ಸಾಮಾನ್ಯವಾಗಿ ಪ್ರತಿಯೊಬ್ಬರ ಬಟ್ಟೆಗಳು ಕೂಡ ಒಂದಲ್ಲ ಒಂದು ಕಾರಣದಿಂದ ತೂತು ಆಗಿರುತ್ತದೆ ಅಥವಾ ಯಾವುದಾದರೂ ಜಾಗಕ್ಕೆ ಸಿಕ್ಕಿ ಹರಿದು ಹೋಗಿರುತ್ತದೆ. ಅದರಲ್ಲೂ ಹೆಚ್ಚು ಸಮಯಗಳ ಕಾಲ ಒಂದು ಬಟ್ಟೆಯನ್ನು ನೀರಿನಲ್ಲಿ ಹಾಗಿದ್ದರೆ ಆ ಬಟ್ಟೆ ತೂತಾಗಿ ಕಾಣುತ್ತದೆ ಆದರೆ ಕೆಲವೊಂದಷ್ಟು ಜನ ಅದನ್ನು ಮತ್ತೆ ಹಾಕಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಅದನ್ನು ಬೇರೆ ಕೆಲಸಕ್ಕೆ ಉಪಯೋಗಿಸುತ್ತಾರೆ.
ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ಆಚೆ ಹಾಕುತ್ತಾರೆ ಆದರೆ ಈ ರೀತಿಯ ಯಾವುದೇ ರೀತಿಯ ಬಟ್ಟೆ ತೂತಾಗಿದ್ದರೆ ಅಥವಾ ಹರಿದು ಹೋಗಿದ್ದರೆ ಅದನ್ನು ಇನ್ನು ಮುಂದೆ ಆಚೆ ಹಾಕುವ ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಹೌದು ಇದಕ್ಕೆ ಒಂದು ಸುಲಭವಾದಂತಹ ವಿಧಾನವನ್ನು ಮಾಡಿದರೆ ನೀವು ನಿಮ್ಮ ಬಟ್ಟೆಯನ್ನು ಮತ್ತೆ ಪುನರ್ ಬಳಕೆ ಮಾಡಬಹುದು.
ಹಾಗಾದರೆ ಹರಿದುಹೋಗಿರುವಂತಹ ಅಥವಾ ತೂತು ಆಗಿರುವಂತಹ ಬಟ್ಟೆಯನ್ನು ಹೇಗೆ ಸರಿ ಮಾಡುವುದು, ಹಾಗೂ ಯಾವುದೇ ರೀತಿಯ ಸೂಜಿ ದಾರ ಇಲ್ಲದೆ ಅದನ್ನು ಹೇಗೆ ಸರಿಪಡಿಸಿ ಮತ್ತೆ ಉಪಯೋಗಿಸ ಬಹುದು ಅದನ್ನು ಹೇಗೆ ಮಾಡುವುದು ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ವಸ್ತುಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಸಾಮಾನ್ಯವಾಗಿ ಮಹಿಳೆಯರು ಬಟ್ಟೆಯನ್ನು ಜೋರಾಗಿ ಎತ್ತಿ ಒಗೆಯುವುದರಿಂದ ಅಥವಾ ಹೆಚ್ಚಿನ ಸಮಯ ಸೋಪ್ ಪೌಡರ್ ನಲ್ಲಿ ಬಟ್ಟೆಯನ್ನು ನೆನೆ ಹಾಕಿ ಆನಂತರ ಬಟ್ಟೆ ಒಗೆಯುವುದರಿಂದ ಈ ರೀತಿಯ ತೂತುಗಳು ಆಗುತ್ತಿರುತ್ತದೆ.
ಆದ್ದರಿಂದ ಹೆಚ್ಚಿನ ಸಮಯ ಯಾವುದೇ ಬಟ್ಟೆಯನ್ನು ನೀರಿನಲ್ಲಿ ಇಡಬಾರದು. ಇದನ್ನು ಮೊದಲು ಅನುಸರಿಸುವುದು ಒಳ್ಳೆಯದು.
ಹಾಗಾದರೆ ಆ ಬಟ್ಟೆಯನ್ನು ಹೇಗೆ ಸರಿಪಡಿಸುವುದು ಎಂದು ನೋಡುವುದಾದರೆ.
ಹಾಗೂ ಈ ಒಂದು ಬಟ್ಟೆಯನ್ನು ಸರಿಪಡಿಸುವುದಕ್ಕೆ ಬೇಕಾಗುವ ಬಹಳ ಮುಖ್ಯವಾದಂತಹ ಪದಾರ್ಥ ಯಾವುದು ಎಂದರೆ ಬಕ್ರಂ ಅಥವಾ ಫ್ಯೂಸಿಂಗ್ ಪೇಪರ್. ಇದು ಬಟ್ಟೆಯ ರೀತಿಯಲ್ಲಿಯೇ ಇದ್ದು ಇದನ್ನು ನೀವು ಬಟ್ಟೆ ಹೊಲಿಯುವಂತಹ ಅಂಗಡಿಗಳಲ್ಲಿ ಪಡೆಯಬಹುದು ಅಥವಾ ಆನ್ಲೈನ್ ನಲ್ಲಿ ಬುಕ್ ಮಾಡುವುದರ ಮೂಲಕವೂ ಸಹ ಇದನ್ನು ನೀವು ಸುಲಭವಾಗಿ ಪಡೆಯಬಹುದು.
ಇದು ನೋಡುವುದಕ್ಕೆ ಬಟ್ಟೆಯ ರೀತಿಯಲ್ಲಿಯೇ ಇದ್ದು ಇದನ್ನು ಉಪಯೋಗಿಸಿ ಹರಿದು ಹೋಗಿರುವಂತಹ ಅಥವಾ ತೂತು ಆಗಿರುವಂತಹ ಬಟ್ಟೆಯನ್ನು ಸರಿಪಡಿಸುವುದು ಬಹಳ ಸುಲಭ ಎಂದು ಹೇಳಬಹುದು. ಮೊದಲು ಈ ಬಕ್ರಂ ಪೇಪರ್ ಅನ್ನು ಬಟ್ಟೆ ಹರಿದಿರುವಂತಹ ಜಾಗದಲ್ಲಿ ಎರಡು ಪೀಸ್ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿ ನುಣುಪಾಗಿ ಇರುತ್ತದೆ.
ಅದನ್ನು ಬಟ್ಟೆಯ ಕೆಳಭಾಗದಲ್ಲಿ ಇಟ್ಟು ಬಟ್ಟೆಯನ್ನು ಸ್ವಲ್ಪ ಹತ್ತಿರ ಮಾಡಿ ಐರನ್ ಬಾಕ್ಸ್ ಅನ್ನು ಕಡಿಮೆ ಶಾಖದಲ್ಲಿ ಇಟ್ಟು ಐರನ್ ಮಾಡಬೇಕು ಈ ರೀತಿ ಮಾಡುವುದರಿಂದ ಆ ಒಂದು ಬಕ್ರಮ್ ಅಂದರೆ ಫ್ಯೂಸಿಂಗ್ ಗೆ ಬಟ್ಟೆ ಅಂಟಿಕೊಳ್ಳುತ್ತದೆ ಈ ರೀತಿ ಮಾಡುವುದರಿಂದ ಬಟ್ಟೆ ಹರಿದಿರುವುದು ಅಥವಾ ತೂತಾಗಿರುವುದು ಮುಚ್ಚುತ್ತದೆ ಆನಂತರ ನೀವು ಯಾವ ಜಾಗದಲ್ಲಿ ಈ ರೀತಿಯಾಗಿತ್ತು ಎಂದು ಹುಡುಕಿದರೂ ಸಹ ಗೊತ್ತಾಗುವುದಿಲ್ಲ.
ಅದೇ ನೀವು ಬಟ್ಟೆ ಹರಿದಿರುವಂತಹ ತೂತು ಆಗಿರುವಂತಹ ಸ್ಥಳದಲ್ಲಿ ದಾರದ ಸಹಾಯದಿಂದ ಹೊಲೆದರೆ ಅದು ಅಸಹ್ಯವಾಗಿ ಕಾಣುತ್ತದೆ ಅದು ಅಷ್ಟು ಚೆನ್ನಾಗಿ ಕಾಣುವುದಿಲ್ಲ ಅದರ ಬದಲು ಈ ಒಂದು ವಿಧಾನವನ್ನು ಅನುಸರಿಸುವುದು ಒಳ್ಳೆಯದು.