ಗೃಹಿಣಿಯರೇ ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.!

 

ಮನೆಯಲ್ಲಿ ಕೆಲವೊಂದಷ್ಟು ಜನ ಮಹಿಳೆಯರು ಬೆಳಗಿನ ಸಮಯ ಮಕ್ಕಳಿಗೆ ಸರಿಯಾದ ಸಮಯಕ್ಕೆ ತಿಂಡಿಯನ್ನು ಮಾಡಿಕೊಡಲು ಸಾಧ್ಯ ವಾಗುವುದಿಲ್ಲ ಎನ್ನುವ ಕಾರಣದಿಂದ ಹಿಂದಿನ ದಿನವೇ ಅಂದರೆ ರಾತ್ರಿ ಯ ಸಮಯವೇ ಎಲ್ಲಾ ರೀತಿಯ ತಯಾರಿಯನ್ನು ನಡೆಸಿಕೊಂಡಿರು ತ್ತಾರೆ. ಹೌದು ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸವನ್ನು ಮಾಡಿ ತಿಂಡಿ ಮಾಡಲು ತಡವಾಗುತ್ತದೆ.

ಎಂದು ತರಕಾರಿಯನ್ನು ಹೆಚ್ಚುವುದಾಗಲಿ ಸೊಪ್ಪುಗಳನ್ನು ಬಿಡಿಸಿಟ್ಟುಕೊಳ್ಳುವುದಾಗಲಿ ಅಥವಾ ಬೆಳಗಿನ ಸಮಯ ಯಾವುದೇ ರೀತಿಯ ತಿಂಡಿಯನ್ನು ತಯಾರು ಮಾಡಬೇಕು ಎಂದು ಕೊಂಡಿದ್ದರೆ ಅದಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಹಿಂದಿನ ದಿನವೇ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಾಡಬಾರದು ಹೌದು.

ಅದರಲ್ಲೂ ಬೆಳಗಿನ ಸಮಯ ನೀವೇನಾದರೂ ತಿಂಡಿಗೆ ಚಪಾತಿಯನ್ನು ಮಾಡಬೇಕು ಎಂದುಕೊಂಡಿದ್ದರೆ ಈ ರೀತಿಯ ತಪ್ಪನ್ನು ಮಾಡಲೇಬೇಡಿ ಹಾಗಾದರೆ ಯಾಕೆ ಬೆಳಗಿನ ಸಮಯ ಚಪಾತಿಯನ್ನು ಮಾಡಬೇಕು ಎಂದರೆ ಹಿಂದಿನ ದಿನ ಚಪಾತಿ ಹಿಟ್ಟನ್ನು ಕಲಸಬಾರದು ಇದಕ್ಕೆ ಕಾರಣ ಏನು ಎಂದು ನೋಡುವುದಾದರೆ.

• ಯಾವುದೇ ಕಾರಣಕ್ಕೂ ಬೆಳಿಗಿನ ತಿಂಡಿಗೆ ಅಂತ ರಾತ್ರಿಯೇ ಚಪಾತಿ ಹಿಟ್ಟನ್ನು ಕಲಸಿ ಇಡಬೇಡಿ ಕಾರಣ ಏನೇ ಇರಲಿ ಅರ್ಧ ತಾಸು ಬೇಗ ಎದ್ದು ಕಲಸಿಟ್ಟರೂ ಪರವಾಗಿಲ್ಲ ಆದರೆ ರಾತ್ರಿಯೇ ಕಲಸಿ ಇಡಲೇಬೇಡಿ ಶಾಸ್ತ್ರಗಳು ಅದನ್ನು ಪಿಂಡಕ್ಕೆ ಸಮ ಎಂದು ಹೇಳುತ್ತದೆ. ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಹಾನಿಕಾರಕ ನೆನಪಿರಲಿ.
• ಎಲ್ಲಾ ತರಕಾರಿಗಳನ್ನು ಹಚ್ಚಿಟ್ಟು ತೊಳೆಯುವ ಅಭ್ಯಾಸ ಇದಂತೂ ಬಹಳ ತಪ್ಪು ತರಕಾರಿಗಳನ್ನು ಮೊದಲು ತೊಳೆದು ನಂತರ ಹಚ್ಚಬೇಕು ಇದರಿಂದ ಪೂರ್ತಿ ಪೋಷಕಾಂಶ ತರಕಾರಿಯಲ್ಲೇ ಉಳಿಯುತ್ತದೆ.

• ಕತ್ತರಿಯನ್ನು ಯಾವುದಾದರು ಕಾರಣಕ್ಕೆ ಬಳಸುತ್ತೇವೆ ಆದರೆ ಅದನ್ನು ವಾಪಸ್ ಇಡುವಾಗ ಕತ್ತರಿಯ ಬಾಯಿಯನ್ನು ತೆರೆದಂತೆ ಇಡುತ್ತಾರೆ ಇಂತಹ ತಪ್ಪನ್ನು ಮಾಡಲೇಬೇಡಿ ಇದರಿಂದ ಮನೆಯಲ್ಲಿ ದುರಾದೃಷ್ಟಿ ಕಾಡುತ್ತದೆ.
• ಅಡುಗೆ ಮಾಡುವ ತರಾತುರಿಯಲ್ಲಿ ಮಸಿ ಬಟ್ಟೆಗಳಿಗೆ ಬೆಂಕಿ ತಗುಲು ತ್ತದೆ ಅಥವಾ iron ಮಾಡುವಾಗ ಯಾಮಾರಿ ಬಟ್ಟೆ ಸುಡುತ್ತದೆ ಇಲ್ಲವೇ ಏನೋ ಆಚಾತುರ್ಯವಾಗಿ ಬಟ್ಟೆ ಸುಟ್ಟಿರುತ್ತದೆ ಅಪ್ಪಿ ತಪ್ಪಿಯೂ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ ಅದನ್ನು ಬಿಸಾಡುವುದು ಉತ್ತಮ.

• ಯಾವುದೇ ಕಾರಣಕ್ಕೂ ಅರಿಶಿನ ಮತ್ತು ಉಪ್ಪನ್ನು ಒಂದೇ ಕಡೆ ಇಡಬೇಡಿ ಇದು ಒಳ್ಳೆಯದಲ್ಲ.
• ಕೆಲವರು ಅಳಿದು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಮತ್ತೆ ಮರೆತು ಬಿಡುತ್ತೀರಾ ಕೊನೆಗೆ ಅದು ಫ್ರಿಡ್ಜ್ ನಲ್ಲಿ ಕೊಳೆತು ನಾರು ಬಂದು ನಿಮಗೆ ತಿಳಿಯುವಷ್ಟರಲ್ಲಿ ನಿಮ್ಮ ಮನೆಗೆ ನೆಗೆಟಿವಿಟಿ ಹರಡಿರುತ್ತದೆ ಆದ್ದರಿಂದ ಆದಷ್ಟು ಎಚರಿಕೆಯಿಂದ ಇರಿ.

ಹಾಗೂ ಇದರ ಜೊತೆ ಈ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿಯೂ ಕೂಡ ಹಲವಾರು ತೊಂದರೆಗಳು ಉಂಟಾ ಗುತ್ತದೆ ಆದ್ದರಿಂದ ಫ್ರಿಡ್ಜ್ ನಲ್ಲಿ ಯಾವುದೇ ಆಹಾರ ಪದಾರ್ಥವನ್ನು ಇಟ್ಟು ಸೇವನೆ ಮಾಡಬಾರದು.
• ಕೆಲವರು ಹೊಸ ಪೊರಕೆ ತಂದ ಮೇಲೂ ಹಳೇ ಪೊರಕೆಯನ್ನು ಬಿಸಾಡುವುದಿಲ್ಲ ಇದು ನಿಮಗೆ ದುರಾದೃಷ್ಟವನ್ನು ಉಂಟು ಮಾಡುತ್ತದೆ.

• ಮನೆಯ ಒಳಗೆ ಶೋ ಗೆ ಅಂತ ಅಪ್ಪಿತಪ್ಪಿಯು ಮುಳ್ಳಿನಿಂದ ಕೂಡಿದಂತಹ ಗಿಡಗಳನ್ನು ಇಡಬೇಡಿ ಅದು ವಾಸ್ತು ದೋಷವನ್ನು ಮತ್ತು ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ. ಜೊತೆಗೆ ಮನೆಯವರ ನಡುವೆ ಒಳ್ಳೆಯ ಪ್ರೀತಿ, ವಿಶ್ವಾಸ ಬಾಂಧವ್ಯ ಇರುವುದಿಲ್ಲ ಒಂದೊಂದು ಮಾತಿಗೂ ಮನೆಯಲ್ಲಿ ಜಗಳಗಳು ಕದನಗಳು ಉಂಟಾಗಲು ಪ್ರಾರಂಭವಾಗುತ್ತದೆ ಆದ್ದರಿಂದ ಮುಳ್ಳಿನಿಂದ ಕೂಡಿದoತಹ ಯಾವುದೇ ಗಿಡವನ್ನು ಮನೆಯ ಒಳಗಡೆ ಇಡಬಾರದು.

Leave a Comment