ಜೂನ್ 11ರಂದು ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯು ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಈ ಯೋಜನೆಯ ಪ್ರಯೋಜನವನ್ನು ಈಗ ನಾಡಿನ ಎಲ್ಲಾ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ನಿವಾಸಿಗಳಾದ ಎಲ್ಲಾ ಮಹಿಳೆಯರು ಕೂಡ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮದ ಬಸ್ ಗಳಾದ KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಕರ್ನಾಟಕದ ಗಡಿಯೊಳಗೆ ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದಾಗಿದೆ.
ಹೀಗಾಗಿ ಶಾಲಾ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಂದ ಹಿಡಿದು ಉದ್ಯೋಗಕ್ಕೆ ಹೋಗುವವರು ಮತ್ತು ವಲಸೆ ಕಾರ್ಮಿಕರಿಗೆ ಈ ಯೋಜನೆಯು ಪ್ರಯೋಜನಕ್ಕೆ ಬರುತ್ತದೆ. ಮತ್ತೊಂದೆಡೆ ಈ ಯೋಜನೆ ಪ್ರಭಾವದಿಂದ ಕರ್ನಾಟಕದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಕೂಡ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ಇಷ್ಟೇ ಕರ್ನಾಟಕದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರುವ ಕಾರಣ ಈಗ ಮಹಿಳೆಯರು ತಮ್ಮ ಕುಟುಂಬದ ಇತರ ಮಹಿಳೆಯರು ಮತ್ತು ಸ್ನೇಹಿತೆಯರ ಜೊತೆ ಪ್ರವಾಸಕ್ಕೆ ಹೊರಡುತ್ತಿದ್ದಾರೆ.
ಅದರಲ್ಲೂ ಧಾರ್ಮಿಕ ಕ್ಷೇತ್ರಗಳ ಕಡೆಗೆ ಹೆಚ್ಚು ಮುಖ ಮಾಡುತ್ತಿರುವ ಕಾರಣ ಈಗ ಎಲ್ಲಾ ದೇವಸ್ಥಾನಗಳಲ್ಲೂ ಕೂಡ ಮಹಿಳೆಯರದ್ದೇ ದಂಡು. ರಾಜ್ಯದಲ್ಲಿ ಯೋಜನೆ ಜಾರಿಗೆ ಬಂದು ಒಂದು ವಾರ ಕಳೆದಿದೆ. ಒಂದು ವಾರದಿಂದ ಪ್ರಯಾಣಿಸಿರುವ ಮಹಿಳಾ ಪ್ರಯಾಣಿಕರ ಸಂಖ್ಯೆಯು ಪುರುಷ ಪ್ರಯಾಣಿಕರ ಸಂಖ್ಯೆ ಗಿಂತ ಹೆಚ್ಚಿದ್ದು ಇದರಿಂದ ಶೂನ್ಯದರ ಟಿಕೆಟ್ ವಿತರಣೆಯಾಗಿದೆ ಎನ್ನುವ ದತ್ತಾಂಶವನ್ನು ಕೂಡ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಬಸ್ ನಲ್ಲಿ ಹೆಚ್ಚಾಗುತ್ತಿರುವ ಕಾರಣ ಆಗುತ್ತಿರುವ ಅವಾಂತರಗಳ ಬಗ್ಗೆ ಕೂಡ ವರದಿಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯೋಜನೆ ಜಾರಿಗೆ ಬಗ್ಗೆ ಆದೇಶ ಬಂದ ದಿನದಿಂದಲೂ ಕೂಡ ಸಾಕಷ್ಟು ತಮಾಷೆಯ ವಿಡಿಯೋಗಳು ಮತ್ತು ಪೋಸ್ಟ್ಗಳು ಅಪ್ಲೋಡ್ ಆಗಿದೆ, ಅವುಗಳನ್ನು ನಾವು ಸಹ ನೋಡಿ ನಕ್ಕಿದ್ದೇವೆ. ಇವುಗಳ ಜೊತೆ ಬಸ್ ಗಳಲ್ಲಿ ಆಗುತ್ತಿರುವ ಅವಾಂತರಗಳ ವಿಡಿಯೋಗಳು ನೋಡುಗರನ್ನು ಶಾ’ಕ್ ಆಗುವಂತೆ ಮಾಡಿವೆ.
ಕೆಲವೆಡೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಬಸ್ ಗಳಲ್ಲಿ ವಿಪರೀತ ರಶ್ ಆಗಿದ್ದರೆ, ಕೆಲವು ರೂಟ್ ಗಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಆಗಿದೆ ಎನ್ನುವ ಆರೋಪವಿದೆ. ಕೆಲವು ಕಡೆ ಟಿಕೆಟ್ ಕೊಡಲು ಪರದಾಡುತ್ತಿರುವ ಜನಸಂದನಿ ಒಳಗಡೆ ಕಂಡಕ್ಟರ್ಗಳು ಪರದಾಡುವ ಪ್ರಸಂಗಗಳು ಕಂಡುಬಂದಿದ್ದರೆ ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಬಸ್ ಡೋರ್ ಕಿತ್ತು ಬಂದಿರುವ ಘಟನೆ ನಡೆದಿದೆ. ಶನಿವಾರ ಸಂಜೆ 3:45ರಂದು ಈ ಘಟನೆ ನಡೆದಿದ್ದು, ಈ ಘಟನೆ ಈಗ ಸೋಶಿಯಲ್ ಮೀಡಿಯಾದ ಚರ್ಚೆ ವಿಷಯವಾಗಿದೆ.
ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಮಳೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತದೆ. ಅಂದಿನ ದಿನ ಸುತ್ತಮುತ್ತಲಿನ ಗ್ರಾಮಸ್ಥರುಗಳು ಮಾತ್ರವಲ್ಲದೆ ದೂರದ ಜಿಲ್ಲೆಗಳಿಂದಲೂ ಕೂಡ ಮಲೆ ಮಹದೇಶ್ವರ ಸನ್ನಿಧಾನಕ್ಕೆ ಭಕ್ತಾದಿಗಳು ಬರುತ್ತಾರೆ. ಶನಿವಾರದ ಬೆಳಗಿನಿಂದಲೂ ಕೂಡ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಎಲ್ಲಾ ಬಸ್ ಗಳು ಕೂಡ ವಿಪರೀತ ರಷ್ ಆಗಿದ್ದು ಅವೆಲ್ಲದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗಿದೆ ಎನ್ನುವ ಮಾಹಿತಿ ಇದೆ.
ಶನಿವಾರದಂದು ಕೊಳ್ಳೇಗಾಲ ಬಸ್ ನಿಲ್ದಾಣವು ಸಂಪೂರ್ಣವಾಗಿ ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಂದ ತುಂಬಿಹೋಗಿತ್ತು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಬಂದ KSRTC ಬಸ್ ಗೆ ಮಹಿಳೆಯರು ಏಕಾಏಕಿ ನುಗ್ಗಿದ ಪರಿಣಾಮ ಡೋರ್ ಕಿತ್ತು ಬಂದಿದೆ. ನಂತರ ಮಹಿಳೆಯರ ಸುರಕ್ಷತೆಯ ಉದ್ದೇಶದಿಂದ ಎಲ್ಲರನ್ನು ಕೂಡ ಕೆಳಗಿಳಿಸಿ ಬೇರೆ ಬಸ್ ನಲ್ಲಿ ಕಳುಹಿಸಿ ಕೊಡಲಾಗಿದೆ.