Sunday, June 4, 2023
HomeDevotionalರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ...

ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!

ಕಲಿಯುಗದಲ್ಲಿ ಭಕ್ತರನ್ನು ಕೈಹಿಡಿದು ಕಾಪಾಡುವ ದೇವರು ಎಂದರೆ ಅದು ಗುರುರಾಯರು. ಗುರುರಾಯರ ಅನುಗ್ರಹ ನರ ಮಾನವರ ಮೇಲೆ ಎಷ್ಟು ಅಗಾಧವಾಗಿದೆ ಎಂದರೆ ಪ್ರತಿದಿನವೂ ಕೂಡ ಗುರುರಾಯರ ಮಠಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಪ್ರತಿ ಗುರುವಾರವು ರಾಯರ ಮಠಗಳು ತುಂಬಿ ತುಳುಕುತ್ತಿರುವುದೇ ಸಾಕ್ಷಿ.

ಕಷ್ಟ ಹೇಳಿಕೊಂಡು ಬಂದ ಭಕ್ತಾದಿಗಳಿಗೆ ಗುರುಗಳ ಸ್ಥಾನದಲ್ಲಿ ನಿಂತು ಶ್ರೀ ಗುರುರಾಘವೇಂದ್ರ ರಾಯರು ಸಲಹಿ ಪೋಷಿಸುತ್ತಿದ್ದಾರೆ. ರಾಘವೇಂದ್ರ ಮಠಕ್ಕೆ ಗುರುವಾರದಂದು ಭೇಟಿ ಕೊಟ್ಟಾಗ ಪ್ರಸಾದದ ರೂಪದಲ್ಲಿ ಅಕ್ಷತೆಯನ್ನು ಕೊಡುತ್ತಾರೆ. ಆ ಮಂತ್ರಾಕ್ಷತೆಯನ್ನು ರಾಯರ ಆಶೀರ್ವಾದ ಎಂದೇ ಭಾವಿಸಬಹುದು. ಯಾಕೆಂದರೆ ಇದುವರೆಗೂ ಕೂಡ ನಿಮ್ಮನ್ನು ಕಾಡುತ್ತಿರುವ ಯಾವುದೇ ಸಮಸ್ಯೆ ಇದ್ದರೂ ಆ ಮಂತ್ರಾಕ್ಷತೆಗೆಅದನ್ನೆಲ್ಲ ಬಗೆಹರಿಸುವ ಶಕ್ತಿ ತುಂಬಿರುತ್ತದೆ.

ಆದರೆ ಕೆಲವು ವಿಧಾನಗಳ ಪ್ರಕಾರ ಅದನ್ನು ಪಾಲಿಸಬೇಕು ಅಷ್ಟೇ. ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಓದಿನಲ್ಲಿ ಆಸಕ್ತಿ ಬರುತ್ತಿಲ್ಲ ಅಥವಾ ಓದಿದ ಯಾವ ವಿಷಯವನ್ನು ಸಹ ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತಿಲ್ಲ ಎಂದರೆ, ಆಸಕ್ತಿ ಇದ್ದರು ಓದಿನಲ್ಲಿ ತೊಂದರೆಯಾಗುತ್ತಿದೆ ಎಂದಾಗ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಭಕ್ತಿಯಿಂದ ಗುರು ರಾಘವೇಂದ್ರನ ಭಕ್ತಿಯಿಂದ ಸ್ಮರಿಸಿ ಪ್ರತಿದಿನ ರಾತ್ರಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ.

ಮರು ದಿನದಿಂದಲೇ ಒಂದು ಚಮತ್ಕಾರ ಬದಲಾವಣೆ ನಿಮ್ಮ ಬದುಕಿನಲ್ಲಿ ನಡೆಯುತ್ತದೆ ಹಾಗೆ ನೀವೇನಾದರೂ ಹೆಚ್ಚು ವಿದ್ಯಾಭ್ಯಾಸ ಪಡೆದು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು ಹತ್ತಿರದಲ್ಲಿ ಉದ್ಯೋಗವಕಾಶ ಕೈ ತಪ್ಪುತ್ತಿದೆ ಎನ್ನುವುದಾದರೆ ಅಂತಹವರು ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೋದಾಗ ಅಥವಾ ಯಾವುದೇ ಸಂದರ್ಶನವನ್ನು ಎದುರಿಸಲು ಹೋದಾಗ ರಾಯರ ಈ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಗುರುರಾಯರನ್ನು ಮನಸ್ಸಾರೆ ಸ್ಮರಿಸಿ.

 

ನಿಮ್ಮ ಸಮಸ್ಯೆ ಹೇಳಿಕೊಂಡು ಆ ಅಕ್ಷತೆಯನ್ನು ಮೂರರಿಂದ ನಾಲ್ಕು ಕಾಳುಗಳಷ್ಟು ತಲೆ ಮೇಲೆ ಹಾಕಿಕೊಂಡು ಹೋದರೆ ಆ ಉದ್ಯೋಗ ನಿಮ್ಮ ಕೈತಪ್ಪಿ ಹೋಗುವುದಿಲ್ಲ. ಇದು ಮಾತ್ರ ಅಲ್ಲದೆ ಕುಟುಂಬದ ಅನೇಕ ಕೌಟುಂಬಿಕ ಸಮಸ್ಯೆಗಳಿಗೂ ಕೂಡ ರಾಘವೇಂದ್ರರರ ಅಕ್ಷತೆಯೇ ಒಂದು ಚಮತ್ಕಾರ ಶಕ್ತಿಯಂತೆ, ಅದನ್ನೆಲ್ಲ ಬಗ್ಗೆ ಹರಿಸುವ ದಾರಿ ತೋರಿತ್ತದೆ. ಕುಟುಂಬದಲ್ಲಿ ಪತಿ ಪತ್ನಿ ಮಧ್ಯೆ ಸದಾ ಕಲಹ ಆಗುತ್ತಿದ್ದರೆ, ವಿನಾಕಾರಣ ಭಿನ್ನಾಭಿಪ್ರಾಯ ಮೂಡಿ ಜಗಳ ಆಗುತ್ತಿದ್ದರೆ.

ಆ ಸಮಯದಲ್ಲಿ ಈ ರೀತಿ ಮಾಡಿ ರಾಯರ ಮಂತ್ರಾಕ್ಷತೆಯನ್ನು ತೆಗೆದುಕೊಂಡು ರಾಯರ ಬಳಿ ನಿಮ್ಮ ಕುಟುಂಬದ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು ಅವರ ಅನುಗ್ರಹಕ್ಕಾಗಿ ಪ್ರಾರ್ಥಿಸಿ. ನಂತರ ಅದನ್ನು ಸಕ್ಕರೆ ಜೊತೆ ಬೆರೆಸಿ ತಲೆಯ ಮೇಲೆ ಹಾಕಿಕೊಳ್ಳಬೇಕು. ಈ ರೀತಿ ಮಂತ್ರಾಕ್ಷತೆಗೆ ಸಕ್ಕರೆಯನ್ನು ಮಿಶ್ರಣ ಮಾಡಿದ ಪ್ರಸಾದರವನ್ನು ಶುದ್ಧ ಮನಸ್ಸಿನಿಂದ ಮತ್ತೊಬ್ಬರ ಕಷ್ಟ ಪರಿಹಾರ ಆಗಲಿ ಎಂದು ಬೇರೆಯವರಿಗೆ ಕೊಡಬೇಕು.

ರಾಯರಿಗೆ ಒಳ್ಳೆಯ ಮನಸ್ಸಿನವರು, ಒಳ್ಳೆಯ ಗುಣ ನಡತೆ ಉಳ್ಳವರು ಹಾಗೂ ಸದಾ ತಮ್ಮಂತೆ ಇತರರನ್ನು ಕಾಣುವವರು, ಇತರ ಕಷ್ಟಗಳಿಗೆ ಕರಗುವವರನ್ನು ಕಂಡರೆ ಬಹಳ ಪ್ರೀತಿ. ಈ ರೀತಿ ಕೊಡುವುದರಿಂದ ಕೊಟ್ಟವರ ಹಾಗೂ ತೆಗೆದುಕೊಂಡವರ ಇಬ್ಬರ ಸಮಸ್ಯೆಗಳು ದೂರವಾಗಿ ಇಬ್ಬರು ನೆಮ್ಮದಿ ಕಾಣುತ್ತಾರೆ. ಅಲ್ಲದೇ ಸದಾ ಕಾಲ ಗುರುರಾಯರ ಅನುಗ್ರಹ ಅವರೆಲ್ಲರ ಮೇಲೆ ಇರುತ್ತದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ಇನ್ನು ಹೆಚ್ಚಿನ ಜನರ ಹಂಚಿಕೊಂಡು ಬೇರೆಯವರ ಸಮಸ್ಯೆಗೆ ಪರಿಹಾರ ಕೊಡುವುದರ ಜೊತೆಗೆ ನೀವು ಸಹ ಗುರುರಾಯರ ಅನುಗ್ರಹಕ್ಕೆ ಪ್ರಾಪ್ತರಾಗಿ.