ಹಳೆಯ ಮಾತ್ರೆಗಳು ಮನೆಯಲ್ಲಿ ಇದ್ದರೆ ಅವುಗಳನ್ನು ಬಿಸಾಕಬೇಡಿ, ಸಿಕ್ಕಾಪಟ್ಟೆ ಉಪಯೋಗಕ್ಕೆ ಬರುತ್ತದೆ.!

 

ಕೆಲವರ ಮನೆಯಲ್ಲಿ ಒಂದು ಮಿನಿ ಮೆಡಿಕಲ್ ಇರುತ್ತದೆ ಎಂದೇ ಹೇಳಬಹುದು. ಯಾಕೆಂದರೆ, ಮನೆಯಲ್ಲಿ ವಯಸ್ಸಾದವರು ಅಥವಾ ಚಿಕ್ಕ ಮಕ್ಕಳು ಅಥವಾ ಕಾಯಿಲೆ ಬಿದ್ದಿರುವವರು ಇದ್ದರೆ ಸಾಕಷ್ಟು ಮಾತ್ರೆಗಳು ಮನೆಯಲ್ಲಿ ಶೇಖರಣೆ ಆಗಿರುತ್ತವೆ. ಒಮ್ಮೊಮ್ಮೆ ನಾವು ಅಡ್ವಾನ್ಸ್ ಆಗಿ ತಲೆ ನೋವಿನ ಮಾತ್ರೆ, ಪೇನ್ ಕಿಲ್ಲರ್ ಮಾತ್ರೆ ಅಥವಾ ಜ್ವರದ ಮಾತ್ರೆಗಳನ್ನು ಕೂಡ ತಂದು ಸ್ಟೋರ್ ಮಾಡಿ ಇಟ್ಟಿರುತ್ತೇವೆ.

ಇವೆಲ್ಲವೂ ಕೂಡ ಎಕ್ಸ್ಪರಿ ಡೇಟ್ ಮುಗಿದ ಮೇಲೆ ವೇಸ್ಟ್ ಆಗುತ್ತದೆ, ಅವುಗಳನ್ನು ನಾವು ಬಿಸಾಕಿ ಬಿಡುತ್ತೇವೆ. ಎಕ್ಸ್ಪರಿ ಆದ ಮಾತ್ರೆಗಳನ್ನು ಸೇವಿಸಿದರೆ ಅದು ಪಾಯಿಸನ್ ಆಗುವ ಕಾರಣ ದೇಹಕ್ಕೆ ಅಡ್ಡ ಪರಿಣಾಮ ಆಗುತ್ತದೆ ಎನ್ನುವ ಕಾರಣ ಅದನ್ನು ಒಲ್ಲದ ಮನಸ್ಸಿನಿಂದ ಬಿಸಾಕುತ್ತೇವೆ.

ಹಾಗೆಯೇ ಕಾಯಿಲೆ ಗುಣ ಮಾಡುವುದಕ್ಕೆ ತಂದ ಔಷಧಿಯ ಗುಣವೇ ಮುಗಿದು ವಿಷವಾದ ಮೇಲೆ ಆ ವಸ್ತುವಿನಿಂದ ಇನ್ನೇನು ಪ್ರಯೋಜನ ಎನ್ನುವ ಕಾರಣದಿಂದ ಅದು ವೇಸ್ಟ್ ಎನ್ನುವ ಭಾವನೆ ನಮಗೆ ಬರುತ್ತದೆ. ಆದರೆ ಆ ವೇಸ್ಟ್ ಮಾತ್ರೆಗಳು ಕೂಡ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಈಗ ನಾವು ಹೇಳುವ ಈ ಒಂದು ಕೆಲಸಕ್ಕೆ ವೇಸ್ಟ್ ಮಾತ್ರೆಗಳೇ ಮುಖ್ಯ.

ಅದೇನೆಂದರೆ ಎಲ್ಲರ ಮನೆಯಲ್ಲೂ ಕೂಡ ಜಿರಳೆ, ಇರುವೆ, ಇಲಿ, ಹಲ್ಲಿಗಳ ಕಾಟ ಇದ್ದೇ ಇರುತ್ತದೆ. ಇನ್ನು ಅನೇಕ ಸಣ್ಣ ಜೀವಿಗಳು ಅಡುಗೆ ಮನೆಗೆ ಸೇರಿಕೊಂಡು ಕಿರಿ ಕಿರಿ ಮಾಡುತ್ತಿರುತ್ತವೆ. ಇವುಗಳನ್ನು ಮನೆಯಿಂದ ಓಡಿಸದಿದ್ದರೆ ಅದೇನಾದ್ರೂ ಆಹಾರ ಪದಾರ್ಥಗಳ ಮೇಲೆ ಓಡಾಡಿದರೆ ಅಥವಾ ಅವು ನಮ್ಮನ್ನು ಕಚ್ಚಿದ್ದರೆ ನಮಗೆ ಅವುಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಊಟದ ಪದಾರ್ಥವು ಪಾಯ್ಸನ್ ಆಗುವ ವಿಷಯದಲ್ಲಿ ವೈದ್ಯರೇ ಮನೇಲಿರುವ ಜಿರಳೆಗಳು ಕಾರಣ ಎಂದು ಹೇಳಿ ಬಿಡುತ್ತಾರೆ ಇದರಿಂದ ಅನೇಕ ವೈರಲ್ ಫೀವರ್ ಗಳು ಫುಡ್ ಪಾಯಿಸನ್ ಗಳಾಗಿ ಮನೆಯವರೆಲ್ಲ ಸಂಕಷ್ಟ ಅನುಭವಿಸಿ ಇವುಗಳ ಮೇಲೆ ಕೋಪಗೊಂಡಿರುತ್ತೇವೆ.

ನಾವು ಮಾರ್ಕೆಟ್ ಅಲ್ಲಿ ಸಿಗುವ ಯಾವುದೇ ಔಷಧಿಗಳನ್ನು ತಂದು ಹಾಕಿದರೂ ಕೂಡ ಇವು ಮನೆ ಬಿಟ್ಟು ಹೋಗುವುದಿಲ್ಲ ಅಂತಹ ಸಮಯದಲ್ಲಿ ಹಳೆ ಮಾತ್ರೆಗಳನ್ನು ಉಪಯೋಗಿಸಿಕೊಂಡು ಒಂದು ಸಿಂಪಲ್ ಟ್ರಿಕ್ ಮಾಡಿ ಸಾಕು ಇನ್ಯಾವತ್ತು ಅವು ನಿಮ್ಮ ಮನೆಯ ಕಡೆ ಸುಳಿಯದಂತೆ ಹೋಗಿಬಿಡುತ್ತವೆ ಅಥವಾ ಸತ್ತು ಹೋಗುತ್ತವೆ.

ಈ ರೀತಿ ಮಾಡುವುದಕ್ಕೆ ಹಳೆ ಮಾತ್ರೆಗಳ ಜೊತೆ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು ಮತ್ತು ಕೊಬ್ಬರಿ ಎಣ್ಣೆ ಕೂಡ ಬೇಕು. ಒಂದಷ್ಟು ಹಳೆ ಮಾತ್ರೆಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ಎರಡು ಚಮಚಗಳಷ್ಟು ಹಳೆ ಮಾತ್ರೆಗಳ ಪುಡಿ ಆಗಿದ್ದರೆ ಅದಕ್ಕೆ ಎರಡು ಚಮಚಗಳಷ್ಟು ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಹಾಕಿ. ಈಗ ಅದಕ್ಕೆ ಒಂದುವರೆ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಅಥವಾ ಉಂಡೆ ಮಾಡಲು ಎಷ್ಟು ಬೇಕೋ ಅಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ಇದನ್ನು ಈಗ ಜಿರಳೆಗಳು ಹೆಚ್ಚಾಗಿ ಓಡಾಡುವ ಅಡಿಗೆ ಮನೆ ಶೆಲ್ಫ್, ಸಿಂಕ್ ಕೆಳಗೆ ಇಲ್ಲೆಲ್ಲಾ ಇಡಿ. ಕೊಬ್ಬರಿ ಎಣ್ಣೆಯ ಘಮವು ಇವುಗಳನ್ನು ಸೆಳೆಯುವುದರಿಂದ ಅವು ಬಂದು ಇದನ್ನು ತಿಂದು ಸತ್ತು ಹೋಗುತ್ತವೆ ಅಥವಾ ಇದನ್ನು ತಿಂದ ಮೇಲೆ ಅದಕ್ಕೆ ತೊಂದರೆಯಾಗುವ ಕಾರಣ ಮತ್ತೆ ಆ ಜಾಗಕ್ಕೆ ಅವು ಬರುವುದಿಲ್ಲ.

Leave a Comment