ಜೀವನದಲ್ಲಿ ಶತ್ರುಗಳು ಯಾರಿಗಿಲ್ಲ ಹೇಳಿ. ಜೀವನದಲ್ಲಿ ಶತ್ರುಗಳು ಆಗಲು ನಾವು ಇನ್ನೊಬ್ಬರಿಗೆ ಕೆಟ್ಟದ್ದು ಮಾಡಿರಬೇಕು ಅಥವಾ ಬಯಸಿರಬೇಕು ಎಂದು ಇಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಒಳ್ಳೆಯತನ ಅಥವಾ ನಮ್ಮ ಜನಪ್ರಿಯತೆ ಅಥವಾ ನಾವು ಜೀವನದಲ್ಲಿ ಬೆಳೆಯುತ್ತಿರುವ ವೇಗ ಇವುಗಳಿಂದಲೂ ಕೂಡ ಶತ್ರುಗಳು ಉಂಟಾಗುತ್ತಾರೆ.
ಅಥವಾ ಇನ್ನೊಬ್ಬರ ತಪ್ಪುಗಳನ್ನು ನಾವು ತಿದ್ದಲು ಹೋದಾಗ ಇನ್ನೊಬ್ಬರಿಗೆ ಒಳಿತನ್ನು ಮಾಡುವ ಸಲುವಾಗಿ ಸ್ವಲ್ಪ ಕಟ್ಟುವಾಗಿ ನಡೆದುಕೊಂಡಾಗ ನಮ್ಮ ಮನಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳದೆ ನಮ್ಮ ಉದ್ದೇಶವನ್ನು ಅವರು ಅರಿಯದೆ ಹೋದಾಗ ನಮ್ಮನ್ನು ಶತ್ರುಗಳೆಂದು ಭಾವಿಸುತ್ತಾರೆ. ಒಮ್ಮೆ ಈ ರೀತಿ ಅವರ ಬುದ್ಧಿಗೆ ನಾವು ಶತ್ರುಗಳು ಎನಿಸಿದರೆ ನಂತರ ಅವರಿಂದ ನಮಗೆ ಕಷ್ಟ ಕಾರ್ಪಣ್ಯಗಳು ತಪ್ಪಿದ್ದಲ್ಲ.
ಈ ರೀತಿ ವಿನಾಕಾರಣ ನಮ್ಮ ಬದುಕಿಗೆ ಬಂದು ತೊಂದರೆ ಕೊಡುವ ಶತ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಅದರಲ್ಲಂತೂ ಉದ್ಯೋಗ ಸ್ಥಳದಲ್ಲಿ ಕಾಂಪಿಟೇಶನ್ ಆಗಿ ಅಥವಾ ಆಸ್ತಿ ವಿವರದ ವಿಚಾರಕ್ಕಾಗಿ ಕುಟುಂಬಗಳ ಮನಸ್ತಾಪದ ಕಾರಣ ಶತ್ರುಗಳು ಆದಾಗಲಂತೂ ಅವರ ಕೋಪ ಅತಿರೇಕಕ್ಕೆ ಹೋಗಿರುತ್ತದೆ. ಅವರು ಸದಾ ನಮಗೆ ಕೇಡನ್ನೇ ಬಯಸುತ್ತಿರುತ್ತಾರೆ ಮತ್ತು ಸಾಧ್ಯವಾದಷ್ಟು ನಮ್ಮನ್ನು ತುಳಿಯುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಇಂತಹ ಸಮಯದಲ್ಲಿ ಅವರಿಂದ ತಪ್ಪಿಸಿಕೊಳ್ಳಬೇಕು ಅಥವಾ ಆ ಸಮಸ್ಯೆಯಿಂದ ಪರಿಹಾರ ಆಗಬೇಕು ಎನ್ನುವ ಕಾರಣಕ್ಕೆ ನಾವು ಸಹ ಅವರಷ್ಟೇ ಕೆಳಮಟ್ಟಕ್ಕೆ ಇಳಿದು ಕೆಟ್ಟದ್ದು ಮಾಡಲು ಅಥವಾ ಅವರಂತೆ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಭಗವಂತನ ಮೊರೆ ಹೋಗಿ ಆತನಲ್ಲಿ ಪ್ರಾರ್ಥಿಸಿಕೊಳ್ಳಲು ಅಷ್ಟೇ ನಮಗೆ ಸಾಧ್ಯವಾಗುತ್ತದೆ. ನೀವು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಈ ವಿಧಾನವಾಗಿ ಕೇಳಿಕೊಳ್ಳುವುದರಿಂದ ನೀವು ಅವರಿಗೆ ಏನು ಮಾಡದೇ ಇದ್ದರೂ ಅವರ ಪರಾಜಯ ಉಂಟಾಗುತ್ತದೆ.
ಸಾಮಾನ್ಯವಾಗಿ ಎಲ್ಲರೂ ಸಹ ಪ್ರತಿ ದಿನ ದೇವಸ್ಥಾನಕ್ಕೆ ಹೋಗುತ್ತಿರುತ್ತೇವೆ. ಸಾಧ್ಯವಾಗದಿದ್ದರೆ ವಿಶೇಷ ದಿನಗಳಲ್ಲಾದರೂ ದೇವಸ್ಥಾನಕ್ಕೆ ಹೋಗುತ್ತಾ ಇರುತ್ತೇವೆ. ನಮ್ಮ ಇಷ್ಟ ದೇವರ ದೇವಸ್ಥಾನವಾದರಂತೂ ಲೆಕ್ಕವಿರದಷ್ಟು ಬಾರಿ ಹೋಗುತ್ತಲೇ ಇರುತ್ತೇವೆ. ಈ ರೀತಿ ದೇವಸ್ಥಾನಕ್ಕೆ ಹೋದಾಗ ದೇವಾಲಯಗಳ ಪ್ರದಕ್ಷಿಣೆ ಹಾಕುವುದು ಹಾಗೂ ವಿಗ್ರಹಗಳ ಸುತ್ತ ಪ್ರದಕ್ಷಿಣೆ ಹಾಕುವುದು ಮಾಮೂಲಿ.
ಇಂತಹ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದರೆ ಅಥವಾ ವಿನಾಕಾರಣ ನಿಮಗೆ ತೊಂದರೆ ಕೊಡುತ್ತಿರುವವರು ಸೋಲಬೇಕು ಅವರಿಗೆ ಪರಾಜಯ ಆಗಬೇಕು ಇದು ನಿಮ್ಮ ಮನಸ್ಸಿನಲ್ಲಿದ್ದರೆ ನೀವು ದೇವರಿಗೆ ಪ್ರದಕ್ಷಿಣೆ ಹಾಕುವಾಗ ನಿಮ್ಮ ಮನಸ್ಸಿನಲ್ಲಿ ಅದನ್ನೇ ಕೇಳಿಕೊಳ್ಳಿ ಅದೇ ರೀತಿಯಾಗಿ ನೀವು ಪ್ರಾರ್ಥನೆ ಮಾಡಿ.
ಈ ರೀತಿ ಕೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕುವಾಗ ಮೂರು ಬಾರಿ ಬದಲು ಏಳು ಬಾರಿ ಪ್ರದಕ್ಷಿಣೆ ಹಾಕಿ. ಈ ರೀತಿ ಏಳು ಬಾರಿ ಪ್ರದಕ್ಷಿಣೆ ಹಾಕಿ ಮನಸ್ಸಿನಲ್ಲಿ ಶತ್ರುಗಳ ಕಾಟದಿಂದ ಕಾಪಾಡು ದೇವರೇ ಎಂದು ಕೇಳಿಕೊಂಡರೆ ಅಷ್ಟೇ ಸಾಕು, ನಿಮ್ಮ ಶತ್ರುಗಳು ನಾಶವಾಗಿ ಬಿಡುತ್ತಾರೆ. ಅಂತಹದೊಂದು ಶಕ್ತಿ ಈ ಉಪಾಯಕ್ಕೆ ಇದೆ, ವಾರದ ಯಾವ ದಿನ ಬೇಕಾದರೂ ಇದನ್ನು ಮಾಡಬಹುದು ಅಥವಾ ಪ್ರತಿದಿನ ಕೂಡ ಮಾಡಬಹುದು. ಅದರಲ್ಲೂ ಉಗ್ರ ನರಸಿಂಹ ಮತ್ತು ವೀರಭದ್ರ ಸ್ವಾಮಿಯಂತಹ ದೇವರ ದೇವಾಲಯಗಳಲ್ಲಿ ಈ ರೀತಿ ಮಾಡುವುದರಿಂದ ಇದರ ಪ್ರಭಾವ ಇನ್ನೂ ಹೆಚ್ಚು. ಇನ್ನು ಮುಂದೆ ನಿಮ್ಮ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿ ಸಾಕು.