ಇಂಟರ್ವ್ಯೂಗಳು ಎಂದು ಹೇಳಿದ ತಕ್ಷಣವೇ ಯುವಜನತೆ ಎದೆ ಝಲ್ ಎನ್ನುತ್ತದೆ. ಯಾಕೆಂದರೆ, ಇಂಟರ್ವ್ಯೂ ಅನ್ನು ಜ್ಞಾನಮಟ್ಟವನ್ನು ಅಳೆಯುವ ಸಾಧನವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಉದ್ಯೋಗ ಅರಿಸಿ ಬರುವವರಿಗೆ ಖಾಸಗಿ ಕಂಪನಿ ಅಥವಾ ಸರ್ಕಾರದ ಹುದ್ದೆಗಳಲ್ಲೂ ಕಡೆ ಹಂತದಲ್ಲಿ ನೇರ ಸಂದರ್ಶನ ನಡೆಸಿ ಪ್ರಶ್ನೆಗಳನ್ನು ಕೇಳುವ ಮೂಲಕ ಆಯ್ಕೆ ಮಾಡಿಕೊಳ್ಳುವುದು.
ಆ ಪ್ರಶ್ನೆಗಳಿಗೆ ಅವರು ವಿಚಲಿತರಾಗದೆ ಎಷ್ಟು ಕಾನ್ಫಿಡೆಂಟ್ ಆಗಿ ಮತ್ತು ಎಷ್ಟು ಸ್ಪಷ್ಟವಾಗಿ ಉತ್ತರ ಕೊಡುತ್ತಾರೆ ಎನ್ನುವುದರ ಮೇಲೆ ಮುಂದೆ ಅವರು ಕೊಡುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಕೆಲವೊಮ್ಮೆ ಬುದ್ಧಿವಂತಿಕೆಯನ್ನು ಪರೀಕ್ಷಿಸಿದರೆ, ಕೆಲವೊಮ್ಮೆ ತಾಳ್ಮೆಯನ್ನು ಕೂಡ ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿ ಗೊಂದಲ ಸೃಷ್ಟಿ ಮಾಡುತ್ತಾರೆ.
ಇದೇ ರೀತಿ ಭಾರತದ ಅತ್ಯುನ್ನತ ನಾಗರಿಕ ಹುದ್ದೆ ಎಂದು ಕರೆಸಿಕೊಳ್ಳಲಾದ IAS ಪರೀಕ್ಷೆಯಲ್ಲೂ ಕೂಡ ಕಡೆ ಹಂತದಲ್ಲಿ ಜನರಲ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅತಿ ಕಠಿಣ ಪರೀಕ್ಷೆ ಎಂದು ಕರೆಸಿಕೊಂಡಿರುವ CSE ಪರೀಕ್ಷೆಗಳನ್ನು ಎದುರಿಸಿ ಅಂತಿಮ ಹಂತಕ್ಕೆ ಹೋಗುವುದು ಅಷ್ಟು ಸುಲಭವಲ್ಲ ಮೊದಲಿಗೆ ಪ್ರಿಲಿಮ್ಸ್ ಎಕ್ಸಾಮ್ ಪಾಸ್ ಮಾಡಿ ಫಿಲ್ಟರ್ ಆಗಿ ನಂತರ ಮುಖ್ಯ ಪರೀಕ್ಷೆಯನ್ನು ದಾಟಿ ಕಡೆಗೆ ಪರೀಕ್ಷೆ ತೆಗೆದುಕೊಂಡ ನೂರರಲ್ಲಿ 10% ಮಂದಿ ಇಂಟರ್ವ್ಯೂ ಹಂತಕ್ಕೆ ತಲುಪುತ್ತಾರೆ.
ಹೀಗಿರುವಾಗ ಈ ಪರೀಕ್ಷೆಯ ಕಠಿಣತೆ ಎಷ್ಟಿದೆ ಎನ್ನುವುದು ಈಗಾಗಲೇ ನಿಮಗೆ ಅರ್ಥ ಆಗಿರುತ್ತದೆ. ಸಂದರ್ಶನ ಹಂತ ತಲುಪಿದ ಮೇಲೆ ಆ ಕಠಿಣತೆ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಯಾಕೆಂದರೆ ಹಲವು ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಜವಾಬ್ದಾರಿಗಳನ್ನು ನಿರ್ವಹಿಸಿ ಭಾರತದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಾ ಸೇವೆ ಮಾಡಿದ ಅಧಿಕಾರಿಗಳು ಸಂದರ್ಶನ ತೆಗೆದುಕೊಳ್ಳುತ್ತಿರುತ್ತಾರೆ.
ಅವರ ಜ್ಞಾನದ ಅನುಸಾರ ಮತ್ತು ಅನುಭವದ ಅನುಸಾರ ಅಭ್ಯರ್ಥಿಗಳನ್ನು ಪರೀಕ್ಷಿಸುತ್ತಾರೆ. ಯಾವ ವಿಷಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಊಹಿಸುವುದು ಕೂಡ ಅಸಾಧ್ಯವಾದ ಪರಿಸ್ಥಿತಿಯಲ್ಲಿ ಅಲ್ಲಿರುವ ವಾತಾವರಣಕ್ಕೆ ನೆನಪಿನಲ್ಲಿರುವುದು ಕೂಡ ಮರೆತು ಹೋಗುವಂತಾಗಿರುತ್ತದೆ. ಆದರೂ ಕೂಡ ಎಷ್ಟೇ ಕನ್ಫ್ಯೂಸಿಂಗ್ ಆಗಿ ಪ್ರಶ್ನೆ ಕೇಳಿದರು ಅದನ್ನು ದಿಟ್ಟತೆಯಿಂದ ಎದುರಿಸಿ ಗೊತ್ತಿದ್ದನ್ನು ಸ್ಪಷ್ಟವಾಗಿ ಮಂಡನೆ ಮಾಡಿದ್ದಲ್ಲಿ ಸಂದರ್ಶನಗಾರರ ಮನ ಓಲೈಕೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಇದಕ್ಕೆ ಉದಾಹರಣೆ ಏನೆಂದರೆ, ಒಬ್ಬ ಯುವತಿ IAS ಇಂಟರ್ವ್ಯೂನಲ್ಲಿ ಸಂದರ್ಶನಕ್ಕಾಗಿ ಕೇಳಿದ ಮುಜುಗರದ ಪ್ರಶ್ನೆಗೆ ಮುಲಾಜಿಲ್ಲದೆ ದಿಟ್ಟತೆಯಿಂದ ಉತ್ತರ ಹೇಳಿದ್ದು. ಅಷ್ಟಕ್ಕೂ ಅವರು ಕೇಳಿದ ಪ್ರಶ್ನೆ ಏನು ಗೊತ್ತಾ? ಹಸುವಿಗೆ ನಾಲ್ಕು ಇರುತ್ತದೆ, ನಿನಗೆ ಎರಡಿದೆ. ಏನು ಮತ್ತು ಯಾಕೆ ಎಂದು ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಜಾಣ್ಮೆಯ ಉತ್ತರ ಈ ರೀತಿ ಇತ್ತು. ಹಸುವಿಗೆ ನಾಲ್ಕು ಸ್ತನಗಳಿರುತ್ತದೆ, ಮನುಷ್ಯರಿಗೆ ಎರಡು ಯಾಕೆಂದರೆ ಕಾಲುಗಳ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ ಎಂದು ಆಕೆ ವೈಜ್ಞಾನಿಕವಾಗಿ ಅದಕ್ಕೆ ವಿಶ್ಲೇಷಣೆ ಕೊಟ್ಟು ಧೈರ್ಯವಾಗಿ ಉತ್ತರಿಸಿದ್ದಾಳೆ.
ಇದೇ ರೀತಿ ಒಬ್ಬ ಯುವಕನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಲಾಗಿತ್ತು? ಅದೇನೆಂದರೆ ಮಧ್ಯರಾತ್ರಿ ಘೋರ ಮೃಗಗಳಿರುವ ಕಾಡು ರಸ್ತೆಯಲ್ಲಿ ನೀವು ಬೈಕಿನಲ್ಲಿ ಹೋಗುತ್ತಿರುತ್ತೀರಾ ಅದೇ ಕಾಡಿನಲ್ಲಿ ನಿಮ್ಮ ಸ್ನೇಹಿತ, 80 ರ ವಯಸ್ಸಿನ ಸಾವು ಮಧ್ಯ ಹೋರಾಡುತ್ತಿರುವ ಮುದುಕಿ ಮತ್ತು ನೀವು ಕೈ ಹಿಡಿಯಬೇಕಾದ 20ರ ಹರೆಯದ ನಿಮ್ಮ ಭಾವಿ ಸಂಗಾತಿ ಇರುತ್ತಾರೆ. ಆಗ ನೀನು ಯಾರನ್ನು ಮನೆಗೆ ಕರೆದೊಯ್ಯುತ್ತೀಯಾ ಎಂದು ಹೇಳಲಾಗಿತ್ತು. ಈ ಪ್ರಶ್ನೆಗೆ ಯುವಕ ಏನೆಂದು ಉತ್ತರ ನೀಡಿರಬಹುದು, ಅಥವಾ ನಿಮ್ಮ ಉತ್ತರ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.