ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇವಾಲಯ. ಇಲ್ಲಿ ಭಕ್ತಿಯಿಂದ ಬೇಡಿಕೊಂಡ್ರೆ ಸಾಕು, ಸಕ್ಕರೆ ಖಾಯಿಲೆ ಸಂಪೂರ್ಣ ವಾಸಿಯಾಗುತ್ತದೆ.

ನಮ್ಮ ಭಾರತ ದೇಶದಲ್ಲಿ ದೇವಾಲಯಗಳು ಇಲ್ಲದ ಊರು ಇಲ್ಲವೇ ಇಲ್ಲ ಎಂದು ಹೇಳಬಹುದು. ಪ್ರತಿಯೊಂದು ಊರಿನಲ್ಲೂ ಸಹ ಒಂದಕ್ಕಿಂತ ಹೆಚ್ಚು ದೇವಾಲಯಗಳು ಇರುತ್ತವೆ. ಅದರಲ್ಲಿ ಹಲವು ದೇವಾಲಯಗಳು ಅಲ್ಲಿರುವ ದೇವತೆಗಳ ಶಕ್ತಿಯಿಂದ ಆಗುವ ಲೋಕವಿಖ್ಯಾತಿಗೊಂಡು ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ಇದುವರೆಗೂ ಕೂಡ ನಾವು ಈ ರೀತಿ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ.

ವಿದ್ಯಾಭ್ಯಾಸದ ಆರಂಭಕ್ಕಾಗಿ ಹಾಗೂ ವಿದ್ಯಾಭ್ಯಾಸ ಚೆನ್ನಾಗಿ ಪಡೆಯಬೇಕು ಎಂದರೆ ಈ ದೇವಾಲಯಕ್ಕೆ ಹೋಗಬೇಕು, ಮಕ್ಕಳ ಭಾಗ್ಯ ಬೇಕು ಎಂದರೆ ಆ ದೇವಾಲಯಕ್ಕೆ ಹೋಗಿ ಈ ಪೂಜೆ ಮಾಡಿಸಬೇಕು, ಆರೋಗ್ಯಕ್ಕಾಗಿ ಈ ಹೋಮವನ್ನು ಆ ದೇವಾಲಯದಲ್ಲಿ ಮಾಡಬೇಕು ಈ ರೀತಿ ಸಾಕಷ್ಟು ಉದಾಹರಣೆಗಳನ್ನು ಕೇಳುತ್ತೇವೆ. ಈಗ ಮತ್ತೊಂದು ದೇವಾಲಯವು ಇದೇ ಲಿಸ್ಟ್ ಸೇರುತ್ತಿದ್ದು ವಿಶೇಷ ರೀತಿಯಲ್ಲಿ ಈ ದೇವಾಲಯ ಹೆಸರು ಮಾಡುತ್ತಿದೆ.

ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲಿ ಈ ದೇವಾಲಯ ಇದೆ. ಈ ದೇವಾಲಯದ ವಿಶೇಷತೆ ಏನೆಂದರೆ, ಮಧುಮೇಹಿಗಳು ಈ ದೇವಾಲಯಕ್ಕೆ ಹೋಗಿ ಈ ಒಂದು ಆಚರಣೆ ಮಾಡಿದರೆ ಅವರ ಸಕ್ಕರೆ ಕಾಯಿಲೆ ಸಂಪೂರ್ಣ ಮಾಯ ಆಗುತ್ತದೆ. ಭಕ್ತಿಯಿಂದ ಆಗದೆ ಇರುವ ಕೆಲಸ ಯಾವುದು ಇಲ್ಲ ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕಿ ಭಕ್ತಿಯಿಂದ ನಡೆದುಕೊಳ್ಳುವುದರಿಂದ ಎಲ್ಲವೂ ಸರಿ ಹೋಗುತ್ತದೆ.

ಭಗವಂತನ ಕೃಪಾಕಟಾಕ್ಷ ಒಂದಿದ್ದರೆ ಸಾಕು ಎಲ್ಲವನ್ನು ಗೆಲ್ಲಬಹುದು ಎನ್ನುವುದಕ್ಕೆ ಇದು ಮತ್ತೊಂದು ಪ್ರತ್ಯಕ್ಷ ಉದಾಹರಣೆ. ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಕೋಯಿಲ್ ವೆನ್ನಿ ಎನ್ನುವ ಗ್ರಾಮದಲ್ಲಿ ಈ ದೇವಾಲಯ ಇದೆ. ಇಲ್ಲಿರುವ ಈಶ್ವರನನ್ನು ವೆನ್ನಿ ಕರುಂಬೇಶ್ವರರ್ ಎಂದು ಭಕ್ತಾದಿಗಳು ಕರೆಯುತ್ತಾರೆ ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಹಳೆ ದೇವಾಲಯವಿದು.

ಈ ದೇವಾಲಯಕ್ಕೆ ಈ ಹೆಸರು ಬರುವುದಕ್ಕೂ ಕಾರಣವಿದೆ. ವೆನ್ನಿ ಮತ್ತು ಕರಂಬುಗಳ ಮಧ್ಯೆ ಈ ಶಿವಲಿಂಗ ಮುಚ್ಚಿ ಹೋಗಿತ್ತು. ತಮಿಳಿನಲ್ಲಿ ಕರಂಬು ಎಂದರೆ ಕಬ್ಬು ಎಂದರ್ಥ. ಅಲ್ಲಿಗೆ ಬಂದ ಇಬ್ಬರು ಋಷಿಮುನಿಗಳು ಶಿವಲಿಂಗವನ್ನು ಗುರುತಿಸಿ ಪತ್ತೆ ಮಾಡಿದ ಕಾರಣ ಈ ದೇವಾಲಯಕ್ಕೆ ಬೆನ್ನಿಕರುಂಬರೇಶ್ವರರ್ ಎಂದು ಹೆಸರು ಬಂದಿದೆ. ಈ ದೇವಾಲಯಕ್ಕೆ ಬರುವ ಭಕ್ತಾದಿಗಳಲ್ಲಿ ಹೆಚ್ಚಿನ ಜನ ಮಧುಮೇಹಿಗಳೇ ಆಗಿರುತ್ತಾರೆ.

ಯಾಕೆಂದರೆ ಈ ದೇವಾಲಯಕ್ಕೆ ಬಂದರೆ ಸಕ್ಕರೆ ಕಾಯಿಲೆ ಗುಣವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿಕೆ. ದೇವಾಲಯಕ್ಕೆ ಬಂದಾಗ ರವೆ ಹಾಗೂ ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು. ದೇವರಿಗೆ ನೈವೇದ್ಯ ಆದ ಬಳಿಕ ಅದನ್ನು ವಾಪಸ್ಸು ಕೊಡುತ್ತಾರೆ. ಪ್ರಸಾದ ರೂಪದ ರವೆ ಮತ್ತು ಸಕ್ಕರೆ ಮಿಶ್ರಣವನ್ನು ದೇವಸ್ಥಾನದ ಸುತ್ತಲೂ ಕೂಡ ಹಾಕಬೇಕು.

ಇರುವೆಗಳು ಬಂದು ರವೆಯನ್ನು ಬಿಟ್ಟು ಸಕ್ಕರೆಯನ್ನು ಮಾತ್ರ ತೆಗೆದುಕೊಂಡು ಹೋಗುತ್ತವೆ. ಈ ರೀತಿ ಇರುವೆಗಳು ಸಕ್ಕರೆಯನ್ನು ಬೇರ್ಪಡಿಸಿ ಅದನ್ನು ಸ್ವೀಕರಿಸಿದ ಬಳಿಕ ಅದನ್ನು ಅರ್ಪಿಸಿದವರು ಕೂಡ ಮಧುಮೇಹದಿಂದ ಮುಕ್ತಿ ಹೊಂದುತ್ತಾರೆ. ಕ್ರಮೇಣ ಅವರ ದೇಹದ ಸಕ್ಕರೆಯ ಪ್ರಮಾಣ ಅಂಶ ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ನೀವು ಕೂಡ ಮಧುಮೇಹಿಗಳಾಗಿದ್ದರೆ ತಪ್ಪದೆ ತಮಿಳುನಾಡಿನ ಈ ದೇವಾಲಯಕ್ಕೆ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ಅವರಿಗೂ ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯುವಂತೆ ಮಾಡಿ.

Leave a Comment