ಇಡೀ ಪ್ರಪಂಚದ ಎಲ್ಲಾ ಧರ್ಮಗಳಿಗಿಂತಲೂ ಕೂಡ ಹಳೆಯದಾದ ಧರ್ಮ ಹಿಂದೂ ಧರ್ಮ ಇದನ್ನು ಸನಾತನ ಧರ್ಮ ಎಂದು ಕೂಡ ಕರೆಯುತ್ತೇವೆ. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ವಾಸ ಮಾಡುತ್ತಿದ್ದಾರೆ ಮತ್ತು ಪ್ರಪಂಚದಾದ್ಯಂತ ಕೂಡ ಹಿಂದೂ ಧರ್ಮವನ್ನು ಅನುಸರಿಸುವ ಅನೇಕರಿದ್ದಾರೆ ಹಾಗೂ ಇಂದು ಅಖಂಡ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶಗಳಾಗಿ ನಿರ್ಮಾಣವಾಗಿರುವ ಭಾರತದ ನೆರೆ ದೇಶಗಳನ್ನು ಕೂಡ ಹಿಂದೂ ಧರ್ಮದವರು ಇದ್ದಾರೆ.
ಭಾರತದ ನೆರೆ ದೇಶಗಳಲ್ಲಿ ಇಂದು ಅನೇಕರು ಬೇರೆ ಧರ್ಮವನ್ನು ಅನುಸರಿಸಿದರು ಕೂಡ ಅವರೆಲ್ಲರ ಮೂಲವೂ ಹಿಂದೂ ಧರ್ಮವಾಗಿದೆ ಇದನ್ನು ಅರಿತ ಅನೇಕರು ಮತ್ತೆ ತಮ್ಮ ಮನೆಗೆ ಹಿಂದಿರುಗಿದಂತೆ ಹಿಂದೂ ಧರ್ಮಕ್ಕೆ ಮರಳುತ್ತಿದ್ದಾರೆ. ಈಗ ಸರದಿಯಲ್ಲಿ ಪಾಕಿಸ್ತಾನದ ಫೇಮಸ್ ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಸೇರಿದ್ದಾರೆ.
ನಮ್ಮ ಭಾರತದ ಬಗ್ಗೆ ತಿಳಿದುಕೊಂಡ ಅಥವಾ ಭಾರತಕ್ಕೆ ಭೇಟಿ ಕೊಟ್ಟ ಅನೇಕ ವಿದೇಶಿಗರು ಇಲ್ಲಿನ ನಾಡು ನೆಲ ಆಚಾರ ವಿಚಾರ ಧರ್ಮದ ವಿಚಾರ ಅರಿತು ಮತ್ತು ಇದಕ್ಕಿರುವ ವೈಜ್ಞಾನಿಕ ಕಾರಣಗಳನ್ನು ಅರಿತು ಮತ್ತು ಸಾಕ್ಷಾಧಾರಗಳನ್ನು ಕಂಡು ಅದರ ಅನುಭವದಿಂದ ಪ್ರೇರಿತರಾಗಿ ಆಧ್ಯಾತ್ಮದತ್ತ ವಾಲಿದ್ದಾರೆ. ತಮ್ಮ ಉಳಿದ ಬದುಕಿನ ಪೂರ್ತಿ ಹಿಂದು ಧರ್ಮವನ್ನು ಅನುಸರಿಸುವುದಾಗಿ ಒಪ್ಪಿಕೊಂಡು ಬದಲಾಗಿದ್ದಾರೆ.
ಇದೇ ರೀತಿ ನಮ್ಮ ಪಕ್ಕದ ರಾಷ್ಟ್ರವಾದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಸಿಕೊಂಡಿರುವ ಶಯನ್ ಅಲಿ ಎನ್ನುವವರು ಕೂಡ ಹಿಂದು ಧರ್ಮಕ್ಕೆ ಕನ್ವರ್ಟ್ ಆಗಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿಕೊಂಡಿದ್ದಾರೆ. ಸದ್ಯಕ್ಕೀಗ ಭಾರತ ಮತ್ತು ಪಾಕಿಸ್ತಾನದಾದ್ಯಂತ ಶಯನ್ ಅಲಿ ಅವರು ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿರುವ ಸುದ್ದಿಯು ಹೆಚ್ಚು ಚರ್ಚೆ ಆಗುತ್ತಿದೆ.
ಮೊದಲಿನಿಂದಲೂ ಕೂಡ ಶಯನ್ ಅಲಿ ಅವರು ಭಾರತದ ಬಗ್ಗೆ ಮತ್ತು ಹಿಂದೂ ಧರ್ಮದ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಕೂಡ ಹುಟ್ಟಿದ್ದು ಪಾಕಿಸ್ತಾನದಲ್ಲಿ ಆದರೆ ಹೃದಯದಿಂದ ಭಾರತೀಯ ಎಂದು ಬರೆದು ಕೊಂಡಿರುವುದನ್ನು ನಾವು ಕಾಣಬಹುದು ಅಲ್ಲದೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ಲೋಡ್ ಆಗಿರುವ ಹಲವು ಪೋಸ್ಟ್ಗಳಲ್ಲಿ ಮತ್ತು ವಿಡಿಯೋಗಳಲ್ಲಿ ಹಿಂದೂ ಧರ್ಮದ ಬಗ್ಗೆ ಭಾರತದ ಬಗ್ಗೆ ಮತ್ತು ನಮ್ಮ ದೇವರುಗಳ ಬಗ್ಗೆ ಇದೆ.
ಕೆಲವು ದಿನಗಳ ಹಿಂದೆ ಅವರು ಹನುಮಾನ್ ಚಾಲೀಸವನ್ನು ಪಠಿಸಿ ಅದನ್ನು ರೆಕಾರ್ಡ್ ಮಾಡಿ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ಅಧಿಕೃತವಾಗಿ ಹಿಂದು ಧರ್ಮವನ್ನೇ ಸ್ವೀಕರಿಸಿದ್ದಾರೆ. ಈ ಬಗ್ಗೆ ಶಯನ್ ಅಲಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನದ ಕೆಲವು ಗುಪ್ತಚರ ಸಂಸ್ಥೆಗಳಿಂದ ನನಗೆ ಒತ್ತಡ ಬೀಳುತ್ತಿದೆ. ನಾನು ಸದ್ಯದಲ್ಲೇ ಇಲ್ಲಿಂದ ಪರಾರಿ ಆಗಬೇಕಾದ ಸನ್ನಿವೇಶಗಳು ಕೂಡ ಕ್ರಿಯೇಟ್ ಆಗುತ್ತಿವೆ. ಆದರೂ ಕೂಡ ಶ್ರೀಕೃಷ್ಣನ ಮಾರ್ಗದರ್ಶನ ನನಗಿದೆ. ಆತನ ಸಾಂತ್ವನವು ನನಗೆ ಸಿಕ್ಕಿದೆ ಎಂದಿದ್ದಾರೆ. ಶ್ರೀ ಕೃಷ್ಣನ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಮತ್ತು ಶೀಘ್ರದಲ್ಲಿ ಅವರು ಭಾರತಕ್ಕೆ ಭೇಟಿ ಕೊಡುವುದಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
After observing my ancestors culture and lifestyle for the last 2 years, today I am officially announcing my "Ghar Wapsi.” 🚩♥️
Thanks to ISKCON for never giving up on me 🙏
After I had to leave Pakistan in 2019 because of the torture of Pakistani agencies, I went into… pic.twitter.com/e1QVftsHHO— Shayan Ali (@ShayaanAlii) June 15, 2023
ಈಗ ಎಲ್ಲೆಡೆ ಇವರು ಹಿಂದೂ ಧರ್ಮದ ಸಂಪ್ರದಾಯದಂತೆ ಉಡುಪುಗಳನ್ನು ತೊಟ್ಟಿರುವ ಮತ್ತು ಹಿಂದೂ ದೇವರುಗಳ ಬಗ್ಗೆ ಮಾತನಾಡಿರುವ ಮತ್ತು ದೇವರನಾಮಗಳನ್ನು ಹಾಡಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.