ಯಾವುದೇ ಬ್ಯಾಂಕ್ ನಿಂದ ಸಾಲ ಪಡೆದಿದ್ದರೆ ಗ್ರಾಹಕರಿಗೆ ಹೊಸ ರೂಲ್ಸ್ ಗಳು ಅನ್ವಯವಾಗಲಿದೆ ಹೌದು. ಹೆಚ್ಚಿನ ಸಂಖ್ಯೆಯಲ್ಲಿ ಕೆಲ ವೊಂದಷ್ಟು ಜನ ಬ್ಯಾಂಕುಗಳಿಂದ ಸಾಲಗಳನ್ನು ಪಡೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಆದಾಯದ ಮೇಲೆ ಅಂದರೆ ಆ ವ್ಯಕ್ತಿ ತಿಂಗಳಿಗೆ ಎಷ್ಟು ಹಣವನ್ನು ಸಂಪಾದನೆ ಮಾಡುತ್ತಾನೆ.
ಹಾಗೂ ಆ ಹಣದಲ್ಲಿ ಅವನು ಸಾಲ ಪಡೆದುಕೊಂಡರೆ ಅಷ್ಟು ಹಣವನ್ನು ಕಟ್ಟಲು ಸಾಧ್ಯವಾಗುತ್ತದೆ ಎನ್ನುವುದನ್ನು ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಅವನ ಆದಾಯದ ಮೇಲೆ ಅವನಿಗೆ ಸಾಲ ಕೊಡುತ್ತಾರೆ. ಬ್ಯಾಂಕ್ ಗಳಲ್ಲಿ ಹಲವಾರು ರೀತಿಯ ಸಾಲಗಳನ್ನು ಕೊಡುತ್ತಾರೆ ಹೌದು ಹಾಗಾದರೆ ಆ ಸಾಲಗಳು ಯಾವುದು ಎಂದು ನೋಡುವುದಾದರೆ.
* ಬ್ಯಾಂಕ್ ಸಾಲ
* ಗೃಹ ಸಾಲ
* ವೈಯಕ್ತಿಕ ಸಾಲ
ಹೀಗೆ ಇನ್ನೂ ಹಲವಾರು ರೀತಿಯ ಸಾಲಗಳು ಇದೆ. ಹೀಗೆ ಯಾವುದೇ ವಿಧದ ಸಾಲಗಳಾಗಿರಬಹುದು ಅದನ್ನು ಒಬ್ಬ ಗ್ರಾಹಕ ಪಡೆದುಕೊಂಡ ಮೇಲೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಾಲದ ಹಣವನ್ನು ಬ್ಯಾಂಕ್ ಗೆ ಕಡ್ಡಾಯವಾಗಿ ಕಟ್ಟಬೇಕು.
ಅದೇ ರೀತಿಯಾಗಿ ನೀವು ಸಾಲ ಪಡೆದುಕೊಂಡ ನಂತರ ನೀವು ಪ್ರತಿ ತಿಂಗಳು ಎಷ್ಟು ಬಡ್ಡಿ ಕಟ್ಟಬೇಕು ಹಾಗೂ ಆ ಸಾಲವನ್ನು ಕಟ್ಟುತ್ತಿದ್ದರೆ ಎಷ್ಟು ಕಟ್ಟಬೇಕು ಹೀಗೆ ಎಲ್ಲವನ್ನೂ ಸಹ ಗ್ರಾಹಕ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಸಾಲದ ಮೇಲಿನ ಬಡ್ಡಿ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವೊಂದು ಬದಲಾವಣೆಯನ್ನು ತರುತ್ತದೆ.
ಇದೀಗ ಬ್ಯಾಂಕಿನಲ್ಲಿ ಸಾಲ ಪಡೆಯುವಂತಹ ಜನರಿಗೆ ಆರ್ ಬಿ ಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೌದು ಆರ್ ಬಿ ಐ ಬ್ಯಾಂಕ್ ನಲ್ಲಿ ಸಾಲ ಪಡೆಯುವಂತಹ ಗ್ರಾಹಕರಿಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ ಇದು ಅವರಿಗೆ ಅನುಕೂ ಲವಾಗುತ್ತದೆ ಎಂದು ಹೇಳಬಹುದು ಹೌದು ಆರ್ ಬಿ ಐ ಕೆಲವೊಂದು ಹೊಸ ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದೆ.
ಬ್ಯಾಂಕ್ ಗಳಲ್ಲಿ ಎಲ್ಲಾ ಸಾಲಗಳನ್ನು ಕಟ್ಟಿ ಪೂರ್ಣಗೊಳಿಸಿರುವಂತಹ ಗ್ರಾಹಕರ ಎಲ್ಲ ದಾಖಲೆಗಳನ್ನು 30 ದಿನಗಳವರೆಗೆ ಹಿಂದೆ ನೀಡಬೇಕು ಎಂಬ ಅಧಿ ಸೂಚನೆಯನ್ನು ಬ್ಯಾಂಕುಗಳಿಗೆ ಆರ್‌ಬಿಐ ಮಾಹಿತಿಯನ್ನು ನೀಡಿದೆ. ಈ ನಿಯಮಗಳನ್ನು ಬ್ಯಾಂಕುಗಳು ಪಾಲನೆ ಮಾಡದೆ ಇದ್ದರೆ ಬ್ಯಾಂಕುಗಳು ದಂಡ ಕಟ್ಟಬೇಕಾದಂತಹ ಪರಿಸ್ಥಿತಿ ಬರಬಹುದು. ಹೆಚ್ಚಿನವರು ಸಾಲ ಪಡೆಯುವುದೇ ಗೃಹ ಸಾಲಕ್ಕಾಗಿ ಆದರೆ ಈ ಬಾರಿ ಗೃಹ ಸಾಲದ ಮೇಲಿನ ಬಡ್ಡಿ ಹಣವನ್ನು ಯಾವುದೇ ರೀತಿಯಲ್ಲಿ ಹೆಚ್ಚಿಗೆ ಮಾಡಿಲ್ಲ.
ಬ್ಯಾಂಕುಗಳಿಂದ ಸಾಲ ಪಡೆದಂತಹ ಗ್ರಾಹಕರು ಸರಿಯಾದ ಸಮಯ ದಲ್ಲಿ ಸಾಲವನ್ನು ತೀರಿಸಿದ್ದರು ಕೂಡ ಗ್ರಾಹಕರು ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಪಡೆಯಲು ಬ್ಯಾಂಕುಗಳಿಗೆ ಅಲೆದಾಡುತ್ತಿದ್ದರು. ಹೀಗಾಗಿ ಗ್ರಾಹಕರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಕಷ್ಟು ದೂರುಗಳು ಬಂದ ನಿಟ್ಟಿನಲ್ಲಿ ಆರ್ ಬಿ ಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನೀಡಬೇಕು ಎಂದಿದೆ.
ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆದಂತಹ ಜನರಿಗೆ ಸಾಲ ಮರುಪಾವತಿ ಮಾಡಿದ ನಂತರ 30 ದಿನಗಳ ಒಳಗಾಗಿ ಗ್ರಾಹಕರ ಎಲ್ಲ ದಾಖಲಾತಿ ಗಳನ್ನು ಬ್ಯಾಂಕುಗಳು ಸಾಲಗಾರರ ಹಿತ ದೃಷ್ಟಿಯಿಂದ ವಾಪಸ್ ನೀಡಬೇಕು ಎಂದು ಆರ್ ಬಿ ಐ ಇದೀಗ ನೀಡಿದೆ. ಹಾಗಾಗಿ ಗ್ರಾಹಕರು ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮುಂದೆ ಹೆಚ್ಚು ತಿರುಗುವ ಅವಶ್ಯಕತೆ ಇಲ್ಲ. ಈ ಸಮಯದ ಒಳಗಾಗಿ ನೀವು ನಿಮ್ಮ ದಾಖಲಾತಿಗಳನ್ನು ಪಡೆಯಬಹುದು.