ಬಟ್ಟೆ ಒಗೆಯಲು ಸೂಪರ್ ಟಿಪ್ಸ್ ಮಹಿಳೆಯರು ಆಗಿರಲಿ ಅಥವಾ ಪುರುಷರಾಗಿರಲಿ ಈ ಸಿಂಪಲ್ ಟ್ರಿಕ್ ಬಳಸಿದ್ರೆ ಸಾಕು ಚಿಟಿಕೆ ಹೊಡೆಯೋದ್ರ ಒಳಗೆ ಕೆಲಸ ಮುಗಿಯುತ್ತೆ.!

 

ಬಟ್ಟೆ ಒಗೆಯುವ ಕೆಲಸ ನೆನೆಸಿಕೊಂಡರೆ ಗೃಹಿಣಿಯರಿಗೆ ಒಮ್ಮೆಲೆ ಟೆನ್ಶನ್ ಜಾಸ್ತಿ ಆಗುತ್ತದೆ. ಯಾಕೆಂದರೆ ಬಹಳ ಸಮಯ ಹಿಡಿಯುವ ಮತ್ತು ಬಹಳ ಗಮನವಿಟ್ಟು ಮಾಡಬೇಕಾದ ಕೆಲಸ ಇದು. ಇಂದು ಅನೇಕ ಮನೆಗಳಲ್ಲಿ ವಾಷಿಂಗ್ ಮಿಷನ್ ಇದೆ ಆದರೂ ಕೂಡ ಮ್ಯಾನುವಲ್ ಆಗಿ ಒಗೆದ ಬಟ್ಟೆಗಳನ್ನು ಧರಿಸಿಕೊಂಡರೆ ಇರುವ ಲುಕ್ ಬೇರೆ.

ಹಾಗಾಗಿ ಹೆಚ್ಚಿನ ಜನರು ಕೈಗಳಲ್ಲಿ ಬಟ್ಟೆ ಒಗೆಯಲು ಇಷ್ಟಪಡುತ್ತಾರೆ. ನಿಮಗೆ ಬಟ್ಟೆಗಳಲ್ಲಿ ಕೊಳೆ ತೆಗೆಯುವ ಕೆಲಸ ಸಲೀಸಾಗಬೇಕಾದರೆ, ಸುಲಭವಾಗಿ ಹಳೆ ಕಲೆಗಳನ್ನು ತೆಗೆಯಬೇಕು ಎಂದರೆ ಮತ್ತು ಬಟ್ಟೆಯ ಕೆಟ್ಟ ವಾಸನೆ ಹೋಗಿ ಫ್ರೆಶ್ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸಿಂಪಲ್ ಟ್ರಿಕ್ ಗಳನ್ನು ಬಳಸಿ ಸಾಕು. ಬಟ್ಟೆ ಕೂಡ ಕ್ಲೀನ್ ಆಗುತ್ತದೆ ನಿಮಗೂ ಆಯಾಸ ಕಡಿಮೆ ಆಗುತ್ತದೆ.

● ಬೆವರಿನಿಂದ ಕಲೆ ಆಗಿರುವ ಉಡುಪಿನ ಭಾಗಕ್ಕೆ ಆಸ್ಪರಿನ್ ಗುಳಿಗೆಯ ಪುಡಿಯನ್ನು ಉದುರಿಸಿ ನಂತರ ಉಜ್ಜಿ ತೊಳೆದರೆ ಕಳೆಯೂ ಮಾಯವಾಗುತ್ತದೆ ಮತ್ತು ಬೆವರಿನ ವಾಸನೆ ಕೂಡ ಇರುವುದಿಲ್ಲ.
● ಶಾಂಪೂಗಳನ್ನು ಉಪಯೋಗಿಸಿ ಉಣ್ಣೆಯ ಬಟ್ಟೆಯನ್ನು ತೊಳೆಯುವುದರಿಂದ ಉಣ್ಣೆ ಬಟ್ಟೆ ತೊಳೆಯುವ ಕೆಲಸ ಸಲೀಸಲಾಗುತ್ತದೆ.

● ರೇಷ್ಮೆ, ನೈಲಾನ್ ಮತ್ತು ಉಣ್ಣೆ ಬಟ್ಟೆಗಳನ್ನು ಒಗೆದ ಮೇಲೆ ಹಿಂಡಬೇಡಿ.
● ಎಲಾಸ್ಟಿಕ್ ಇರುವ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆಸಬಾರದು. ಇದರಿಂದ ಎಲಾಸ್ಟಿಕ್ ಬೇಗನೆ ಹಾಳಾಗುತ್ತದೆ.
● ಸ್ವಲ್ಪ ಅಮೋನಿಯ ಬೆರೆಸಿದ ನೀರಿನಲ್ಲಿ ಬಟ್ಟೆಗಳನ್ನು ಜಾಲಾಡಿ ಹಾಕಿದರೆ ಬೆವರಿನ ವಾಸನೆ ಹೊರಟು ಹೋಗುತ್ತದೆ.
● ನೈಲಾನ್, ಉಣ್ಣೆ, ಟೆರಿಕಾಟ್ ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ಸೋಪು ಹಾಕಿ ನೆನೆಸಬಾರದು.

● ಬಟ್ಟೆಗಳನ್ನು ಒಗೆಯುವುದಕ್ಕೂ ಮುಂಚೆ ಅವುಗಳನ್ನು ರಾತ್ರಿ ಹೊತ್ತು ಉಪ್ಪು ನೀರಿನಲ್ಲಿ ನೆನೆಸಿ ಅಥವಾ ಕನಿಷ್ಠ 8 ಗಂಟೆಗಳಿಗೂ ಮುನ್ನ ಉಪ್ಪು ನೀರಿನಲ್ಲಿ ನೆನೆಸಿ ಹೋಗಿರುವುದರಿಂದ ಅವು ಬಣ್ಣ ಬಿಡುವುದಿಲ್ಲ.
● ಬಿಳಿಯ ಬಣ್ಣದ ರೇಷ್ಮೆ ಬಟ್ಟೆಗಳನ್ನು ಒಗೆಯುವಾಗ ಕೊನೆಯ ಸಲ ಜಾಲಡುವ ನೀರಿನಲ್ಲಿ ಸ್ವಲ್ಪ ಮಧ್ಯಸಾರವನ್ನು ಸೇರಿಸಿ ಜಾಲಾಡಿದರೆ ಬಟ್ಟೆ ಬಿಳಿಯದಾಗಿಯೇ ಇರುತ್ತದೆ.

● ರಾತ್ರಿ ಹೊತ್ತು ಕೊಳೆಯಾದ ಕಾಲರ್ ಹಾಗೂ ಕಪ್ ಗಳ ಭಾಗಕ್ಕೆ ಸೀಮೆಸುಣ್ಣದಿಂದ ಉಜ್ಜಿ ಹಾಗೆ ಬಿಟ್ಟರೆ ಅವು ಜಿಡ್ಡನ್ನು ಹೀರಿಕೊಳ್ಳುತ್ತವೆ. ಬಳಿಕ ಮಾರನೇ ದಿನ ಅವನ್ನು ಮತ್ತೆ ಚೆನ್ನಾಗಿ ಒಗೆದು ಹಾಕಿದರೆ ಕೊಳೆ ಪೂರ್ತಿಯಾಗಿ ಹೋಗುತ್ತದೆ.
● ರೇಷ್ಮೆ ಬಟ್ಟೆಗಳನ್ನು ಒಗೆಯುವಾಗ ನೀರಿನಲ್ಲಿ ನಿಂಬೆಹಣ್ಣನ್ನು ಹಿಂಡಿ ಆ ನೀರಿನಲ್ಲಿ ಅವುಗಳನ್ನು ಅದ್ದಿ ಜಾಲಾಡಿಸಿದರೆ ಆ ಬಟ್ಟೆಗಳ ಬಣ್ಣ ಹೋಗುವುದಿಲ್ಲ ಹಾಗೂ ಅವು ಸ್ವಚ್ಛವಾಗಿ ಹೊಳೆಯುತ್ತವೆ.

● ಬಿಳಿ ಬಟ್ಟೆಗಳಿಗೆ ನೀಲಿಯನ್ನು ಹಾಕುವಾಗ ಮೊದಲು ನೀರಿಗೆ ಸ್ವಲ್ಪ ಅಡಿಗೆ ಸೋಡಾ ಹಾಕಿ ನಂತರ ನೀಲಿಯನ್ನು ಹಾಕುವುದರಿಂದ ಬಟ್ಟೆಗಳ ಮೇಲೆ ಒಂದೇ ಕಡೆ ನೀಲಿ ಕಲೆ ಆಗುವುದಿಲ್ಲ.
● ಉಣ್ಣೆ ಬಟ್ಟೆಗಳನ್ನು ಒಗೆಯುವಾಗ ಅವುಗಳನ್ನು ನೆನೆ ಹಾಕುವ ನೀರಿಗೆ ಒಂದು ಚಮಚ ಗ್ಲಿಸರಿನ್ ಹಾಕಿ ನೆನೆಸಿ ಮತ್ತು ಅವುಗಳನ್ನು ಜಾಲಾಡುವ ನೀರಿಗೆ ಒಂದು ಚಮಚ ಗ್ಲಿಸರಿನ್ ಹಾಕಿದರೆ ಬಟ್ಟೆ ಹೆಚ್ಚು ಸುಕ್ಕಾಗುವುದಿಲ್ಲ. ಇಂತಹ ಸುಲಭ ಟ್ರಿಕ್ ಗಳನ್ನು ಬಳಸಿ ನಿಮ್ಮ ಮನೆಯ ಬಟ್ಟೆಗಳನ್ನು ಒಗೆಯಿರಿ ಮತ್ತು ಈ ಟಿಪ್ಸ್ ಗಳ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತೆಯರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment