ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವವರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದ.?

 

ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳು ಕೂಡ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಹೊರಡಿಸಿದ್ದಂತೆ ಜುಲೈ ತಿಂಗಳಿನಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಿದ್ದಾರೆ. ಯಾರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರು ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ ಅನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಸರ್ಕಾರವೇ ಅದನ್ನು ಭರಿಸುವುದಾಗಿ ಒಪ್ಪಿಕೊಂಡಿದೆ.

ಆದರೆ ಈಗಾಗಲೇ ಸರ್ಕಾರದಿಂದ ಅನೇಕ ಕುಟುಂಬಗಳು ಉಚಿತ ವಿದ್ಯುತ್ ಯೋಜನೆ ಪ್ರಯೋಜನವನ್ನು ಪಡೆಯುತ್ತಿವೆ. ಈ ಹಿಂದೆಯೇ ರಾಜ್ಯದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯಡಿ ಅರ್ಹ ಬಡ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದಿದ್ದವು. ಈಗ ಎಲ್ಲರಿಗೂ ಗೃಹಜೋತಿ ಯೋಜನೆ ಉಚಿತ ವಿದ್ಯುತ್ ಅನುಕೂಲತೆ ಸಿಗುತ್ತಿರುವುದರಿಂದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ಕೂಡ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುವುದಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೆ ಎನ್ನುವ ಗೊಂದಲ ಇದೆ.

ಈ ಬಗ್ಗೆ ನಮ್ಮ ಬೆಸ್ಕಾಂ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಟ್ರೀಟ್ ಒಂದನ್ನು ಮಾಡಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ನಮ್ಮ ಬೆಸ್ಕಾಂ ಟ್ವೀಟ್ ನಲ್ಲಿ ನೀವು ಈಗಾಗಲೇ ಭಾಗ್ಯಜ್ಯೋತಿ, ಕುಟೀರಜ್ಯೋತಿ ಅಮೃತಜ್ಯೋತಿ ಯೋಜನೆಯಿಂದ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರು ಕೂಡ ಗೃಹಜ್ಯೋತಿ ಯೋಜನೆ ಪ್ರಯೋಜನ ಪಡೆಯಲು ನೋಂದಣಿ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

ಇದರಿಂದಾಗಿ ಈ ಮೇಲ್ಕಂಡ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದರು ಕೂಡ ಗೃಹಜ್ಯೋತಿ ಯೋಜನೆಗೆ ಮತ್ತೊಮ್ಮೆ ಇವರು ಸಹ ನೋಂದಣಿ ಆಗಬೇಕು ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಇನ್ನೂ ಗೊಂದಲ ಇದ್ದರೆ ನಿಮ್ಮ ಮನೆಗಳಿಗೆ ವಿದ್ಯುತ್ ಬಿಲ್ ನೀಡಲು ಬರುವ ವಿದ್ಯುತ್ ಇಲಾಖೆ ಪ್ರತಿನಿಧಿಗಳ ಬಳಿ ನೀವು ಅವರಿಗೆ ಬಂದಿರುವ ಆದೇಶದ ಕುರಿತು ಕೇಳಿ ಮಾಹಿತಿ ಪಡೆಯಬಹುದು. ಹಲವರಿಗೆ ಈ ವಿಷಯದಲ್ಲಿ ಮತ್ತೊಮ್ಮೆ ಗೊಂದಲ ಆಗುವುದು ಏನೆಂದರೆ.

ಈವರೆಗೆ ಈ ಮೇಲೆ ತಿಳಿಸಿದ ಯೋಜನೆಗಳಿಂದ ಉಚಿತ ವಿದ್ಯುತ್ ಪ್ರಯೋಜನ ಪಡೆದವರು ವಿದ್ಯುತ್ ಬಿಲ್ ಕಟ್ಟದೇ ಇರುವುದರಿಂದ ಅವರಿಗೆ ವಿದ್ಯುತ್ ಬಿಲ್ ದಾಖಲೆಯಾಗಿ ಹೇಗೆ ಸಿಗುತ್ತದೆ ಎನ್ನುವುದು. ಅದಕ್ಕೂ ಸಹ ವಿದ್ಯುತ್ ಪ್ರತಿನಿಧಿಗಳ ಬಳಿ ಮಾಹಿತಿ ಇರುತ್ತದೆ ಕೇಳಿ ಪಡೆಯಬಹುದು. ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದರೂ ಕೂಡ ಅವರು ಬಳಸಿರುವ ವಿದ್ಯುತ್ ಬಳಕೆಗೆ ಖಂಡಿತವಾಗಿಯೂ ಬಿಲ್ ನೀಡಿರುತ್ತಾರೆ. ಅದರ ಪ್ರಕಾರ ಇರುವ ಅಕೌಂಟ್ ಐಡಿ ತೆಗೆದುಕೊಂಡು ಅರ್ಜಿ ಸಲ್ಲಿಸಬಹುದು.

ಇವರು ಗೃಹಜೋತಿ ಯೋಜನೆಗೆ ಎಲ್ಲರಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ಮೊಬೈಲ್ ನಲ್ಲಿ ಮತ್ತು ಕಂಪ್ಯೂಟರ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದಲ್ಲಿರುವ ವಿದ್ಯುತ್ ಇಲಾಖೆ ಕಛೇರಿ ಅಥವಾ ಗ್ರಾಮ ಪಂಚಾಯಿತಿಗೆ ಹೋಗಿ ಕೂಡ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಕೂಡ ಸೂಕ್ತ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ನೋಂದಣಿ ಆಗಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

Leave a Comment