ಕಾರಣಾಂತರಗಳಿಂದ ನಮ್ಮ ಆಧಾರ್ ಸಂಖ್ಯೆಯಲ್ಲಿರುವ ಮೊಬೈಲ್ ನಂಬರನ್ನು ಬದಲಾಯಿಸಬೇಕಾಗಿ ಬರುತ್ತದೆ ಜೊತೆಗೆ ಆಧಾರ್ ಕಾರ್ಡ್ ಅಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ಸಂದರ್ಭದಲ್ಲಿ ಆಧಾರ್ ಕೇಂದ್ರಗಳಿಗೆ ಹೋಗಿ ಸಮಯ ವ್ಯರ್ಥ ಮಾಡಿಕೊಂಡು ಕಾಯುವುದರ ಬದಲು ಮನೆಯಲ್ಲಿ ಕುಳಿತು ನಾವು ಈಗ ನಮ್ಮ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಬಹುದು.
ಇದರ ಜೊತೆಗೆ ಐದು ವರ್ಷದ ಒಳಗಿನ ಮಕ್ಕಳು ನಮ್ಮ ಮನೆಯಲ್ಲಿ ಇದ್ದರೆ ನಾವೇ ಅವರ ಆಧಾರ್ ಕಾರ್ಡ್ ಅನ್ನು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಾಯದಿಂದ ಪಡೆದುಕೊಳ್ಳಬಹುದು. ಇದಕ್ಕಾಗಿ ಇಂಡಿಯನ್ ಪೋಸ್ಟ್ ಸರ್ವಿಸ್ ಒಂದು ವೆಬ್ಸೈಟ್ ಬಿಡುಗಡೆ ಮಾಡಿದೆ ಈ ಲೇಖನದಲ್ಲಿ ಹಂತ ಹಂತವಾಗಿ ಯಾವ ರೀತಿ ನಾವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು ಮತ್ತು ಅಪ್ಲಿಕೇಶನ್ ಹಾಕಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.
● ಮೊದಲಿಗೆ ಇಂಡಿಯನ್ ಪೋಸ್ಟ್ ಆಫೀಸಿನ ಸರ್ವಿಸ್ ಲಿಂಕ್ ಆದ https://ccc.cept.gov.in/serviceRequest/request.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
● ಅದರಲ್ಲಿ ನಿಮ್ಮ ಆಧಾರ್ ಅಲ್ಲಿ ಇರುವಂತೆ ಹೆಸರು, ಅಡ್ರೆಸ್, ಪಿನ್ ಕೋಡ್, ಇಮೇಲ್ ಅಡ್ರೆಸ್, ಮೊಬೈಲ್ ಸಂಖ್ಯೆ ಫಿಲ್ ಮಾಡಿ ನಂತರ ಇರುವ ಎರಡು ಆಪ್ಷನ್ಗಳಲ್ಲಿ ಮೊದಲನೇದರಲ್ಲಿ ಸೆಲೆಕ್ಟ್ ಸರ್ವಿಸ್ ಎಂದು ಇರುತ್ತದೆ ಅದರಲ್ಲಿ IPPB Aadhar service ಎನ್ನುವ ಆಪ್ಶನ್ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.
● ಆ ಆಪ್ಶನ್ ಫಿಲ್ ಆದಮೇಲೆ ಅದರ ಕೆಳಗಿರುವ ಬಾಕ್ಸ್ ಅಲ್ಲಿ ಸಬ್ ಸರ್ವಿಸ್ ಎಂದು ಆಪ್ಷನ್ ಇರುತ್ತದೆ ಅದರಲ್ಲಿ ನೀವು ಆಧಾರ್ ಗಿ ಮೊಬೈಲ್ ನಂಬರ್ ಲಿಂಕ್ ಮಾಡಬೇಕೆ ಅಥವಾ ನಿಮ್ಮ ಮನೆಯಲ್ಲಿರುವ ಐದು ವರ್ಷದ ಒಳಗಿರುವ ಮಗುವಿನ ಆಧಾರ್ ಕಾರ್ಡ್ ಪಡೆಯಬೇಕೆ ಎನ್ನುವ ಆಯ್ಕೆಗಳು ಇರುತ್ತವೆ, ಅದರಲ್ಲಿ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
● ಸದ್ಯಕ್ಕೆ ಈಗ ಆಧಾರ್ ನಂಬರ್ ಹಾಕಿ ಯಾವುದೇ ಅಪ್ಲಿಕೇಶನ್ ಹಾಕಿದರೂ OTP ಬರಲು ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು. ಆ ಕಾರಣಕ್ಕಾಗಿ ಈಗ ನೀವು ನಿಮ್ಮ ಆಧಾರ್ ಅಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎಂದಿದ್ದರೆ ಅದಕ್ಕಾಗಿ ಇರುವ ಆಪ್ಷನ್ ಅನ್ನು ಕ್ಲಿಕ್ ಮಾಡಿ ಮತ್ತು ರಿಕ್ವೆಸ್ಟ್ OTP ಎಂದು ಬರುತ್ತದೆ ಅದನ್ನು ಸೆಲೆಕ್ಟ್ ಮಾಡಿ, OTP ಪಡೆಯಿರಿ.
● OTP ಎಂಟ್ರಿ ಮಾಡಿದ ಮೇಲೆ ಕನ್ಫರ್ಮ್ ಸರ್ವಿಸ್ ರಿಕ್ವೆಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ನಿಮ್ಮ ರಿಕ್ವೆಸ್ಟ್ ಸಕ್ಸಸ್ಫ್ಯೂಲ್ ಆಗಿದ್ದರೆ ಒಂದು ರೆಫರೆನ್ಸ್ ನಂಬರ್ ಬರುತ್ತದೆ ಅದನ್ನು ಕಾಪಿ ಮಾಡಿ ಇಟ್ಟುಕೊಳ್ಳಬೇಕು ಅಥವಾ ಬರೆದು ಇಟ್ಟುಕೊಳ್ಳಬೇಕು.
● ನೀವೇನಾದರೂ ನಿಮ್ಮ ಅರ್ಜಿ ಸಲ್ಲಿಸಿ ಆದ ಮೇಲೆ ಅದರ ಸ್ಟೇಟಸ್ ಚೆಕ್ ಮಾಡಬೇಕು ಎಂದರೆ ಅದೇ ಪೇಜ್ ಅಲ್ಲಿ ಟ್ರ್ಯಾಕ್ ಯುವರ್ ಆಧಾರ್ ರಿಕ್ವೆಸ್ಟ್ ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ.
● ನಿಮ್ಮ ಮೊಬೈಲ್ ನಂಬರ್ ಅಥವಾ ನೀವು ಪಡೆದುಕೊಂಡ ರೆಫರೆನ್ಸ್ ನಂಬರ್ ಎಂಟ್ರಿ ಮಾಡಿ ಫೆಚ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ರಿಕ್ವೆಸ್ಟ್ ಸ್ಟೇಟಸ್ ಏನಾಗಿದೆ ಎಂದು ತಿಳಿಯುತ್ತದೆ.
● ಇಷ್ಟಾದ ಬಳಿಕ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ಒಬ್ಬರು ಸಿಬ್ಬಂದಿ ನಿಮ್ಮ ಮನೆಗೆ ಬಂದು ನಿಮ್ಮ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಅಥವಾ ಇ-ಮೇಲ್ ಐಡಿ ಲಿಂಕ್ ಮಾಡುವ ಮತ್ತು ಐದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಅರ್ಜಿ ಸ್ವೀಕರಿಸುವ ಕೆಲಸವನ್ನು ಮಾಡುತ್ತಾರೆ.
● ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಯಾವುದೇ ದಾಖಲೆಗಳನ್ನು ಕೊಡುವ ಅಗತ್ಯ ಇಲ್ಲ. ಆದರೆ ಮಗುವಿನ ಆಧಾರ್ ಕಾರ್ಡ್ ಪಡೆಯಲು ಪೋಷಕರೊಬ್ಬರ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ ಮುಂತಾದ ದಾಖಲೆಗಳನ್ನು ನೀಡಬೇಕು.