ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!

ಸಂ’ಕ’ಟ ಬಂದಾಗ ವೆಂಕಟರಮಣ ಎನ್ನುವ ಮಾತೇ ಇದೆ. ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ನಮ್ಮಿಂದ ನಿಭಾಯಿಸಲು ಆಗಲಿಲ್ಲ ಎಂದಾಗ ನಾವು ಸಹಾಯಕ್ಕಾಗಿ ಮನುಷ್ಯರ ಬದಲು ದೇವರನ್ನು ನಂಬುತ್ತೇವೆ. ಎಲ್ಲ ಭಾರವನ್ನು ಆತನ ಮೇಲೆ ಹಾಕುತ್ತೇವೆ. ಈಗಿನ ಕಾಲದಲ್ಲಿ ಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಆರ್ಥಿಕ ಸಮಸ್ಯೆಯೇ ಸಾ’ಲ ಹೆಚ್ಚಾಗುವುದು, ಪಡೆದುಕೊಂಡ ಸಾಲವನ್ನು ತೀರಿಸಲು ಆಗದೆ ಇರುವುದು.

ಅಥವಾ ಆದಾಯದ ಮೂಲ ಕಡಿಮೆ ಆಗುವುದು ಈ ರೀತಿ ಹಣಕಾಸಿನ ಸಮಸ್ಯೆ ಎದುರಾದಾಗ ನಾವು ಹಣದ ದೇವತೆಯಾದ ಲಕ್ಷ್ಮಿ ಹಾಗೂ ಲಕ್ಷೀಪತಿ ವೆಂಕಟೇಶ್ವರನನ್ನು ನೆನೆಯುತ್ತೇವೆ. ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ ದಕ್ಷಿಣ ಭಾರತದ ಎಲ್ಲರೂ ಕೂಡ ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಪರಿಹಾರಕ್ಕೆ ಬೇಡಿಕೊಳ್ಳುತ್ತಾರೆ.

ಎಲ್ಲರಿಗೂ ಕೂಡ ಅಷ್ಟು ದೂರ ಪ್ರಯಾಣ ಮಾಡಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಸಮಯದ ಅಭಾವ ಅಥವಾ ಮತ್ತಿತರ ಕಾರಣಗಳಿಂದ ನೀವು ತಿರುಪತಿಗೆ ಹೋಗಲು ಸಾಧ್ಯವಾಗದೆ ಇದ್ದರೆ ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಬೆಂಗಳೂರಿನಲ್ಲಿರುವ ಈ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ ಸಾಕು. ನಿಮಗೆ ತಿರುಪತಿಗೆ ಹೋಗಿ ಬಂದ ಅನುಭವ ಆಗುತ್ತದೆ.

ಬೆಂಗಳೂರಿನ ಬೆಳ್ಳಂದೂರು ಏರಿಯಾದಲ್ಲಿರುವ ಬೆಳ್ಳಂದೂರು ಕೆರೆ ಪಕ್ಕದಲ್ಲಿರುವ ಈ ತಿರುಪತಿ ವೆಂಕಟೇಶ್ವರ ದೇವಸ್ಥಾನವು ಬಹಳ ಫೇಮಸ್ ಆಗಿದೆ. ಈ ದೇವಸ್ಥಾನವನ್ನು ಪೂರ್ತಿ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ಈ ದೇವಸ್ಥಾನದ ಪ್ರತಿಯೊಂದು ಕೆತ್ತನೆ ಹಾಗೂ ವಿನ್ಯಾಸ ಎಲ್ಲವೂ ಸಹ ತಿರುಪತಿಯಲ್ಲಿರುವ ತಿಮ್ಮಪ್ಪನ ದೇವಸ್ಥಾನದ ವಾಸ್ತುಶಿಲ್ಪ ಶೈಲಿಯಲ್ಲಿಯೇ ಇದೆ ಎನ್ನುವುದು ವಿಶೇಷ.

ಸ್ವತಂತ್ರ ಬಂದ ನಂತರ ಬೆಂಗಳೂರಿನಲ್ಲಿ ಪೂರ್ತಿ ಕಲ್ಲಿನಿಂದಲೇ ಕಟ್ಟಿಸಲಾದ ಒಂದೇ ದೇವಸ್ಥಾನ ಇದು, ತಿರುಪತಿಯಲ್ಲಿರುವ ಪ್ರಧಾನ ಅರ್ಚಕರೇ ಬಂದು ಇಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಿಸಿದ್ದಾರೆ. ಈ ದೇವಸ್ಥಾನದ ಮೂಲ ದೇವರು ತಿರುಪತಿ ತಿಮ್ಮಪ್ಪ ಆದ್ದರಿಂದ ಶನಿವಾರದಂದು ಈ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ.

ಅರ್ಧ ತಾಸು ಕಾದ ಬಳಿಕ ಮಾತ್ರ ಶನಿವಾರ ಸಂಜೆ ಇಲ್ಲಿ ವೆಂಕಟೇಶ್ವರನ ದರ್ಶನ ಸಿಗುತ್ತದೆ ಅಷ್ಟು ಜನಜಂಗುಳಿ ಇಲ್ಲಿ ಸೇರಿರುತ್ತದೆ. ಈ ಎಲ್ಲಾ ಅನುಭವದಿಂದ ವೈಕುಂಠಕ್ಕೆ ಹೋದ ರೀತಿ ಫೀಲ್ ಆಗುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ದೋಸೆಯನ್ನು ಜೊತೆಗೆ ರಸಾಯನವನ್ನು ಪ್ರಸಾದವಾಗಿ ಕೊಡುತ್ತಾರೆ, ಶನಿವಾರ ಬಂದವರಿಗೆ ಮಾತ್ರ ವಿಶೇಷ ಪ್ರಸಾದವಾದ ತಿರುಪತಿ ಲಡ್ಡು ಸಿಗುತ್ತದೆ.

ವಾರದ ಎಲ್ಲಾ ದಿನಗಳು ಕೂಡ ಈ ದೇವಸ್ಥಾನ ತೆರೆದಿರುತ್ತದೆ. ಬಹಳ ವಿಶಾಲವಾದ ದೇವಸ್ಥಾನವಾದ ಮುಂಭಾಗದಲ್ಲಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಬಹಳ ನೆಮ್ಮದಿಯ ತಾಣ ಎಂದರೆ ಈ ವೆಂಕಟೇಶ್ವರ ದೇವಸ್ಥಾನವೇ ಎನ್ನುವಷ್ಟು ದೇವಸ್ಥಾನದಲ್ಲಿ ಪ್ರಶಾಂತ ವಾತಾವರಣ ಇದೆ.

ಈ ದೇವಸ್ಥಾನಕ್ಕೆ ಹೋಗಿ ಬಂದರೆ ಒಂದು ಸಕಾರಾತ್ಮಕ ಅನುಭವವಾಗುತ್ತದೆ. ವೆಂಕಟೇಶ್ವರ ಸನ್ನಿಧಾನದ ಜೊತೆ ಲಕ್ಷ್ಮಿ, ಹನುಮ ಮತ್ತು ಗಣೇಶನಿಗೂ ಪ್ರತ್ಯೇಕ ಗುಡಿಗಳಿವೆ. ಪ್ರಥಮ ಪೂಜೆಗೆ ಅಧಿಪತಿ ಗಣೇಶನ ದರ್ಶನದ ಬಳಿಕ ಉಳಿದ ದೇವರುಗಳ ದರ್ಶನ. ಇಷ್ಟು ವಿಶೇಷವಾದ ಈ ದೇವಸ್ಥಾನಕ್ಕೆ ಸಾ’ಲ ಹೆಚ್ಚಾದವರು ಭೇಟಿ ಕೊಟ್ಟರೆ ಆದಷ್ಟು ಬೇಗ ಋಣ ಮುಕ್ತರಾಗಲು ದಾರಿ ಸಿಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳಲ್ಲಿದೆ. ತಪ್ಪದೇ ನೀವು ಸಹಾ ಒಮ್ಮೆ ಈ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ಕೊಡಿ.

Leave a Comment