪಯೋಗಿಸ ಬೇಕು.
* ಹೂ ಕೋಸು ಬೇಯಿಸುವ ನೀರಿನಲಿ ಒಂದು ಚಮಚ ಸಕ್ಕರೆ ಹಾಕಿದರೆ ತರಕಾರಿ ಬಿಳಿ ಬೆಣ್ಣದಲ್ಲೇ ಉಳಿಯುತ್ತದೆ.
* ಈರುಳ್ಳಿ ಮತ್ತು ಕ್ಯಾರೆಟ್‌ಗಳನ್ನು ಬೇಯಿಸುವಾಗ ಅವುಗಳನ್ನು ಅಡ್ಡವಾಗಿ ಹೆಚ್ಚಿದರೆ ಮೃದುವಾಗಿ ಬೇಯುತ್ತವೆ.
* ಬೆಂಡೆಕಾಯಿ ಪಲ್ಯದಲ್ಲಿ, ಸೀಳಿಕ ಬಿಡದೆ ಇರಲು ಹೋಳುಗಳನ್ನು ಒಗ್ಗರಣೆ ಹಾಕಿದ ತಕ್ಷಣ ತಿಳಿ ಮಜ್ಜಿಗೆ ಚಿಮುಕಿಸಿರಿ.
* ಆಲೂಗಡ್ಡೆ ಬೇಯಿಸುವಾಗ ಗೆಡ್ಡೆಯ ನಡುವೆ ಫೋರ್ಕ್‌ನಿಂದ ಚುಚ್ಚಿದರೆ ಬೇಗ ಬೇಯುತ್ತದೆ.
* ಕೋಸಿನ ಮೇಲೆ ಒಂದು ಚೂರು ಬ್ರೆಡ್ ಇಟ್ಟು ಬೇಯಿಸಿದಾಗ ಕೋಸಿನ ವಾಸನೆ ಬೇಯುವಾಗ ಬರುವುದಿಲ್ಲ.
* ಆಲೂಗಡ್ಡೆ ಬೇಯಿಸುವಾಗ ನೀರಿಗೆ ಸ್ವಲ್ಪ ಎಣ್ಣೆಹಾಕಿದರೆ ಪಾತ್ರೆಯು ಅಲುಗುವುದಿಲ್ಲ.
* ಇಡಿಯಾದ ಬೀಟ್‌ರೂಟ್‌ಗಳನ್ನು ಹಾಗೆಯೇ ಬೇಯಿಸಿ ತೆಗೆದು ಬಿಸಿ ಇರುವಾಗಲೇ ಒಂದು ಕಾಗದದ ಮೇಲೆ ಇಟ್ಟು ಉರುಳಿಸಿ ಕಾಗದದ ಜೊತೆಗೆ ಅದರ ಸಿಪ್ಪೆಯೂ ಬರುತ್ತದೆ. ಹೀಗೆ ಮಾಡುವುದರಿಂದ ಕೈಗೆ ಬಣ್ಣ ತಗುಲುವುದಿಲ್ಲ.
* ಹಾಗಲಕಾಯಿಯ ಕಹಿ ಹೋಗಲು ಹಾಗಲಕಾಯಿಯ ಹೋಳುಗಳನ್ನು ಹುಣಸೇ ಹಣ್ಣಿನ ನೀರಿನಲ್ಲಿ ಬೇಯಿಸಿ ಆನಂತರ ಒಗ್ಗರಣೆ ಮಾಡಿ ಗೊಜ್ಜು ಮಾಡಬೇಕು.
* ಸಿಹಿ ಕುಂಬಳಕಾಯಿ ಮತ್ತು ಖರ್ಬೂಜದ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಸಿಪ್ಪೆ ತೆಗೆದು ಸಿಹಿತಿಂಡಿಗಳಿಗೆ ಉಪಯೋಗಿಸಬಹುದು.
* ಹೂ ಕೋಸು ಮತ್ತು ಮೂಲಂಗಿಗಳ ಎಳಸಾದ ಎಲೆಗಳನ್ನು ತರಕಾರಿಯೊಡನೆ ಬೇಯಿಸಿ ತಿಂದರೆ ಆಹಾರ ಜೀರ್ಣವಾಗುತ್ತದೆ.
* ಹುಣಸೇ ಚಿಗುರು, ಟೊಮೆಟೊಕಾಯಿ ಅಥವಾ ಮಾವಿನ ಕಾಯಿಯನ್ನು ಚಟ್ನಿಗೆ ಹುಳಿ ಬದಲು ಉಪಯೋಗಿಸಬಹುದು.