ಟೂತ್ ಬ್ರಷ್ ಹಳೆಯದಾಗಿದ್ದರೆ ಬಿಸಾಕಬೇಡಿ, ಈ 11 ಕೆಲಸಗಳಿಗೆ ಸಹಾಯಕ್ಕೆ ಬರುತ್ತದೆ ನೋಡಿ.

ಕಸದಿಂದ ರಸ ಎನ್ನುವ ಮಾತುಗಳನ್ನು ಕೇಳಿದ್ದೇವೆ. ಕೇಳುವುದಷ್ಟೇ ಅಲ್ಲದೆ ಸಾಧ್ಯವದಷ್ಟು ನಾವು ಅದನ್ನು ಪಾಲಿಸಲೇಬೇಕು. ಯಾಕೆಂದರೆ ಈ ದುಬಾರಿ ದುನಿಯಾದಲ್ಲಿ ಯಾವ ವಸ್ತುವೂ ಕೂಡ ಕಡಿಮೆ ಬೆಲೆಗೆ ಸಿಗುವುದಿಲ್ಲ. ಒಂದು ವಸ್ತುವನ್ನು ಒಂದು ಉಪಯೋಗಕ್ಕಾಗಿ ತೆಗೆದುಕೊಳ್ಳುವ ಬದಲು ಮಲ್ಟಿಪಲ್ ಯೂಸ್ ಆಗುವ ವಸ್ತುಗಳನ್ನು ಖರೀದಿಸುವುದು ಕೂಡ ಹಣ ಉಳಿಸುವ ಟೆಕ್ನಿಕ್.

ಇದರ ಜೊತೆಗೆ ಯಾವುದಾದರೂ ಒಂದು ಕಾರಣಕ್ಕೆ ತೆಗೆದುಕೊಂಡಿದ್ದ ವಸ್ತುವನ್ನು ಅದರ ಉಪಯೋಗ ಮುಗಿದ ಬಳಿಕ ಅಥವಾ ಆ ವಸ್ತುವಿನ ಇಂದ ಇನ್ನು ಮುಂದೆ ಆ ಕೆಲಸ ಆಗುವುದಿಲ್ಲ ಎನ್ನುವ ಕಾರಣಕ್ಕೆ ಕಸಕ್ಕೆ ಹಾಕುವ ಬದಲು ಅದನ್ನು ಬೇರೆ ಕೆಲಸಗಳಿಗೆ ಉಪಯೋಗ ಆಗುವಂತೆ ಮಾರ್ಪಡಿಸಿಕೊಳ್ಳಬೇಕು. ಇದರಿಂದ ಕೂಡ ತಕ್ಕಮಟ್ಟಿಗೆ ಗೃಹಿಣಿಯರು ಮನೆ ಖರ್ಚಿನ ಉಳಿತಾಯ ಮಾಡಬಹುದು ಭಾರತ ದೇಶ ಮಹಿಳೆಯರಿಗೆ ಈ ಕಲೆ ಹುಟ್ಟಿನಿಂದಲೇ ಬಂದಿದೆ ಎಂದು ಹೇಳಬಹುದು. ಯಾಕೆಂದರೆ ನಮ್ಮಲ್ಲಿ ಮಧ್ಯಮ ವರ್ಗದಿಂದ ಬಂದವರಾದ್ದರಿಂದ ಈ ರೀತಿ ಹಣ ಉಳಿಸುವ ಉಳಿತಾಯಗಳು ರಕ್ತದಲ್ಲಿ ಬಂದಿದೆ ಎಂದರು ತಪ್ಪಾಗಲಾರದು. ಒಬ್ಬರನ್ನ ನೋಡಿ ಒಬ್ಬರು, ಒಬ್ಬರಿಂದ ಕೇಳಿ ಮತ್ತೊಬ್ಬರು ಎಲ್ಲರೂ ಕೂಡ ಈ ಟೆಕ್ನಿಕ್ ಬಳಸಿಕೊಂಡು ಸಾಧ್ಯವಾದಷ್ಟು ಮನೆ ಹಣ ಉಳಿತಾಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಈಗ ಈ ಅಂಕಣದಲ್ಲಿ ಟೂತ್ ಬ್ರಷ್ ಉಪಯೋಗ ಮುಗಿದ ಬಳಿಕ ಅದನ್ನು ಬಳಸಿಕೊಂಡು ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಕೆಲ ಟಿಪ್ಸ್ ಕೊಡುತ್ತಿದ್ದೇವೆ. ನಾವು ಟೂತ್ ಬ್ರಷ್ ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬಳಸಬೇಕು ಎಂದು ದಂತ ವೈದ್ಯರು ಸಲಹೆ ಕೊಡುತ್ತಾರೆ. ಆದರೆ ಮೂರು ತಿಂಗಳಿಗೆ ಬಿಸಾಡುವಷ್ಟು ಬ್ರಷ್ ಹಳೆಯದಾಗಿಲ್ಲ ಎಂದರೆ ಅದನ್ನು ಕಸಕ್ಕೆ ಹಾಕಲು ಮನಸಾಗುವುದಿಲ್ಲ. ಈಗಿನ ಕಾಲದಲ್ಲಿ ಬ್ರಷ್ ಅನ್ನು ಕೂಡ ಬ್ರಾಂಡೆಡ್ ಕಂಪನಿ ಗಳಿಂದ ತೆಗೆದುಕೊಳ್ಳುವುದರಿಂದ ದುಬಾರಿ ಬೆಲೆ ಕೊಟ್ಟು ತಂದ ಬ್ರಷ್ ಉಪಯೋಗ ಮುಗಿದ ಬಳಿಕ ಅವುಗಳನ್ನು ಬಳಸಿಕೊಂಡು ಈ ಕೆಲಸಗಳನ್ನು ಮಾಡಬಹುದು.

● ಟೂತ್ ಬ್ರಷ್ ಹೆಡ್ ಟಿಪ್ ಅನ್ನು ಕಟ್ ಮಾಡಿ ಅದನ್ನು ಕ್ಲೀನಿಂಗ್ ಬ್ರಷ್ ಅಥವಾ ಪೇಂಟಿಂಗ್ ಪ್ರೆಸ್ ತರ ಅಂಟಿಸಿಕೊಳ್ಳುವ ಮೂಲಕ ಕೀಬೋರ್ಡ್ಗಳ ಮೇಲೆ ಆಗಿರುವ ಧೂಳನ್ನು ನೀಟಾಗಿ ಸ್ವಚ್ಛ ಮಾಡಬಹುದು.
● ಟೂತ್ ಬ್ರಷ್ ಹೆಡ್ ಕೆಳಗೆ ಸ್ವಲ್ಪ ಬಿಸಿ ಮಾಡಿ ವಿ ಶೇಪ್ ಅಲ್ಲಿ ಬೆಂಡ್ ಮಾಡಿಕೊಳ್ಳುವುದರಿಂದ ಮಿಕ್ಸಿಯ ಜಾರ್ ಹಾಕುವ ಭಾಗದಲ್ಲಿ ನೀಟಾಗಿ ಕ್ಲೀನ್ ಮಾಡಬಹುದು. ಬೇರೆ ಯಾವ ವಸ್ತುವಿನಿಂದಲೂ ಕೂಡ ಈ ರೀತಿ ಮೂಲೆ ಮೂಲೆಗಳನ್ನು ಕ್ಲೀನ್ ಮಾಡಲು ಸಾಧ್ಯವಿಲ್ಲ.
● ಈ ರೀತಿ ವಿ ಶೇಪಲ್ಲಿ ಬ್ರಷ್ ಅನ್ನು ಬೆಂಡ್ ಮಾಡಿದ ಮೇಲೆ ಅದನ್ನು ಸ್ವಲ್ಪ ಡೆಕೋರೇಟ್ ಮಾಡಿ ಹಾಕಿದರೆ ಹ್ಯಾಂಗಿಂಗ್ ಕ್ಲಿಪ್ ತರ ಬಳಸಬಹುದು.

● ಅನಾದಿ ಕಾಲದಿಂದಲೂ ಕೂಡ ಟೂತ್ ಬ್ರಷ್ ಗಳನ್ನು ಬಳಸಿಕೊಂಡು ಬಾಚಣಿಕೆಗಳನ್ನು ಕ್ಲೀನ್ ಮಾಡುವ ಪದ್ಧತಿ ರೂಢಿಯಲ್ಲಿ ಇದೆ.
● ಮಕ್ಕಳ ಎರೇಸರ್ ಮೇಲೆ ಕೂಡ ಡಬಲ್ ಸೈಡ್ ಗಮ್ ಟೇಪ್ ಹಾಕಿ ಟೂತ್ ಬ್ರಷ್ ನ ಹೆಡ್ ಪಾರ್ಟ್ ಕಟ್ ಮಾಡಿ ಅಟಿಸಿದರೆ ಮಕ್ಕಳು ಎರೇಸ್ ಮಾಡಿದ್ದನ್ನು ನೀಟಾಗಿ ಒರೆಸಬಹುದು.
● ನಾಲ್ಕೈದು ಟೂತ್ ಬ್ರಷ್ ಗಳ ಹೆಡ್ ಪಾರ್ಟ್ ಕಟ್ ಮಾಡಿ ಅವುಗಳನ್ನು ಒಂದು ಮರದ ಪೀಸಿಗೆ ಅಂಟಿಸುವ ಮೂಲಕ ಡೋರ್ ಮ್ಯಾಟ್ ಗಳು ಹಾಗೂ ಮೆಶ್‌ಗಳನ್ನು ಕ್ಲೀನ್ ಮಾಡಬಹುದು.

● ಎರಡು ಟೂತ್ ಬ್ರಷ್ ತೆಗೆದುಕೊಂಡು ಹೆಡ್ ಪಾರ್ಟ್ ಕಟ್ ಮಾಡಿ ನಂತರ ಅವೆರಡನ್ನು ಒಂದು ರಬ್ಬರ್ ಸಹಾಯದಿಂದ ಜೋಡಿ ಮಾಡಿ ಅವುಗಳ ಮಧ್ಯೆ ಟೂತ್ಪೇಸ್ಟ್ ಖಾಲಿ ಆದ ಸಂದರ್ಭದಲ್ಲಿ ಅದನ್ನು ಪ್ರೆಸ್ ಮಾಡಲು ಬಳಸಬಹುದು.
● ಸ್ವಿಚ್ ಬೋರ್ಡ್ ಗಳನ್ನು ಕ್ಲೀನ್ ಮಾಡುವ ಸಮಯದಲ್ಲಿ ಟೂತ್ ಬ್ರಷ್ ಒದ್ದೆ ಮಾಡಿ ಅದಕ್ಕೆ ಪೇಸ್ಟ್ ಹಾಕಿ ಕ್ಲೀನ್ ಮಾಡಿ ಬಟ್ಟೆಯಿಂದ ಒರೆಸಿದರೆ ನೀಟಾಗಿ ಕ್ಲೀನ್ ಆಗುತ್ತದೆ. ಆದರೆ ಕ್ಲೀನ್ ಮಾಡುವ ಮುಂಚೆ ಮೆನ್ ಸ್ವಿಚ್ ಅನ್ನು ಆಫ್ ಮಾಡಿರಬೇಕು. ಕ್ಲೀನ್ ಮಾಡಿದ ಮೇಲೆ ಅದು ಒಣಗಿದ ನಂತರವೇ ಆನ್ ಮಾಡಬೇಕು.

Leave a Comment