ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.

ಪ್ರತಿಯೊಬ್ಬರಿಗೂ ಕೂಡ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ. ಮನೆ ಎನ್ನುವುದು ಜೀವಮಾನದ ಕನಸು. ಯಾಕೆಂದರೆ ಸ್ವಂತ ಮನೆಯಲ್ಲಿ ಇರುವಷ್ಟು ನೆಮ್ಮದಿ ನಿರಾಳ ಮನೋಭಾವ ಬೇರೆ ಎಲ್ಲೃ ಸಿಗುವುದಿಲ್ಲ. ಹುಟ್ಟಿದಾಗಲಿಂದ ಇನ್ನೊಬ್ಬರ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಆ ನೋವು ಗೊತಿರುತ್ತದೆ. ಹಾಗಾಗಿ ಅದು ಪುಟ್ಟ ಗೂಡು ಆಗಿದ್ದರೂ ಪರವಾಗಿಲ್ಲ ಆದರೆ ಅದು ಸ್ವತಂತ್ರವಾದ ಅರಮನೆಯಂತೆ ಇರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಈ ಕಾರಣಕ್ಕಾಗಿ ಬಹಳ ಚಿಕ್ಕ ವಯಸ್ಸಿನಿಂದಲೇ ಆನೇಕರು ಹಣ ಕೂಡಿಡುತ್ತಾರೆ. ಸಾಲ ಮಾಡಿ ಆದರೂ ಪರವಾಗಿಲ್ಲ ಬ್ಯಾಂಕ್ ಲೋನ್ ಆದರೂ ತೆಗೆದುಕೊಂಡು ಮನೆ ಕಟ್ಟಿಯೇ ತಿರಬೇಕು ಎಂದು ಹಠ ತೊಡುತ್ತಾರೆ. ಈ ರೀತಿ ನೀವು ಬಹಳ ಶ್ರಮ ಹಾಕುತ್ತಿದ್ದರೂ ಸ್ವಂತ ಮನೆ ಕನಸು ನನಸಾಗುತ್ತಿಲ್ಲ ಎಂದರೆ ಈ ರೀತಿ ಮಾಡಿ. ಮನೆ ಮಾತ್ರ ಅಲ್ಲದೆ ಮನೆ ಕಟ್ಟಿಸಲು ಸೈಟ್ ಕೊಳ್ಳುವ ಯೋಜನೆ ಇದ್ದರೆ ಅಥವಾ ಯಾವುದೇ ಒಂದು ಭೂಮಿಯನ್ನು ಆಸ್ತಿಯನ್ನು ಖರೀದಿ ಮಾಡುವ ಆಸೆ ನಿಮಗಿದ್ದರೆ.

ನೀವು ಎಷ್ಟೇ ಶ್ರಮವನ್ನು ಹಾಕಿದರೂ ಪ್ರಯತ್ನಪಟ್ಟರು ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಅಥವಾ ನಿಮ್ಮ ಕೈಲಿ ಅದು ಆಗೋದೇ ಇಲ್ಲವೇನೋ ಎನ್ನುವಷ್ಟು ನೋವಾಗುತ್ತಿದ್ದರೆ ನೀವು ಭಗವಂತನ ಮೊರೆ ಹೋಗುವುದೇ ಒಳ್ಳೆಯದು. ಎಲ್ಲದಕ್ಕೂ ಕೂಡ ಭಗವಂತನ ಆಶೀರ್ವಾದ ಇದ್ದರೆ ಮಾತ್ರ ಕಾರ್ಯಸಿದ್ಧಿ ಆಗುವುದು. ನೀವು ನಿಮ್ಮ ಕೋರಿಕೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ದೇವರ ಹತ್ತಿರ ಹೇಳಿಕೊಂಡು ಬಿಟ್ಟರೆ ಅದರಲ್ಲೂ ಈ ರೀತಿ ಆಸ್ತಿಗೆ ಸಂಬಂಧಪಟ್ಟ ಹಾಗೆ ಅಥವಾ ಮನೆ ಮತ್ತು ಭೂಮಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಇದ್ದರೆ ಅಥವಾ ಕನಸುಗಳು ಇದ್ದರೆ ಶ್ರೀ ಲಕ್ಷ್ಮಿ ಸಮೇತ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿದರೆ ಬೇಗ ನೆರವೇರುತ್ತದೆ.

ವಿಷ್ಣುವಿನ ಅವತಾರಗಳಲ್ಲಿ ಒಂದಾದ ಭೂವರಹ ಸ್ವಾಮಿಗೆ ನಿಮ್ಮ ಕೋರಿಕೆ ತಲುಪಿದರೆ ಶೀಘ್ರದಲ್ಲೇ ಅವರು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿ ನಿಮ್ಮ ಕನಸು ನನಸಾಗುವಂತೆ ಮಾಡುತ್ತಾರೆ. ಅವರ ಆಶೀರ್ವಾದದಿಂದ ನೀವು ಬೇಗ ಮನೆ ಕಟ್ಟಿಕೊಳ್ಳಬಹುದು. ಆದರೆ ವರಾಹ ಸ್ವಾಮಿಗೆ ನಿಮ್ಮ ಕೋರಿಕೆಗಳು ಕೇಳಬೇಕು ಎಂದರೆ ನಿಮ್ಮ ಪೂಜೆ ಇಷ್ಟ ಆಗಬೇಕು ಎಂದರೆ ಅವರು ನಿಮಗೆ ಆಶೀರ್ವಾದ ಮಾಡಬೇಕು ಎಂದರೆ ಅದಕ್ಕೆ ಒಂದು ವಿಧಾನ ಇದೆ.

ಹಾಗೆ ಒಂದು ಮಂತ್ರ ಕೂಡ ಇದೆ ಈ ಮಂತ್ರಶಕ್ತಿಯಿಂದ ನೀವು ವರಾಹ ಸ್ವಾಮಿಯ ಆಶೀರ್ವಾದ ಪಡೆಯಬಹುದು. ಪ್ರತಿದಿನ ಮುಂಜಾನೆ ಅಥವಾ ಸಂಜೆ ಸಮಯ ನಿಮಗೆ ಅನುಕೂಲವಾದ ಸಮಯದಲ್ಲಿ ದಿನಕ್ಕೆ 21 ಬಾರಿ ಅಥವಾ 108 ಬಾರಿ ಈ ಮಂತ್ರವನ್ನು ಜಪ ಮಾಡುವುದರಿಂದ ವರಾಹ ಸ್ವಾಮಿ ಆಶೀರ್ವಾದ ನಿಮಗೆ ದೊರೆತು ನಿಮ್ಮ ಕಾರ್ಯ ಸಿದ್ಧಿಯಾಗುತ್ತದೆ.

ಓಂ ನಮೋ ಭಗವತೆ ವರಾಹ ರೂಪಯೇ ಭೂರ್ಭುವಃಸ್ವಃ । ಭೂ ಪತಯೇ ಭೂಪತಿತ್ವಃ ಮೇ ದೇಹಿ ದಾಪಯ ಸ್ವಾಹ॥ ಈ ಮಂತ್ರವನ್ನು ಹೇಳಬೇಕು ಮನಸ್ಸಿನಲ್ಲಿ ಬರಹ ಸ್ವಾಮಿಯನ್ನು ಭಕ್ತಿಯಿಂದ ನೆನೆಯುತ್ತಾ ಧ್ಯಾನಿಸುತ್ತಾ ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳುತ್ತಾ ತಪ್ಪದೇ ಪ್ರತಿದಿನ ಇದನ್ನು ಪಾಲಿಸಿಕೊಂಡು ಬಂದರೆ ಶೀಘ್ರವಾಗಿ ನಿಮ್ಮ ಮನೆ ಕಟ್ಟುವ ಕನಸು ಹಾಗೂ ಆಸ್ತಿ ಖರೀದಿಯ ಕನಸು ನನಸಾಗುತ್ತದೆ. ಉಪಯುಕ್ತ ವಿಷಯವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ ಅವರ ಮನೆಯ ಕನಸು ಕೂಡ ನೆರವೇರಲಿ.

Leave a Comment