ರಾಯರಿಗೆ ಪ್ರಿಯವಾದ ಮಂತ್ರ ಇದು ಇದನ್ನು ಯಾರು ಪಠಿಸುತ್ತಾರೋ ಅವರ ಜೊತೆ ರಾಯರೇ ಇರುತ್ತಾರೆ.!

 

ಗುರು ರಾಘವೇಂದ್ರ ಸ್ವಾಮಿಗಳನ್ನು ನಾವು ಭಕ್ತಿಯಿಂದ ಆರಾಧನೆ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟವನ್ನು ಸಹ ದೂರ ಮಾಡುತ್ತಾರೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಸಹ ಇದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕ ಷ್ಟದ ಪರಿಸ್ಥಿತಿ ಎದುರಾದರು ಅದನ್ನು ದೂರ ಮಾಡಿಕೊಳ್ಳಲು ರಾಯರ ಪ್ರಾರ್ಥನೆಯನ್ನು ಮಾಡುತ್ತಾರೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಸಹ ದೂರವಾಗುತ್ತದೆ ಎಂದೇ ಹೇಳಬಹುದು. ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಕಲಿಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ದಾರಿ ದೀಪವಾಗಿ ಅವರ ಕಷ್ಟಗಳನ್ನು ದೂರ ಮಾಡುತ್ತಿರುವಂತಹ ಕಲಿಯುಗ ದೈವ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಷ್ಟು ಪವಾಡ ವನ್ನು ಸೃಷ್ಟಿ ಮಾಡುತ್ತಿದ್ದಾರೆ ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ತಿಳಿದಿರುವಂತೆ ರಾಘವೇಂದ್ರ ಶ್ರೀಗಳನ್ನು ಪ್ರಾರ್ಥನೆ ಮಾಡು ವುದಕ್ಕೆ ಹಲವಾರು ಮಂತ್ರಗಳು ಇದ್ದು ಒಂದೊಂದು ಮಂತ್ರಗಳು ಕೂಡ ಒಂದೊಂದು ಪವಾಡವನ್ನು ಸೃಷ್ಟಿ ಮಾಡುತ್ತದೆ ಎಂದೇ ಹೇಳಬಹುದಾಗಿದೆ.

ಅದರಲ್ಲೂ ಬಹಳ ಮುಖ್ಯವಾಗಿ ರಾಘವೇಂದ್ರ ಶ್ರೀಗಳ ಗಾಯತ್ರಿ ಮಂತ್ರವು ಬಹಳ ಪವಾಡವನ್ನು ಸೃಷ್ಟಿ ಮಾಡುತ್ತದೆ ಹಾಗೂ ಅದನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟದ ಪರಿಸ್ಥಿತಿಗಳು ನಿಮ್ಮ ತೊಂದರೆಗಳು ಎಲ್ಲವೂ ಸಹ ದೂರವಾಗು ತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಾಘವೇಂದ್ರ ಶ್ರೀಗಳ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಅದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಹಾಗಾದರೆ ಆ ಒಂದು ಗಾಯತ್ರಿ ಮಂತ್ರ ಯಾವುದು ಹಾಗೂ ಅದನ್ನು ಹೇಳಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವು ಬಹಳ ಶ್ರೇಷ್ಠವಾಗಿದ್ದು.

ಇದನ್ನು ಪ್ರತಿನಿತ್ಯ ಐದು ಬಾರಿ, ಒಂಬತ್ತು ಬಾರಿ, ಅಥವಾ 21 ಬಾರಿ ಹೇಳುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವೂ ಸಹ ಹೆಚ್ಚಾಗುತ್ತದೆ. ಹಾಗಾದರೆ ಈ ಒಂದು ಗಾಯತ್ರಿ ಮಂತ್ರ ಯಾವುದು ಅದನ್ನು ಯಾವ ಸಮಯದಲ್ಲಿ ಹೇಳಬೇಕು ಎಂದು ಈ ಕೆಳಗಿನಂತೆ ತಿಳಿಯೋಣ.

ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು 48 ದಿನ ತಪ್ಪದೇ ಪಠಿಸಬೇಕಾಗುತ್ತದೆ. ಹೌದು ಅದರಲ್ಲೂ ಗುರುವಾರದ ದಿನ ಅಥವಾ ಶುಕ್ಲ ಪಕ್ಷದ ದಿನ ಶುಕ್ರವಾರದ ದಿನ ಪ್ರಾರಂಭಿಸುವುದು ಅತ್ಯಂತ ಶುಭಕರ ಎಂದು ಹೇಳಬಹುದು. ಈ ದಿನಗಳು ತುಂಬಾ ವಿಶೇಷವಾದಂತಹ ದಿನಗಳಾಗಿದ್ದು ಈ ದಿನ ಪ್ರಾರಂಭಿಸುವುದು ಅತ್ಯಂತ ಶುಭ ಎಂದೇ ತಿಳಿಸಲಾಗಿದೆ. ಅದರಲ್ಲೂ ಬಹಳ ವಿಶೇಷವಾಗಿ ಪ್ರತಿದಿನ 1008 ಬಾರಿಯಂತೆ 48 ದಿನ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಗುರು ರಾಘವೇಂದ್ರರು ನಿಮಗೆ ಅನುಗ್ರಹವನ್ನು ಕೊಟ್ಟೆ ಕೊಡುತ್ತಾರೆ ಎಂದು ನಂಬಬಹುದಾಗಿದೆ.

ಹಾಗಾದರೆ ಆ ಒಂದು ಗಾಯತ್ರಿ ಮಂತ್ರ ಯಾವುದು ಎಂದು ನೋಡುವುದಾದರೆ.
” ಓಂ ವೆಂಕಟನಾಥಾಯ ವಿದ್ಮಹೇ
ತಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ
ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರ
ಪ್ರಚೋದಯಾತ್ ”
ಹೀಗೆ ಮೇಲೆ ಹೇಳಿದ ಈ ಒಂದು ಮಂತ್ರವನ್ನು ಪ್ರತಿಯೊಬ್ಬರೂ ಕೂಡ ಗುರುವಾರದ ದಿನ ಬೆಳಿಗ್ಗೆ ಅಥವಾ ಸಂಜೆ ಪಠಿಸುತ್ತಾ ಬರುವುದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ಹಾಗೂ ರಾಯರಲ್ಲಿ ನಿಮ್ಮ ಒಂದು ನಂಬಿಕೆಯನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ.

Leave a Comment