ಉಪ್ಪಿಗೆ ಒಂದು ಅದ್ಭುತ ಶಕ್ತಿ ಇದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಮನೆ ಜನರ ನಡುವೆ ವೈ ಮನಸು, ಬೇಸರ, ಸದಾ ಕೋಪ ಇರುತ್ತದೆ, ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ, ಮನೆಗೆ ಬರಬೇಕು ಎಂದು ಯಾರಿಗೂ ಇಷ್ಟ ಆಗುವುದಿಲ್ಲ, ಮನೆಯ ವಾತಾವರಣವೇ ಚೆನ್ನಾಗಿರುವುದಿಲ್ಲ.
ದುಡಿದ ಹಣ ಸ್ವಲ್ಪವೂ ಕೂಡ ಮನೆಯಲ್ಲಿ ಉಳಿಯುವುದಿಲ್ಲ, ಮನೆಯಲ್ಲಿ ಯಾರಿಗೂ ಕೆಲಸ ಮಾಡಲು ಇಷ್ಟ ಇರುವುದಿಲ್ಲ, ಸಣ್ಣ ಸಣ್ಣ ವಿಚಾರಕ್ಕೂ ದೊಡ್ಡ ಕಲಹ, ವಿನಾಕಾರಣ ಜಗಳ, ವಿರಸ, ಸಾಲ ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆ ಉಂಟಾಗುವುದು, ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಓದಿನಲ್ಲಿ ಏಕಾಗ್ರತೆ ಬರದೆ ಇರುವುದು ಇನ್ನು ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಇದನ್ನೆಲ್ಲ ತೊಡೆದು ಹಾಕುವ ಶಕ್ತಿ ಉಪ್ಪಿಗೆ ಇದೆ. ನೀವು ಪ್ರತಿದಿನ ಮನೆ ಒರೆಸುವಾಗ ಆ ನೀರಿನ ಜೊತೆ ಒಂದು ಹಿಡಿ ಉಪ್ಪು ಹಾಕಿ ಮನೆ ಒರೆಸಿದರೆ ಸಾಕು. ಮನೆಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿಯೂ ದೂರ ಹೋಗಿ ಮನೆ ವಾತಾವರಣವೇ ಸಕಾರಾತ್ಮಕವಾಗಿ ಬದಲಾಗಿ ಹೋಗುತ್ತದೆ. ನಿಮಗೆ ಇರುವ ಎಲ್ಲಾ ಸಮಸ್ಯೆಗಳು ಕೂಡ ಕ್ರಮೇಣ ಕರಗುತ್ತಾ ಬರುತ್ತದೆ.
ಆದರೆ ಯಾವುದೇ ಕಾರಣಕ್ಕೂ ಗ್ರಹಣದ ದಿನ ಹೊರತು ಪಡಿಸಿ ಇನ್ಯಾವುದೇ ಕಾರಣಕ್ಕೂ ಗುರುವಾರದ ದಿನ ಮನೆಯನ್ನು ಒರೆಸಬಾರದು. ಇನ್ನು ಮನೆಯಲ್ಲಿರುವ ಸಾಲ ಬೇಗ ತೀರಬೇಕು ಆರ್ಥಿಕತೆಯಲ್ಲಿ ಉತ್ತಮ ಬೆಳವಣಿಗೆ ಬರಬೇಕು, ಮನೆಗೆ ದನಾಕರ್ಷಣೆ ಉಂಟಾಗಬೇಕು ಎಷ್ಟೇ ಪ್ರಯತ್ನ ಪಟ್ಟರು ಕೂಡ ಹಣ ಉಳಿಯುತ್ತಿಲ್ಲ, ತೆಗೆದುಕೊಂಡಿರುವ ಸಾಲ ತೀರಿಸಲು ಆಗುತ್ತಲೇ ಇಲ್ಲ ಅಂದರೆ ಬೇಗ ಸಾಲ ತೀರಿಸಲು ಈ ಒಂದು ಉಪಾಯವನ್ನು ಉಪ್ಪಿನಿಂದ ಮಾಡಿ ಸಾಕು.
ಶುಕ್ರವಾರದಂದು ನೀವು ಎಂದಿನಂತೆ ಮನೆ ಶುದ್ಧಗೊಳಿಸಿ ದೇವರ ಪೂಜೆ ಮಾಡಿ. ಲಕ್ಷ್ಮಿಯನ್ನು ಆರಾಧಿಸಿದ ನಂತರ ಒಂದು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ಇಡಿ. ಆ ಉಪ್ಪಿನ ಜೊತೆ ಆರು ಲವಂಗವನ್ನು ಇಡಿ, ಗಾಜಿನ ಬಟ್ಟಲು ಬಿಟ್ಟು ಬೇರೆ ಯಾವುದೇ ಪ್ಲಾಸ್ಟಿಕ್ ಲೋಹ ಇತ್ಯಾದಿಗಳ ಬಟ್ಟಲನ್ನು ಬಳಸುವಂತಿಲ್ಲ. ಇಟ್ಟು ನಂತರ ಲಕ್ಷ್ಮಿಯನ್ನು ಮನಸಾರೆ ಪ್ರಾರ್ಥಿಸಿ.
ಈ ಮನೆಯಲ್ಲಿರುವ ನೆಗೆಟಿವ್ ಎನರ್ಜಿಗಳು ಉಪ್ಪಿನಲ್ಲಿ ಹೀರಿಕೊಳ್ಳಲಿ ಹಾಗೂ ಪಾಸಿಟಿವ್ ಎನರ್ಜಿಯನ್ನು ಆ ಲವಂಗಕ್ಕೆ ಕೊಡಿ ನನ್ನ ಸಾಲ ಬೇಗ ತೀರಿ ಹೋಗಬೇಕು, ನಾನು ಮನೆ ಕಟ್ಟಬೇಕು ಎಂದುಕೊಂಡ ಕೆಲಸ ಬೇಗ ಆಗಬೇಕು, ನಮ್ಮ ಮನೆ ಹಣದ ಪರಿಸ್ಥಿತಿ ಸುಧಾರಿಸಬೇಕು ಎಂದು ಪ್ರಾರ್ಥಿಸಿಕೊಳ್ಳಿ.
ಮರುದಿನ ಶನಿವಾರ ಎಂದಿನಂತೆ ಪೂಜಾ ಕಾರ್ಯ ಎಲ್ಲಾ ಮಾಡಿದ ಬಳಿಕ ಮತ್ತೊಮ್ಮೆ ಲಕ್ಷ್ಮಿ ಪ್ರಾರ್ಥಿಸಿ ಇಟ್ಟಿದ್ದ ಉಪ್ಪನ್ನು ಅಡುಗೆ ಮನೆ ಸಿಂಕಿನಲ್ಲಿ ಹಾಕಿ ಕರಗಿಸಿಬಿಡಿ. ಒಂದು ವೇಳೆ ಅಡುಗೆ ಮನೆಯಲ್ಲಿ ಸಿಂಕ್ ವ್ಯವಸ್ಥೆ ಇಲ್ಲ ಅಂದರೆ ಮನೆಯಿಂದ ಹೊರಗೆ ತಂದು ಅದನ್ನು ಬೇರೆ ನೀರಿನ ಜೊತೆ ಹಾಕಿ ಕರಗಲು ಬಿಡಿ, ಅದು ಕರಗಿದ ಬಳಿಕ ಯಾರು ತುಳಿಯದ ಜಾಗದಲ್ಲಿ ಅದನ್ನು ಹಾಕಿ ಮತ್ತು ಲವಂಗವನ್ನು ಕೂಡ ಯಾರು ತುಳಿಯದ ಜಾಗದಲ್ಲಿ ಹಾಕಿ.
ಲವಂಗವನ್ನು ಮಣ್ಣಿನ ಒಳಗಡೆ ಯಾವುದಾದರೂ ಗಿಡದ ಬುಡದಲ್ಲಿ ಯಾರಿಗೂ ಕಾಣದಂತೆ ಹಾಕಿದರೆ ಇನ್ನು ಹೆಚ್ಚಿನ ಫಲ ಸಿಗುತ್ತದೆ. ಈ ರೀತಿ ಮಾಡಿದರೆ ವಾರದಿಂದ ವಾರಕ್ಕೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಸಾಲವೆಲ್ಲ ತೀರಿ ಹೋಗುತ್ತದೆ.