ವರಾಹಿ ತಾಯಿಯ ಬಗ್ಗೆ ನಾಡಿನ ಅನೇಕರಿಗೆ ತಿಳಿದೇ ಇದೆ. ದೇವಿಯ ರೂಪ ಹಾಗೂ ಹಂದಿಯ ಮುಖ ಹೊಂದಿರುವ ಈ ತಾಯಿಯನ್ನು ಭಕ್ತಿಯಿಂದ ಪಂಚಪೂಜಾದಿಯಿಂದ ಪ್ರಾರ್ಥಿಸಿದರೆ ಅವರ ಎಲ್ಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ. ಹೆಚ್ಚಿನ ಜನರು ಈ ವರಾಹಿ ಅಮ್ಮನನ್ನು ತಮ್ಮ ಗೊಂದಲಗಳಿಗೆ ಪರಿಹಾರ ಕೇಳುವ ಸಲುವಾಗಿ ಪೂಜಿಸುತ್ತಾರೆ. ಪುರಾಣಗಳ ಪ್ರಕಾರ ಭೂಮಿ ಮೇಲೆ 330 ಕೋಟಿ ದೇವತೆಗಳು ಇದ್ದಾರೆ.
ಒಬ್ಬೊಬ್ಬರಿಗೂ ಕೂಡ ಒಂದೊಂದು ರೀತಿಯ ಕ್ರಮದಿಂದ ಪೂಜೆ ಮಾಡಿದರೆ ಇಷ್ಟ ಆಗುತ್ತದೆ. ಆ ದೇವರ ಅನುಗ್ರಹ ಆಗಬೇಕು ಎಂದರೆ ಅವರಿಗೆ ಇಷ್ಟವಾದ ಹಾದಿಯಲ್ಲಿ ಪೂಜಿಸಿ ಪ್ರಾರ್ಥಿಸಬೇಕು. ಹಾಗೆಯೆ ವರಾಹಿ ಅಮ್ಮನಿಗೂ ಕೂಡ ಪೂಜಿಸುವುದಕ್ಕೆ ಒಂದು ಪ್ರತ್ಯೇಕ ವಿಧಾನ ಇದೆ. ಈ ವಿಶೇಷ ರೀತಿಯಲ್ಲಿ ತಾಯಿಯನ್ನು ಪ್ರಾರ್ಥಿಸುವುದರಿಂದ ನಿಮ್ಮ ಸಮಸ್ಯೆ ಖಂಡಿತ ಪರಿಹಾರ ಆಗುತ್ತದೆ.
ಜೊತೆಗೆ ಜನರು ಒಂದೊಂದು ಸಮಸ್ಯೆಗೆ ಒಂದೊಂದು ದೇವರನ್ನು ಪೂಜಿಸುತ್ತಾರೆ. ವಿದ್ಯೆಗಾಗಿ ಸರಸ್ವತಿ, ಶಕ್ತಿಗಾಗಿ ದುರ್ಗೆ, ಹಣಕ್ಕಾಗಿ ಲಕ್ಷ್ಮಿ ವಿಷ್ಣು ವೆಂಕಟೇಶ್ವರ, ಅರಿವಿಗಾಗಿ ಗುರುವಿನ ಮೊರೆ ಹೋಗುತ್ತಾರೆ. ವರಾಹ ಅಮ್ಮನವರನ್ನು ಪೂಜಿಸಲು ಕೂಡ ಒಂದು ಸ ಕಾರಣ ಇದ್ದೇ ಇದೆ. ಅದೇನೆಂದರೆ ಭಕ್ತಾದಿಗಳ ಮನದಲ್ಲಿ ಯಾವುದೇ ಗೊಂದಲಗಳು ಬಂದಾಗ ಅದಕ್ಕೆ ಉತ್ತರ ಕಂಡುಕೊಳ್ಳಲು ಈ ರೀತಿ ವರಾಹಿ ಅಮ್ಮನನ್ನು ಪೂಜಿಸುತ್ತಾರೆ.
ಅದು ಉದ್ಯೋಗಕ್ಕೆ ಸಂಬಂಧಪಟ್ಟ ಗೊಂದಲವೇ ಇರಬಹುದು, ಹೊಸ ಉದ್ಯೋಗವನ್ನು ಆರಂಭಿಸಬೇಕೋ ಬೇಡವೋ ಎನ್ನುವ ಗೊಂದಲ ಇರಬಹುದು ಅಥವಾ ಮದುವೆ ಆಯ್ಕೆ ಬಂದಾಗ ಒಪ್ಪಿಕೊಳ್ಳಬೇಕೋ ಬೇಡವೋ ಅಥವಾ ಹಣಕಾಸಿನ ಸಂಬಂಧಪಟ್ಟ ವ್ಯವಹಾರ ಬಂದಾಗ ಅದನ್ನು ಮಾಡಬಹುದಾ ಬೇಡವಾ ಎನ್ನುವ ಗೊಂದಲ ಇರಬಹುದು ಈ ರೀತಿ ಆರೋಗ್ಯ, ಆರ್ಥಿಕತೆ, ಉದ್ಯೋಗ, ವಿದ್ಯೆ, ಹಣಕಾಸು ಈ ರೀತಿ ಯಾವುದೇ ವಿಷಯಗಳಲ್ಲಿ ಗೊಂದಲ ಉಂಟಾದರೂ ವರಾಹಿ ಅಮ್ಮನನ್ನು ಧ್ಯಾನಿಸಿ ಪರಿಹಾರ ಪಡೆಯಬಹುದು.
ಇದಕ್ಕಾಗಿ ನೀವು ಹೆಚ್ಚಿನ ಹಣಕಾಸು ಖರ್ಚು ಮಾಡಿ ಪೂಜೆ ಪುನಸ್ಕಾರ ಹೋಮ ಹವನ ಮಾಡಿಸುವ ಅವಶ್ಯಕತೆ ಇಲ್ಲ ಅಥವಾ ಕಠಿಣ ವ್ರತವನ್ನು ಪಾಲಿಸುವ ಕಟ್ಟುನಿಟ್ಟು ನಿಯಮಗಳು ಇಲ್ಲ. ಕೆಲ ಸರಳ ವಿಧಾನಗಳ ಮೂಲಕ ಕೂಡ ವರಾಹಿ ಅಮ್ಮನನ್ನು ಪ್ರಾರ್ಥಿಸಿ ಅವರ ಮೂಲಕವೇ ನಿಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಅದಕ್ಕಾಗಿ ಈ ತಾಯಿಯನ್ನು ಗೊಂದಲಗಳಿಗೆ ಉತ್ತರಿಸುವ ಅಮ್ಮ ಎಂದು ಕರೆಯಲಾಗುತ್ತದೆ. ವರಾಹಿ ಅಮ್ಮನನ್ನು ನೀವು ಆಯ್ಕೆ ಕೇಳುವುದಾದರೆ ಈ ಕ್ರಮವನ್ನು ಅನುಸರಿಸಿ.
ಇದಕ್ಕಾಗಿ ಒಂದು ಮಂತ್ರ ಇದೆ ಮಂತ್ರ ಜಪಿಸುವ ಉತ್ತರ ಪಡೆಯಬಹುದು. ಅದಕ್ಕೂ ಮುನ್ನ ಸ್ನಾನ ಮಾಡಿ ಶುದ್ಧ ವಸ್ತ್ರ ಧರಿಸಿ ಒಳ್ಳೆ ಮನಸ್ಸಿನಿಂದ ವರಾಹಿ ಅಮ್ಮನನ್ನು ಸ್ಮರಣೆ ಮಾಡಿ ನಂತರ ಈ ಮೇಲೆ ತಿಳಿಸಿದಂತೆ ಪಂಚೋಪಾದಿಯಿಂದ ಅರಿಶಿಣ ಮ, ಕುಂಕುಮ, ಅಕ್ಷತೆ, ದೂಪ ದೀಪಗಳಿಂದ ತಾಯಿಯನ್ನು ಆರಾಧಿಸಿ ನೈವೇದ್ಯ ತೋರಿಸಿ ನಂತರ ಒಂದು ಸ್ಥಳದಲ್ಲಿ ಕುಳಿತುಕೊಳ್ಳಿ.
ನೂರೆಂಟು ಬಾರಿ ವರಾಹಿ ಅಮ್ಮನವರ ಮಂತ್ರವಾದ ಓಂ ಹ್ರೀಂ ನಮೋ ವಾರಾಹಿ ಘೊರೆ ಸ್ವಪ್ನಂ ಠಾಂ ಠಃ ಸ್ವಾಹಾ ಈ ಮಂತ್ರವನ್ನು ಜಪಿಸಿ. ಜಪಿಸಿದ ನಂತರ ನೆಮ್ಮದಿಯಿಂದ ನಿದ್ದೆ ಮಾಡಿ. ಸಾಧ್ಯವಾದರೆ ಈ ಮಂತ್ರವನ್ನು ರಾತ್ರಿ 10 ಗಂಟೆಗೆ ಆರಂಭಿಸಿ 11 ಗಂಟೆ ಒಳಗೆ ಮುಗಿಸಿ ನಿದ್ರೆ ಮಾಡಿ. ಅಮ್ಮನವರು ವರಾಹ ರೂಪದಲ್ಲಿ ಬಂದು ಅಥವಾ ಒಬ್ಬರು ಹೆಂಗಸಿನ ರೂಪದಲ್ಲಿ ಬಂದು ನಿಮಗೆ ಕೆಲ ಸೂಕ್ಮಗಳ ಮೂಲಕ.
ಆ ಕಾರ್ಯ ಮಾಡಬೇಕಾ ಮಾಡಬಾರದ ಅಥವಾ ಅದರಿಂದ ಒಳಿತಾಗುತ್ತದೆಯೋ ಕೆಡಕಾಗುತ್ತದೆಯೋ, ಲಾಭವಾಗುತ್ತದೆಯೋ ನಷ್ಟವಾಗುತ್ತದೆಯೋ ಎನ್ನುವುದರ ಬಗ್ಗೆ ಉತ್ತರ ಕೊಡುತ್ತಾರೆ. ಆ ಸಮಯದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕನಾದ ಉತ್ತರ ಬರದಿದ್ದ ಸಮಯದಲ್ಲಿ ಬೇಸರವಾದರೂ ಕೂಡ ತಾಯಿಯ ಎಚ್ಚರಿಕೆಯನ್ನು ಪಾಲಿಸಿ ನಡೆದರೆ ಮುಂದೊಂದು ದಿನ ಸಂಕಷ್ಟ ಪಡುವುದು ತಪ್ಪುತ್ತದೆ.