ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ಕಂದ, ಮುರುಗ ಹೀಗೆಲ್ಲಾ ಕರೆಯುತ್ತಾರೆ. ನಾವು ಕರ್ನಾಟಕದಲ್ಲಿ ಸುಬ್ರಮಣ್ಯ ಸ್ವಾಮಿ ಎಂದು ಪೂಜೆ ಮಾಡುವ ದೇವರನ್ನು ತಮಿಳಿಗರು ಮುರುಗ ಎಂದು ಆರಾಧಿಸುತ್ತಾರೆ. ಈ ಶಿವನ ಪುತ್ರನ ಅನೇಕ ದೇವಾಲಯಗಳು ಭಾರತದಲ್ಲಿ ಇವೆ. ಅದರಲ್ಲೂ ದಕ್ಷಿಣದಲ್ಲಿ ಮುರುಗನಿಗೆ ಭಕ್ತರ ಅತೀ ದೊಡ್ಡ ದಂಡೇ ಇದೆ. ನಮ್ಮ ಪಕ್ಕದ ರಾಜ್ಯವಾದ ತಮಿಳನಾಡಿನಲ್ಲಿ ಕೂಡ ಮುರುಗನನ್ನು ವಿಶೇಷವಾಗಿ ಪೂಜಿಸುತ್ತಾರೆ, ಅಲ್ಲಿ ಮನೆ ಮನೆಗಳಲ್ಲೂ ಕೂಡ ಮುರುಗನ ಭಕ್ತರಿದ್ದಾರೆ.
ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲೂ ಕೂಡ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಅವುಗಳಲ್ಲಿ ಮುರುಗನ ದೇವಾಲಯಗಳು ಕೂಡ ಸೇರಿವೆ. ಇಂತಹದೇ ಒಂದು ಮುರುಗನ ದೇವಸ್ಥಾನದಲ್ಲಿ ವಿಗ್ರಹದ ಮೇಲೆ ಅಭಿಷೇಕ ಮಾಡಿರುವ ನೀರನ್ನು ಸೇವಿಸಿದರೆ ಸಕಲ ಕಾಯಿಲೆಗಳು ಕೂಡ ವಾಸಿ ಆಗುತ್ತವೆ ಎನ್ನುವ ನಂಬಿಕೆ ಇದೆ.
ಈ ದೇವಸ್ಥಾನ ಇರುವುದು ಕೊಯಂಬತ್ತೂರ್ ಬಳಿ ಇರುವ ಮಲು ಮಂಚಿನ್ ಪಟ್ಟಿ ಬಳಿ. ಇಲ್ಲಿ ಈ ದೇವರನ್ನು ದಂಡೆಯುತ ಪಾನಿ ಮುರುಗನ್ ಸ್ವಾಮಿ ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಸುಬ್ರಮಣ್ಯ ಸ್ವರೂಪನಾದ ಮುರುಗ ನೆಲೆಸಿದ್ದು, ಈ ಬೆಟ್ಟಗಳನ್ನು ಪುರಾಣಗಳಲ್ಲಿ ಮೇಲು ಪರ್ವತ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಶಿವನು ಕೂಡ ಒಂದು ಕಾಲದಲ್ಲಿ ಇಲ್ಲಿಗೆ ಬಂದು ತಪಸ್ಸು ಮಾಡಿ ಹೋಗಿದ್ದಾರೆ ಎಂದು ಕಥೆಗಳು ತಿಳಿಸುತ್ತವೆ.
ಎಲ್ಲಾ ದೇವಾಲಯಗಳು ಕೂಡ ಸಾಲಿಗ್ರಾಮದಿಂದ ಅಥವಾ ಪಂಚಲೋಹಗಳಿಂದ ಅಥವಾ ಕಲ್ಲಿನಿಂದ ವಿಗ್ರಹಗಳನ್ನು ನಿರ್ಮಿಸಿದ್ದರೆ ಈ ದೇವಸ್ಥಾನವಾಗಿರುವ ವಿಗ್ರಹ ಇನ್ನು ವಿಶೇಷವಾಗಿದೆ. ಯಾಕೆಂದರೆ ಈ ವಿಗ್ರಹದಲ್ಲಿ ಐದು ರೀತಿಯ ವಿಷಗಳನ್ನು ಸೇರಿಸಲಾಗಿದೆಯಂತೆ. ಅದರಿಂದ ಈ ವಿಷಯದ ಮೇಲೆ ಏನನ್ನೇ ಹಾಕಿದರೂ ಕೂಡ ಅದು ಅಮೃತವಾಗಿ ಹೊರಹೊಮ್ಮುತ್ತದೆ ಎನ್ನುವುದು ಭಕ್ತಾದಿಗಳ ನಂಬಿಕೆ. ಹಾಗಾಗಿ ದೇವಾಲಯಕ್ಕೆ ದೇಶದ ಎಲ್ಲಾ ಕಡೆಗಳಿಂದಲೂ ಕೂಡ ಭಕ್ತರು ಆಗಮಿಸಿ ಅಭಿಷೇಕ ಮಾಡಿರುವ ತೀರ್ಥವನ್ನು ಪಡೆದುಕೊಳ್ಳಲು ಕಾಯುತ್ತಿರುತ್ತಾರೆ.
ಇದು ಭಾರತದ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದು ಎನ್ನುವ ಹೆಸರನ್ನು ಕೂಡ ಪಡೆದಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಪಂಚಾಮೃತ. ಇಲ್ಲಿ ಐದು ವಿಶೇಷ ಹಣ್ಣುಗಳಿಂದ ಪಂಚಾಮೃತವನ್ನು ತಯಾರಿಸಲಾಗುತ್ತದೆ ಮತ್ತು ಈ ಪಂಚಾಮೃತವನ್ನು ಆನ್ಲೈನ್ ಅಲ್ಲಿ ಆರ್ಡರ್ ಮಾಡಿದರೆ ಮನೆ ವಿಳಾಸಕ್ಕೆ ತಲುಪಿಸಿಕೊಡುವ ವ್ಯವಸ್ಥೆಯನ್ನು ಕೂಡ ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿದೆ.
ವರ್ಷಕ್ಕೆ ಒಂದೂವರೆ ಕೋಟಿಗಿಂತಲೂ ಹೆಚ್ಚು ಜನರು ಈ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ ಇದರಲ್ಲಿ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಕೂಡ ಸೇರಿದ್ದಾರೆ ಮತ್ತು ಇನ್ನು ಈ ಪ್ರಸಾದಕ್ಕೆ ಆನ್ಲೈನ್ ನಲ್ಲಿ ಬರುವ ಆರ್ಡರ್ ಸಂಖ್ಯೆ ಎಲ್ಲರ ಹುಬ್ಬೇರಿಸುವಂತಿದೆ. ದಿನಕ್ಕೆ 50,000 ದಿಂದ 60,000 ಆರ್ಡರ್ಗಳು ಈ ಪ್ರಸಾದಕ್ಕಾಗಿ ಬರುತ್ತವೆ ಎನ್ನುವ ವಿಷಯವನ್ನು ಅಂಕಿ ಅಂಶಗಳು ತಿಳಿಸುತ್ತವೆ.
ವಿಶೇಷದಲ್ಲಿ ವಿಶೇಷವಾಗಿರುವ ಈ ಮುರುಗನ್ ದೇವಸ್ಥಾನದಲ್ಲಿ ನಾನ ರೀತಿಯ ಸೇವೆಗಳನ್ನು ಭಕ್ತಾದಿಗಳು ಹರಕೆ ಕಟ್ಟಿಕೊಂಡು ಮಾಡುತ್ತಾರೆ ಮತ್ತು ನಂಬಿ ಬರುವ ಎಲ್ಲಾ ಭಕ್ತರಿಗೂ ಕೂಡ ಸ್ಕಂದನು ಆಶೀರ್ವಾದ ಮಾಡುತ್ತಾರೆ ಮತ್ತು ಅವರ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ದೇವಸ್ಥಾನದ ಅಫೀಷಿಯಲ್ ವೆಬ್ಸೈಟ್ನಲ್ಲಿ ವಿವರಗಳಿವೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು. ನೀವು ಸಹ ಸುಬ್ರಮಣ್ಯ ಭಕ್ತರಾಗಿದ್ದರೆ ತಪ್ಪದೆ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಿ.