ಮನೆಯ ಮುಂಭಾಗ ಮತ್ತು ಹಿಂಭಾಗ ಈ ಗಿಡ ಬೆಳೆದರೆ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಗ್ಯಾರಂಟಿ…!

ಸಾಮಾನ್ಯವಾಗಿ ಹಳ್ಳಿ ಕಡೆ ಎಲ್ಲರೂ ಮನೆ ಮುಂದೆ ಹಾಗೂ ಹಿಂದೆ ಹಿತ್ತಲಿಗೆ ಎಂದು ಬಹಳ ಜಾಗ ಬಿಟ್ಟು ಕೊಂಡಿರುತ್ತಾರೆ. ಅದರಲ್ಲಿ ಮನೆಗೆ ಅಗತ್ಯವಾದ ಕೆಲವು ಸಣ್ಣ ಪುಟ್ಟ ತರಕಾರಿಗಳು, ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ಪಟ್ಟಣದಲ್ಲಿ ಎಲ್ಲರಿಗೂ ಈ ಅನುಕೂಲತೆ ಇರುವುದಿಲ್ಲ. ಮನೆಯ ಮುಂದೆ ಪಾಟ್ ಗಳಲ್ಲಿ ಆದರೂ ತಮ್ಮಿಂದ ಆದಷ್ಟು ಗಿಡಗಳನ್ನು ಸಾಕುವ ಪ್ರೀತಿ ಉಳಿಸಿಕೊಂಡಿದ್ದಾರೆ.

ಈ ರೀತಿ ಗಿಡಗಳನ್ನು ನೆಡುವ ಅಭ್ಯಾಸ ನಿಮಗೆ ಇದ್ದರೆ ಈಗ ನಾವು ಹೇಳುವ ಈ ಗಿಡಗಳನ್ನು ಹಾಕಿ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿರುವ ಸದಸ್ಯರ ಆಯಸ್ಸು ಆರೋಗ್ಯ ವೃದ್ಧಿ ಆಗಿ ಮನೆಗೆ ಸಕಲ ಐಶ್ವರ್ಯಗಳು ಕೂಡ ಪ್ರಾಪ್ತಿ ಆಗುತ್ತದೆ. ಹಾಗೂ ಸದಾಕಾಲ ಆ ಮನೆಗಳ ಮೇಲೆ ದೇವನ್ ದೇವತೆಗಳ ಆಶೀರ್ವಾದವೂ ಇರುತ್ತದೆ.

ದೇವರ ಪೂಜೆಗೆ ಹೂವು ಬೇಕೇ ಬೇಕು. ಹೂವಿಲ್ಲದೆ ಅಲಂಕಾರ ಅಸಾಧ್ಯ. ಆದರೆ ಈ ರೀತಿ ಹೂಗಳನ್ನು ದೇವರ ಪೂಜೆಗೆ ಬಳಸಲು ನಾವು ಹಣ ಕೊಟ್ಟು ತರುತ್ತೇವೆ. ಅದರ ಬದಲು ಮನೆಯಲ್ಲಿಯೇ ಹೂ ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿ ಆ ಹೂಗಳಿಂದ ದೇವರ ಪೂಜೆ ಮಾಡಿದರೆ ದೇವರಿಗೆ ಇನ್ನೂ ಹೆಚ್ಚು ಇಷ್ಟ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಪ್ರತಿಯೊಬ್ಬರು ತಮ್ಮ ಮನೆ ದೇವರ ಪೂಜೆಗೆ ಬೇಕಾದ ಹೂಗಳನ್ನು ತಾವೇ ಬೆಳೆದುಕೊಳ್ಳಲು ಪ್ರಯತ್ನ ಪಡಬೇಕು. ಜೊತೆಗೆ ಮನೆ ಹಿತ್ತಲಿನಲ್ಲಿ ಜಾಗ ಇದ್ದರೆ ಅಥವಾ ಮನೆ ಮುಂದೆ ಜಾಗ ಇದ್ದರೆ ಮನೆಗೆ ಸಕರಾತ್ಮಕ ವಾತಾವರಣವನ್ನು ತುಂಬುವ ಹೂವಿನ ಗಿಡಗಳನ್ನು ಬೆಳೆಸಬೇಕು. ಎಲ್ಲಾ ಮನೆಗಳ ಮುಂದೆ ಕೂಡ ತಪ್ಪದೆ ತುಳಸಿ ಗಿಡವನ್ನು ನೀಡಬೇಕು ತುಳಸಿ ಮನೆ ಮುಂದೆ ಇದ್ದ ಮನೆಯಲ್ಲಿ ಲಕ್ಷ್ಮಿ ಕಳೆ ಇರುತ್ತದೆ. ಹಾಗಾಗಿ ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನು ತಪ್ಪದೆ ಬೆಳೆಯಬೇಕು.

ಒಂದೊಂದು ದೇವರುಗಳಿಗೆ ಒಂದೊಂದು ಹೂವು ಇಷ್ಟ ಆಗಿರುತ್ತದ. ಶಿವನಿಗೆ ತುಂಬೆ ಹೂವು ಇಷ್ಟ ಆಗಿರುವುದರಿಂದ ಹಾಗೂ ತುಂಬೆ ಹೂವು ಔಷಧೀಯ ಗಿಡವು ಆಗಿರುವುದರಿಂದ ಮನೆಯ ಮುಂದೆ ತುಂಬೆ ಗಿಡ ನೆಡಬೇಕು ಮತ್ತು ಸೂರ್ಯನಿಗೆ ದಾಸವಾಳ ಹೂವು ಇಷ್ಟವಾದ ಕಾರಣ ದಾಸವಾಳದ ಗಿಡಗಳನ್ನು ಕೂಡ ನೆಡಬಹುದು ದಾಸವಾಳ ಹೂವಿನಿಂದ ದೇವರಿಗೆ ಅಲಂಕಾರ ಮಾಡಿದರೆ ಬಹಳ ಚೆನ್ನಾಗಿ ಕಾಣುವುದರಿಂದ ಬಣ್ಣ ಬಣ್ಣದ ದಾಸವಾಳದ ಹೂಗಳನ್ನು ಬೆಳೆಯಬಹುದು. ಜೊತೆಗೆ ಮಂದಾರ ಪುಷ್ಪ, ನಿತ್ಯ ಪುಷ್ಪ, ವಿಷ್ಣುಕಾಂತಿ ಬ್ರಹ್ಮ ಕಮಲ, ಪಾರಿಜಾತ ಇವುಗಳ ಜೊತೆ ಶಂಖ ಪುಷ್ಪದ ಬಳ್ಳಿಯನ್ನು ಹಬ್ಬಿಸಬಹುದು. ಮೀಸೆಗಂಟಿಕೆ ಹಲವು ಬಣ್ಣಗಳ ಲಭ್ಯವಾಗಿದೆ ಕೇಸರಿ ಬಣ್ಣದ ಮೀಸೆಗಂಟಿಕೆ ಗಿಡ ದೇವರಿಗೆ ಪ್ರಿಯ ಆಗಿರುವುದರಿಂದ ಅದನ್ನು ನೆಡಬಹುದು.

ಇವೆಲ್ಲವೂ ದೇವರಿಗೆ ಇಷ್ಟವಾದ ಹೂವುಗಳು ಆಗಿವೆ ಈ ರೀತಿ ದೇವರಿಗೆ ಇಷ್ಟವಾದ ಗಿಡಗಳನ್ನು ಮನೆ ಮುಂದೆ ಹಾಕಿರುವುದರಿಂದ ಮನೆಗೆ ದೇವರ ಆಶೀರ್ವಾದ ಎಂದೂ ಇರುತ್ತದೆ, ಗ್ರಹಗಳ ಆಶೀರ್ವಾದ ಇರುತ್ತದೆ. ನಿತ್ಯ ನೂತನವಾಗಿ ಮನೆ ಅಭಿವೃದ್ಧಿಯು ಆಗುತ್ತದೆ. ಇದರ ಜೊತೆಗೆ ಜಾಜಿ, ಸಂಪಿಗೆ, ಚಂಪಕ, ಸೇವಂತಿಗೆ ಮುಂತಾದ ಗಿಡಗಳನ್ನು ಹಾಕಬಹುದು. ಇವುಗಳನ್ನು ಮನೆಯ ಹಿಂದೆ ಹಾಕಬೇಕು. ಮನೆಯ ಈಶಾನ್ಯ ಭಾಗದಲ್ಲಿ ಪಾರಿಜಾತ ಪುಷ್ಪ ಹಾಕಿದರೆ ಆ ಮನೆ ಲಕ್ಷ್ಮಿ ವಾಸಸ್ಥಾನವಾಗಿರುತ್ತದೆ.

Leave a Comment