Friday, June 9, 2023
HomeDevotionalಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ...

ಮನೆ ಕಟ್ಟುವ ಆಸೆ ಇದ್ದವರು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಇದ್ದವರು ಈ ದೇವಾಲಯಕ್ಕೆ ಭೇಟಿ ಕೊಡಿ ಸಾಕು. ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

ಮೈಸೂರಿನಿಂದ ಸುಮಾರು 50 km ದೂರದ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಪುರಾತನವಾದ ಶ್ರೀ ಭೂ ವರಹನಾಥ ದೇಗುಲವಿದೆ. ಈ ದೇವಾಲಯಕ್ಕೆ ಸುಮಾರು 2500ಕ್ಕೂ ಹೆಚ್ಚಿನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ದಾಖಲೆಗಳ ಪ್ರಕಾರ ಹೊಯ್ಸಳರ ಕಾಲದಲ್ಲಿ ಹೊಯ್ಸಳರ ದೊರೆ ವೀರಬಳ್ಳಾಲ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು ಎಂದು ಹೇಳಲಾಗುತ್ತದೆ.

ಈ ದೇವಸ್ಥಾನದ ಅಧಿ ದೇವತೆ ಭೂ ವರಹನಾಥ ಸ್ವಾಮಿ. ಈ ಭೂ ವರಹ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಕೂಡ ಸಾವಿರಾರು ಸಂಖ್ಯೆಯಲ್ಲಿ ಜನ ಸಾಗರ ಹರಿದು ಬರುತ್ತದೆ. ಆದರೆ ಬರುವ ಭಕ್ತರಲ್ಲಿ ಬಹುತೇಕರ ಕೋರಿಕೆ ಒಂದೇ ರೀತಿ ಇರುತ್ತದೆ ಅದಕ್ಕೆ ಕಾರಣ ಕೂಡ ಇದೆ. ಯಾಕೆಂದರೆ, ಇಲ್ಲಿರುವ ದೇವರನ್ನು ಮನೆ ಕಟ್ಟಿಸಲು ಆಶೀರ್ವಾದ ಮಾಡುವ ದೇವರು ಹಾಗೂ ಭೂ ಜ್ಯವನ್ನು ನಿವಾರಿಸುವ ದೇವರು ಎಂದೇ ಭಕ್ತಾದಿಗಳು ನಂಬಿದ್ದಾರೆ.

ಯಾಕೆಂದರೆ ಈ ದೇವಾಲಯದಲ್ಲಿರುವ ಭೂ ದೇವಿ ಸಮೇತ ಭೂವರಹನಾಥ ಸ್ವಾಮಿಯ ಬಳಿ ಮನೆ ಕಟ್ಟಲು ಕೋರಿಕೆ ಇಟ್ಟರೆ ಬೇಗ ನೆರವೇರುತ್ತದೆಯಂತೆ. ಅದಕ್ಕಾಗಿ ಭಕ್ತರು ಒಂದು ಆಚರಣೆಯನ್ನು ಅನುಸರಿಸುತ್ತಾರೆ. ಹೇಗೆಂದರೆ ದೇವಸ್ಥಾನಕ್ಕೆ ಬಂದು ಕೋರಿಕೆ ಮಾಡಿಕೊಂಡು ಇಲ್ಲಿಂದ ಮಣ್ಣನ್ನು ಇಲ್ಲಿಂದ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರೆ ನಿರ್ವಿಘ್ನವಾಗಿ ಕೆಲಸ ಪೂರ್ತಿಗೊಳ್ಳುತ್ತದೆ.

ಎಂದು ಮತ್ತು ಭೂ ವ್ಯಾಜ್ಯ ಸಂಬಂಧಿತ ಸಮಸ್ಯೆಗಳಿಂದ ತೊಂದರೆ ಪಡುತ್ತಿರುವವರು ಸಹ ಈ ದೇವಸ್ಥಾನಕ್ಕೆ ಬಂದು ಬೇಡಿಕೊಳ್ಳುವುದರಿಂದ ಶೀಘ್ರವಾಗಿ ಅವರ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಇಲ್ಲಿಗೆ ಬರುವ ಹೆಚ್ಚಿನ ಜನರ ಕೋರಿಕೆ ಇದೇ ರೀತಿ ಇರುತ್ತದೆ.

ಹೇಮಾವತಿ ನದಿಯ ದಂಡೆಯ ಮೇಲೆ ಇರುವ ಈ ದೇವಸ್ಥಾನವು ಬೂದು ಬಣ್ಣದ ಕಲ್ಲುಗಳಿಂದ ನಿರ್ಮಾಣವಾಗಿದೆ. ದೇವಸ್ಥಾನದ ಗರ್ಭಗುಡಿ ವಿನ್ಯಾಸ ಒಂದು ರೀತಿ ಇದೆ, ಹೊರಾಂಗಣ ವಾಸ್ತುಶಿಲ್ಪವು ಮತ್ತೊಂದು ರೀತಿಯಲ್ಲಿ ಇದೆ ಗರ್ಭಗುಡಿಯಲ್ಲಿರುವ ಶ್ರೀ ವರಹನಾಥ ಸ್ವಾಮಿಯ ವಿಗ್ರಹವನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. 14 ಅಡಿ ಎತ್ತರದ ಭೂವರಹನಾಥ ಸ್ವಾಮಿ ವಿಗ್ರಹದಲ್ಲಿ ಎಡ ತೊಡೆಯ ಮೇಲೆ 3.5 ಅಡಿ ಎತ್ತರದ ಬೃಹತಾಕಾರದ ಭೂದೇವಿಯ ವಿಗ್ರಹವನ್ನು ಕೂಡ ಕೆತ್ತನೆ ಮಾಡಲಾಗಿದೆ.

ಭೂ ವರಾಹನಾಥ ಸ್ವಾಮಿಗೆ ನಾಲ್ಕು ಕೈಗಳಿರುವಂತೆ ಕೆತ್ತನೆ ಮಾಡಲಾಗಿದ್ದು, ಎರಡು ಕೈಗಳು ಮೇಲ್ಮುಖವಾಗಿ ಒಂದು ಶಂಖವನ್ನು ಹಾಗೂ ಮತ್ತೊಂದು ಸುದರ್ಶನ ಚಕ್ರವನ್ನು ಹಿಡಿದಿವೆ. ಮತ್ತೆರಡು ಕೈಗಳಲ್ಲಿ ಎಡಗೈ ಭೂದೇವಿಯನ್ನು ಆವರಿಸಿಕೊಂಡಿದ್ದರೆ, ಬಲಗೈ ಅಭಿಮಾನ ಮುದ್ರೆಯಲ್ಲಿ ಇದೆ.

ದೇವಸ್ಥಾನದ ಮುಂಭಾಗಕ್ಕೆ ಬಲ ಭಾಗದಲ್ಲಿ ಇರುವಂತೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಪ್ರತಿದಿನವೂ ಕೂಡ ಅಲ್ಲಿ ಪೂಜೆ ನಡೆಯುತ್ತದೆ. ದಾಸೋಹ ಭವನವನ್ನು ಕೂಡ ಸ್ಥಾಪಿಸಲಾಗಿದ್ದು, ಪ್ರತಿದಿನವೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಭೂದೇವಿಯನ್ನು ಮೇಲೆತ್ತಿ ರಕ್ಷಿಸಲು ವಿಷ್ಣು ವರಾಹ ಅವತಾರ ತಾಳಿದ್ದರಿಂದ ಇಲ್ಲಿ ಭೂದೇವಿ ಸ್ವರೂಪವಾದ ಮಣ್ಣಿಗೆ ಇಷ್ಟು ಪ್ರಾಮುಖ್ಯತೆ ಇದೆ ಇಂದು ನಂಬಲಾಗಿದೆ.

ಗೌತಮ ಬುದ್ಧರು ಕೂಡ ಈ ದೇವಾಲಯದಲ್ಲಿ ತಪಸ್ಸು ಮಾಡಿ ಹೋಗಿದ್ದರು ಎನ್ನುವ ಪ್ರತೀತಿ ಇದೆ. ಹೇಮನದಿ ದಂಡೆಯಲ್ಲಿ ಇರುವುದರಿಂದ ಇಲ್ಲಿಯ ಪ್ರಕೃತಿ ಸೌಂದರ್ಯ ಪ್ರೇಕ್ಷಣೀಯ ಸ್ಥಳವಾಗಿಯೂ ಆಕರ್ಷಿಸುತ್ತದೆ. ಇಷ್ಟು ಮಹತ್ವವಿರುವ ಈ ದೇವಾಲಯಕ್ಕೆ ತಪ್ಪದೆ ಜೀವನದಲ್ಲಿ ಒಂದು ಬಾರಿ ಆದರೂ ಭೇಟಿ ಕೊಡಿ.