RBI ಈಗ ತನ್ನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಯಾಕೆಂದರೆ ಈಗ ಭಾರತ ಹಳ್ಳಿ ಹಳ್ಳಿ ಪರಿಗೂ ಕೂಡ ಬ್ಯಾಂಕ್ ಸೌಲಭ್ಯ ಲಭಿಸಿದೆ ಬ್ಯಾಂಕ್ಗಳು ಜನರಿಗೆ ವಂಚಿಸುವ ಪ್ರಕರಣವನ್ನು ತಡೆಯುವ ಸಲುವಾಗಿ ಅವುಗಳನ್ನು ಕಾರ್ಯ ಪ್ರಕ್ರಿಯೆಯನ್ನು ಪರೀಕ್ಷಿಸಿ ಅವ್ಯವಹಾರಗಳಾಗಿದ್ದ ಪಕ್ಷದಲ್ಲಿ ಕೆಲವೊಮ್ಮೆ ತಂಡಗಳನ್ನು ವಿಧಿಸುವ ಮೂಲಕ ನಿಯಮಗಳ ಉಲ್ಲಂಘನೆ ಆಗಿದ್ದ ಸಂದರ್ಭದಲ್ಲಿ ಅವುಗಳನ್ನು ಮುಚ್ಚುವ ಕ್ರಮ ಕೈಗೊಳ್ಳುತ್ತದೆ.
ಈಗಾಗಲೇ RBI ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬ್ಯಾಂಕುಗಳ ಬಾಗಿಲಿಗೆ ಬೀಗ ಹಾಕಿದೆ. ಈ ವರ್ಷದಲ್ಲೇ 2022 ಮತ್ತು 23ನೇ ಸಾಲಿನಲ್ಲಿ ಈ ರೀತಿ RBI ನಿಯಮಗಳನ್ನು ಉಲ್ಲಂಘಿಸಿದ 8 ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಗಳ ಪರವಾನಿಗಳನ್ನು ರದ್ದುಗೊಳಿಸಿ, ಮಾರ್ಚ್ 31 2023 ರಂದು 8 ಬ್ಯಾಂಕಗಳ ಹೆಸರನ್ನು ಪಟ್ಟಿಮಾಡಿ, ಘೋಷಣೆ ಸಹ ನೀಡಿತ್ತು.
ಇದಾಗಿ ತಿಂಗಳು ಕಳೆಯುವ ಅಷ್ಟರಲ್ಲಿ ಇನ್ನು ನಾಲ್ಕು ಬ್ಯಾಂಕುಗಳಿಗೆ ಇದೇ ಪರಿಸ್ಥಿತಿ ಬಂದಿದೆ. ಬ್ಯಾಂಕ್ ವ್ಯವಹಾರದಲ್ಲಿ ಲೋಪಗಳು ಕಂಡುಬಂದಿರುವ ಈ ಬ್ಯಾಂಕುಗಳಿಗೆ 44 ಲಕ್ಷಗಳ ದಂಡ ವಿಧಿಸುವ ಮೂಲಕ ಈ ಬಾರಿ ಎಚ್ಚರಿಕೆಯನ್ನು ನೀಡಿದೆ. ಇದಕ್ಕೆ ಹೇಳಿಕೆ ಕೂಡ ನೀಡಿರುವ RBI ಬ್ಯಾಂಕುಗಳು RBI ನ ನಿಯಮಗಳಿಗೆ ಸರಿಯಾಗಿ ನಡೆದುಕೊಳ್ಳುತ್ತಿವೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು.
ಮತ್ತು ಆಗಾಗ ಅವುಗಳ ಆರ್ಥಿಕ ವ್ಯವಹಾರ ಯಾವ ಉದ್ದೇಶವನ್ನು ಅನುಸರಿಸಿದೆ ಎನ್ನುವುದನ್ನು ಕೂಡ ನಾವು ಪರಿಶೀಲಿಸಿ ಖಚಿತಗೊಳಿಸಿಕೊಳ್ಳಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ಆದಾಗ ಆ ಬ್ಯಾಂಕ್ಗಳಿಗೆ ಈ ರೀತಿ ಶಿಕ್ಷೆ ನೀಡಲೇಬೇಕಾಗುತ್ತದೆ ಎಂದು ಸ್ಪಷ್ಟೀಕರಣ ಕೊಟ್ಟಿದೆ.
ಅದರ ಅನುಸಾರ ಈಗ RBI ನಿಂದ ದಂಡ ಹಾಕಿಸಿಕೊಂಡಿರುವ ಸಹಕಾರಿ ಬ್ಯಾಂಕ್ ಗಳ ವಿವರ ಈ ರೀತಿ ಇದೆ:-
● ತಮಿಳುನಾಡಿನ ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ ಆಪರೇಟಿವ್ ಬ್ಯಾಂಕಿಗೆ 16 ಲಕ್ಷ ದಂಡ ವಿಧಿಸಿ RBI ತನ್ನ ನಿಯಮ ಉಲ್ಲಂಘನೆ ಮಾಡಿರುವಂತಹ ವಿರುದ್ಧ ಕ್ರಮ ಕೈಗೊಂಡಿದೆ.
● ನಿಗದಿತ ಅವಧಿ ಒಳಗೆ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಠೇವಣಿಗಳನ್ನು ವರ್ಗಾಯಿಸಿದ ಬಾಂಬೆ ಮಾರ್ಕೆಟ್ ಕೋ ಆಪರೇಟಿವ್ ಬ್ಯಾಂಕಿಗೆ 13 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
● ಠೇವಣಿಗಳ ಮೇಲೆ ವಿಧಿಸುವ ಬಡ್ಡಿದರಗಳ ನಿರ್ದೇಶನಗಳನ್ನು ಸರಿಯಾಗಿ ಪಾಲಿಸದೆ ಇದ್ದಿದ್ದಕ್ಕಾಗಿ ಪುಣೆ ಮೂಲತ ಜನತಾ ಸಹಕಾರಿ ಬ್ಯಾಂಕಿಗೆ 13 ಲಕ್ಷ ದಂಡ ವಿಧಿಸಿದೆ.
● ನಿಗದಿತ ಸಮಯದೊಳಗೆ ಮಾಹಿತಿಗಳನ್ನು ನಬಾರ್ಡ್ ಗೆ ವರ್ಗಾವಣೆ ಮಾಡದೆ ವಿಳಂಬ ಮಾಡಿದ ಆರೋಪದ ಮೇಲೆ ಮತ್ತು ಇನ್ನು ಕೆಲ ನಿಯಮಗಳ ಉಲ್ಲಂಘನೆ ಆಗಿರುವುಕ್ಕಾಗಿ ರಾಜಸ್ಥಾನ ಮೂಲಕ ಬರಾನ್ ನಾಗರಿಕ ಸಹಕಾರ ಬ್ಯಾಂಕ್ 2 ಲಕ್ಷಗಳ ದಂಡ ವಿಧಿಸಿದೆ.
2022- 23ನೇ ಸಾಲಿನಲ್ಲಿ RBI ಪರವಾನಗಿ ರದ್ದು ಮಾಡಿದ ಬ್ಯಾಂಕ್ ಗಳ ವಿವರ:-
● ಮುಧೋಳ ಕೋ ಆಪರೇಟಿವ್ ಬ್ಯಾಂಕ್
● ಮಿಲತ್ ಕೋ ಆಪರೇಟಿವ್ ಬ್ಯಾಂಕ್
● ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್
● ರೂಪಾಯಿ ಸಹಕಾರಿ ಬ್ಯಾಂಕ್
● ಡೆಕ್ಕನ್ ಕಾರ್ಬನ್ ಕೋ ಆಪರೇಟಿವ್ ಬ್ಯಾಂಕ್
● ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್
● ಸೇವಾ ವಿಕಾಸ್ ಕೋ ಆಪರೇಟಿವ್ ಬ್ಯಾಂಕ್
● ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್.