ಈಗ ಜಗತ್ತು ನಡುತ್ತಿರುವುದು ತಂತ್ರಜ್ಞಾನದಿಂದಲೇ ಇರಬಹುದು. ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರೂ ಕೂಡ ದೇವರು ಎನ್ನುವ ಒಂದು ಶಕ್ತಿಯನ್ನು ಅಥವಾ ಆ ಎನರ್ಜಿಯ ಕುತೂಹಲವನ್ನು ಭೇದಿಸಲು ಯಾವುದೇ ವಿಜ್ಞಾನಿಗಳು ಕೂಡ ಸಾಧ್ಯವಾಗಿಲ್ಲ. ಮನುಷ್ಯ ಗ್ರಹದಿಂದ ಗ್ರಹಕ್ಕೆ ಹಾರಿರಬಹುದು, ನಭವನ್ನು ದಾಟಿರಬಹುದು, ಆದರೆ ದೇವರನ್ನು ತಲುಪಲು ಸಾಧ್ಯವಿಲ್ಲ, ಪ್ರಕೃತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮಾಂಡದಲ್ಲಿ ದೇವರು ಎನ್ನುವ ಶಕ್ತಿಯ ಸಾಕಾರ ಇಲ್ಲದೆ ಏನೂ ಇಲ್ಲ ಎಂದು ಒಪ್ಪಿಕೊಳ್ಳಲೇಬೇಕು.
ದೇವರು ಎನ್ನುವ ಸಾಕಾರ ಮೂರ್ತಿಯ ಕರ್ಣಾಕೃಪಕಟಾಕ್ಷ ಪಡೆಯಲು ತಲೆಬಾಗಲೇಬೇಕು. ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಮಾರ್ಗ ಅನುಸರಿಸುತ್ತಾರೆ. ಕೆಲವರು ದಾನ ಧರ್ಮ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ದೇವರಿಗೆ ಹತ್ತಿರವಾಗುತ್ತಾರೆ. ಇನ್ನು ಕೆಲವರು ಮಂತ್ರ ಪೂಜೆ ಪುನಸ್ಕಾರದ ಮೂಲಕ ದೇವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ದೇವರನ್ನು ಪ್ರಾರ್ಥನೆ ಮಾಡುವಾಗ ಪ್ರಾರ್ಥನೆ ಜೊತೆ ಮಂತ್ರಗಳ ಉಚ್ಚಾರಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪುರಾಣಗಳು ತಿಳಿಸುವ ಪ್ರಕಾರ ಮಂತ್ರಗಳಿಗೆ ಏನನ್ನಾದರೂ ಕೊಡುವಂತಹ ಶಕ್ತಿ ಇದೆ. ಮಂತ್ರೋಚಾರಣೆಯಿಂದಲೇ ಕುಂತಿ ಮಕ್ಕಳನ್ನು ಪಡೆದಿದ್ದು, ಮಂತ್ರಗಳ ಉಚ್ಚಾರಣೆಯಿಂದ ದೇವತೆಗಳನ್ನು ಭೂಮಿಗೆ ಇಳಿಸಬಹುದು ಎಂದು ನಾವು ಕೇಳಿದ್ದೇವೆ.
ಆ ಯುಗಗಳಿಂದ ಈಗಿನ ಕಲೆಗಾಲದವರೆಗೂ ಕೂಡ ಮಂತೋಚ್ಚಾರಣೆಗೆ ಅಷ್ಟೇ ಶಕ್ತಿ ಇದೆ. ಆದರೆ ಅದನ್ನು ಪಾಲಿಸುವ ವಿಧಾನ ಮತ್ತು ಅದನ್ನು ಉಚ್ಚರಿಸುವವರ ಸ್ವಭಾವದ ಮೇಲೆ ಅದರ ಶಕ್ತಿಯ ಪ್ರಭಾವ ಬೀರುತ್ತದೆ. ಮಂತ್ರ ಉಚ್ಚಾರಣೆ ಮಾಡುವ ವ್ಯಕ್ತಿಯು ಎಷ್ಟು ನಂಬಿಕೆಯಿಂದ ಒಳ್ಳೆ ಮನಸ್ಸಿನಿಂದ ಹಾಗೂ ಒಳ್ಳೆಯ ಉದ್ದೇಶದಿಂದ ಅದನ್ನು ಮಾಡುತ್ತಾರೋ ಪ್ರತಿಫಲವೂ ಕೂಡ ಅದಕ್ಕೆ ತಕ್ಕನಾದ ರೀತಿಯಲ್ಲಿಯೇ ದೊರೆಯುತ್ತದೆ.
ಈಗ ನಾವು ಆಧುನಿಕ ಪ್ರಪಂಚದಲ್ಲಿ ಇದ್ದರೂ ಕೂಡ. ನಮ್ಮಲ್ಲಿ ದೇವರ ಕುರಿತಾದ ನಂಬಿಕೆ ಹಾಗೂ ಭಕ್ತಿ ಕಡಿಮೆ ಆಗಿಲ್ಲ. ಇಂದಿಗೂ ಪ್ರತಿದಿನ ಹಲವು ಕುಟುಂಬಗಳಲ್ಲಿ ಮತ್ತು ಮಂತ್ರೋಚ್ಛಾರಣೆ ಮಾಡುವ ಮೂಲಕವೇ ದಿನ ಪ್ರಾರಂಭವಾಗುತ್ತಿರುವುದು, ಇದೇ ನಮ್ಮ ಸಂಸ್ಕಾರ. ಒಬ್ಬೊಬ್ಬರು ಒಂದೊಂದು ದೈವರಾದನೆ ಮಾಡುತ್ತಿರಬಹುದು, ಆದರೆ ಪ್ರತಿಯೊಂದು ದೇವರಿಗೂ ಹಾಗೂ ದೇವತೆಗಳಿಗೂ ಅವರದ್ದೇ ಆದ ವಿಶೇಷ ಮಂತ್ರಗಳು ಇವೆ ಎನ್ನುವುದು ಗ್ರಂಥಗಳಲ್ಲಿ ಉಲ್ಲೇಖ ಆಗಿದೆ.
ನಮ್ಮ ಇಷ್ಟ ದೇವರ ಅಥವಾ ಕುಲದೇವರಗಳ ಮಂತ್ರಗಳನ್ನು ನಾವು ಆಸಕ್ತಿಯಿಂದ ಕಲಿತುಕೊಂಡು ಉಚ್ಚರಿಸುತ್ತೇವೆ. ಆದರೆ ಸರಿಯಾದ ರೀತಿಯಲ್ಲಿ ಹಾಗೂ ಒಳ್ಳೆಯ ಮನಸ್ಸಿನಿಂದ ಅನುಸರಿಸುವುದಾದರೆ ಯಾರು ಯಾವ ದೇವರ ದೇವತೆಗಳ ಮಂತ್ರಗಳನ್ನಾದರೂ ಹೇಳಿ ಅವುಗಳಿಂದ ಉತ್ತಮ ಪ್ರತಿಫಲಗಳನ್ನು ಪಡೆಯಬಹುದು.
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಒಂದು ಮಂತ್ರಕ್ಕೆ ಜೀವನದಲ್ಲಿ ಎಲ್ಲವನ್ನು ಕೊಡುವ ಶಕ್ತಿ ಇದೆ. ಪ್ರತಿದಿನವೂ ಕೂಡ ತಪ್ಪದೇ ಆ ಮಂತ್ರ ಉಚ್ಚಾರಣೆ ಮೂಲಕ ದಿನ ಆರಂಭಿಸುವುದರಿಂದ ಬಹಳ ಸಕ್ಕರಾತ್ಮಕವಾದ ಪರಿಣಾಮ ಬದುಕಿನ ಮೇಲೆ ಬೀರಿ ಆದಷ್ಟು ಬೇಗ ಇಷ್ಟಾರ್ಥ ಸಿದ್ಧಿ ಆಗುತ್ತದೆ ಹಾಗೂ ಸಾಕಷ್ಟುಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.
ಆ ಮಂತ್ರ ಯಾವುದು ಎಂದರೆ “ನಮೋಸ್ತವನ ಅನಂತಾಯ ಸಹಸ್ರಾರು ಮೂರ್ತಯೇ ಸಹಸ್ರಪಾದಾಕ್ಷಿ ಶಿರರುವಾಹವೇ ಸಹಸ್ರನಾಮೆ ಪುರುಷಾಯ ಶಾಶ್ವತೇ ಸಹಸ್ರ ಕೋಟಿ ಯುಗ ಧಾರಿಣಿ ನಮಃ” ಇದು ವಿಷ್ಣುವಿನ ಕುರಿತ ಒಂದು ಮಂತ್ರ ಆಗಿದೆ. ಸದ್ಯಕ್ಕೆ ಈ ಸೃಷ್ಟಿಯ ಕರ್ತೃ ಶ್ರೀ ವಿಷ್ಣು ಎಂದು ನಂಬಿರುವುದರಿಂದ ಈ ಮಂತ್ರದ ಉಚ್ಚಾರಣೆ ಮಾಡುವುದರಿಂದ ವರ್ತಮಾನ ಕಾಲದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು ಎಂದು ನಂಬಲಾಗಿದೆ.